ಬೆಂಗಳೂರಿಗೆ ಪ್ರವೇಶಿಸುವ ವಾಹನಗಳಿಗೆ ಸಂಚಾರ ದಟ್ಟಣೆ ತೆರಿಗೆ: ಸರ್ಕಾರಕ್ಕೆ ಶಿಫಾರಸು
ಪ್ರಸ್ತುತ ದಿನಕ್ಕೆ 12 ಮಿಲಿಯನ್ ವಾಹನಗಳು ಬೆಂಗಳೂರು ಪ್ರವೇಶಿಸುತ್ತಿವೆ. ದಟ್ಟಣೆ ತೆರಿಗೆಯನ್ನು ವಿಧಿಸುವುದರಿಂದ ನಗರಕ್ಕೆ ಗಮನಾರ್ಹ ಆದಾಯ ಬರುತ್ತದೆ. ಫಾಸ್ಟ್ಯಾಗ್ ಮಾದರಿಯಲ್ಲೇ ದಟ್ಟಣೆ ತೆರಿಗೆಯನ್ನು ಸಂಗ್ರಹಿಸುವಂತೆ ವರದಿ ಹೇಳಿದೆ.
ಬೆಂಗಳೂರು ಸೆ.22: ನಗರದಲ್ಲಿನ ಸಂಚಾರ ದಟ್ಟಣೆಯನ್ನು (Traffic) ಕಡಿಮೆ ಮಾಡಲು ಒಂಬತ್ತು ರಸ್ತೆಗಳ ಮೂಲಕ ರಾಜಧಾನಿಗೆ (Bengaluru) ಪ್ರವೇಶಿಸುವ ವಾಹನಗಳಿಗೆ ದಟ್ಟಣೆ ತೆರಿಗೆ ವಿಧಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯು ಕರ್ನಾಟಕ 1 ಟ್ರಿಲಿಯನ್ ಡಾಲರ್ ಆರ್ಥಿಕತೆಗಾಗಿ, ವಿವಿಧ ವಲಯಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಸೂಚಿಸಿದೆ. ಇದು ಕೃಷಿ ಮತ್ತು ಸಂಬಂಧಿತ ವಲಯಗಳು, ಉತ್ಪಾದನೆ, ತಂತ್ರಜ್ಞಾನ, ಪ್ರವಾಸೋದ್ಯಮ, ನಗರಾಭಿವೃದ್ಧಿ, ಸ್ಟಾರ್ಟಪ್‌ಗಳು ಮತ್ತು ಬೆಂಗಳೂರು ಅಭಿವೃದ್ಧಿ ಇತ್ಯಾದಿಗಳ ಬಗ್ಗೆ ಸರ್ಕಾರಕ್ಕೆ ಸಮಗ್ರ ವರದಿ ನೀಡಿದೆ.
ಪ್ರಸ್ತುತ ದಿನಕ್ಕೆ 12 ಮಿಲಿಯನ್ ವಾಹನಗಳು ಬೆಂಗಳೂರು ಪ್ರವೇಶಿಸುತ್ತಿವೆ. ದಟ್ಟಣೆ ತೆರಿಗೆಯನ್ನು ವಿಧಿಸುವುದರಿಂದ ನಗರಕ್ಕೆ ಗಮನಾರ್ಹ ಆದಾಯ ಬರುತ್ತದೆ. ಫಾಸ್ಟ್ಯಾಗ್ ಮಾದರಿಯಲ್ಲೇ ದಟ್ಟಣೆ ತೆರಿಗೆಯನ್ನು ಸಂಗ್ರಹಿಸುವಂತೆ ವರದಿ ಹೇಳಿದೆ. ದಟ್ಟಣೆ ಶುಲ್ಕದಿಂದ ಸರ್ಕಾರಕ್ಕೆ ಆದಾಯ ಕೂಡ ಹೆಚ್ಚುತ್ತದೆ. ಇದನ್ನು ನಗರದಲ್ಲಿ ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸಲು ಖರ್ಚು ಮಾಡಬಹುದು. ವಾಹನಗಳ ಓಡಾಟ ಕಡಿಮೆ ಆದರೆ ಮಾಲಿನ್ಯ ನಿಯಂತ್ರಣಕ್ಕೆ ಬರುತ್ತದೆ. ಪಾದಚಾರಿಗಳಿಗೆ ಮತ್ತು ಸೈಕ್ಲಿಸ್ಟ್‌ಗಳಿಗೆ ಹೆಚ್ಚು ಅನುಕೂಲವಾಗುತ್ತದೆ.
ದಟ್ಟಣೆಯಿಂದಾಗಿ ನಗರದಲ್ಲಿ ಸುಮಾರು 1.2 ಕೋಟಿ ಜನರು ವಾರ್ಷಿಕವಾಗಿ ತಮ್ಮ 60 ಕೋಟಿ ಗಂಟೆಗಳನ್ನು ವ್ಯರ್ಥ ಮಾಡುತ್ತಿದ್ದಾರೆ. ಮತ್ತು ಗಂಟೆಗೆ ಸುಮಾರು 2.8 ಲಕ್ಷ ಲೀಟರ್ ಇಂಧನವನ್ನು ವ್ಯರ್ಥ ಮಾಡುತ್ತಾರೆ ಎಂದು ವರದಿ ಹೇಳಿದರುದೆ. ಬೆಂಗಳೂರಿನಲ್ಲಿ ಖಾಸಗಿ ವಾಹನಗಳ ಪಾಲು 2007 ಮತ್ತು 2020 ರ ನಡುವೆ ಶೇ 280 ರಷ್ಟು ಏರಿಕೆಯಾಗಿದೆ. ವಾಹನಗಳ ಸಂಖ್ಯೆ 2.1 ಮಿಲಿಯನ್‌ನಿಂದ 8 ಮಿಲಿಯನ್ಗೆ ಏರಿದೆ. ಮತ್ತೊಂದೆಡೆ ಸಾರ್ವಜನಿಕ ಸಾರಿಗೆ ಮೂಲಸೌಕರ್ಯವು ಕಡಿಮೆ ಶೇ 48% ಬಳಕೆಯನ್ನು ಹೊಂದಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಸಾರಿಗೆ ಬೇಡಿಕೆಯಲ್ಲಿ ಗಣನೀಯ ಹೆಚ್ಚಳದೊಂದಿಗೆ ವೇಗವನ್ನು ಹೊಂದಲು ಸಾಧ್ಯವಿಲ್ಲ ಎಂದು ವರದಿ ಹೇಳಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ