ಬೆಂಗಳೂರು: ಬಿಜೆಪಿಯ ಬಿ ಟೀಂ ಪಿತಾಮಹ ಸಿದ್ದರಾಮಯ್ಯ. ಡೀಲ್ ರಾಮಯ್ಯ ಸಿದ್ದರಾಮಯ್ಯ. ನಮ್ಮ ಶಾಸಕರನ್ನ ಮನೆಗೆ ಕರೆಸಿಕೊಂಡು ಡೀಲ್ ಮಾಡ್ಕೊಂಡಿದ್ದೀರಾ ಎಂದು ಎಂಎಲ್ಸಿ ಶರವಣ ಸಿದ್ದರಾಮಯ್ಯ ವಿರುದ್ದ ಆರೋಪ ಮಾಡಿದ್ದಾರೆ. ಡೀಲ್ ರಾಮಯ್ಯ ಹೇಳೋದು ಆಚಾರ ತಿನ್ನೋದು ಬದನೆಕಾಯಿ. ನಿಮಗೆ ಎಷ್ಟು ಸೂಟ್ ಕೇಸ್ನಲ್ಲಿ ಬಂದಿದೆ ಅನ್ನೋದನ್ನು ಡೀಲ್ ರಾಮಯ್ಯ ಹೇಳಬೇಕು. ರಾಜ್ಯ ಸಭಾ ಚುನಾವಣೆಯಲ್ಲಿ ಬಣ್ಣ ಬಯಲಾಗಿದೆ. ಸಿದ್ದರಾಮಯ್ಯ ಯಾರ ಮಾತೂ ಕೇಳಲ್ಲ. ಸಿದ್ದರಾಮಯ್ಯ ತಾವೇ ಹೈಕಮಾಂಡ್ ತರ ಮಾಡುತ್ತಿದ್ದಾರೆ ಅಂತ ಕಾಂಗ್ರೆಸ್ನವರೇ ಹೇಳುತ್ತಿದ್ದಾರೆ. ದೇವೇಗೌಡರು ನನಗೆ ಫಾರೂಕ್ಗೆ ಸಿದ್ದರಾಮಯ್ಯ ಭೇಟಿ ಮಾಡುವುದಕ್ಕೆ ಹೇಳಿದ್ದರು. ಸಿದ್ದರಾಮಯ್ಯ ಭೇಟಿ ಮಾಡಿದಾಗ ನಾವು ರಿಕ್ ವೆಸ್ಟ್ ಮಾಡಿಕೊಂಡಿದ್ದೇವು. ಅಲ್ಲಿ ನಡೆದದ್ದನ್ನು ಹೇಳದೇ ಶರವಣ ಸ್ವೀಟ್ ಕೊಡೋದಕ್ಕೆ ಬಂದ ಅಂತ ತಿರುಚಿ ಹೇಳೋ ಸಿದ್ದರಾಮಯ್ಯರನ್ನು ಏನಂತ ಕರಿಬೇಕು ಎಂದರು.
ಇದನ್ನೂ ಓದಿ: ರಾಜಸ್ಥಾನದ ಸಚಿವರ ಮಗನ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದ ಮಹಿಳೆ ಮೇಲೆ ಮಸಿ ದಾಳಿ
ಕುಮಾರಣ್ಣ ದೇವೇಗೌಡ ಕಣ್ಣಲ್ಲಿ ಕಣ್ಣೀರು ಹಾಕ್ಸಿದ್ದೀರಾ ನೀವು ಅದಕ್ಕೆ ಬೆಲೆ ತೆರಲೇಬೇಕು. ನಮ್ಮ ಇಬ್ಬರು ಸೂಟ್ ಕೇಸ್ ಶ್ರೀನಿವಾಸರಿಗೆ ತಿರುಪತಿ ಶ್ರೀನಿವಾಸನ ಶಾಪ ತಟ್ಟುತ್ತದೆ. ನಮ್ಮ ಪಕ್ಷದಲ್ಲಿ ಗೆದ್ದು ತಾಯಿನ ಮಾರಾಟ ಮಾಡಿದ್ದೀರಾ. ಪುಡಿ ರೌಡಿಗಳಂತೆ ಮಾತನಾಡ್ತಿದ್ದೀರಾ. ನಮ್ಮ ಕಾರ್ಯಕರ್ತರು ಸನ್ಯಾಸಿಗಳಲ್ಲ ಬುದ್ದಿ ಕಲಿಸುತ್ತಾರೆ ಎಂದು ಹೇಳಿದರು.
ಸಿದ್ದರಾಮಯ್ಯ ವಿರುದ್ಧ ಸಿ.ಎಂ.ಇಬ್ರಾಹಿಂ ವಾಗ್ದಾಳಿ
ಸಿದ್ದರಾಮಯ್ಯ ವಿರುದ್ಧ ಸಿ.ಎಂ.ಇಬ್ರಾಹಿಂ ವಾಗ್ದಾಳಿ ನಡೆಸಿದ್ದು, ಸಿದ್ದರಾಮಯ್ಯ 12 ಶಾಸಕರನ್ನು ಮುಂಬೈಗೆ ಕಳುಹಿಸಿ
ಮಂಚದ ಮೇಲೆ ಮಲಗಿಸಿ ವಿಡಿಯೋ ಮಾಡಿಸಿ, ಬಿ.ಎಸ್.ಯಡಿಯೂರಪ್ಪನನ್ನು ಸಿಎಂ ಮಾಡಿದ್ರಿ ಎಂದು ಜೆಡಿಎಸ್ ಪ್ರತಿಭಟನೆಯಲ್ಲಿ ಸಿ.ಎಂ.ಇಬ್ರಾಹಿಂ ಆಕ್ರೋಶ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಈಗಲೂ ಬಿಎಸ್ವೈ ಜೊತೆ ಡೀಲ್ ಮಾಡ್ಕೊಂಡ್ರಲ್ಲ. ಏರ್ಪೋರ್ಟ್ನಲ್ಲಿ ಸಿದ್ದರಾಮಯ್ಯ ಡೀಲ್ ಮಾಡಿದ್ರಲ್ಲ. ಸಿ.ಟಿ.ರವಿ ಅದಕ್ಕೆ ಸಿದ್ದರಾಮಯ್ಯಗೆ ವಿಧಾನಸೌಧದ ಕಾಂಗ್ರೆಸ್ ಕಚೇರಿಗೆ ಹೋಗಿ ಅಭಿನಂದನೆ ಸಲ್ಲಿಸಿದ್ದರು. ತಾಳಿ ಕಟ್ಟಿಸಿಕೊಳ್ಳುವುದು ಒಬ್ಬರ ಜತೆ ಪ್ರಸ್ತ ಮತ್ತೊಬ್ಬರ ಜತೆ. ನಾಚಿಕೆಗೆಟ್ಟವರು ನೀವು, ಮಾನಗೆಟ್ಟವರು ನೀವು ಎಂದು ಇಬ್ರಾಹಿಂ ಕಿಡಿಕಾರಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.