
ಬೆಂಗಳೂರು, ನವೆಂಬರ್ 12: ನಗರದಲ್ಲಿ ಪತಿಯಿಂದ ಪತ್ನಿಯ ಮೇಲೆ ದೌರ್ಜನ್ಯ ನಡೆಸಿರುವ ಆರೋಪ ಕೇಳಿಬಂದಿದೆ. ಪಿಸ್ತೂಲ್ ತೋರಿಸಿ ಪತ್ನಿ ಮೇಲೆ ಪತಿ ಹಲ್ಲೆ ಮಾಡಿದ್ದು, 3ನೇ ಮದುವೆ ಆಗುವುದಕ್ಕೆ ಡಿವೋರ್ಸ್ ನೀಡುವಂತೆ ಹಿಂಸೆ ಕೊಡಲಾಗಿದೆ. ಅಷ್ಟೇ ಅಲ್ಲದೆ ತನ್ನ ವೈರಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರದ ದೂರು ನೀಡುವಂತೆ ಒತ್ತಡ ಹೇರಲಾಗಿದೆ. ಸುದ್ದುಗುಂಟೆಪಾಳ್ಯದ ಬಿಸ್ಮಿಲ್ಲಾ ನಗರದಲ್ಲಿ ಈ ಘಟನೆ ನಡೆದಿದೆ.
ಝಾರ ಅಮೀನಾ ಮತ್ತು ಮುಹೀಜ್ ಅಹ್ಮದ್ 2017ರಲ್ಲಿ ಮದುವೆ ಆಗಿದೆ. ದಂಪತಿಗೆ ಮಕ್ಕಳೂ ಇದ್ದಾರೆ. ಆದರೆ ಕಳೆದ ಒಂದು ವರ್ಷದಿಂದ ಪತಿ ಅನುಮಾನ ಪಟ್ಟು ಪತ್ನಿ ಮೇಲೆ ಹಲ್ಲೆ ಹಾಗೂ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಂದ ಪತ್ನಿ! ಹೃದಯಾಘಾತದ ನಾಟಕವಾಡಿ ಕಣ್ಣೀರಿಟ್ಟಿದ್ದ ಆರೋಪಿ ಅರೆಸ್ಟ್
ಕಳೆದ ತಿಂಗಳೂ ಪತಿ ಪಿಸ್ತೂಲ್ ತೋರಿಸಿ ಹಲ್ಲೆ ನಡೆಸಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾರೆ. ಮೂರನೇ ಮದುವೆಯಾಗಬೇಕಿದ್ದು, ಅದಕ್ಕಾಗಿ ವಿಚ್ಛೇದನ ನೀಡುವಂತೆ ಪೀಡಿಸುತ್ತಿದ್ದಾನೆ. ಅಲ್ಲದೆ, ತನ್ನ ವೈರಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರದ ದೂರು ದಾಖಲಿಸುವಂತೆ ಪತ್ನಿಗೆ ಒತ್ತಡ ಹಾಕಿದ್ದಾನೆ. ಅಷ್ಟೇ ಅಲ್ಲದೆ ಮಕ್ಕಳನ್ನು ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿರುವುದಾಗಿ ಪತ್ನಿ ದೂರಿದ್ದಾರೆ.
ಇನ್ನು ಈ ಸಂಬಂಧ ಕಳೆದ ತಿಂಗಳು ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಬಳಿಕ ಪೊಲೀಸರು ಪತಿ ಮತ್ತು ಪತ್ನಿ ಇಬ್ಬರನ್ನೂ ಕರೆಸಿ ವಿಚಾರಣೆ ಮಾಡಿದ್ದರು. ಆದರೆ ವಿಚಾರಣೆ ಬಳಿಕವೂ ಪತಿ ಮತ್ತು ಆತನ ಪ್ರೇಯಸಿಯಿಂದ ಮತ್ತೆ ಗಲಾಟೆ ಮಾಡಿದ್ದಾರೆ ಎಂದು ಪತ್ನಿ ಆರೋಪಿಸಿದ್ದಾರೆ.
ಇದನ್ನೂ ಓದಿ: 7 ಮಂದಿ ಕೊಲೆ ಕೇಸ್: ಇಂದುಶೇಖರ್ ಮಗಳು ಈಗ ಅಪ್ರಾಪ್ತೆ ಅಲ್ಲ; ಗೊಂದಲದಲ್ಲಿ ಪೊಲೀಸರು, ತಜ್ಞರ ಮೊರೆ
ಆಸ್ತಿಯಲ್ಲಿ ಪಾಲು ಬೇಕೆಂದು ಪತಿ ಗಲಾಟೆ ಮಾಡಿದ್ದ. ಅಲ್ಲದೆ, ಪತ್ನಿಯನ್ನು ಕೊಠಡಿಯಲ್ಲಿ ಕೂಡಿ ಹಾಕಿ ಪತ್ನಿ ಹಾಗೂ ಬಾಮೈದ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ವೇಳೆ ಪತಿ ಮುಹೀಜ್ ಅಹ್ಮದ್ ಜೀವ ಬೆದರಿಕೆ ಹಾಕಿದ್ದಾನೆ ಎಂದು ಝಾರ ಅಮೀನಾ ಆರೋಪಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.