AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಟಿಂಗ್​​ ಆಪರೇಷನ್ ಹಲ್​​ಚಲ್​​​​​​: ಕಾಂಗ್ರೆಸಿಗರಲ್ಲೇ ಭಿನ್ನರಾಗ, ಡಿಸಿಎಂ ಹೇಳಿದ್ದು ಒಂದಾದ್ರೆ ಸಚಿವರು ಹೇಳಿದ್ದು ಮತ್ತೊಂದು!

ಸಚಿವ ಸಂಪುಟ ಸಭೆಯಲ್ಲಿ ಸ್ಟಿಂಗ್ ಆಪರೇಷನ್ ಎಚ್ಚರಿಕೆ ಕುರಿತು ಕಾಂಗ್ರೆಸ್‌ನಲ್ಲಿ ಭಿನ್ನ ಹೇಳಿಕೆಗಳು ವ್ಯಕ್ತವಾಗಿವೆ. ಸಚಿವ ಶರಣಪ್ರಕಾಶ್ ಪಾಟೀಲ್ ಇದನ್ನು ನಿರಾಕರಿಸಿದ್ದರೆ, ಸುಮ್ಮನೇ ಹೇಳುವುದಕ್ಕೆ ಆಗಲ್ಲ. ಸಿಎಂಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಇರುತ್ತದೆ ಎಂದು ಡಿಸಿಎಂ ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ​​. ಮತ್ತೊಂದೆಡೆ ಇದೇ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಗರು ಕಿಡಿ ಕಾರಿದ್ದಾರೆ.

ಸ್ಟಿಂಗ್​​ ಆಪರೇಷನ್ ಹಲ್​​ಚಲ್​​​​​​: ಕಾಂಗ್ರೆಸಿಗರಲ್ಲೇ ಭಿನ್ನರಾಗ, ಡಿಸಿಎಂ ಹೇಳಿದ್ದು ಒಂದಾದ್ರೆ ಸಚಿವರು ಹೇಳಿದ್ದು ಮತ್ತೊಂದು!
ಸ್ಟಿಂಗ್​​ ಆಪರೇಷನ್ ಹಲ್ಚಲ್
ಪ್ರಸನ್ನ ಹೆಗಡೆ
|

Updated on: Oct 07, 2026 | 2:07 PM

Share

ಬೆಂಗಳೂರು, ಅಕ್ಟೋಬರ್​​ 07: ಸ್ಟಿಂಗ್ ಆಪರೇಷನ್​ ಬಗ್ಗೆ ಎಚ್ಚರವಹಿಸಲು ಸಚಿವ ಸಂಪುಟ ಸಭೆಯಲ್ಲಿಯೇ ಸಿಎಂ ಡಿಕೆ ಶಿವಕುಮಾರ್​​ ಸೂಚನೆ ಸಂಬಂಧ ಕಾಂಗ್ರೆಸ್​​ ನಾಯಕರಿಂದ ಭಿನ್ನ ಹೇಳಿಕೆಗಳು ವ್ಯಕ್ತವಾಗಿವೆ. ಸ್ಟಿಂಗ್ ಆಪರೇಷನ್​ ಎಂದು ಮಾಧ್ಯಮಕ್ಕೆ ತಪ್ಪು ಮಾಹಿತಿ ಸಿಕ್ಕಿದೆ, ಆ ರೀತಿ ಏನೂ ನಡೆದಿಲ್ಲ ಎಂದು ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ. ನಾನು ಸಚಿವ ಸಂಪುಟ ಸಭೆಯಲ್ಲಿ ಇದ್ದಾಗ ಆ ರೀತಿ ಏನು ಹೇಳಿಲ್ಲ ಎಂದವರು ತಿಳಿಸಿದ್ದರೆ, ಸುಮ್ಮನೇ ಹೇಳುವುದಕ್ಕೆ ಆಗಲ್ಲ. ಸಿಎಂಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಇರುತ್ತದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಸಚಿವರ ಸ್ಟಿಂಗ್ ಆಪರೇಷನ್​ ವಿಚಾರ ಪ್ರಸ್ತಾಪದ ಬಗ್ಗೆ ಬಿಜೆಪಿಗರು ಕಿಡಿ

ಇನ್ನು ಸಚಿವರ ಸ್ಟಿಂಗ್ ಆಪರೇಷನ್​ ವಿಚಾರ ಪ್ರಸ್ತಾಪದ ಬಗ್ಗೆ ವಿಪಕ್ಷ ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಳ್ಳನ ಮನಸ್ಸು ಹುಳ್ಳಹುಳ್ಳಗೆ ಎಂಬಂತಾಗಿದೆ. ಈ ಹಿಂದೆ ಅವರೆಲ್ಲಾ ಅದೇ ಕೆಲಸ ಮಾಡಿದ್ದರಲ್ಲ. ಈಗ ಅವರ ಪಕ್ಷದ ಶಾಸಕರಿಗೆ ಬೋಧನೆ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್​​. ಅಶೋಕ್​​ ಕಿಡಿ ಕಾರಿದ್ದಾರೆ. ಇದು ಆಲಿಬಾಬಾ 40 ಕಳ್ಳರಿಗೆ ಹೇಳಿದಂತೆ ಎಂದು ಸಿಎಂ ಡಿಕೆಶಿ ಎಚ್ಚರಿಕೆಗೆ ಮಾಜಿ ಸಿಎಂ ಸದಾನಂದಗೌಡ ವ್ಯಂಗ್ಯವಾಡಿದ್ದು, ಕಳ್ಳತನ ಇಲ್ಲದಿದ್ದರೆ ಈ ರೀತಿ ಹೇಳುವ ಅವಶ್ಯಕತೆ ಏನಿದೆ? ಹಣ ಹೊಡೆಯಬೇಡಿ ಎಂದು ಹೇಳಿಲ್ಲ. ಹಣ ಹೊಡೆಯುವಾಗ ಜಾಗರೂಕತೆಯಿಂದ ಇರಲು ಹೇಳಿದ್ದಾರೆ ಎಂದವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಇದು ರಾಜ್ಯ ರಾಜಕಾರಣದ ಸ್ಫೋಟಕ ಸುದ್ದಿ: ವಿಪಕ್ಷಗಳಿಂದ ಸಚಿವರ ಸ್ಟಿಂಗ್​​ ಆಪರೇಷನ್​​; ಸಿಎಂರಿಂದಲೇ ಮಂತ್ರಿಗಳಿಗೆ ಮಾಹಿತಿ

ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ನಾರಾಯಣಗೌಡ, ಭ್ರಷ್ಟಾಚಾರ ಮಾಡ್ತಿರೋದಕ್ಕೆ ಸಿಎಂ ಸಚಿವರನ್ನು ಎಚ್ಚರಿಸಿದ್ದಾರೆ. ಕೊಡೋದು, ತಗೋಳದ್ರಲ್ಲಿ ಹುಷಾರಾಗಿರಿ ಎಂದು ಸಿಎಂ ಹೇಳಿರೋದು. ಯಾವ್ಯಾವ ಸಚಿವರು ಡೀಲ್ ಮಾಡ್ತಿದ್ದಾರೆ ಎಂದು ಅವರಿಗೆ ಗೊತ್ತಿದೆ. ಅದಕ್ಕಾಗಿ ಸಚಿವರಿಗೆ ಎಚ್ಚರಿಕೆ ನೀಡಿದ್ದಾರೆಂದು ಅವರು ಹೇಳಿದ್ದಾರೆ. ನೀವು ಪ್ರಾಮಾಣಿಕರಾಗಿರಿ ಎಂದು ಸಿಎಂ ಸಚಿವರಿಗೆ ಹೇಳಬೇಕಿತ್ತು. ಪ್ರಧಾನಿ ಮೋದಿಯವರಂತೆ ನಾನು ತಿನ್ನಲ್ಲ, ತಿನ್ನಲ್ಲೂ ಬಿಡಲ್ಲ ಎನ್ಬೇಕಿತ್ತು. ಅದನ್ನ ಬಿಟ್ಟು ವಿಪಕ್ಷದವರು ಸ್ಟಿಂಗ್​​ ಆಪರೇಷನ್ ಮಾಡ್ತಾರೆ. ಸಿಕ್ಕಿ ಬೀಳ್ಬೇಡಿ. ಕದ್ದಿದ್ದು ಗೊತ್ತಾಗದಂತೆ ಕದಿಯಿರಿ ಅಂತ ಹೇಳಿದ್ದಾರೆ. ಡಿಕೆಶಿ ಕಲಿಯುಗಕ್ಕೆ ತಕ್ಕ ಮುಖ್ಯಮಂತ್ರಿ ಎಂದು ಪರಿಷತ್​​ ಸದಸ್ಯ ಸಿ.ಟಿ. ರವಿ ಕೂಡ ಕಿಡಿ ಕಾರಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
ಕಾಲು ಮುರಿದು ಬಿದ್ದಿದ್ದ ದ್ರೋಣ ಆನೆ ಈಗ ಫುಲ್ ಫಿಟ್
ಕಾಲು ಮುರಿದು ಬಿದ್ದಿದ್ದ ದ್ರೋಣ ಆನೆ ಈಗ ಫುಲ್ ಫಿಟ್
ಸ್ವಂತ ಹಣದಲ್ಲಿ ಹೆದ್ದಾರಿಯ ನೂರಾರು ಗುಂಡಿಗಳನ್ನು ಮುಚ್ಚಿದ ಯುವಕರಪಡೆ
ಸ್ವಂತ ಹಣದಲ್ಲಿ ಹೆದ್ದಾರಿಯ ನೂರಾರು ಗುಂಡಿಗಳನ್ನು ಮುಚ್ಚಿದ ಯುವಕರಪಡೆ
ಮೈಸೂರು ದಸರಾ 2026: ಗಜಪಡೆ, ಅಶ್ವಪಡೆಗೆ ಸಿಡಿಮದ್ದು ತಾಲೀಮು
ಮೈಸೂರು ದಸರಾ 2026: ಗಜಪಡೆ, ಅಶ್ವಪಡೆಗೆ ಸಿಡಿಮದ್ದು ತಾಲೀಮು
ಕೊಪ್ಪಳ: ತಾನೇ ನಲ್ಲಿ ತಿರುಗಿಸಿ ದಾಹ ಇಂಗಿಸಿಕೊಂಡ ಗೋಮಾತೆ!
ಕೊಪ್ಪಳ: ತಾನೇ ನಲ್ಲಿ ತಿರುಗಿಸಿ ದಾಹ ಇಂಗಿಸಿಕೊಂಡ ಗೋಮಾತೆ!
4 ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ನಿಂತ ವಂದೇ ಭಾರತ್ ಸೇರಿ 4 ರೈಲುಗಳು!
4 ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ನಿಂತ ವಂದೇ ಭಾರತ್ ಸೇರಿ 4 ರೈಲುಗಳು!
ಪ್ರಧಾನಿ ಮೋದಿಯವರ 25 ವರ್ಷಗಳ ಸಾರ್ಥಕ ಆಡಳಿತ: ಅಭಿವೃದ್ಧಿಯ ಪಥದಲ್ಲಿ ಭಾರತ
ಪ್ರಧಾನಿ ಮೋದಿಯವರ 25 ವರ್ಷಗಳ ಸಾರ್ಥಕ ಆಡಳಿತ: ಅಭಿವೃದ್ಧಿಯ ಪಥದಲ್ಲಿ ಭಾರತ
ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ
ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ
ಆಹಾರದಾಸೆಗೆ ಕಾರಿನ ಮೇಲೆ ಕಾಲಿಟ್ಟ ಕಾಡಾನೆ! ಪ್ರಯಾಣಿಕರು ಜಸ್ಟ್ ಮಿಸ್
ಆಹಾರದಾಸೆಗೆ ಕಾರಿನ ಮೇಲೆ ಕಾಲಿಟ್ಟ ಕಾಡಾನೆ! ಪ್ರಯಾಣಿಕರು ಜಸ್ಟ್ ಮಿಸ್
‘ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ’; ಯಶಸ್ ವಿರುದ್ಧ ಮಿತಿಮೀರಿದ ಮಂಜು ಮಾತು
‘ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ’; ಯಶಸ್ ವಿರುದ್ಧ ಮಿತಿಮೀರಿದ ಮಂಜು ಮಾತು
ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಆಡಳಿತ: ಒಂದು ಅವಲೋಕನ
ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಆಡಳಿತ: ಒಂದು ಅವಲೋಕನ