AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದಲ್ಲಿಂದು 113 ಜನರಿಗೆ ಕೊರೊನಾ: ಬೆಂಗಳೂರಿನಲ್ಲಿಂದು 40 ಜನರಿಗೆ ಸೋಂಕು ದೃಢ

ರಾಜ್ಯದಲ್ಲಿ ಇಂದು 113 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿ ಇಂದು ಒಂದೇ ದಿನ 40 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಆ ಮೂಲಕ ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇಕಡಾ 3.52. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ನೀಡಲಾಗಿದೆ. 

ರಾಜ್ಯದಲ್ಲಿಂದು 113 ಜನರಿಗೆ ಕೊರೊನಾ: ಬೆಂಗಳೂರಿನಲ್ಲಿಂದು 40 ಜನರಿಗೆ ಸೋಂಕು ದೃಢ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Jan 14, 2024 | 6:21 PM

Share

ಬೆಂಗಳೂರು, ಜನವರಿ 14: ರಾಜ್ಯದಲ್ಲಿ ಇಂದು 113 ಜನರಿಗೆ ಕೊರೊನಾ ಸೋಂಕು (Corona virus) ದೃಢಪಟ್ಟಿದೆ. ಬೆಂಗಳೂರಿನಲ್ಲಿ ಇಂದು ಒಂದೇ ದಿನ 40 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಆ ಮೂಲಕ ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇಕಡಾ 3.52. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 3,208 ಜನರಿಗೆ ಕೊವಿಡ್ ಟೆಸ್ಟ್ ಮಾಡಲಾಗಿದ್ದು, 958 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿ. 114 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ನೀಡಲಾಗಿದೆ.

ಯಾವೆಲ್ಲ ಜಿಲ್ಲೆಗಳಲ್ಲಿ ಕೊರೊನಾ

ಬಳ್ಳಾರಿ 3, ಬೆಳಗಾವಿ 1, ಬೆಂಗಳೂರು ಗ್ರಾಮಾಂತರ 2, ಬೀದರ್ 1, ಚಾಮರಾಜನಗರ 4, ಚಿಕ್ಕಮಗಳೂರು 1, ಚಿತ್ರದುರ್ಗ 1, ದಕ್ಷಿಣ ಕನ್ನಡ 5, ಧಾರವಾಡ 1, ಗದಗ 3, ಹಾಸನ 2, ಕಲಬುರಗಿ 4, ಕೋಲಾರ 5, ಕೊಪ್ಪಳ 2, ಮಂಡ್ಯ 5, ಮೈಸೂರು 12, ರಾಯಚೂರು 4, ಶಿವಮೊಗ್ಗ 4, ತುಮಕೂರು 10 ಮತ್ತು ವಿಜಯನಗರ 3 ಕೇಸ್ ದೃಢಪಟ್ಟಿವೆ.

ಇದನ್ನೂ ಓದಿ: ಕೋವಿಡ್ ಪರಿಣಾಮ: ಬೆಂಗಳೂರಿನ ಶೇ 30ರಷ್ಟು ಮಂದಿಯಲ್ಲಿ ಹೆಚ್ಚಾದ ಗೊರಕೆ ಸಮಸ್ಯೆ

ಈ ಕೊವಿಡ್ 19 ಸೋಂಕಿನಿಂದ ಮರಣ ಹೊಂದಿದವರ ಅಂತ್ಯಕ್ರಿಯೆ ನಡೆಸುವ ಕುರಿತಾಗಿ ಆರೋಗ್ಯ ಇಲಾಖೆಯಿಂದ ಸುತ್ತೋಲೆ ಹೊರಡಿಸಿತ್ತು. ರಾಜ್ಯದ ಜಿಲ್ಲೆಗಳಲ್ಲಿ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ 19 ಸೋಂಕಿನಿಂದ ಮರಣ ಹೊಂದಿದವರ ಅಂತ್ಯಕ್ರಿಯೆಯನ್ನು ಸಾಮಾನ್ಯ ಚಿತಾಗಾರ, ಸ್ಮಶಾನ ಮತ್ತು ರುದ್ರಭೂಮಿಯಲ್ಲಿ ನಡೆಸುವಂತೆ ಸೂಚಿಸಲಾಗಿತ್ತು.

ಈ ನಿಟ್ಟಿನಲ್ಲಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜಿಲ್ಲಾಡಳಿತಗಳು ಅಗತ್ಯ ಕ್ರಮಕೈಗೊಳ್ಳುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಕೋವಿಡ್ ಸೋಂಕು: ಬೆಂಗಳೂರು ಜನರಲ್ಲಿ ಗೊರಕೆ ಸಮಸ್ಯೆ

ಕೊರೊನಾ ಬಳಿಕ ರಾಜಧಾನಿ ಬೆಂಗಳೂರಿನ ಶೇ 30 ರಷ್ಟು ಜನರಲ್ಲಿ ಗೊರಕೆ ಸಮಸ್ಯೆ ಕಾಣಿಸಿದೆ. ಇದು ಗೊರಕೆಗಷ್ಟೇ ಸೀಮಿತವಾಗದೆ, ಹೃದಯ ಸಮಸ್ಯೆ ಹಾಗೂ ಹೃದಯಸಂಬಂಧಿ ಕಾಯಿಲೆ ಬರುವ ಸಾಧ್ಯತೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.