ಸಬ್ ಇನ್ಸ್ಪೆಕ್ಟರ್​ನಿಂದ ಪತ್ನಿಗೆ ಕಿರುಕುಳ ಆರೋಪ: ಪತ್ನಿಯಿಂದಲೇ ಪಿಎಸ್ಐ ಗಂಡನ ವಿರುದ್ಧ ದೂರು

ಮದುವೆಯಾದ ನಂತರ ಬೇರೆಯವರ‌ ಜೊತೆ ಸಂಬಂಧವಿಟ್ಟುಕೊಂಡು ಕಿರುಕುಳ‌ ಆರೋಪ ಮಾಡಲಾಗಿದೆ. ಪತ್ನಿ ರಾಶಿಯಿಂದ ಪಿಎಸ್ಐ ರಮೇಶ್ ವಿರುದ್ದ ಕಿರುಕುಳ ಆರೋಪದಡಿ ಕೇಸ್​ ಹಾಕಿದ್ದು, ಆದರೆ ಆರೋಪವನ್ನು ಪಿಎಸ್ಐ ರಮೇಶ್ ತಳ್ಳಿ ಹಾಕಿದ್ದಾನೆ.

ಸಬ್ ಇನ್ಸ್ಪೆಕ್ಟರ್​ನಿಂದ ಪತ್ನಿಗೆ ಕಿರುಕುಳ ಆರೋಪ: ಪತ್ನಿಯಿಂದಲೇ ಪಿಎಸ್ಐ ಗಂಡನ ವಿರುದ್ಧ ದೂರು
ಸಬ್ ಇನ್ಸ್ಪೆಕ್ಟರ್​ನಿಂದ ಪತ್ನಿಗೆ ಕಿರುಕುಳ ಆರೋಪ
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Jun 09, 2022 | 1:17 PM

ದೇವನಹಳ್ಳಿ: ಪಿಎಸ್ಐ ಪತಿ ವಿರುದ್ದ ತನ್ನ ಪತ್ನಿಯಿಂದಲೇ ಕಿರುಕುಳ ಆರೋಪದಡಿ ದೂರು ದಾಖಲು ಮಾಡಿರುವಂತಹ ಘಟನೆ ನಡೆದಿದೆ. ಹೊಸಕೋಟೆ ತಾಲೂಕಿನ ಸೂಲಿಬೆಲೆ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ರಮೇಶ್ ಗೂಗರಿ ಮೇಲೆ ತನ್ನ ಪತ್ನಿಯಿಂದ ಆರೋಪ ಮಾಡಿದ್ದು, ಪಿಎಸ್ಐ ರಮೇಶ್ ಗೂಗರಿ ವಿರುದ್ದ ಎಫ್ಐಆರ್​​  ದಾಖಲಾಗಿದೆ. ಪತ್ನಿ ರಾಶಿ ಎಂಬುವವರಿಂದ ಎಫ್ಐಆರ್ ದಾಖಲಿಸಿದ್ದು, ಪಿಎಸ್ಐ ನನ್ನ ಮದುವೆಯಾಗಿ ಮತ್ತೆ ಬೇರೆಯವರನ್ನ ಮದುವೆಯಾಗಿದ್ದಾರೆ ಎಂದು ಎಫ್​ಐಆರ್​ನಲ್ಲಿ ಪತ್ನಿ ರಾಶಿ ಉಲ್ಲೇಖನ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: IND vs SA: ಮೊದಲ ಟಿ20 ಫೈಟ್​ಗೆ ಟೀಮ್ ಇಂಡಿಯಾ ಆಟಗಾರರ ಭರ್ಜರಿ ಅಭ್ಯಾಸ: ಫೋಟೋ

ಸುಳ್ಳು ತಂದೆ ತಾಯಿಯನ್ನ‌ ತೋರಿಸಿ ರಾಶಿ ಎಂಬುವವರನ್ನ ರಿಜಿಸ್ಟರ್ ಮದುವೆಯಾಗಿ ವಂಚನೆ ಮಾಡಲಾಗಿದೆ. ಮದುವೆಯಾದ ನಂತರ ಬೇರೆಯವರ‌ ಜೊತೆ ಸಂಬಂಧವಿಟ್ಟುಕೊಂಡು ಕಿರುಕುಳ‌ ಆರೋಪ ಮಾಡಲಾಗಿದೆ. ಪತ್ನಿ ರಾಶಿಯಿಂದ ಪಿಎಸ್ಐ ರಮೇಶ್ ವಿರುದ್ದ ಕಿರುಕುಳ ಆರೋಪದಲ್ಲಿ ಕೇಸ್​ ಹಾಕಿದ್ದು, ಆದರೆ ಆರೋಪವನ್ನು ಪಿಎಸ್ಐ ರಮೇಶ್ ತಳ್ಳಿ ಹಾಕಿದ್ದಾನೆ. ನಾನು ಪ್ರೀತಿಸಿ ರಾಶಿಯನ್ನ ಮದುವೆಯಾಗಿದ್ದೆ. ಆದರೆ ಮದುವೆಯಾದ ನಂತರ ಊರಿಗೆ ಹೋಗಲು ಬಿಡದೆ, ತಂದೆ ತಾಯಿಯನ್ನು ನೋಡಲು ಬಿಡದೆ ಕಿರುಕುಳ ಅಂತ ಪತ್ನಿ ವಿರುದ್ದ ಪಿಎಸ್ಐ ರಮೇಶ್ ಪ್ರತ್ಯಾರೋಪ ಮಾಡಿದ್ದಾನೆ. ಇಬ್ಬರ ನಡುವೆ ‌ಕಳೆದ ಒಂದು ವರ್ಷದಿಂದ ಗಂಡ ಹೆಂಡತಿ ‌ಕಲಹ ನಡೆಯುತ್ತಿದ್ದು, ಈ‌ ಬಗ್ಗೆ ಹಲವು ‌ಭಾರಿ ಪೊಲೀಸರು ರಾಜಿ ಪಂಚಾಯ್ತಿ ಮಾಡಿದ್ದರು. ಆದರೆ ಸಂಧಾನ ಮಾಡಿದರು ಮತ್ತೆ ಮತ್ತೆ ಬೇರೆ ಯುವತಿಯರ ಜೊತೆ ಸಂಪರ್ಕವಿಟ್ಟುಕೊಂಡು ಕಿರುಕುಳ ಆರೋಪಿಸಲಾಗಿದೆ. ಸದ್ಯ ನ್ಯಾಯಕ್ಕಾಗಿ ಪಿಎಸ್ಐ ಪತ್ನಿ‌ ಎಸ್ಪಿ ಕಛೇರಿ ಮೊರೆ ಹೋಗಿದ್ದಳೆ.

ಸೂಲಿಬೆಲೆ ಪಿಎಸ್ಐ ರಮೇಶ್ ಅಮಾನತ್ತು

ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಸೂಲಿಬೆಲೆ ಪಿಎಸ್ಐ ರಮೇಶ್ ಅಮಾನತ್ತು ಮಾಡಲಾಗಿದೆ. ಕಳೆದ ಮೂರು ದಿನಗಳಿಂದೆ ಸೂಲಿಬೆಲೆ ಠಾಣಾ ನಡೆದಿದ್ದ ಕೇಸ್, ಕೈಗಾರಿಕಾ ಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡುವಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿದ್ದ ಡಿವೈಎಸ್ಪಿ ಉಮಾಶಂಕರ್, ಹೀಗಾಗಿ ಸೂಲಿಬೆಲೆ ಪಿಎಸ್ಐ ರಮೇಶ್ ಕರ್ತವ್ಯ ಲೋಪವೆಸಗಿದ್ದಾರೆ ಅಂತ ಅಮಾನತ್ತು ಮಾಡಲಾಗಿದೆ. ಜೊತೆಗೆ ಪತ್ನಿ ದೂರಿನ ಕೇಸ್ ತನಿಖೆಗೆ ತಂಡ ರಚನೆ ಮಾಡಿದ್ದು, ಸತ್ಯ ಸತ್ಯತೆ ಪತ್ತೆ ಹೆಚ್ಚುವಂತೆ ಇಲಾಖೆ ತನಿಖೆ ಮಾಡಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿ ವಂಶಿಕೃಷ್ಣ ಆದೇಶ ಮಾಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada