ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣ; ಅನುಮಾನಿತ ಪಿಎಸ್ಐ ಎಸ್ಕೇಪ್

ಶರೀಫ್​ಗೆ ವಿಚಾರಣೆಗೆ ಹಾಜರಾಗಲು ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಆದರೆ ಶರೀಫ್ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ಅಧಿಕಾರಿಗಳು ಹುಡುಕಾಟ ಶುರುಮಾಡಿದ್ದಾರೆ.

ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣ; ಅನುಮಾನಿತ ಪಿಎಸ್ಐ ಎಸ್ಕೇಪ್
ಸಾಂದರ್ಭಿಕ ಚಿತ್ರ
Edited By:

Updated on: Jul 09, 2022 | 9:11 AM

ಬೆಂಗಳೂರು: 545 ಹುದ್ದೆಗಳ ನೇಮಕಾತಿಯಲ್ಲಿ (PSI Recruitment Scam) ನಡೆದ ಅಕ್ರಮ ಬಯಲಾದ ದಿನದಿಂದ ಸಿಐಡಿ ಅಧಿಕಾರಿಗಳು ನಿರಂತರವಾಗಿ ವಿಚಾರಣೆ, ಶೋಧಕಾರ್ಯಗಳನ್ನ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಹಲವಾರು ಆರೋಪಿಗಳು ಈಗಾಗಲೇ ಅರೆಸ್ಟ್ (Arrest) ಆಗಿದ್ದಾರೆ. ಇನ್ನು ಈ ಹಗರಣದ ಕೇಸ್​ನಲ್ಲಿ ಅನುಮಾನಿತ ಪಿಎಸ್ಐಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದ್ದು, ಪಿಎಸ್ಐ ಪರಾರಿಯಾಗಿದ್ದಾರೆ. ಪಿಸಿ ಆಗಿದ್ದ ಸಮಯದಲ್ಲಿ ಎಡಿಜಿಪಿ ದರ್ಜೆಯ ಓರ್ವ ಅಧಿಕಾರಿಯ ಗನ್ ಮೆನ್ ಅಗಿ ಕೆಲಸ ಮಾಡಿದ್ದ ಶರೀಫ್ ಎಸ್ಕೇಪ್ ಆಗಿರುವ ಪಿಎಸ್ಐ ಎಂದು ತಿಳಿದುಬಂದಿದೆ.

ಕಾಮಾಕ್ಷಿಪಾಳ್ಯದಲ್ಲಿ ಪಿಎಸ್ಐ ಕೆಲಸ ಮಾಡುತ್ತಿದ್ದ ಶರೀಫ್ ಮೇಲೆ ಸಿಐಡಿಗೆ ಅನುಮಾನ ಇದೆ. ಈತ ಹಲವು ಜನರಿಗೆ ಪಿಎಸ್ಐ ಅಕ್ರಮ ನೇಮಕಾತಿ ಅಗಲು ಮಧ್ಯವರ್ತಿಯಾಗಿ ಕೆಲಸ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಶರೀಫ್ ಈ ಹಿಂದೆ ಪಿಸಿ ಆಗಿದ್ದರು. ನಂತರ 2019 ರಲ್ಲಿ ಪಿಎಸ್ಐ ಆಗಿ ನೇಮಕಾತಿ ಅಗಿದ್ದರು.
ಪಿಸಿಯಾಗಿದ್ದ ಸಮಯದಲ್ಲಿ ಎಡಿಜಿಪಿ ದರ್ಜೆಯ ಓರ್ವ ಅಧಿಕಾರಿಯ ಗನ್ ಮೆನ್ ಅಗಿ ಕೆಲಸ ಮಾಡಿದ್ದರು.

ಇದನ್ನೂ ಓದಿ: ಹೃದಯಾಘಾತ: ಲಕ್ಷಣಗಳು ಮಹಿಳೆಯರು ಹಾಗೂ ಪುರುಷರಲ್ಲಿ ಭಿನ್ನ ಹೇಗೆ?

ಇದನ್ನೂ ಓದಿ
Shinzo Abe Death: ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ನಿಧನ; ಭಾರತದಲ್ಲಿ ಇಂದು ರಾಷ್ಟ್ರೀಯ ಶೋಕಾಚರಣೆ
Karnataka Earthquake: ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಕಂಪಿಸಿದ ಭೂಮಿ: ರಿಕ್ಟರ್​ ಮಾಪಕದಲ್ಲಿ 4.9ರಷ್ಟು ಕಂಪನದ ತೀವ್ರತೆ ದಾಖಲು
ಸೀಟ್​​​ ಬೆಲ್ಟ್​​ ಧರಿಸದೆ ಸಿಕ್ಕಿಬಿದ್ದವ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಸಬ್​​ವೇ ಟ್ರ್ಯಾಕ್ ಮೇಲಿಂದ ಕಟ್ಟಡದ ಮೇಲೆ ಜಿಗಿದು ಕಾಲು ಮುರಿದುಕೊಂಡ!
Gold Price Today: ಬೆಂಗಳೂರು, ಚೆನ್ನೈ, ದೆಹಲಿ ಸೇರಿ ವಿವಿಧ ನಗರಗಳ ಇಂದಿನ ಚಿನ್ನ, ಬೆಳ್ಳಿ ಬೆಲೆ ಹೀಗಿದೆ

ಸದ್ಯ ಶರೀಫ್​ಗೆ ವಿಚಾರಣೆಗೆ ಹಾಜರಾಗಲು ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಆದರೆ ಶರೀಫ್ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ಅಧಿಕಾರಿಗಳು ಹುಡುಕಾಟ ಶುರುಮಾಡಿದ್ದಾರೆ.

ಅಮೃತ್​ ಪಾಲ್​ಗೆ ನಿದ್ದೆ ಇಲ್ಲ:
ಪ್ರಕರಣದಲ್ಲಿ ಬಂಧಿತರಾಗಿರುವ ಐಪಿಎಸ್​ ಅಧಿಕಾರಿ ಅಮೃತ್​ ಪಾಲ್ ಸಿಐಡಿ ಕಸ್ಟಡಿಯಲ್ಲಿದ್ದು, ಅಮಾನತುಗೊಂಡಿರುವ ಅಧಿಕಾರಿಗೆ ನಿದ್ದೆಯೇ ಬರುತ್ತಿಲ್ಲವಂತೆ. ಅದಕ್ಕಾಗಿ ವಿಸ್ಕಿ, ಸಿಗರೇಟ್​ ಬೇಕಂತೆ. ಪಿಎಸ್​ಐ ಹಗರಣ ಸಂಬಂಧ ಜುಲೈ 4 ರಂದು ಮಧ್ಯಾಹ್ನ ಸಿಐಡಿ ಅಧಿಕಾರಿಗಳು ಅಮೃತ್​ ಪಾಲ್ ಅವರನ್ನು ಬಂಧಿಸಿದ್ದರು. ಈಗ ಅವರು ತನಗೆ ಟೆನ್ಷನ್​ ಆಗುತ್ತಿದೆ, ಸಿಗರೇಟ್ ಬೇಕು, ನಿದ್ದೆ ಬರುತ್ತಿಲ್ಲ ವಿಸ್ಕಿ ಬೇಕೆಂದು ಹೇಳುತ್ತಿದ್ದಾರಂತೆ.

ಇದನ್ನೂ ಓದಿ: ENG vs IND: ಭಾರತ-ಇಂಗ್ಲೆಂಡ್ 2ನೇ ಟಿ20ಗೆ ಇದೆಯೆ ಮಳೆಯ ಕಾಟ?: ಇಲ್ಲಿದೆ ಹವಾಮಾನ ವರದಿ

Published On - 9:06 am, Sat, 9 July 22