ಕೆಂಪೇಗೌಡ ಏರ್​ಪೋರ್ಟ್​ನಲ್ಲಿ​ ಆತಂಕ ಸೃಷ್ಟಿಸಿದ ಅನುಮಾನಾಸ್ಪದ ಬ್ಯಾಗ್!

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾರಸುದಾರರಿಲ್ಲದ ಅನುಮಾನಾಸ್ಫದ ಬ್ಯಾಗ್ ಪತ್ತೆಯಾಗಿ ಕೆಲಕಾಲ ಆತಂಕ ಸೃಷ್ಟಿಯಾದ ಘಟನೆ ನಡೆಯಿತು. ಏರ್​ಪೋರ್ಟ್​ನ ಅರೈವಲ್​ ಗೇಟ್ ಬಳಿ ಲಗೇಜ್ ಸಾಗಿಸುವ ಟ್ರಾಲಿ ಮೇಲೆ ಬ್ಯಾಗ್ ಪತ್ತೆಯಾಗಿತ್ತು.‌ ಇದನ್ನ ಗಮನಿಸಿದ ಭದ್ರತಾ ಸಿಬ್ಬಂದಿ, ಬ್ಯಾಗ್ ಟ್ರಾಲಿ ಮೇಲೆ ಸಾಕಷ್ಟು ಸಮಯ ಕಾದ್ರೂ ಬ್ಯಾಗ್ ತೆಗೆದುಕೊಳ್ಳಲು ಯಾರೂ ಬರಲಿಲ್ಲ. ಹೀಗಾಗಿ ಏಕಾಂಕಿಯಾಗಿದ್ದ ಬ್ಯಾಗ್ ಕಂಡ ಭದ್ರತಾ ‌ಸಿಬ್ಬಂದಿ ಅನುಮಾನ‌ ಪಡುವಂತಾಯಿತು. ತದನಂತರ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ಯಂತ್ರದ ಮೂಲಕ ಬ್ಯಾಗ್​ […]

ಕೆಂಪೇಗೌಡ ಏರ್​ಪೋರ್ಟ್​ನಲ್ಲಿ​ ಆತಂಕ ಸೃಷ್ಟಿಸಿದ ಅನುಮಾನಾಸ್ಪದ ಬ್ಯಾಗ್!
ಸಾಧು ಶ್ರೀನಾಥ್​

Updated on: Dec 29, 2019 | 8:31 PM

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾರಸುದಾರರಿಲ್ಲದ ಅನುಮಾನಾಸ್ಫದ ಬ್ಯಾಗ್ ಪತ್ತೆಯಾಗಿ ಕೆಲಕಾಲ ಆತಂಕ ಸೃಷ್ಟಿಯಾದ ಘಟನೆ ನಡೆಯಿತು. ಏರ್​ಪೋರ್ಟ್​ನ ಅರೈವಲ್​ ಗೇಟ್ ಬಳಿ ಲಗೇಜ್ ಸಾಗಿಸುವ ಟ್ರಾಲಿ ಮೇಲೆ ಬ್ಯಾಗ್ ಪತ್ತೆಯಾಗಿತ್ತು.‌ ಇದನ್ನ ಗಮನಿಸಿದ ಭದ್ರತಾ ಸಿಬ್ಬಂದಿ, ಬ್ಯಾಗ್ ಟ್ರಾಲಿ ಮೇಲೆ ಸಾಕಷ್ಟು ಸಮಯ ಕಾದ್ರೂ ಬ್ಯಾಗ್ ತೆಗೆದುಕೊಳ್ಳಲು ಯಾರೂ ಬರಲಿಲ್ಲ. ಹೀಗಾಗಿ ಏಕಾಂಕಿಯಾಗಿದ್ದ ಬ್ಯಾಗ್ ಕಂಡ ಭದ್ರತಾ ‌ಸಿಬ್ಬಂದಿ ಅನುಮಾನ‌ ಪಡುವಂತಾಯಿತು.

ತದನಂತರ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ಯಂತ್ರದ ಮೂಲಕ ಬ್ಯಾಗ್​ ಅನ್ನು ಪರಿಶೀಲನೆ‌ ನಡೆಸಿದರು. ಕೊನೆಗೆ ಯಾವುದೇ ಅನುಮಾನಾಸ್ಫದ ರೀತಿಯ ಸ್ಫೋಟಕ ವಸ್ತುಗಳಿಲ್ಲ ಅಂತ ಅರಿವಿಗೆ ಬಂದ ನಂತರ ಟ್ರಾಲಿ ಸಮೇತ ಬ್ಯಾಗನ್ನ ಭದ್ರತಾ ಸಿಬ್ಬಂದಿ ಕೊಂಡೊಯ್ದರು. ಕೆಲ ಪ್ರಯಾಣಿಕರು ಆತುರದಲ್ಲಿ ಬ್ಯಾಗ್ ಬಿಟ್ಟು ಹೋಗುವ ಘಟನೆಗಳು ಆಗಾಗ್ಗೆ ಸಂಭವಿಸುತ್ತಿರುತ್ತವೆ. ಆದ್ರೆ ಅದನ್ನ ನಿರ್ಲಕ್ಷ್ಯ ವಹಿಸುವಂತಿಲ್ಲ. ಹೀಗಾಗಿ ಭದ್ರತೆಯ ಹಿತದೃಷ್ಟಿಯಿಂದ ಪರಿಶೀಲನೆ ನಡೆಸಲಾಗುತ್ತದೆ.

Published On - 8:31 pm, Sun, 29 December 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us