AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾರ್ಟ್​ ಟೈಂ ಕೆಲಸ ಹುಡುಕುತ್ತಿರುವವರನ್ನು ಟಾರ್ಗೆಟ್ ಮಾಡಿ 40 ಕೋಟಿ ರೂ. ವಂಚನೆ: ನಾಲ್ವರ ಬಂಧನ

ಹೆಚ್ಚಿನ ಹಣಕ್ಕಾಗಿ, ವೇತನ ಸಾಲುತ್ತಿಲ್ಲ ಎಂಬ ಕಾರಣಕ್ಕಾಗಿ ಕೆಲವರು ಆನ್​ಲೈನ್​ನಲ್ಲಿ ಪಾರ್ಟ್​ ಟೈಂ ಕೆಲಸ ನೋಡುತ್ತಾರೆ. ಇಂತಹವರನ್ನೇ ಗುರಿಯಾಗಿಸಿಕೊಂಡು ವಂಚನೆ ಎಸಗುತ್ತಿದ್ದ ನಾಲ್ವರು ಆರೋಪಿಗಳನ್ನು ಯಲಹಂಕ ಸೆನ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಹೇಗೆ ವಂಚನೆ ಎಸಗುತ್ತಿದ್ದರು ಎಂದು ತನಿಖೆ ವೇಳೆ ಬಾಯಿಬಿಟ್ಟಿದ್ದಾರೆ.

ಪಾರ್ಟ್​ ಟೈಂ ಕೆಲಸ ಹುಡುಕುತ್ತಿರುವವರನ್ನು ಟಾರ್ಗೆಟ್ ಮಾಡಿ 40 ಕೋಟಿ ರೂ. ವಂಚನೆ: ನಾಲ್ವರ ಬಂಧನ
ಪಾರ್ಟ್​ ಟೈಂ ಜಾಬ್ ಹೆಸರಲ್ಲಿ ವಂಚನೆ ಎಸಗುತ್ತಿದ್ದ ನಾಲ್ವರನ್ನು ಬಂಧಿಸಿದ ಯಲಹಂಕ ಸೆನ್ ಪೊಲೀಸರು (ಸಾಂದರ್ಭಿಕ ಚಿತ್ರ)
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: Rakesh Nayak Manchi|

Updated on:Dec 03, 2023 | 2:40 PM

Share

ಬೆಂಗಳೂರು, ಡಿ.3: ಆನ್​ಲೈನ್​ನಲ್ಲಿ ಪಾರ್ಟ್​ ಟೈಂ ಕೆಲಸ ಹುಡುಕುತ್ತಿರುವವರನ್ನು ಗುರಿಯಾಗಿಸಿಕೊಂಡು ವಂಚನೆ ಎಸಗುತ್ತಿದ್ದ ನಾಲ್ವರು ಆರೋಪಿಗಳನ್ನು ನಗರದ (Bengaluru) ಈಶಾನ್ಯ ವಿಭಾಗದ ಯಲಹಂಕ ಸೆನ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖೆ ವೇಳೆ ಆರೋಪಿಗಳು ಯಾವ ರೀತಿ ವಂಚನೆ ಎಸಗುತ್ತಿದ್ದರು ಎಂಬುದನ್ನು ಬಾಯಿಬಿಟ್ಟಿದ್ದಾರೆ.

ಪಾರ್ಟ್ ಟೈಂ ಜಾಬ್ ಹೆಸರಲ್ಲಿ ವಂಚಿಸುತ್ತಿದ್ದ ಸೈಯದ್ ಯೂನಸ್, ಸಯದ್ ಅರ್ಬಾಜ್, ಮೊಹಮ್ಮದ್ ಖಲಿಮುಲ್ಲಾ, ಇಬ್ರಾಹಿಮ್ ಕರ್ನೂಲ್ ಬಂಧಿತ ಆರೋಪಿಗಳಾಗಿದ್ದಾರೆ. ಇವರು ಒಂದರ ನಂತರ ಒಂದು ಟಾಸ್ಕ್ ಕೊಟ್ಟು ಜನರನ್ನು ವಂಚಿಸುತ್ತಿರುವ ವಿಚಾರ ತನಿಖೆಯಲ್ಲಿ ತಿಳಿದುಬಂದಿದೆ.

ಆನ್​ಲೈನ್​​ನಲ್ಲಿ ಪಾರ್ಟ್ ಟೈಂ ಜಾಬ್ ಲಿಂಕ್ ಓಪನ್ ಮಾಡಿದ ಕೂಡಲೇ ವಾಟ್ಸ್​​ಆ್ಯಪ್ ಅಥವಾ ಟೆಲಿಗ್ರಾಂ ಮೂಲಕ ಮೆಸೇಜ್ ಬರುತ್ತಿತ್ತು. ನಂತರ ವಂಚಕರು ಒಂದೊಂದೇ ಟಾಸ್ಕ್ ಕೊಡಲು ಆರಂಭಿಸುತ್ತಾರೆ. ಮೊದಲಿಗೆ ಹೊಟೆಲ್ ರಿವ್ಯೂ ಕೊಡಿ, ಇನ್ಸ್ಟಾಗ್ರಾಂ ವಿಡಿಯೋ ಲೈಕ್ ಮಾಡಿ ಅಂತ ಹೇಳುತ್ತಾರೆ.

ಇದನ್ನೂ ಓದಿ: ಬಿಟ್ಟು ಹೋದ ಪತಿಯನ್ನು ಒಂದುಗೂಡಿಸುವುದಾಗಿ ನಂಬಿಸಿ ಮಹಿಳಾ ಎಫ್​ಡಿಎಗೆ ವಂಚನೆ

ಲೈಕ್ ಮಾಡಿದ ಕೂಡಲೇ 150 -200 ರೂಪಾಯಿ ಅಕೌಂಟ್​ಗೆ ಹಾಕಿ ಅಮಿಷ ವೊಡುತ್ತಿದ್ದರು. ಅನಂತರ ನಮ್ಮ ಗ್ರೂಪ್​ಗೆ ನಿಮ್ಮನ್ನ ಸೇರಿಸುತ್ತೇವೆ ಅಂತ ಹೇಳುತ್ತಾರೆ. ಅಲ್ಲಿಂದ ನಂತರ ವಂಚಕರು ಮೋಸದ ಬಲೆ ಬೀಸುತ್ತಾರೆ. ಇನ್ನೂ ನೀವೂ ಹೂಡಿಕೆ ಮಾಡಿ ಹಣಗಳಿಸಬಹುದು ಅಂತಾ ಹೇಳುತ್ತಿದ್ದರು.

ಪ್ರಾರಂಭದಲ್ಲಿ 5-10 ಸಾವಿರ ಇನ್ವೆಸ್ಟ್ ಮಾಡಲು ಹೇಳುತ್ತಾರೆ. ಜನರು ಹೂಡಿಕೆ ಮಾಡಿದಾಗ ನಿಮ್ಮ ಖಾತೆಗೆ 50 ಸಾವಿರ ಜಮೆಯಾಗಿದೆ ಅಂತಾ ತೋರಿಸುತ್ತಿದ್ದರು. ಹೀಗೆ 5 ಲಕ್ಷದವರೆಗೂ ಇನ್ವೆಸ್ಟ್ ಮಾಡಿಸಿಕೊಂಡು ಅಮೇಲೆ ಇನ್ನೊಂದು ನಾಟಕ ಶುರು ಮಾಡುತ್ತಾರೆ.

ನಿಮ್ಮ ಖಾತೆಯಲ್ಲಿ 10 ಲಕ್ಷ ಇದೆ. ಆದರೆ ಅದನ್ನ ಟೆಕ್ನಿಕಲ್ ಸಮಸ್ಯೆಯಿಂದ ತೆಗಿಯೋಕೆ ಆಗುತ್ತಿಲ್ಲ. ನೀವು ಇನ್ನೂ ಸ್ವಲ್ವ ಅಮೌಂಟ್ ಹಾಕಿ ಅಗ ನಿಮಗೆ ಪೂರ್ತಿ ಹಣ ಬರುತ್ತದೆ ಅಂತ ನಂಬಿಸುತ್ತಿದ್ದರು. ಇದೇ ರೀತಿ ಆರೋಪಿಗಳು ಬರೋಬ್ಬರಿ 40 ಕೋಟಿ ರೂಪಾಯಿ ವಂಚಿಸಿದ್ದಾರೆ.

ಅಷ್ಟು ಮಾತ್ರವಲ್ಲದೆ, ತನಿಖೆ ವೇಳೆ ಬರೋಬ್ಬರಿ 305 ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ. ಸದ್ಯ, ಬಂಧಿತ ಆರೋಪಿಗಳಿಂದ 4 ಮೊಬೈಲ್, 2 ಪಾಸ್ ಬುಕ್, 6 ಡೆಬಿಟ್ ಕಾರ್ಡ್, ಸಿಮ್ ಕಾರ್ಡ್, ಬಯೋಮೆಟ್ರಿಕ್ ಸಾಧನ‌, ಕಂಪನಿ ಸೀಲ್​ಗಳನ್ನು ವಶಕ್ಕೆ ಪಡೆಯಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:38 pm, Sun, 3 December 23

Follow Us
ಪ್ರಜ್ವಲ್​ ಕುಮಾರ್ ಎನ್​ ವೈ
ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More
ವಿಶ್ವವಿಖ್ಯಾತ ಜಂಬೂ ಸವಾರಿಗೆ ದಿನಗಣನೆ: ಅರಮನೆ ಆವರಣದಲ್ಲಿ ಭರ್ಜರಿ ತಾಲೀಮು
ವಿಶ್ವವಿಖ್ಯಾತ ಜಂಬೂ ಸವಾರಿಗೆ ದಿನಗಣನೆ: ಅರಮನೆ ಆವರಣದಲ್ಲಿ ಭರ್ಜರಿ ತಾಲೀಮು
ಕೆಪಿಎಸ್ಸಿ ನೇಮಕಾತಿ ಹಗರಣ: ಬಗೆದಷ್ಟೂ ಬಯಲಾಗ್ತಿದೆ ಕನ್ನಾಳೆ ಕಳ್ಳಾಟ
ಕೆಪಿಎಸ್ಸಿ ನೇಮಕಾತಿ ಹಗರಣ: ಬಗೆದಷ್ಟೂ ಬಯಲಾಗ್ತಿದೆ ಕನ್ನಾಳೆ ಕಳ್ಳಾಟ
ಶಿಡ್ಲಘಟ್ಟ ಕಾಂಗ್ರೆಸ್‌ನಲ್ಲಿ ಬಣ ಬಡಿದಾಟ: ಆಗಿದ್ದೇನು?
ಶಿಡ್ಲಘಟ್ಟ ಕಾಂಗ್ರೆಸ್‌ನಲ್ಲಿ ಬಣ ಬಡಿದಾಟ: ಆಗಿದ್ದೇನು?
ಬೆಂಗಳೂರಿನಲ್ಲಿ ವಕೀಲನ ಕೊಲೆ: ಸಂಬಂಧಿಕರ ಶಾಕಿಂಗ್ ರಿಯಾಕ್ಷನ್!
ಬೆಂಗಳೂರಿನಲ್ಲಿ ವಕೀಲನ ಕೊಲೆ: ಸಂಬಂಧಿಕರ ಶಾಕಿಂಗ್ ರಿಯಾಕ್ಷನ್!
ದೆಹಲಿ-ಪಂಜಾಬ್ ನೆಟ್‌ವರ್ಕ್, ಬಿಷ್ಣೋಯ್ ಗ್ಯಾಂಗ್ ಕೈವಾಡದ ಬಗ್ಗೆ ತನಿಖೆ
ದೆಹಲಿ-ಪಂಜಾಬ್ ನೆಟ್‌ವರ್ಕ್, ಬಿಷ್ಣೋಯ್ ಗ್ಯಾಂಗ್ ಕೈವಾಡದ ಬಗ್ಗೆ ತನಿಖೆ
ಕಿಮ್ಸ್ ಅವ್ಯವಸ್ಥೆ: ವ್ಹೀಲ್‌ಚೇರ್ ಇಲ್ಲದೆ ರೋಗಿಯ ಹೊತ್ತೊಯ್ದ ಸಂಬಂಧಿಕರು!
ಕಿಮ್ಸ್ ಅವ್ಯವಸ್ಥೆ: ವ್ಹೀಲ್‌ಚೇರ್ ಇಲ್ಲದೆ ರೋಗಿಯ ಹೊತ್ತೊಯ್ದ ಸಂಬಂಧಿಕರು!
ಮೈಸೂರು ದಸರಾಗೆ ದೀಪಾಲಂಕಾರದ ಮೆರಗು: ಈ ಬಾರಿಯ ವಿಶೇಷತೆ ಏನು?
ಮೈಸೂರು ದಸರಾಗೆ ದೀಪಾಲಂಕಾರದ ಮೆರಗು: ಈ ಬಾರಿಯ ವಿಶೇಷತೆ ಏನು?
ಟಿವಿ9 ಫೆಸ್ಟಿವಲ್​ ಆಫ್​ ಇಂಡಿಯಾ ವೈಭವ: ನೇರಪ್ರಸಾರ ಇಲ್ಲಿದೆ
ಟಿವಿ9 ಫೆಸ್ಟಿವಲ್​ ಆಫ್​ ಇಂಡಿಯಾ ವೈಭವ: ನೇರಪ್ರಸಾರ ಇಲ್ಲಿದೆ
ಖರೀದಿಗೆ ಮುಗಿಬಿದ್ದ ಜನ: ಕೆಆರ್ ಮಾರುಕಟ್ಟೆಯಲ್ಲಿ ಫುಲ್ ರಷ್, ಟ್ರಾಫಿಕ್ ಜಾಂ
ಖರೀದಿಗೆ ಮುಗಿಬಿದ್ದ ಜನ: ಕೆಆರ್ ಮಾರುಕಟ್ಟೆಯಲ್ಲಿ ಫುಲ್ ರಷ್, ಟ್ರಾಫಿಕ್ ಜಾಂ
ಗಗನ್ ನಡೆಗೆ ಕಣ್ಣೀರು ಹಾಕುವಷ್ಟು ಬೇಸರ ಮಾಡಿಕೊಂಡ ತಾಂಡವ್
ಗಗನ್ ನಡೆಗೆ ಕಣ್ಣೀರು ಹಾಕುವಷ್ಟು ಬೇಸರ ಮಾಡಿಕೊಂಡ ತಾಂಡವ್