ಭಾರತದ ಶ್ರೀಮಂತ ಹಾಸ್ಯ ನಟ ಇವರೇ, ರಜನೀಕಾಂತ್ಗಿಂತಲೂ ಶ್ರೀಮಂತ
Brahmanandam: ಭಾರತ ಚಿತ್ರರಂಗದಲ್ಲಿ ನಾಯಕ ನಟರಿಗೆ ಸಂಭಾವನೆ ಹೆಚ್ಚು. ನಾಯಕ ನಟರಿಗೆ ಕೊಡುವ ಸಂಭಾವನೆಯ ಅರ್ಧ ಹಣದಲ್ಲಿ ಸಿನಿಮಾದ ಇತರೆ ಎಲ್ಲ ನಟ-ನಟಿಯರಿಗೆ ಸಂಭಾವನೆ ನೀಡಬಹುದು. ಅದರಲ್ಲೂ ಪೋಷಕ ನಟರು, ಹಾಸ್ಯ ನಟರಿಗಂತಲೂ ಬಹಳ ಕಡಿಮೆ ಸಂಭಾವನೆ ಇರುತ್ತದೆ. ಆದರೆ ಕೆಲವು ಹಾಸ್ಯ ನಟರು ಶ್ರಮಪಟ್ಟು ಹೆಸರು, ಹಣ, ಆಸ್ತಿ ಸಂಪಾದಿಸಿರುತ್ತಾರೆ. ಭಾರತದ ಶ್ರೀಮಂತ ಹಾಸ್ಯನಟನ ಬಗ್ಗೆ ಮಾಹಿತಿ ಇಲ್ಲಿದೆ.

ಭಾರತದ ಸಿನಿಮಾಗಳಲ್ಲಿ ನಾಯಕ ನಟರಿಗಷ್ಟೆ ದೊಡ್ಡ ಸಂಭಾವನೆ. ನಾಯಕ ನಟನ ಒಟ್ಟು ಸಂಭಾವನೆಯ ಅರ್ಧ ಭಾಗದಷ್ಟು ಹಣದಲ್ಲಿ ಸಿನಿಮಾದ ಉಳಿದೆಲ್ಲ ನಟ-ನಟಿಯರಿಗೆ ಸಂಭಾವನೆ ಕೊಡುತ್ತಾರೆ. ಇದೇ ಕಾರಣಕ್ಕೆ ವರ್ಷಕ್ಕೆ, ಎರಡು ವರ್ಷಕ್ಕೆ ಒಂದು ಸಿನಿಮಾ ಮಾಡಿದರೂ ಸಹ ನಾಯಕ ನಟರು ಭಾರಿ ಮೊತ್ತ ಗಳಿಸಿ ಶ್ರೀಮಂತರೆನಿಸಿಕೊಳ್ಳುತ್ತಾರೆ. ವರ್ಷಕ್ಕೆ 20-30 ಸಿನಿಮಾ ಮಾಡಿದರೂ ಪೋಷಕ ನಟರು, ಹಾಸ್ಯ ನಟರು ಬಡವರಾಗಿಯೇ ಉಳಿದಿರುತ್ತಾರೆ. ಹಾಗಿದ್ದಾಗಿಯೂ ಕೆಲವು ನಟರು ತಮ್ಮ ಶ್ರಮದಿಂದ ಸಾಕಷ್ಟು ಹೆಸರು ಜೊತೆಗೆ ಹಣವನ್ನೂ ಗಳಿಸುತ್ತಾರೆ. ಅಂದಹಾಗೆ ಭಾರತದ ಅತ್ಯಂತ ಶ್ರೀಮಂತ ಹಾಸ್ಯನಟ ಇರುವುದು ದಕ್ಷಿಣ ಭಾರತ ಚಿತ್ರರಂಗದಲ್ಲಿ. ಈ ವ್ಯಕ್ತಿಯ ಆಸ್ತಿ ಮೌಲ್ಯ, ಬಾಲಿವುಡ್ ಸೂಪರ್ ಸ್ಟಾರ್ ರಣ್ಬೀರ್ ಕಪೂರ್ ಗಿಂತಲೂ ಹೆಚ್ಚಿದೆ.
ಈ ವರೆಗೆ ಸುಮಾರು 1050ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ನಟಿಸಿದಷ್ಟು ಸಿನಿಮಾಗಳಲ್ಲಿ ವಿಶ್ವದ ಇನ್ಯಾವುದೇ ನಟನೂ ನಟಿಸಿಲ್ಲ. ಒಂದೇ ವರ್ಷದಲ್ಲಿ 40-50 ಸಿನಿಮಾಗಳಲ್ಲಿ ನಟಿಸಿದ್ದೂ ಇದೆ ಬ್ರಹ್ಮಾನಂದಂ. 90ರ ದಶಕದಲ್ಲಿ ಬ್ರಹ್ಮಾನಂದಂ ಅದೆಷ್ಟು ಬ್ಯುಸಿಯಾಗಿದ್ದರೆಂದರೆ ಪ್ರತಿ ವರ್ಷವೂ ಅವರು ಸುಮಾರು 40ಕ್ಕಿಂತಲೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಮೊದಲು ಬ್ರಹ್ಮಾನಂದಂ ಕಾಲ್ ಶೀಟ್ ಪಡೆದು ಆ ಬಳಿಕವಷ್ಟೆ ನಾಯಕ ನಟನ ಕಾಲ್ ಶೀಟ್ ಪಡೆಯುತ್ತಿದ್ದರು ನಿರ್ಮಾಪಕರು. 90ರಲ್ಲಿ ಶುರುವಾದ ಬ್ರಹ್ಮಾನಂದಂ ಹವಾ 2015-16ರ ವರೆಗೂ ಹಾಗೆಯೇ ಇತ್ತು. ಅದಾದ ಬಳಿಕವೂ ಬೇಡಿಕೆ ಇತ್ತಾದರೂ ಅನಾರೋಗ್ಯದ ಕಾರಣ ಅವರೇ ನಟನೆ ಕಡಿಮೆ ಮಾಡಿದರು.
ಇದನ್ನೂ ಓದಿ:‘ಪುಷ್ಪ 2’ ಬಳಿಕ ಅಲ್ಲು ಅರ್ಜುನ್ ರೇಂಜ್ ಬದಲು, ಮುಂದಿನ ಸಿನಿಮಾ ಸಂಭಾವನೆ ಎಷ್ಟು ಗೊತ್ತೆ?
ಬ್ರಹ್ಮಾನಂದಂ ತೆಲುಗು ಚಿತ್ರರಂಗದ ಮಾತ್ರವೇ ಅಲ್ಲದೆ ಭಾರತ ಚಿತ್ರರಂಗದಲ್ಲಿ ಅತ್ಯಂತ ದುಬಾರಿ ಹಾಸ್ಯ ನಟ ಸಹ ಹೌದು. ಜನ ಅವರನ್ನು ನೋಡಲೆಂದೇ ಚಿತ್ರಮಂದರಕ್ಕೆ ಬರುತ್ತಿದ್ದರು. ಈಗಲೂ ಸಹ ಅವರಿಗೆ ಬೇಡಿಕೆ ಕಡಿಮೆ ಆಗಿಲ್ಲ. 2023 ರಲ್ಲಿ ಬ್ರಹ್ಮಾನಂದಂ 9 ಸಿನಿಮಾಗಳಲ್ಲಿ ನಟಿಸಿದ್ದರು. ದೊಡ್ಡ ಸಂಭಾವನೆ ಪಡೆವ ಜೊತೆಗೆ ಶಿಸ್ತಿನ ಜೀವನ ನಡೆಸುತ್ತಿದ್ದ ಬ್ರಹ್ಮಾನಂದಂ ಅವರು ಗಳಿಸಿದ ಹಣವನ್ನು ಚೆನ್ನಾಗಿ ಹೂಡಿಕೆ ಮಾಡಿ, ಇದೀಗ ಇಡೀ ದೇಶದಲ್ಲೇ ಅತ್ಯಂತ ಶ್ರೀಮಂತ ಹಾಸ್ಯ ನಟ ಎನಿಸಿಕೊಂಡಿದ್ದಾರೆ.

Brahmanandam1
ಬ್ರಹ್ಮಾನಂದಂ ಅವರ ಒಟ್ಟು ಆಸ್ತಿ ಮೌಲ್ಯ 500 ಕೋಟಿಗೂ ಹೆಚ್ಚಿದೆಯಂತೆ. ಬ್ರಹ್ಮಾನಂದಂ ಹೂಡಿಕೆಯಲ್ಲಿ ಹೆಚ್ಚು ಆಸಕ್ತಿ ವಹಿಸಿದವರಂತೆ. ಹಾಗಾಗಿ ಕಾಲ ಕಾಲಕ್ಕೆ ಅವರು ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ಮಾಡಿದ್ದರ ಪರಿಣಾಮ ಅವರ ಆಸ್ತಿ ಮೌಲ್ಯ ಏರುತ್ತಲೇ ಸಾಗಿ ಈಗ 500 ಕೋಟಿಗೂ ಹೆಚ್ಚಾಗಿದೆ. ಐಶಾರಾಮಿ ಮನೆ, ಬಾಡಿಕೆ ಅಪಾರ್ಟ್ಮೆಂಟ್ಗಳು, ಕಮರ್ಶಿಯಲ್ ಶಾಪ್ಗಳು, ಲೇಔಟ್ಗಳು, ಹಲವು ಐಶಾರಾಮಿ ಕಾರುಗಳು. ಬಾಂಡ್, ಎಫ್ಡಿಗಳನ್ನು ಬ್ರಹ್ಮಾನಂದಂ ಹೊಂದಿದ್ದಾರೆ. ಅಂದಹಾಗೆ ರಜನೀಕಾಂತ್ರ ಒಟ್ಟು ಆಸ್ತಿ ಮೌಲ್ಯ 400 ಕೋಟಿ. ಬ್ರಹ್ಮಾನಂದಂ ಅವರು ರಜನೀಕಾಂತ್ಗಿಂತಲೂ ಶ್ರೀಮಂತರು. ಬಾಲಿವುಡ್ ಸ್ಟಾರ್ ನಟ ರಣ್ಬೀರ್ ಕಪೂರ್ ಆಸ್ತಿ ಮೌಲ್ಯ 350 ಕೋಟಿ. ಬ್ರಹ್ಮಾನಂದಂ ಮುಂದೆ ಅದೂ ಸಹ ಬಹಳ ಕಡಿಮೆ.
2024 ರಿಂದ ಬ್ರಹ್ಮಾನಂದಂ ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಮಾಡಿದ್ದಾರೆ. ತೀರ ತಮ್ಮ ಆಪ್ತ ಗೆಳೆಯರ ಸಿನಿಮಾಗಳು ಅಥವಾ ತಮಗೆ ಅನುಕೂಲ ಆಗುವಂತೆ ಸೆಟ್ಗಳಲ್ಲಿ ಮಾತ್ರವೇ ಚಿತ್ರೀಕರಣ ಆಗುವ ಸಿನಿಮಾಗಳು. ಕಡಿಮೆ ದಿನ ಶೂಟಿಂಗ್ ಇರುವ ಚಿತ್ರಗಳನ್ನು ಮಾತ್ರವೇ ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ವಯೋಸಹಜ ಅನಾರೋಗ್ಯದ ಕಾರಣ ಅವರು ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಮಾಡಿದ್ದಾರೆ. 2024 ರಲ್ಲಿ ಅವರು ಎರಡು ಸಿನಿಮಾಗಳಲ್ಲಿ ಮಾತ್ರವೇ ನಟಿಸಿದ್ದಾರೆ. 2024 ರಲ್ಲಿ ಈ ವರೆಗೆ ಅವರು ನಟಿಸಿರುವ ಎರಡು ಸಿನಿಮಾಗಳು ಮಾತ್ರವೇ ಬಿಡುಗಡೆ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ