ಬಹು ದಿನಗಳ ಬಳಿಕ ಆಕ್ಟೀವ್ ಆದ ಅನಂತಕುಮಾರ್ ಹೆಗಡೆ ವಿರುದ್ಧ ಬೆಂಬಲಿಗರ ಅಸಮಾಧಾನ

| Updated By: ಆಯೇಷಾ ಬಾನು

Updated on: Jan 14, 2024 | 10:27 AM

ಬೆಂಗಳೂರಿನಲ್ಲಿ ನಡೆದ ಲೋಕಸಭಾ ಕ್ಷೇತ್ರದ ಅಭಿಪ್ರಾಯ ಸಂಗ್ರಹದ ಸಭೆಯಲ್ಲಿ ಅನಂತಕುಮಾರ್ ಹೆಗಡೆ ಪರ ಮತ್ತು ಪರೋಕ್ಷ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಒಂದಷ್ಟು ಸಮಯ ಅನಂತ್ ಕುಮಾರ್ ಹೆಗಡೆ ನ್ಯೂಟ್ರಲ್ ಆಗಿದ್ದ ಕಾರಣ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಮತ್ತೆ ಕಣಕ್ಕಿಳಿಯುವ ಉದ್ದೇಶದಿಂದ ಮೊದಲು ಬೆಂಬಲಿಗರನ್ನು ಆಕ್ಟೀವ್ ಗೊಳಿಸಲು ಅನಂತಕುಮಾರ್ ಹೆಗಡೆ ಮುಂದಾಗಿದ್ದಾರೆ.

ಬಹು ದಿನಗಳ ಬಳಿಕ ಆಕ್ಟೀವ್ ಆದ ಅನಂತಕುಮಾರ್ ಹೆಗಡೆ ವಿರುದ್ಧ ಬೆಂಬಲಿಗರ ಅಸಮಾಧಾನ
ಅನಂತಕುಮಾರ್ ಹೆಗಡೆ
Follow us on

ಬೆಂಗಳೂರು, ಜ.14: ಇಷ್ಟು ದಿನ ಸೈಲೆಂಟ್ ಆಗಿದ್ದ ಅನಂತಕುಮಾರ್ ಹೆಗಡೆ (Ananth Kumar Hegde) ಅವರು ಲೋಕಸಭಾ ಚುನಾವಣೆ (Lok Sabha Election) ಸಮೀಪಿಸುತ್ತಿದ್ದಂತೆ ವಿವಾದಕ್ಕೆ ಆಸ್ಪದವಾದ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ಅನಂತಕುಮಾರ್ ಹೆಗಡೆಗೆ ಲೋಕಸಭಾ ಟಿಕೆಟ್ ಕೈ ತಪ್ಪುವ ಸಾಧ್ಯತೆಗಳ ಬಗ್ಗೆ ಚರ್ಚೆಯಾಗುತ್ತಿದೆ. ಹೀಗಾಗಿ ಕಳೆದ 20 ದಿನಗಳಿಂದ ಅನಂತಕುಮಾರ್ ಹೆಗಡೆ ಅವರು ಕಾರ್ಯಕರ್ತರ ಸಭೆಗಳನ್ನು ಮಾಡುವ ಮೂಲಕ ಆಕ್ಟಿವ್ ಆಗಿದ್ದಾರೆ. ಆದರೆ ಬಹಳ ದಿನಗಳ ಬಳಿಕ ಆಕ್ಟಿವ್ ಆಗಿದ್ದಕ್ಕೆ ಶುಕ್ರವಾರ ಯಲ್ಲಾಪುರದಲ್ಲಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು.

ಬೆಂಗಳೂರಿನಲ್ಲಿ ನಡೆದ ಲೋಕಸಭಾ ಕ್ಷೇತ್ರದ ಅಭಿಪ್ರಾಯ ಸಂಗ್ರಹದ ಸಭೆಯಲ್ಲಿ ಅನಂತಕುಮಾರ್ ಹೆಗಡೆ ಪರ ಮತ್ತು ಪರೋಕ್ಷ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಉತ್ತರ ಕನ್ನಡದಲ್ಲಿ ಹಿಂದುತ್ವದ ಆಧಾರದಲ್ಲಿ ಚುನಾವಣೆ ಎದುರಿಸಬೇಕು ಎಂದು ಹೆಗಡೆ ಬೆಂಬಲಿಗ ಮುಖಂಡರು ಹೇಳಿದ್ದರು. ಆದರೆ ಕ್ಷೇತ್ರದಲ್ಲಿ ಜನ ಹಿಂದುತ್ವ ಮಾತ್ರ ಅಲ್ಲ, ಅಭಿವೃದ್ಧಿಯನ್ನೂ ಕೇಳುತ್ತಾರೆ. ಕೇಂದ್ರ ಸರ್ಕಾರದ ಯೋಜನೆಗಳು ಸಮರ್ಪಕ ಜಾರಿಯಾಗಿಲ್ಲ ಎಂದು ಕೆಲವು ಮುಖಂಡರು ಪರೋಕ್ಷ ವಿರೋಧ ತೋರ್ಪಡಿಸಿದ್ದಾರೆ. ಅಲ್ಲದೇ ಕೆಲವು ಮುಖಂಡರು ನೇರವಾಗಿ ರಾಜ್ಯಾಧ್ಯಕ್ಷರನ್ನೂ ಭೇಟಿಯಾಗಿ ಹೆಗಡೆ ಪರ ಬ್ಯಾಟಿಂಗ್ ಮಾಡಿದ್ದಾರೆ.

ಇದನ್ನೂ ಓದಿ: ಅನಂತಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ: ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದ ಪರಮೇಶ್ವರ್

ಇನ್ನು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಮಾಜಿ ಶಾಸಕಿ ರೂಪಾಲಿ ನಾಯ್ಕ್ ಅವರು ಟಿಕೆಟ್ ಪ್ರಯತ್ನದಲ್ಲಿದ್ದಾರೆ. ರಾಜ್ಯದ ಪ್ರಮುಖ ನಾಯಕರಿಂದ ಕಾಗೇರಿಗೆ ಟಿಕೆಟ್ ಕೊಡಿಸುವ ಭರವಸೆ ಸಿಕ್ಕಿದೆ. ಕಾಗೇರಿ ಅವರು ಎರಡು ಮೂರು ಬಾರಿ ಭೇಟಿ ಮಾಡಿ ಟಿಕೆಟ್ ಖಾತ್ರಿಪಡಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಮಹಿಳಾ ಕೋಟಾದಡಿ ರೂಪಾಲಿ ನಾಯ್ಕ್ ಟಿಕೆಟ್ ಡಿಮ್ಯಾಂಡ್ ಮಾಡಿದ್ದಾರೆ. ಒಂದಷ್ಟು ಸಮಯ ಅನಂತ್ ಕುಮಾರ್ ಹೆಗಡೆ ನ್ಯೂಟ್ರಲ್ ಆಗಿದ್ದ ಕಾರಣ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಮತ್ತೆ ಕಣಕ್ಕಿಳಿಯುವ ಉದ್ದೇಶದಿಂದ ಮೊದಲು ಬೆಂಬಲಿಗರನ್ನು ಆಕ್ಟೀವ್ ಗೊಳಿಸಲು ಅನಂತಕುಮಾರ್ ಹೆಗಡೆ ಮುಂದಾಗಿದ್ದಾರೆ. ಬೆಂಬಲಿಗರು ಆಕ್ಟೀವ್ ಆದ ಬಳಿಕ ತನ್ನ ಹಳೆಯ ಲಯಕ್ಕೆ ಮರಳುವ ಮೂಲಕ ಕ್ಷೇತ್ರದಲ್ಲಿ ತನ್ನ ಸಾಂಪ್ರದಾಯಿಕ ವೋಟ್ ಬ್ಯಾಂಕ್ ಗಟ್ಟಿಗೊಳಿಸಲು ಅನಂತಕುಮಾರ್ ಹೆಗಡೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ