ರಾಜಸ್ಥಾನದ ಸಚಿವರ ಮಗನ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದ ಮಹಿಳೆ ಮೇಲೆ ಮಸಿ ದಾಳಿ

TV9kannada Web Team

TV9kannada Web Team | Edited By: Rashmi Kallakatta

Updated on: Jun 12, 2022 | 1:57 PM

ಕಾಲಿಂದಿ ಕುಂಜ್ ರಸ್ತೆಯಲ್ಲಿ ಮಹಿಳೆ ಮತ್ತು ಆಕೆಯ ಅಮ್ಮ ನಡೆದುಕೊಂಡು ಹೋಗುತ್ತಿರುವಾಗ ಇಬ್ಬರು ಅಪರಿಚಿತರು ಬಂದು ಆಕೆಯ ಮುಖಕ್ಕೆ ನೀಲಿ ಶಾಯಿ ಎರಚಿದ್ದಾರೆ. ಆಕೆಯನ್ನು ತಕ್ಷಣವೇ ಎಐಐಎಂಎಸ್ ಟ್ರಾಮಾ ಸೆಂಟರ್ ಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ರಾಜಸ್ಥಾನದ ಸಚಿವರ ಮಗನ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದ ಮಹಿಳೆ ಮೇಲೆ ಮಸಿ ದಾಳಿ
ರೋಹಿತ್ ಜೋಷಿ

ದೆಹಲಿ: ರಾಜಸ್ಥಾನದ (Rajasthan) ಸಚಿವ ಮಹೇಶ್ ಜೋಷಿ (Mahesh Joshi) ಪುತ್ರ ರೋಹಿತ್ ಜೋಷಿ  (Rohit Joshi)ವಿರುದ್ಧ ಅತ್ಯಾಚಾರ (Rape) ಆರೋಪ ಹೊರಿಸಿದ್ದ ಮಹಿಳೆ ಮೇಲೆ ಶನಿವಾರ ಆಗ್ನೇಯ ದೆಹಲಿಯ ಶಾಹೀನ್ ಭಾಗ್​​ನಲ್ಲಿ ಮಸಿ ದಾಳಿ ನಡೆದಿದೆ ಎಂದು ಪೊಲೀಸರು ಭಾನುವಾರ ಹೇಳಿದ್ದಾರೆ. 23ರ ಹರೆಯದ ಮಹಿಳೆ ಮೇಲೆ ರೋಹಿತ್ ಜೋಷಿ ಕಳೆದ ವರ್ಷ ದೆಹಲಿ ಮತ್ತು ರಾಜಸ್ಥಾನದಲ್ಲಿ ಅತ್ಯಾಚಾರವೆಸಗಿದ್ದಾನೆ ಎಂದು ಮಹಿಳೆ ದೂರಿದ್ದಳು. ಕಾಲಿಂದಿ ಕುಂಜ್ ರಸ್ತೆಯಲ್ಲಿ ಮಹಿಳೆ ಮತ್ತು ಆಕೆಯ ಅಮ್ಮ ನಡೆದುಕೊಂಡು ಹೋಗುತ್ತಿರುವಾಗ ಇಬ್ಬರು ಅಪರಿಚಿತರು ಬಂದು ಆಕೆಯ ಮುಖಕ್ಕೆ ನೀಲಿ ಶಾಯಿ ಎರಚಿದ್ದಾರೆ. ಆಕೆಯನ್ನು ತಕ್ಷಣವೇ ಎಐಐಎಂಎಸ್ ಟ್ರಾಮಾ ಸೆಂಟರ್ ಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. “ಈ ಘಟನೆಯ ಬಗ್ಗೆ ನಮಗೆ ಶನಿವಾರ ಸಂಜೆ ಪಿಸಿಆರ್ ಕರೆ ಬಂದಿದೆ. ಘಟನೆ ಬಳಿಕ ಆರೋಪಿ ಪರಾರಿಯಾಗಿದ್ದಾನೆ. ನೀಲಿ ದ್ರವವು ಶಾಯಿಯಂತೆ ಕಾಣುತ್ತದೆ. ನಾವು ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 323 (ನೋಯಿಸುವುದು), 506 (ಕ್ರಿಮಿನಲ್ ಬೆದರಿಕೆ) ಮತ್ತು 195 A (ಸುಳ್ಳು ಸಾಕ್ಷ್ಯವನ್ನು ನೀಡುವಂತೆ ಬೆದರಿಕೆ ಹಾಕುವುದು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ ಎಂದು ಪೊಲೀಸ್ ಉಪ ಕಮಿಷನರ್ (ಆಗ್ನೇಯ) ಇಶಾ ಪಾಂಡೆ ಹೇಳಿದ್ದಾರೆ. ಕಳೆದ ವರ್ಷ ತನ್ನ ಮೇಲೆ ಅತ್ಯಾಚಾರ ಮತ್ತು ಹಲ್ಲೆ ನಡೆಸಿದ್ದಾನೆ ಎಂದು ಮಹಿಳೆ ದೂರು ನೀಡಿದ ನಂತರ ಪೊಲೀಸರು ಕಳೆದ ತಿಂಗಳು ರೋಹಿತ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. “ನಾನು ಅವನಿಗೆ ಕರೆ ಮಾಡಿದಾಗ ನಾನು ಸಚಿವರ ಮಗ, ಯಾರಿಗೂ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ. ಅವನು ತನ್ನ ಹಣ ಮತ್ತು ಅಧಿಕಾರದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಾನೆ. ನೀನು ಎಲ್ಲಿ ಕಣ್ಮರೆಯಾಗಿದ್ದಿ ಎಂಬುದೂ ಗೊತ್ತಾಗಲ್ಲಅಂದಿದ್ದ. ಭನ್ವಾರಿ ದೇವಿ ಪ್ರಕರಣ ಪುನರಾವರ್ತನೆಯಾಗುತ್ತದೆ ಎಂದು ಮಹಿಳೆ ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ.

ಎಸಿಪಿ ಶ್ರೇಣಿಯ ಅಧಿಕಾರಿಯ ನೇತೃತ್ವದ 15-20 ಪೊಲೀಸ್ ಸಿಬ್ಬಂದಿಯ ತಂಡವು ಜೈಪುರದಲ್ಲಿರುವ ಜೋಷಿ ಮನೆ ತಲುಪಿದಾಗ ಅಲ್ಲಿದ್ದ ಮನೆಯನ್ನು ಕೆಡವಲಾಗಿತ್ತು. ನಂತರ ಅವರು ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಮತ್ತೊಂದು ಮನೆಯಲ್ಲಿ ಹುಡುಕಿದ್ದು ರೋಹಿತ್ ತಲೆಮರೆಸಿಕೊಂಡಿದ್ದಾನೆ. “ಪೊಲೀಸರು ಪ್ರಕರಣದ ಬಗ್ಗೆ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ ಮತ್ತು ಅವರ ಇರುವಿಕೆಯ ಬಗ್ಗೆ ತಿಳಿಸುವಂತೆ ಕೇಳಿಕೊಂಡಿದ್ದಾರೆ” ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆತ ತಲೆಮರೆಸಿಕೊಂಡಿದ್ದು, ದೆಹಲಿ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾನೆ.

ತಾಜಾ ಸುದ್ದಿ

ಗುರುವಾರ ದೆಹಲಿ ನ್ಯಾಯಾಲಯ ಈ ಪ್ರಕರಣದಲ್ಲಿ ರೋಹಿತ್‌ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಶುಕ್ರವಾರ ರೋಹಿತ್‌ನನ್ನು ವಿಚಾರಣೆಗೊಳಪಡಿಸಿ ಹೇಳಿಕೆ ದಾಖಲಿಸಿಕೊಂಡಿರುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ. ರೋಹಿತ್ ಅವರ ತಂದೆ ಮಹೇಶ್ ರಾಜಸ್ಥಾನದ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಇಲಾಖೆ (PHED) ಸಚಿವರಾಗಿದ್ದಾರೆ.

ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು) ಶಾಯಿ ದಾಳಿ ಬಗ್ಗೆ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ರಾಜಸ್ಥಾನದ ಸಚಿವ ಮಹೇಶ್ ಜೋಷಿ ಮಗರೋಹಿತ್ ಜೋಷಿ ವಿರುದ್ಧ ಆರೋಪ ಮಾಡಿರುವ ಮಹಿಳೆ ಮೇಲೆ ಇಬ್ಬರು ಅಪರಿಚಿತರು ದಾಳಿ ಮಾಡಿದ್ದಾರೆ.ಅಶೋಕ್ ಗೆಹ್ಲೋಟ್ ಸರ್, ಸಚಿವರ ಮಗನನ್ನು ಕಾಪಾಡುವ ಬದಲು ಆತನನ್ನು ಬಂಧಿಸಿ.ಈ ದಾಳಿಗೆ ಸಂಬಂಧಿಸಿದಂತೆ ನಾವು ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸುವಂತೆ ನಾವು ನೋಟಿಸ್ ನೀಡುತ್ತಿದ್ದೇವೆ ಎಂದು ಡಿಸಿಡಬ್ಲ್ಯು ಅಧ್ಯಕ್ಷೆ ಸ್ವಾತಿ ಮಲಿವಾಲ್ ಟ್ವೀಟ್ ಮಾಡಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada