Gavi Gangadhareshwara Temple: ಸಂಕ್ರಾಂತಿಯಂದು ವಿಶೇಷ ವಿಸ್ಮಯಕ್ಕೆ ಸಾಕ್ಷಿಯಾಗಲಿದೆ ಗವಿಗಂಗಾಧರೇಶ್ವರ ದೇವಸ್ಥಾನ
ಸಂಕ್ರಾತಿ ಹಬ್ಬದ ದಿನದಂದು ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯ ವಿಶೇಷ ವಿಸ್ಮಯಕ್ಕೆ ಸಾಕ್ಷಿಯಾಗಲಿದೆ. ಅಂದು ಸೂರ್ಯರಶ್ಮಿ ಶಿವನನ್ನು ಸ್ಪರ್ಶಿಸುವ ವಿಶೇಷ ಕೌತುಕ ನಡೆಯಲಿದೆ. ಸೂರ್ಯ ದಕ್ಷಿಣಪಥದಿಂದ ಉತ್ತರ ಪಥಕ್ಕೆ ಸಂಚಲನ ಮಾಡುವ ವೇಳೆ ಶಿವನ ಮೂರ್ತಿಯನ್ನು ಸೂರ್ಯನ ಕಿರಣಗಳು ಸ್ಪರ್ಶಿಸಲಿವೆ.
ಬೆಂಗಳೂರು, ಜ.14: ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಗೆ (Makar Sankranti) ಕ್ಷಣಗಣನೆ ಆರಂಭವಾಗಿದೆ. ಸಂಕ್ರಾತಿ ಹಬ್ಬದ ದಿನದಂದು ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯ (Gavi Gangadhareshwara Temple) ವಿಶೇಷ ವಿಸ್ಮಯಕ್ಕೆ ಸಾಕ್ಷಿಯಾಗಲಿದೆ. ಅಂದು ಸೂರ್ಯರಶ್ಮಿ ಶಿವನನ್ನು ಸ್ಪರ್ಶಿಸುವ ವಿಶೇಷ ಕೌತುಕ ನಡೆಯಲಿದೆ. ಸೂರ್ಯ ದಕ್ಷಿಣಪಥದಿಂದ ಉತ್ತರ ಪಥಕ್ಕೆ ಸಂಚಲನ ಮಾಡುವ ವೇಳೆ ಶಿವನ ಮೂರ್ತಿಯನ್ನು ಸೂರ್ಯನ ಕಿರಣಗಳು ಸ್ಪರ್ಶಿಸಲಿವೆ. ಈ ಕೌತುಕ ನೋಡಲು ಸಾವಿರಾರು ಭಕ್ತರು ನಾಳೆ ಗವಿಗಂಗಾಧರೇಶ್ವರ ದೇವಾಲಯಕ್ಕೆ ಆಗಮಿಸಲಿದ್ದಾರೆ.
ಗವಿಗಂಗಾಧರ ದೇವಾಲಯದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ಅವರು ಈ ಬಗ್ಗೆ ಮಾತನಾಡಿದ್ದು, ಸಂಕ್ರಾಂತಿ ದಿನ ಸೂರ್ಯನಿಗೆ ವಿಶೇಷ ಪೂಜೆಯನ್ನು ಸಾಕಷ್ಟು ವರ್ಷಗಳಿಂದ ಮಾಡುತ್ತಿದ್ದೇವೆ. ಅದರಂತೆ ಪ್ರತಿ ವರ್ಷ ಸೂರ್ಯದೇವ ಶಿವನ ಮೂರ್ತಿಯನ್ನು ಸ್ಪರ್ಶಿಸುತ್ತಾನೆ. ನಾಳೆ ಸಂಜೆ 5.20 ರಿಂದ 5.23 ನಿಮಿಷದ ವರೆಗೆ ಸೂರ್ಯರಶ್ಮಿ ಶಿವನಿಗೆ ನಮಿಸಲಿದೆ. ಲಿಂಗಭಾಗದಲ್ಲಿ ಎಷ್ಟು ಸಮಯ ಸೂರ್ಯರಶ್ಮಿ ಇರುತ್ತೆ ಅನ್ನೋದರ ಮೇಲೆ ಭವಿಷ್ಯ ಹೇಳಲಾಗುವುದು. ಇನ್ನು ದೇವಸ್ಥಾನದಲ್ಲಿ ಬೆಳಿಗ್ಗೆ 5 ಗಂಟೆಗೆ ವಿಶೇಷಪೂಜೆ, ಅಲಂಕಾರ ಮಾಡಲಾಗುವುದು. ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 12.30 ರವರೆಗೆ ದೇವಸ್ಥಾನ ತೆರೆದಿರಲಿದೆ. ನಂತರ ದೇವರ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವಿರುವುದಿಲ್ಲ. ಸಂಜೆ ಸೂರ್ಯರಶ್ಮಿ ಲಿಂಗವನ್ನ ಸ್ಪರ್ಶಿಸುವುದರ ನಂತರ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತೆ.
ಇದನ್ನೂ ಓದಿ: New Year 2024: ನಾಡಿನ ವಿವಿಧ ದೇವಸ್ಥಾನಗಳಲ್ಲಿ ಜರುಗಿದ ಪೂಜಾ ಕೈಂಕರ್ಯಗಳು, ಇಲ್ಲಿದೆ ಫೋಟೋಸ್
ಭಕ್ತಾಧಿಗಳು ವಿಸ್ಮಯವನ್ನು ಕಣ್ತುಂಬಿಕೊಳ್ಳಲು ದೇವಾಲಯದ ಹೊರಭಾಗದಲ್ಲಿ ಎಲ್ಇಡಿ ವ್ಯವಸ್ಥೆ ಮಾಡಲಾಗಿದೆ. 2 ಎಲ್ಇಡಿ ಹಾಗೂ 5 ಟಿವಿಗಳ ವ್ಯವಸ್ಥೆ ಇರಲಿದೆ. ಇನ್ನು ದೇವರನ್ನ ಸೂರ್ಯರಶ್ಮಿ ಸ್ಪರ್ಶಿಸುವ ವೇಳೆ ಅರ್ಚಕರನ್ನ ಬಿಟ್ಟರೆ ಇನ್ನುಳಿದ ಯಾರಿಗೂ ದೇವಸ್ಥಾನ ಪ್ರವೇಶ ಇರುವುದಿಲ್ಲ ಎಂದು ಗವಿಗಂಗಾಧರೇಶ್ವರ ದೇವಾಲಯದ ಪ್ರಧಾನ ಅರ್ಚಕರು ತಿಳಿಸಿದ್ದಾರೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ