ಬೆಂಗಳೂರು, ಸೆ.24: ಇತ್ತೀಚೆಗೆ ನಗರದಲ್ಲಿ ಆಟೋ ಚಾಲಕರ ವಿರುದ್ಧ ಪ್ರಯಾಣಿಕರಿಂದ ಹಲವು ಆರೋಪಗಳು ಕೇಳಿ ಬಂದ ಹಿನ್ನೆಲೆ ಸಂಚಾರಿ ಪೊಲೀಸರು (Traffic Police) ವಿಶೇಷ ಕಾರ್ಯಾಚರಣೆ ನಡೆಸಿ ಆಟೋ ಚಾಲಕರಿಗೆ (Auto Drivers) ಬಿಸಿ ಮುಟ್ಟಿಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನ (Bengaluru) ಆಟೋ ಚಾಲಕರ ವಿರುದ್ಧ ಪ್ರಯಾಣಿಕರಿಂದ ಪದೇ ಪದೇ ದೂರುಗಳು ಬರುತ್ತಿದ್ದವು. ಹೀಗಾಗಿ ಫೀಲ್ಡ್ಗಿಳಿದ ಸಂಚಾರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಸೆ.14ರಿಂದ 23ರವರೆಗೆ ಒಟ್ಟು 670 ಪ್ರಕರಣಗಳನ್ನು ದಾಖಲಿಸಿ 3.36 ಲಕ್ಷ ರೂ ದಂಡ ವಸೂಲಿ ಮಾಡಿದ್ದಾರೆ.
ಆಟೋ ಚಾಲಕರು ಕರೆದಿದ್ದ ಕಡೆ ಬರಲ್ಲ, ಹೆಚ್ಚು ಹಣ ಕೇಳ್ತಾರೆ ಎಂದು ಪ್ರಯಾಣಿಕರಿಂದ ಸಾಕಷ್ಟು ದೂರುಗಳು ಬರುತ್ತಿದ್ದವು. ಈ ಬೆನ್ನಲ್ಲೇ ಉತ್ತರ ವಿಭಾಗದ ಸಂಚಾರಿ ಪೊಲೀಸರು ಸ್ಪೆಷಲ್ ಡ್ರೈವ್ ಕೈಗೊಂಡು ಪ್ರಯಾಣಿಕರಿಂದ ಹೆಚ್ಚಿನ ದರ ಪಡೆಯುತ್ತಿದ್ದ ಆಟೋ ಚಾಲಕರಿಗೆ ದಂಡ ವಿಧಿಸಿದ್ದಾರೆ. ಈಶಾನ್ಯ ಉಪ ವಿಭಾಗದಲ್ಲಿ ಹೆಚ್ಚು ಹಣ ಪಡೆದ ಆರೋಪದಡಿ ಒಟ್ಟು 141 ಚಾಲಕರ ವಿರುದ್ಧ ಪ್ರಕರಣ ದಾಖಲಾಗಿದ್ದು 72,000 ರೂ. ದಂಡ ಹಾಕಲಾಗಿದೆ. ಉತ್ತರ ಉಪ ವಿಭಾಗದಲ್ಲಿ 221 ಆಟೋ ಚಾಲಕರ ವಿರುದ್ಧ ಕೇಸ್ ದಾಖಲಾಗಿದ್ದು ಒಟ್ಟು 1 ಲಕ್ಷದ 10 ಸಾವಿರದ 500 ರೂ. ದಂಡ ಸಂಗ್ರಹವಾಗಿದೆ.
ಇದನ್ನೂ ಓದಿ: ಬೆಂಗಳೂರಿಗೆ ಪ್ರವೇಶಿಸುವ ವಾಹನಗಳಿಗೆ ಸಂಚಾರ ದಟ್ಟಣೆ ತೆರಿಗೆ: ಸರ್ಕಾರಕ್ಕೆ ಶಿಫಾರಸು
ಬೆಂಗಳೂರಿನಲ್ಲಿ ಬಹುತೇಕ ಆಟೋಗಳ ಚಾಲಕರ ಪ್ರಯಾಣಿಕರು ಕರೆದಲ್ಲಿ ಬರುವುದಿಲ್ಲ. ಹಾಗೇ ಆಟೋ ಬುಕ್ ಮಾಡಿದರೆ ಕ್ಯಾನ್ಸಲ್ ಮಾಡ್ತಾರೆ. ಇಲ್ಲ ಅಂದ್ರೆ ಪ್ರಯಾಣಿಕರ ಪಿಕ್ ಅಪ್ ಜಾಗಕ್ಕೆ ಬರಲು ತಡ ಮಾಡಿ ಪ್ರಯಾಣಿಕರೇ ಬುಕ್ಕಿಂಗ್ ಕ್ಯಾನ್ಸಲ್ ಮಾಡಿಕೊಳ್ಳುವಂತೆ ಮಾಡ್ತಾರೆ. ಅದರಲ್ಲೂ 10 ಗಂಟೆ ಆಯ್ತು ಅಂದ್ರೆ ಅವರು ಹೇಳಿದಷ್ಟು ಹಣ ಕೊಟ್ಟು ಪ್ರಯಾಣಿಸಬೇಕು. ಓಲಾ, ಓವರ್ಗಳ ಮೊರೆ ಹೋಗೋಣ ಎಂದರೆ ಅವರು ಕೂಡ ಬೇಗ ಅಕ್ಸೆಪ್ಟ್ ಮಾಡುವುದಿಲ್ಲ. ಹೀಗಾಗಿ ಆಟೋ ಚಾಲಕರ ವರ್ತನೆಯಿಂದ ಬೇಸತ್ತ ಪ್ರಯಾಣಿಕರು ಸಂಚಾರಿ ಪೊಲೀಸರಿಗೆ ದೂರು ನೀಡಿದ್ದು ಚಾಲಕರ ವಿರುದ್ಧ ಕೇಸ್ ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ