AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿಂಗಳಾಂತ್ಯಕ್ಕೆ ಶುಚಿ, ಕಭಿ ಸೇರಿ ಹಲವು ಯೋಜನೆಗಳ ಜಾರಿಗೆ ಮುಂದಾದ ಆರೋಗ್ಯ ಇಲಾಖೆ

ರಾಜ್ಯ ಆರೋಗ್ಯ ಇಲಾಖೆಯು ಸಾರ್ವತ್ರಿಕ ಚುನಾವಣೆಗೂ ಮುನ್ನ ತಿಂಗಳ ಅಂತ್ಯದ ವೇಳೆಗೆ ಹಲವಾರು ಯೋಜನೆಗಳನ್ನು ಔಪಚಾರಿಕವಾಗಿ ಪ್ರಾರಂಭಿಸುವ ನಿರೀಕ್ಷೆಯಲ್ಲಿದೆ. ಶಾಲಾ ಬಾಲಕಿಯರಿಗೆ ಮುಟ್ಟಿನ ಪ್ಯಾಡ್‌ಗಳನ್ನು ಪೂರೈಸುವ ‘ಶುಚಿ ಯೋಜನೆ’ ಮತ್ತು ಹೃದಯಾಘಾತ ಸಂತ್ರಸ್ತರಿಗಾಗಿ ಉಚಿತವಾಗಿ ‘ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆ’ಯು ಒಳಗೊಂಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ತಿಂಗಳಾಂತ್ಯಕ್ಕೆ ಶುಚಿ, ಕಭಿ ಸೇರಿ ಹಲವು ಯೋಜನೆಗಳ ಜಾರಿಗೆ ಮುಂದಾದ ಆರೋಗ್ಯ ಇಲಾಖೆ
ಸಚಿವ ದಿನೇಶ್ ಗುಂಡೂರಾವ್
ಗಂಗಾಧರ​ ಬ. ಸಾಬೋಜಿ
|

Updated on: Feb 14, 2024 | 10:54 PM

Share

ಬೆಂಗಳೂರು, ಫೆಬ್ರವರಿ 14: ರಾಜ್ಯ ಆರೋಗ್ಯ ಇಲಾಖೆಯು ಸಾರ್ವತ್ರಿಕ ಚುನಾವಣೆಗೂ ಮುನ್ನ ತಿಂಗಳ ಅಂತ್ಯದ ವೇಳೆಗೆ ಹಲವಾರು ಯೋಜನೆಗಳನ್ನು ಔಪಚಾರಿಕವಾಗಿ ಪ್ರಾರಂಭಿಸುವ ನಿರೀಕ್ಷೆಯಲ್ಲಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಬ್ರೈನ್ ಹೆಲ್ತ್ ಇನಿಶಿಯೇಟಿವ್ (KaBHI) ಅಡಿಯಲ್ಲಿ ನಿಮ್ಹಾನ್ಸ್ ಸಹಯೋಗದೊಂದಿಗೆ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಮೆದುಳಿನ ಆರೋಗ್ಯ ಚಿಕಿತ್ಸಾಲಯಗಳನ್ನು ಸ್ಥಾಪಿಸಲಾಗಿದೆ. ಫೆ. 26 ರಂದು ಸಿಎಂ ಸಿದ್ದರಾಮಯ್ಯ ಉದ್ಘಾಟಿಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ತಿಳಿಸಿದ್ದಾರೆ. ಅದೇ ರೀತಿಯಾಗಿ ಎಲ್ಲಾ ಶಾಲಾ ಬಾಲಕಿಯರಿಗೆ ಮುಟ್ಟಿನ ಪ್ಯಾಡ್‌ಗಳನ್ನು ಪೂರೈಸುವ ‘ಶುಚಿ ಯೋಜನೆ’ ಮತ್ತು ಹೃದಯಾಘಾತ ಸಂತ್ರಸ್ತರಿಗಾಗಿ ಉಚಿತವಾಗಿ ‘ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆ’ಯು ಒಳಗೊಂಡಿದೆ.

ಟೆನೆಕ್ಟೆಪ್ಲೇಸ್ ಚುಚ್ಚುಮದ್ದು ಮತ್ತು ಸಾರ್ವಜನಿಕವಾಗಿ ತುರ್ತು ಸ್ವಯಂಚಾಲಿತ ಡಿಫಿಬ್ರಿಲೇಟರ್‌ಗಳ (AEDs)ನ್ನು ಈ ತಿಂಗಳ ಅಂತ್ಯದೊಳಗೆ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಎಇಡಿ ಸ್ಥಾಪನೆ ಇಲ್ಲ

ಸಾರ್ವಜನಿಕ ಸ್ಥಳಗಳಲ್ಲಿ ಎಇಡಿ (automated external defibrillator) ಗಳನ್ನು ಸ್ಥಾಪಿಸಲಾಗುತ್ತಿಲ್ಲ. ಏಕೆಂದರೆ ಸಾಮಾನ್ಯ ಜನರಿಗೆ ಅವುಗಳನ್ನು ನಿರ್ವಹಿಸುವಲ್ಲಿ ತರಬೇತಿಯ ಅಗತ್ಯವಿದೆ. ಹೀಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಲಾಗುತ್ತಿಲ್ಲ. ತರಬೇತಿ ಪಡೆದ ಸಿಬ್ಬಂದಿ ಈಗಾಗಲೇ ಲಭ್ಯವಿರುವಲ್ಲಿ ಇರಬೇಕು. ಎಲ್ಲವೂ ಸ್ಥಾಪಿಸಿದ ನಂತರ ಯೋಜನೆಯು AED ನಲ್ಲಿ ಜನರಿಗೆ ತರಬೇತಿ ನೀಡುವ ಕಾರ್ಯಕ್ರಮಗಳನ್ನು ಸಹ ಒಳಗೊಂಡಿರುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಡಿ ರಂದೀಪ್​ ಹೇಳಿದ್ದಾರೆ.

ಇದನ್ನೂ ಓದಿ: ಆಶಾ ಕಾರ್ಯಕರ್ತೆಯರ ಬ್ಯಾಂಕ್ ಖಾತೆಗೆ 7,000 ರೂ. ವರ್ಗಾವಣೆ: ದಿನೇಶ್ ಗುಂಡೂರಾವ್ ಭರವಸೆ

‘ಆಶಾಕಿರಣ ಯೋಜನೆ‘ ಅಡಿಯಲ್ಲಿ ಕನ್ನಡಕ ವಿತರಣಾ ಕಾರ್ಯಕ್ರಮವು ಫೆಬ್ರವರಿ 18ರ ಸುಮಾರಿಗೆ ಹಾವೇರಿಯಲ್ಲಿ ನಡೆಯಲಿದೆ ಎಂದು ರಂದೀಪ್ ತಿಳಿಸಿದರು. ‘ರಾಜ್ಯದಾದ್ಯಂತ ಸ್ಕ್ರೀನಿಂಗ್ ಪೂರ್ಣಗೊಂಡಿದೆ. ಈ ಯೋಜನೆಯನ್ನು ಫೆಬ್ರವರಿ 18 ರಂದು ಪ್ರಾರಂಭವಾಗಲಿದೆ’ ಎಂದು ಅವರು ಹೇಳಿದರು.

ಸಮುದಾಯ ಆರೋಗ್ಯ ಕೇಂದ್ರಗಲ್ಲಿ (CHC) ಅಪ್‌ಗ್ರೇಡ್ ಆಗಬೇಕಿದ್ದ 23 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (PHC) 15 ಅಗತ್ಯ ಮೂಲಸೌಕರ್ಯ ಮತ್ತು ಉಪಕರಣಗಳನ್ನು ಅಳವಡಿಸಲಾಗಿದ್ದು, ಬೇಡಿಕೆಯನ್ನು ಪೂರೈಸಲು ಮಾನವ ಸಂಪನ್ಮೂಲವನ್ನು ವಿಸ್ತರಿಸಲಾಗುತ್ತಿದೆ.

ಇಲಾಖೆಯು ರಾಜ್ಯಾದ್ಯಂತ ಮಂಜೂರಾದ 171 (168 ಚಾಲನೆಯಲ್ಲಿರುವ) ಡಯಾಲಿಸಿಸ್ ಕೇಂದ್ರಗಳ ಸಂಖ್ಯೆಯನ್ನು 219 ಕ್ಕೆ ಹೆಚ್ಚಿಸಿದ್ದರೆ, ಕಲಬುರಗಿ ವಿಭಾಗದಲ್ಲಿ ಡಯಾಲಿಸಿಸ್ ಯಂತ್ರಗಳನ್ನು ಖರೀದಿಸಲು ಟೆಂಡರ್ ಪ್ರಕ್ರಿಯೆ ಇನ್ನು ನಡೆಯುತ್ತಿದೆ.

ಇದನ್ನೂ ಓದಿ: ಕಾಂಗ್ರೆಸ್ ಸದಾ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡಿದೆ, ಅದು ವಿಭಜಿಸಿದ್ದು ಪಾಕಿಸ್ತಾನವನ್ನು: ದಿನೇಶ್ ಗುಂಡೂರಾವ್, ಸಚಿವ

ಕ್ಷಯರೋಗವನ್ನು (ಟಿಬಿ) ಪರೀಕ್ಷಿಸಲು 15 ಹ್ಯಾಂಡ್‌ಹೆಲ್ಡ್ ಕ್ಷ-ಕಿರಣ ಯಂತ್ರಗಳನ್ನು ಖರೀದಿಸಲು ಟೆಂಡರ್ ಕರೆಯಲಾಗುತ್ತಿದೆ. 2023-24ರ ಬಜೆಟ್‌ನಲ್ಲಿ 8 ಜಿಲ್ಲೆಗಳಲ್ಲಿ ಪ್ರತಿ ಜಿಲ್ಲೆಗೆ ತಲಾ 20 ಲಕ್ಷ ರೂ. ವೆಚ್ಚದ ಎರಡು ಯಂತ್ರಗಳನ್ನು ನಿಯೋಜಿಸಲಾಗುವುದು ಎಂದು ಆಯುಕ್ತ ಡಿ ರಂದೀಪ್​ ಹೇಳಿದ್ದಾರೆ.

ಬಜೆಟ್ ನಿರೀಕ್ಷೆ

ಬಜೆಟ್‌ನಲ್ಲಿ ಹಿರಿಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಮೂಲಸೌಕರ್ಯಗಳ ನಿರ್ವಹಣೆ ಮತ್ತು ದುರಸ್ತಿ, ಅಸ್ತಿತ್ವದಲ್ಲಿರುವ ಸೌಲಭ್ಯಗಳ ಬಲವರ್ಧನೆಗೆ ಸಾಕಷ್ಟು ಅನುದಾನವನ್ನು ನಿರೀಕ್ಷಿಸಲಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಆರೋಗ್ಯ ಸೌಲಭ್ಯಗಳ ಅಭಿವೃದ್ಧಿಗೆ ಉದ್ದೇಶಿತ ಯೋಜನೆಗಳಿಗೆ ಆದ್ಯತೆ ಮತ್ತು ಅನುಮೋದನೆಗಳನ್ನು ನಿರೀಕ್ಷಿಸುತ್ತಿದ್ದಾರೆ. ಜೊತೆಗೆ ರಾಜ್ಯದಾದ್ಯಂತ ಆಸ್ಪತ್ರೆಗಳಲ್ಲಿ ಸಾಂಕ್ರಾಮಿಕವಲ್ಲದ ರೋಗಗಳ ಚಿಕಿತ್ಸೆಗೆ ವಿಶೇಷ ಗಮನಹರಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.