ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ತಮಿಳುನಾಡಿನ ಖಾಸಗಿ ಕಾಲೇಜಿನ ಅಧ್ಯಕ್ಷ ಬಂಧನ
ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಕಾಲೇಜು ಚೇರ್ಮನ್ ದಾಸ್ವಿನ್ ಜಾನ್ ಗ್ರೇಸ್ (40) ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಜಾನ್ನ ಬಂಧನಕ್ಕೆ ಒತ್ತಾಯಿಸಿ ವಿದ್ಯಾರ್ಥಿಗಳು 'ರಾಸ್ತಾ ರೋಕೋ' ಪ್ರತಿಭಟನೆ ನಡೆಸಿದ್ದಾರೆ.
ಚೆನ್ನೈ: ತಮಿಳುನಾಡಿನ (Tamil Nadu) ವಿರುದುನಗರದ (Virudhunagar) ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳಿಗೆ ಅಶ್ಲೀಲ ವಿಡಿಯೊ ಕರೆ (obscene video calls)ಮಾಡಿದ ಆರೋಪದ ಮೇಲೆ ಕಾಲೇಜಿನ ಅಧ್ಯಕ್ಷರನ್ನು ಶನಿವಾರ ಬಂಧಿಸಲಾಗಿದೆ. ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಕಾಲೇಜು ಚೇರ್ಮನ್ ದಾಸ್ವಿನ್ ಜಾನ್ ಗ್ರೇಸ್ (40) ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಜಾನ್ನ ಬಂಧನಕ್ಕೆ ಒತ್ತಾಯಿಸಿ ವಿದ್ಯಾರ್ಥಿಗಳು ‘ರಾಸ್ತಾ ರೋಕೋ’ ಪ್ರತಿಭಟನೆ ನಡೆಸಿದ್ದಾರೆ. ಸ್ಥಳೀಯ ಬಿಜೆಪಿ ನಾಯಕರೂ ಆಗಿರುವ ಆರೋಪಿ ಜಾನ್ ವಿರುದ್ಧ ಸೆಕ್ಷನ್ ಐಪಿಸಿ 354A(2) (ಲೈಂಗಿಕ ಕಿರುಕುಳ ಮತ್ತು ಲೈಂಗಿಕ ಕಿರುಕುಳಕ್ಕಾಗಿ ಶಿಕ್ಷೆ), 354 ಬಿ(ವಿವಸ್ತ್ರಗೊಳ್ಳುವ ಉದ್ದೇಶದಿಂದ ಮಹಿಳೆಯ ಮೇಲೆ ಕ್ರಿಮಿನಲ್ ಬಲದ ಆಕ್ರಮಣ ಅಥವಾ ಬಳಕೆ), 354ಸಿ ಮತ್ತು 506( i) (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ), ಸೆಕ್ಷನ್ 4 (ಮಹಿಳೆಗೆ ಕಿರುಕುಳಕ್ಕಾಗಿ ದಂಡ) ತಮಿಳುನಾಡು ಮಹಿಳಾ ಕಿರುಕುಳ ನಿಷೇಧ ಕಾಯಿದೆ ಮತ್ತು ಸೆಕ್ಷನ್ 3(i)(w)(ii) (ಅಪರಾಧಗಳ ದೌರ್ಜನ್ಯಗಳಿಗೆ ಶಿಕ್ಷೆ) ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯಿದೆ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ. ಪೊಲೀಸ್ ವರದಿಗಳ ಪ್ರಕಾರ ಅಧ್ಯಕ್ಷರು ಕಳೆದ ಆರು ತಿಂಗಳಲ್ಲಿ ಹುಡುಗಿಗೆ ವಿಡಿಯೊ ಕರೆಗಳನ್ನು ಮಾಡುತ್ತಿದ್ದರು ಮತ್ತು ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸುತ್ತಿದ್ದರು. ಕಳೆದ ವಾರ ಕಾಲೇಜು ಹಾಸ್ಟೆಲ್‌ನಲ್ಲಿದ್ದ ಆಕೆಯ ಸಹಪಾಠಿಳು ಇದನ್ನು ಗಮನಿಸಿ ಆಕೆಯನ್ನು ಪ್ರಶ್ನಿಸಿದ್ದರು. ಆಪಾದಿತ ಲೈಂಗಿಕ ಕಿರುಕುಳದ ಬಗ್ಗೆ ವಿದ್ಯಾರ್ಥಿನಿ ಅವರಿಗೆ ತಿಳಿಸಿದ್ದಾಳೆ. ನಂತರ, ಆಕೆಯ ಸ್ನೇಹಿತರು ವಿಡಿಯೊವನ್ನು ರೆಕಾರ್ಡ್ ಮಾಡಿದರು. ಆಕೆಯ ಮುಖವನ್ನು ಬ್ಲರ್ ಮಾಡಿ ವಿಡಿಯೊವನ್ನು ಪ್ರಸಾರ ಮಾಡಿ ಜಾನ್ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಟಿಎಂ ದಾಸ್ವಿನ್ ಜಾನ್ ಗ್ರೇಸ್ ಅವರು ವಿರುದುನಗರದ ಅರುಪ್ಪುಕೊಟ್ಟೈನಲ್ಲಿರುವ ಅರಸು ಎಲೆಕ್ಟ್ರೋ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಧ್ಯಕ್ಷರಾಗಿದ್ದಾರೆ. ಅವರು ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಮಾಜಿ ಅಧ್ಯಕ್ಷರಾಗಿದ್ದರು. ವಿರುದುನಗರದ ಅರುಪ್ಪುಕೊಟ್ಟೈ ಆಲ್ ವುಮೆನ್ಸ್ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು15 ದಿನಗಳ ಕಾಲ ಕಸ್ಟಡಿಗೆ ಒಪ್ಪಿಸಲಾಯಿತು.
ನ್ಯೂಸ್ 9 ನೊಂದಿಗೆ ಮಾತನಾಡಿದ ದಕ್ಷಿಣ ವಲಯ ಪೊಲೀಸ್ ಮಹಾನಿರೀಕ್ಷಕ ಆಸ್ರ ಗರ್ಗ್, ವಿದ್ಯಾರ್ಥಿನಿಯೊಬ್ಬಳ ದೂರಿನ ಆಧಾರದ ಮೇಲೆ ಆರೋಪಿಯನ್ನು ತಕ್ಷಣವೇ ಬಂಧಿಸಲಾಗಿದೆ. ಈ ಕಾಲೇಜಿನ ವಿದ್ಯಾರ್ಥಿನಿಯರು ಕೆಲವು ತಿಂಗಳ ಹಿಂದೆ ಆರೋಪಿಗಳ ವಿರುದ್ಧ ಇದೇ ರೀತಿಯ ಆರೋಪ ಮಾಡಿ ಪತ್ರ ಬರೆದಿರುವುದು ನಮ್ಮ ಗಮನಕ್ಕೆ ಬಂದಿದ್ದು, ಆ ಬಗ್ಗೆಯೂ ಪರಿಶೀಲಿಸುತ್ತೇವೆ ಎಂದಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 4:57 pm, Sun, 12 June 22