ಬೆಂಗಳೂರಿನಲ್ಲಿ ಶಂಕಿತ ಉಗ್ರನ ಬಂಧನ: ಡೆಲಿವರಿ ಬಾಯ್ ಉಗ್ರನಾಗಲು ಹೊರಟ್ಟಿದ್ದೆ ರೋಚಕ, ಉಗ್ರನ ಪಿನ್ ಟು ಪಿನ್ ಡಿಟೆಲ್ಸ್
ಬೆಂಗಳೂರಲ್ಲಿ ಶಂಕಿತ ಉಗ್ರ ತಾಲಿಬ್ ಹುಸೇನ್ ಬಂಧನದ ನಂತರ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂತಹ ಶಂಕಿತರ ಮೇಲೆ ಪೊಲೀಸ್ ಇಲಾಖೆ ನಿರಂತರ ಕಣ್ಣಿಟ್ಟಿದೆ ಎಂದು ಹೇಳಿದರು.
ಬೆಂಗಳೂರು: ಅಸ್ಸಾಂ ಮೂಲದ ಶಂಕಿತ ಉಗ್ರ (Suspected Terrorist) ಅಖ್ತರ್ ಹುಸೇನ್ ಲಷ್ಕರ್ ಎಂಬಾತನನ್ನು ನಗರ ಅಪರಾಧ ದಳ (City Crime Branch – CCB) ವಿಭಾಗದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಭಾನುವಾರ ರಾತ್ರಿ (ಜುಲೈ 24) 7 ಗಂಟೆ ವೇಳೆಯಲ್ಲಿ ಶಂಕಿತ ಉಗ್ರ ವಾಸವಿದ್ದ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದರು. ಬೆಂಗಳೂರಿನಲ್ಲಿ ಸ್ವಿಗ್ಗಿ, ಜೆಮ್ಯಾಟೋ ಡೆಲಿವರಿ ಬಾಯ್ನ ರೋಚಕ ಕಥೆಯನ್ನು ಬಿಚ್ಚಿಡುತ್ತಿದ್ದು, ಟಿವಿ 9ನಲ್ಲಿ ಶಂಕಿತ ಉಗ್ರನ ಬಗ್ಗೆ ಪಿನ್ ಟು ಪಿನ್ ಡಿಟೆಲ್ಸ್ ಇಲ್ಲಿದೆ. ಸ್ವಿಗ್ಗಿ, ಜೆಮ್ಯಾಟೋ ಡೆಲಿವರಿ ಬಾಯ್, ಉಗ್ರನಾಗಲು ಹೊರಟ್ಟಿದ್ದೆ ಒಂದು ರೋಚಕವಾಗಿದ್ದು, ಕೆಳದ ಒಂದು ವರ್ಷದಿಂದ ಉಗ್ರವಾದಕ್ಕೆ ಶಂಕಿತ ಇಂಟ್ರೆಸ್ಟ್ ತೋರಿಸುತ್ತಿದ್ದ. ಅಲ್ ಕೈದಾ ಜೊತೆ ಒಂದು ನಿರಂತರ ಸಂಪರ್ಕ ಹೊಂದಿದ್ದ ಕಿರಾತಕ, ಅಸ್ಸಂ ಮೂಲದ ವ್ಯಕ್ತಿ ಅಲ್ ಕೈದ ಕಡೆಗೆ ಒಂದಷ್ಟು ಕಾಂಟ್ಯಾಕ್ಟ್ ಮಾಡಿದ್ದ. ಟೆಲಿಗ್ರಾಮ್ ಹಾಗೂ ಫೇಸ್ ಬುಕ್ ಶಂಕಿತ ಉಗ್ರ ಮೂಲಕ ಸಂಪರ್ಕ ಬೆಳಸಿದ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಪೊಲೀಸರ ವಶಕ್ಕೆ ಮತ್ತೋರ್ವ ಶಂಕಿತ ಉಗ್ರ
ಟೆಲಗ್ರಾಂ ಮತ್ತು ಫೇಸ್‌ಬುಕ್ ಮೂಲಕ ನಿರಂತರ ಸಂಪರ್ಕ
ಆರೋಪಿಗಾಗಿ ಜಂಟಿ ಕಾರ್ಯಚರಣೆ ನಡೆಸಿದ್ದ ಸೆಂಟ್ರಲ್ ಎಜೆನ್ಸಿ ಬೆಂಗಳೂರು ಸಿಸಿಬಿ, ಕಳೆದ 15 ದಿನಗಳಿಂದ ಅಖ್ತರ್ ಹುಸೇನ್ ಫಾಲೋ ಆಪ್ ಮಾಡುತ್ತಿದ್ದರು. ಮೂಬೈಲ್‌ನಲ್ಲಿ ಟೆಲಗ್ರಾಂ ಮತ್ತು ಫೇಸ್‌ಬುಕ್ ಮೂಲಕ ನಿರಂತರ ಸಂಪರ್ಕ ಹೊಂದಿದ್ದು, ಉಗ್ರರ ಬಳಿ ಮೊದಲು ಸ್ನೇಹ ಸಂಪಾದಿಸಿ ನಂತರ ಸಂಘಟನೆ ಸೇರಲು ಸಿದ್ದತೆ ನಡೆಸಿದ್ದ. ಜಿಹಾದ್ ಗೋಸ್ಕರ ಹೋರಾಟ ಮಾಡಲು ತಯಾರಿಗಿದ್ದಿ ಎಂದು ಕೇಳಿದ್ದಾರೆ. ಹೌದು ನಾನು ರೆಡಿ ಇದ್ದಿನಿ ಎಂದಿದ್ದಾನೆ. ಮುಂದಿನ ಹದಿನೈದು ಇಪ್ಪತ್ತು ದಿನದಲ್ಲಿ ಕಾಶ್ಮೀರ ಮೂಲಕ ಅಲ್ ಕೈದಾ ಜಾಯಿನ್ ಆಗಲು ಅಸ್ಸಂ ಮೂಲದ ಅಖ್ತರ್ ಹುಸೇನ್ ತಯಾರಿ ನಡೆಸಿದ್ದ.
ಇದನ್ನೂ ಓದಿ: Drug Peddlers: ಬೆಂಗಳೂರಿನಲ್ಲಿ ನಾಲ್ವರು, ಉಡುಪಿಯಲ್ಲಿ ಇಬ್ಬರು ಡ್ರಗ್ ಪೆಡ್ಲರ್ಸ್ ಬಂಧನ
ಶಂಕಿತ ಉಗ್ರರ ಮೇಲೆ ಹದ್ದಿನ ಕಣ್ಣು
ಬೆಂಗಳೂರಲ್ಲಿ ಶಂಕಿತ ಉಗ್ರ ತಾಲಿಬ್ ಹುಸೇನ್ ಬಂಧನದ ನಂತರ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಇಂತಹ ಶಂಕಿತರ ಮೇಲೆ ಪೊಲೀಸ್ ಇಲಾಖೆ ನಿರಂತರ ಕಣ್ಣಿಟ್ಟಿದೆ. ಜಮ್ಮು-ಕಾಶ್ಮೀರ ಪೊಲೀಸರು ಕೂಡ ಹದ್ದಿನ ಕಣ್ಣಿಟ್ಟಿದ್ದಾರೆ. ಹಿಂದೆಯೂ ಭಟ್ಕಳ, ಶಿರಸಿಯಲ್ಲಿ ಶಂಕಿತರನ್ನು ಬಂಧಿಸಲಾಗಿತ್ತು. ಕಾಶ್ಮೀರ ಪೊಲೀಸರಿಗೆ ಕರ್ನಾಟಕ ಪೊಲೀಸರು ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದ್ದರು.
Published On - 10:21 am, Mon, 25 July 22