AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾರ್ಚ್ 29ರವರೆಗೆ ಯಲಹಂಕ ಮಾರ್ಗದಲ್ಲಿ ರೈಲು ಸಂಚಾರ ವ್ಯತ್ಯಯ: ಇಲ್ಲಿದೆ ರದ್ದಾಗಿರುವ ರೈಲುಗಳ ವಿವರ

Yelahanka Penukonda Line: ಯಲಹಂಕ-ಪೆನುಕೊಂಡ ರೈಲು ಮಾರ್ಗ ದುರಸ್ತಿಯ ಹಿನ್ನೆಲೆಯಲ್ಲಿ ಮಾರ್ಚ್ 29ರವರೆಗೆ ಪೆನುಕೊಂಡ ಮಾರ್ಗದಲ್ಲಿ 10 ರೈಲುಗಳನ್ನು ರದ್ದುಪಡಿಸಲಾಗಿದೆ. 14 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಮಾರ್ಚ್ 29ರವರೆಗೆ ಯಲಹಂಕ ಮಾರ್ಗದಲ್ಲಿ ರೈಲು ಸಂಚಾರ ವ್ಯತ್ಯಯ: ಇಲ್ಲಿದೆ ರದ್ದಾಗಿರುವ ರೈಲುಗಳ ವಿವರ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Mar 24, 2022 | 10:08 AM

Share

ಬೆಂಗಳೂರು: ಯಲಹಂಕ-ಪೆನುಕೊಂಡ ರೈಲು ಮಾರ್ಗ ದುರಸ್ತಿಯ ಹಿನ್ನೆಲೆಯಲ್ಲಿ Yelahanka Penukonda Railway Line)  ಮಾರ್ಚ್ 29ರವರೆಗೆ ಪೆನುಕೊಂಡ ಮಾರ್ಗದಲ್ಲಿ 10 ರೈಲುಗಳನ್ನು ರದ್ದುಪಡಿಸಲಾಗಿದೆ. 14 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಯಲಹಂಕ-ಪೆನುಕೊಂಡ ಮಾರ್ಗದಲ್ಲಿ ಅಂತಿಮ ಹಂತದ ವಿದ್ಯುದೀಕರಣ ಮತ್ತು ದ್ವಿಪಥ ಕಾಮಗಾರಿ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಈ ಮಾರ್ಗದ ಮೂಲಕ ಬೆಂಗಳೂರು ಕಂಟೋನ್​ಮೆಂಟ್ ಹಾಗೂ ಯಶವಂತಪುರ ರೈಲು ನಿಲ್ದಾಣಕ್ಕೆ ಬರುತ್ತಿದ್ದ ರೈಲುಗಳ ಸಂಚಾರ ನಿರ್ಬಂಧಿಸಲಾಗಿದೆ.

ಯಲಹಂಕ-ಪೆನುಕೊಂಡ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈಲುಗಳು ಸಂಚರಿಸುತ್ತಿದ್ದ ಕಾರಣ ಮಾರ್ಗದ ಮೇಲೆ ತೀವ್ರ ಒತ್ತಡವಿತ್ತು. ಇದರಿಂದಾಗಿ ರೈಲುಗಳ ಸಂಚಾರವೂ ಕಷ್ಟವಾಗಿತ್ತು. ಮಾರ್ಗದ ಸಂಚಾರ ಸಾಮರ್ಥ್ಯ ಹೆಚ್ಚಿಸಲು 2015-16ರಲ್ಲಿ ಒಟ್ಟು ₹ 1,104 ಕೋಟಿ ವೆಚ್ಚದಲ್ಲಿ ಡಬ್ಲಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಯಿತು. 82 ಕಿಮೀ ಮಾರ್ಗವನ್ನು ಈಗಾಗಲೇ ಬಳಸಲಾಗುತ್ತಿದೆ. ಬಾಕಿ ಇರುವ ಹಿಂದೂಪುರ-ಪೆನುಕೊಂಡ ಮಾರ್ಗದಲ್ಲಿ ಇದೇ ತಿಂಗಳ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಲು ರೈಲ್ವೆ ಇಲಾಖೆ ಉದ್ದೇಶಿಸಿ ಎಂದು ಪತ್ರಿಕಾ ಹೇಳಿಕೆಯಲ್ಲಿ ರೈಲ್ವೆ ಇಲಾಖೆ ತಿಳಿಸಿದೆ.

‘ಟಿಕೆಟ್ ಬುಕ್ ಮಾಡಿರುವ ಪ್ರಯಾಣಿಕರು ಮಾರ್ಗ ಬದಲಾವಣೆ ಕುರಿತು ಎಸ್​ಎಂಎಸ್​ಗಳನ್ನು ಕಳಿಸಲಾಗಿದೆ. ಅಂತರ ಹೆಚ್ಚಾಗುವ ಕಾರಣ ಪ್ರಯಾಣದ ಅವಧಿಯೂ ಹೆಚ್ಚಾಗಲಿದೆ. ಇಂಥವರಿಗೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕಾಗಿ ಹೆಚ್ಚುವರಿಯಾಗಿ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ರದ್ದುಪಡಿಸುವ ಟಿಕೆಟ್​ಗಳಿಗೆ ನಿಯಮಗಳ ಪ್ರಕಾರ ಹಣವನ್ನು ರಿಫಂಡ್ ಮಾಡುತ್ತೇವೆ’ ಎಂದು ರೈಲ್ವೆ ಇಲಾಖೆಯ ವಾಣಿಜ್ಯ ವಿಭಾಗದ ಮ್ಯಾನೇಜರ್ ದಯಾನಂದ್ ಸಾಧು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದರು.

ರದ್ದಾಗಿರುವ ರೈಲುಗಳು 1) ಧರ್ಮಾವರಂ-ಬೆಂಗಳೂರು ಕಂಟೋನ್​ಮೆಂಟ್ ಮೆಮು 2) ಸಿಕಂದ್ರಾಬಾದ್-ಯಶವಂತಪುರ ಗರೀಬ್​ರಥ್ ಎಕ್ಸ್​ಪ್ರೆಸ್ 3) ಮುಂಬೈ-ಬೆಂಗಳೂರು ಉದ್ಯಾನ್ ಎಕ್ಸ್​ಪ್ರೆಸ್ 4) ಸೊಲ್ಲಾಪುರ-ಹಾಸನ ಡೈಲಿ ಎಕ್ಸ್​ಪ್ರೆಸ್ 5) ಯಶವಂತಪುರ-ಡಾ.ಅಂಬೇಡ್ಕರ್ ನಗರ ವೀಕ್ಲಿ ಎಕ್ಸ್​ಪ್ರೆಸ್ 7) ಗುಂತಕಲ್-ಹಿಂದೂಪುರ ಮೆಮು 8) ಮಚಲೀಪಟ್ಟಣಂ-ಯಶವಂತಪುರ ಎಕ್ಸ್​ಪ್ರೆಸ್

ಭಾಗಶಃ ರದ್ದಾಗಿರುವ ರೈಲುಗಳು 1) ಭುವನೇಶ್ವರ-ಬೆಂಗಳೂರು ಪ್ರಶಾಂತಿ ಎಕ್ಸ್​ಪ್ರೆಸ್ 2) ಕಾಚಿಗುಡ-ಯಲಹಂಕ 3) ಚೆನ್ನೈ-ಸತ್ಯಸಾಯಿ ಪ್ರಶಾಂತಿ ನಿಲಯಂ ವೀಕ್ಸಲಿ ಎಕ್ಸ್​ಪ್ರೆಸ್

ಈ ಮಾರ್ಗದಲ್ಲಿ ಸಂಚರಿಸುವ 14 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಪ್ರಯಾಣಿಕರು ಸಮೀಪದ ರೈಲ್ವೆ ನಿಲ್ದಾಣದಿಂದ ಮಾಹಿತಿ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ.

ಇದನ್ನೂ ಓದಿ: Indian Railways: ಭಾರತೀಯ ರೈಲ್ವೆ ಇಲಾಖೆಯಿಂದ ವಿವಿಧ ರಾಜ್ಯಗಳ 240 ರೈಲುಗಳ ಸಂಚಾರ ರದ್ದು

ಇದನ್ನೂ ಓದಿ: ಹೊಸೂರುವರೆಗೂ ನಮ್ಮ ಮೆಟ್ರೋ ರೈಲು ಬಿಡಲು ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಸಿದ್ದರಾಮಯ್ಯ

Published On - 10:06 am, Thu, 24 March 22

ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?