ಕೊಪ್ಪಳ ಪ್ರೇಮ ಪ್ರಕರಣ: ಎರಡು ಕುಟುಂಬಗಳ ಮಾರಾಮಾರಿ: 9 ಜನರ ವಿರುದ್ಧ ದೂರು ದಾಖಲು

ಬಡಿಗೆ, ಮಾರಕಾಸ್ತ್ರಗಳಿಂದ ಹೊಡೆದು ವ್ಯಕ್ತಿಯ ಬರ್ಬರ ಕೊಲೆ ಮಾಡಿರುವಂತಹ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಮೂಡಬೋಳ ಗ್ರಾಮದಲ್ಲಿ ನಡೆದಿದೆ.

ಕೊಪ್ಪಳ ಪ್ರೇಮ ಪ್ರಕರಣ: ಎರಡು ಕುಟುಂಬಗಳ ಮಾರಾಮಾರಿ: 9 ಜನರ ವಿರುದ್ಧ ದೂರು ದಾಖಲು
ಎರಡು ಕುಟುಂಬಗಳ ಮಾರಾಮಾರಿ.
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Jun 13, 2022 | 11:38 AM

ಕೊಪ್ಪಳ: ಪ್ರೇಮ (Love Case) ಪ್ರಕರಣಕ್ಕೆ ಸಂಬಂಧಿಸಿದಂತೆ 2 ಕುಟುಂಬಗಳ ನಡುವೆ ಮಾರಾಮಾರಿ (Fight) ನಡೆದಿರುವಂತಹ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗಾಣದಾಳ ಗ್ರಾಮದಲ್ಲಿ ನಡೆದಿದೆ. ಯುವಕನ ಸಂಬಂಧಿಕರ ಮೇಲೆ ಯುವತಿ ಮನೆಯವರ ಹಲ್ಲೆ ಮಾಡಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆಂದು ಆರೋಪ ಮಾಡಲಾಗಿದೆ. ಗಾಣದಾಳ ಗ್ರಾಮದ ಯುವತಿಯನ್ನೇ  ಯುವಕ ಪ್ರೀತಿಸುತ್ತಿದ್ದು, ಮನೆಗೆ ಬಂದು ಹೊಡೆದು ಜೀವ ಬೆದರಿಕೆ ಹಾಕಿದ್ದಾಗಿ ಹಲ್ಲೆಗೊಳಗಾದ ಹೊನ್ನಮ್ಮ ಎಂಬುವರಿಂದ ದೂರು ನೀಡಲಾಗಿದೆ. ಬೇವೂರು ಠಾಣೆಯಲ್ಲಿ 9 ಜನರ ವಿರುದ್ಧ ದೂರು ದಾಖಲು ಮಾಡಲಾಗಿದ್ದು, ಗಾಯಾಳುಗಳಿಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೇವೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 143, 147, 323, 354, 355, 504, 506 ಅಡಿಯಲ್ಲಿ ದೂರು ದಾಖಲು ಮಾಡಲಾಗಿದೆ.

ಈಜಲು ಹೋಗಿ ಯುವಕ‌ ನೀರುಪಾಲು:

ಬೆಂಗಳೂರು ಗ್ರಾಮಾಂತರ: ಕುಂಟೆಯಲ್ಲಿ ಈಜಲು ಹೋಗಿ ಯುವಕ‌ ನೀರುಪಾಲಾದಂತಹ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ ಗ್ರಾಮದಲ್ಲಿ ನಡೆದಿದೆ. ಯಲಹಂಕ ತಾಲೂಕಿನ ಹನಿಯೂರು ನಿವಾಸಿ ಶರತ್ ( 26 ) ಮೃತ ದುರ್ದೈವಿ. ಅಜ್ಜಿ ಮನೆಗೆ ಬಂದ ವೇಳೆ ಮನೆ ಹಿಂದಿನ ಕುಂಟೆಯಲ್ಲಿ ಮುಳುಗಿ ಮೃಪಟ್ಟಿದ್ದಾನೆ. ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಮೃತ ದೇಹಕ್ಕಾಗಿ ಹುಡುಕಾಟ ಮಾಡಲಾಗುತ್ತಿದೆ.

ಇದನ್ನೂ ಓದಿ: ರಾಹುಲ್ ಗಾಂಧಿಗೆ ಸಮನ್ಸ್: ಕಾಂಗ್ರೆಸ್ ಪ್ರತಿಭಟನೆ, ಹಲವು ಮಂದಿ ಪೊಲೀಸ್ ವಶಕ್ಕೆ

ಮಾರಕಾಸ್ತ್ರಗಳಿಂದ ಹೊಡೆದು ವ್ಯಕ್ತಿಯ ಬರ್ಬರ ಕೊಲೆ

ಕಲಬುರಗಿ: ಬಡಿಗೆ, ಮಾರಕಾಸ್ತ್ರಗಳಿಂದ ಹೊಡೆದು ವ್ಯಕ್ತಿಯ ಬರ್ಬರ ಕೊಲೆ ಮಾಡಿರುವಂತಹ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಮೂಡಬೋಳ ಗ್ರಾಮದಲ್ಲಿ ನಡೆದಿದೆ. ವಿಶ್ವನಾಥ್ ಸಂಗಾವಿ(32) ಮೃತ ವ್ಯಕ್ತಿ. ಗ್ರಾಮದ ಸಣ್ಣೂರಕರ ಕುಟುಂಬದ ವಿರುದ್ಧ ಕೊಲೆ ಆರೋಪ ಮಾಡಲಾಗಿದೆ. ಸಣ್ಣೂರಕರ್ ಮತ್ತು ಸಂಗಾವಿ ಕುಟುಂಬದ ನಡುವೆ ಹಳೆ ದ್ವೇಷ ಹಿನ್ನೆಲೆ ನಿನ್ನೆ ಸಂಜೆ 2 ಕುಟುಂಬಗಳ ನಡುವೆ ಗಲಾಟೆ ಆಗಿತ್ತು. ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಹುಬ್ಬಳ್ಳಿಯ ಕಿಮ್ಸ್ ಕ್ವಾರ್ಟರ್ಸ್ ನಲ್ಲಿ ಸರಣಿ ಕಳ್ಳತನ

ಹುಬ್ಬಳ್ಳಿ: ರಜೆಗೆಂದು ಊರಿಗೆ ಹೋದವರ ಮನೆಯನ್ನೆ ಟಾರ್ಗೆಟ್​ ಮಾಡಿ ನಾಲ್ಕು ಮನೆಗಳಿಗೆ ಕಳ್ಳರು ಕನ್ನ ಹಾಕಿರುವಂತಹ ಘಟನೆ ನಗರದಲ್ಲಿ ಕಿಮ್ಸ್​ನ ​ ಆವರಣದಲ್ಲಿರುವ ಸಿಬ್ಬಂದಿ ಕ್ವಾರ್ಟರ್ಸನಲ್ಲಿ ನಡೆದಿದೆ. ಕ್ವಾರ್ಟರ್ಸ್​​​ನ ಬ್ಲಾಕ್ ನಂಬರ್ 2 ರಲ್ಲಿ 1 ಮನೆ, ಬ್ಲಾಕ್ ನಂಬರ್ 6 ರಲ್ಲಿ 3 ಮನೆಗಳು ಕಳ್ಳತನ ಮಾಡಲಾಗಿದೆ. ಕಿಮ್ಸ್​ನ ಪ್ರೊಫೆಸರ್ ಒಬ್ಬರ ಮನೆ ಹಾಗೂ ಮೂವರು ಸ್ಟಾಪ್ ನರ್ಸ ಮನೆಗಳಿಗೆ ಖದಿಮರು ಕನ್ನ ಹಾಕಿದ್ದು, ಈ ಹಿಂದೆ ಕೂಡಾ ಹಲವು ಮನೆಗಳಿಗೆ ಕನ್ನ ಹಾಕಿದ್ದರು. ಕ್ವಾರ್ಟರ್ಸನಲ್ಲಿ ಪದೆ ಪದೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸ್ಥಳಕ್ಕೆ ವಿದ್ಯಾನಗರ ಪೊಲೀಸರು, ಬೆರಳಚ್ಚು ತಜ್ಞರು ಬೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಹುಬ್ಬಳ್ಳಿ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇಸ್ಪೀಟ್ ಅಡ್ಡೆ ಮೇಲೆ‌ ದಾಳಿ: 3 ಲಕ್ಷ 37‌ಸಾವಿರ ರೂ ವಶಕ್ಕೆ

ಆನೇಕಲ್: ಇಸ್ಪೀಟ್ ಅಡ್ಡೆ ಮೇಲೆ‌ ದಾಳಿ ಮಾಡಿ 15‌ ಜನ ಜೂಜುಕೋರರನ್ನು ಬಂಧಿಸಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಸರ್ಜಾಪುರದ ಹಂದೇನಹಳ್ಳಿಯ ಮನೆಯಲ್ಲಿ ಜೂಜಾಟ ನಡೆಸಲಾಗುತ್ತಿದ್ದು, ಜೂಜಾಟ ರೂವಾರಿ ನೆರಳೂರು ಪಿಳ್ಳಪ್ಪ ವಶಕ್ಕೆ ಪಡೆಯಲಾಗಿದೆ. ಡಿವೈಎಸ್ ಪಿ ಮಲ್ಲೇಶ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. 3ಲಕ್ಷ 37‌ಸಾವಿರ ರೂ. ಎರಡು ಕಾರು, ಆರು ಬೈಕ್​ನ್ನು ಹೆಬ್ಬಗೋಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 11:27 am, Mon, 13 June 22