ಬೆಂಗಳೂರಿನಲ್ಲಿ 30 ವರ್ಷದ ಅಪರಿಚಿತ ವ್ಯಕ್ತಿಯ ಬರ್ಬರ ಹತ್ಯೆ; ಕೆ.ಪಿ.ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು
ಬೆಂಗಳೂರಿನ ಕೆ.ಪಿ.ಅಗ್ರಹಾರದ ಹೇಮಂತ್ ಮೆಡಿಕಲ್ ಮುಂಭಾಗದಲ್ಲಿ ರಾತ್ರಿ 12.30ರ ಸುಮಾರಿಗೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಬೆಂಗಳೂರು: ನಗರದ ಕೆಪಿ ಅಗ್ರಹಾರದ ಐದನೇಯ ಕ್ರಾಸ್ನ ಹೇಮಂತ್ ಮೆಡಿಕಲ್ ಮುಂಭಾಗದಲ್ಲಿ ತಡರಾತ್ರಿ 12.30 ರ ಸುಮಾರಿಗೆ 30 ವರ್ಷದ ಅಪರಿಚಿತ ವ್ಯಕ್ತಿಯನ್ನು ಕೊಚ್ಚಿ ಕೊಲೆಗೈದಿದ್ದಾರೆ. ಇನ್ನು ಈ ಕೃತ್ಯದಲ್ಲಿ ಮೂವರು ಪುರುಷರು ಹಾಗೂ ಮೂವರು ಮಹಿಳೆಯರು ಸೇರಿದ್ದಾರೆ ಎಂಬ ಮಾಹಿತಿ ಇದ್ದು, ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಸ್ಥಳಕ್ಕೆ ಮಾಗಡಿ ರಸ್ತೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮುಖ ಸಂಪೂರ್ಣವಾಗಿ ಗುರುತು ಸಿಗದಂತೆ ಮುಖವನ್ನು ಜಜ್ಜಿ ಕೊಲೆ ಮಾಡಲಾಗಿದೆ. ಸದ್ಯ ಮೃತನ ಗುರುತು ಪತ್ತೆ ಮಾಡುತ್ತಿದ್ದಾರೆ. ಕೆ ಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ದಾವಣಗೆರೆ ತಾಲೂಕಿನಲ್ಲಿ ಮತ್ತೊಂದು ದುರಂತ ಅಪಘಾತ! ನವ ವಿವಾಹಿತ ನೀರುಪಾಲು, ಇಲ್ಲಿದೆ ಆ ಡಿಫರೆಂಟ್ ಆಕ್ಸಿಡೆಂಟ್ ಸ್ಟೋರಿ
ಕೋರಮಂಗಲದಲ್ಲಿ ಮುಚ್ಚಿದ್ದ ಡಿ ಓರಿಯಲ್ ಹೋಟೆಲ್ & ರೆಸ್ಟೋರೆಂಟ್ನಲ್ಲಿ ಕಳ್ಳರ ಕೈಚಳಕ
ಬೆಂಗಳೂರು: ಕೋರಮಂಗಲದ 4ನೇ ಬ್ಲಾಕ್‌ನಲ್ಲಿರುವ ಮುರಳಿಕೃಷ್ಣ ಎಂಬುವವರ ಒಡೆತನದ ಬಂದಾಗಿದ್ದ ಓರಿಯಲ್ ಹೋಟೆಲ್ & ರೆಸ್ಟೋರೆಂಟ್ನ ರೂಮಿನಲ್ಲಿದ್ದ 32 ಟಿವಿಗಳು ಕಣ್ಮರೆಯಾಗಿದ್ದಾವೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಬೇರೊಬ್ಬರಿಗೆ ಭೋಗ್ಯಕ್ಕೆ ನೀಡಿದ್ದು, ಭೋಗ್ಯಕ್ಕೆ ಪಡೆದವರು 2022ರ ಫೆಬ್ರವರಿಯಲ್ಲಿ ಅರ್ಧಕ್ಕೆ ನಿಲ್ಲಿಸಿ ಹೋಗಿದ್ದರು.
ಮೂರು ತಿಂಗಳು ಬಿಟ್ಟು ಅಂದರೆ ನವೆಂಬರ್ 21ರಂದು ಹೋಟೆಲ್ ಬಾಗಿಲು ತೆರೆದಾಗ ಹೋಟೆಲ್ ರೂಮಿನಲ್ಲಿದ್ದ ಟಿವಿಗಳು ಕಣ್ಮರೆಯಾಗಿದ್ದವು, ಈ ಕುರಿತು ಕೋರಮಂಗಲ ಠಾಣೆಗೆ ದೂರು ನೀಡಿದ್ದ ಮಾಲೀಕ ಮುರುಳಿ ಕೃಷ್ಣ ಅವರ ದೂರಿನನ್ವಯ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಅಬೂಬಕ್ಕರ್ ಸಿದ್ದಿಕಿ ಹಾಗೂ ಮೊಹಮದ್ ತೌಹೀದ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 3 ಲಕ್ಷ ಮೌಲ್ಯದ 18 ಟಿವಿಗಳು ವಶಕ್ಕೆ ಪಡೆಯಲಾಗಿದೆ.
ಹೈಟೆನ್ಷನ್ ವಿದ್ಯುತ್ ತಂತಿ ಸ್ಪರ್ಶದಿಂದ ಗಾಯಗೊಂಡಿದ್ದ ಬಾಲಕ ಸಾವು
ಬೆಂಗಳೂರು: ಡಿ.1ರಂದು ವಿಜಯಾನಂದನಗರದಲ್ಲಿ ಹೈಟೆನ್ಷನ್ ವೈರ್ ಮೇಲೆ ಕುಳಿತಿದ್ದ ಪಾರಿವಾಳವನ್ನು ಹಿಡಿಯುವಾಗ ಹೈಟೆನ್ಷನ್ ವಿದ್ಯುತ್ ತಂತಿ ಸ್ಪರ್ಶವಾಗಿತ್ತು, ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಪಡೆಯುತ್ತಿದ್ದ ಸುಪ್ರೀತ್(12) ಸಾವನ್ನಪ್ಪಿದ್ದಾನೆ. ಗಂಭೀರ ಸ್ಥಿತಿಯಲ್ಲಿರುವ ಚಂದ್ರು(10)ಗೆ ಚಿಕಿತ್ಸೆ ಮುಂದುವರಿಸಲಾಗಿದೆ. ವಿದ್ಯುತ್ ಪ್ರವಹಿಸಿ ಇಬ್ಬರು ಮಕ್ಕಳ ಮೈಯೆಲ್ಲ ಸುಟ್ಟಗಾಯಗಳಾಗಿತ್ತು, ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಸುಪ್ರೀತ್ ಚಿಕಿತ್ಸೆ ಫಲಿಸದೆ ಇಂದು(ಡಿ.4) ಸಾವನ್ನಪ್ಪಿದ್ದಾನೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:53 am, Sun, 4 December 22