AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ಹಿಂಬಾಲಕರಿಗೂ ಬಿಡದ ಸಂಕಷ್ಟ; ಒಂದಾದ ಮೇಲೆ ಒಂದು ಕೇಸ್

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆರೋಪಿ. ದರ್ಶನ್ ಅವರ ಮೇಲಿನ ಕಾನೂನು ಪ್ರಕರಣಗಳು ಇನ್ನೂ ಮುಗಿದಿಲ್ಲ. ಈಗ ಅವರ ಹಲವಾರು ಹಿಂಬಾಲಕರು ಕಾನೂನು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರಜತ್, ವಿನಯ್ ಗೌಡ ಮತ್ತು ರಕ್ಷಕ್ ಬುಲೆಟ್ ಮುಂತಾದವರ ಮೇಲೆ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ದರ್ಶನ್ ಹಿಂಬಾಲಕರಿಗೂ ಬಿಡದ ಸಂಕಷ್ಟ; ಒಂದಾದ ಮೇಲೆ ಒಂದು ಕೇಸ್
ದರ್ಶನ್ ಹಿಂಬಾಲಕರಿಗೂ ಬಿಡದ ಸಂಕಷ್ಟ; ಒಂದಾದ ಮೇಲೆ ಒಂದು ಕೇಸ್
ರಾಜೇಶ್ ದುಗ್ಗುಮನೆ
|

Updated on:Mar 26, 2025 | 2:58 PM

Share

ದರ್ಶನ್ ಅವರು ಇತ್ತೀಚೆಗೆ ಕೇರಳಕ್ಕೆ ತೆರಳಿ ಶತ್ರುಸಂಹಾರ ಪೂಜೆ ಮಾಡಿಸಿದ್ದರು. ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಬಂಧನಕ್ಕೆ ಒಳಗಾದ ಬೆನ್ನಲ್ಲೇ ದರ್ಶನ್ (Darshan) ಅವರು ಸಾಕಷ್ಟು ತೊಂದರೆ ಅನುಭವಿಸಿದರು. ಈ ಕಾರಣಕ್ಕೆ ದರ್ಶನ್ ಅವರು ಈ ಪೂಜೆ ಮಾಡಿಸಿದ್ದಾರೆ ಎನ್ನಲಾಗುತ್ತಿದೆ. ಈಗ ದರ್ಶನ್ ಅಭಿಮಾನಿಗಳಿಗೂ ತೊಂದರೆ ಎದುರಾಗುತ್ತಿದೆ. ಸೆಲೆಬ್ರಿಟಿ ವಲಯದಲ್ಲಿರೋ ಕೆಲ ದರ್ಶನ್ ಹಿಂಬಾಲಕರಿಗೆ ಸಮಸ್ಯೆ ಉಂಟಾಗಿದೆ. ಕೇಸ್ ಮೇಲೆ ಕೇಸ್ ಬೀಳುತ್ತಿದೆ.

ದರ್ಶನ್​ಗೆ ಆರು ತಿಂಗಳು ಕಷ್ಟ

ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಅವರು ಎ2 ಆರೋಪಿ ಆದರು. ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೆಲ ಕಾಲ ಇಡಲಾಯಿತು. ಆ ಬಳಿಕ ಅಲ್ಲಿ ಐಷಾರಾಮಿ ವ್ಯವಸ್ಥೆ ಪಡೆದ ಕಾರಣಕ್ಕೆ ನೇರವಾಗಿ ಬಳ್ಳಾರಿ ಜೈಲಿಗೆ ಕಳುಹಿಸಲಾಯಿತು. ಆ ಬಳಿಕ ಅವರು ಚಿಕಿತ್ಸೆಗಾಗಿ ಹೊರಕ್ಕೆ ಬಂದರು. ಆ ಬಳಿಕ ಜಾಮೀನು ಸಿಕ್ಕಿತು. ಆರು ತಿಂಗಳು ಕಾಲ ಅವರು ಜೈಲಿನಲ್ಲಿ ಇದ್ದರು. ಅವರ ಗ್ಯಾಂಗ್​ನಲ್ಲಿದ್ದ ಅನೇಕರು ಸಂಕಷ್ಟು ಅನುಭವಿಸಿದರು.

ದರ್ಶನ್ ಸೆಲೆಬ್ರಿಟಿ ಅಭಿಮಾನಿಗಳ ಮೇಲೂ ಕೇಸ್

ರಜತ್ ಅವರು ದರ್ಶನ್ ಅಭಿಮಾನಿಗಳಲ್ಲಿ ಒಂದು. ‘ಬಾಯ್ಸ್ vs ಗರ್ಲ್ಸ್’ ಶೋನಲ್ಲಿ ಇತ್ತೀಚೆಗೆ ರಜತ್ ಅವರು ದರ್ಶನ್ ಗೆಟಪ್​ನಲ್ಲಿ ಬಂದಿದ್ದರು. ಲಾಂಗ್ ಹಿಡಿದುಕೊಂಡು ಪೋಸ್ ಕೊಟ್ಟಿದ್ದರು. ಅದೇ ವಿಚಾರಕ್ಕೆ ರಜತ್ ಅವರು ಅರೆಸ್ಟ್ ಆಗಿದ್ದಾರೆ. ರಜತ್ ಅವರು ಅನೇಕ ಬಾರಿ ತಾವು ದರ್ಶನ್ ಫ್ಯಾನ್ ಎಂದು ಹೇಳಿಕೊಂಡಿದ್ದು ಇದೆ. ಇನ್ನು, ರಜತ್ ಜೊತೆ ವಿನಯ್ ಗೌಡ ಕೂಡ ಬಂಧನಕ್ಕೆ ಒಳಗಾಗಿದ್ದಾರೆ.

ಇದನ್ನೂ ಓದಿ
Image
ಭೂಮಿ ಮೇಲಿನ ಮೂರು ವಿಶೇಷ ಪ್ರದೇಶಗಳಲ್ಲಿ ಮನೆ ಹೊಂದಿದ್ದಾರೆ ಪ್ರಕಾಶ್ ರಾಜ್
Image
ಪೊಲೀಸರ ದಾರಿ ತಪ್ಪಿಸಿಲ್ಲ; ರಬ್ಬರ್ ಮಚ್ಚು ಕೊಟ್ಟಿದ್ದಕ್ಕೆ ರಜತ್ ಸ್ಪಷ್ಟನೆ
Image
ವಿನಯ್, ರಜತ್​ಗೆ ಹೆಚ್ಚಿದ ಸಂಕಷ್ಟ; ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್
Image
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ

ವಿನಯ್ ಗೌಡ ಅವರು ದರ್ಶನ್ ಅಭಿಮಾನಿ ಎಂದು ಹೇಳಿಕೊಂಡಿಲ್ಲ. ಅವರು ‘ಡೆವಿಲ್’ ಸಿನಿಮಾದಲ್ಲಿ ದರ್ಶನ್ ಜೊತೆ ನಟಿಸುತ್ತಿದ್ದಾರೆ. ವಿನಯ್ ಗೌಡ ಅವರು ವಿಲನ್ ಪಾತ್ರ ಮಾಡುತ್ತಿದ್ದಾರೆ. ಅವರಿಗೂ ಈಗ ಸಂಕಷ್ಟ ಎದುರಾಗಿದೆ.

ರಕ್ಷಕ್ ಮೇಲೆ ಕೇಸ್

ರಕ್ಷಕ್ ಬುಲೆಟ್ ಅವರು ದರ್ಶನ್ ಅವರ ಪಕ್ಕಾ ಅಭಿಮಾನಿ. ಇದಕ್ಕೆ ಕಾರಣ ಆಗಿದ್ದು ರಕ್ಷಕ್ ತಂದೆ ಬುಲೆಟ್ ಪ್ರಕಾಶ್ ಹಾಗೂ ದರ್ಶನ್ ನಡುವಿನ ಬಾಂಧವ್ಯ. ಈ ಕಾರಣಕ್ಕೆ ದರ್ಶನ್ ಅವರ ಅಭಿಮಾನಿ ನಾನು ಎಂದು ಅವರು ಅನೇಕ ಬಾರಿ ಹೇಳಿಕೊಂಡಿದ್ದರು. ಈಗ ಅವರ ಮೇಲೂ ದೂರು ದಾಖಲಾಗಿದೆ.

ಇದನ್ನೂ ಓದಿ: ರಾಜಸ್ಥಾನದಲ್ಲಿ ‘ದಿ ಡೆವಿಲ್’ ಶೂಟಿಂಗ್; ದರ್ಶನ್ ಅಭಿಮಾನಿಗಳಿಗೆ ಅಪ್​ಡೇಟ್ ನೀಡಿದ ತಂಡ

ಇತ್ತೀಚೆಗೆ ಸಹ ಸ್ಪರ್ಧಿಯನ್ನು ಬಣ್ಣಿಸುವ ಭರದಲ್ಲಿ ರಕ್ಷಕ್ ಎಡವಿದ್ದರು. ‘ನಿಮ್ಮನ್ನು ನೋಡುತ್ತಾ ಇದ್ದರೆ ತಾಯಿ ಚಾಮುಂಡೇಶ್ವರಿ ಬೆಟ್ಟದಿಂದ ಇಳಿದು ಬಂದು, ಸೀರೆ ಒಡವೆ ಬಿಚ್ಚಿಟ್ಟು ಪ್ಯಾಂಟು ಶರ್ಟು ಹಾಕೊಂಡು ಸ್ವಿಟ್ಜರ್ಲೆಂಡ್​ನಲ್ಲಿ ಟ್ರಿಪ್ ಹೊಡಿಯುತ್ತಿದ್ದಾಳೆ ಅನ್ನಿಸ್ತಿದೆ’ ಎಂದಿದ್ದರು ರಕ್ಷಕ್. ಅವರ ಮೇಲೆ ಹಿಂದೂ ಸಂಘಟನೆಗಳು ದೂರು ದಾಖಲಿಸಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:52 pm, Wed, 26 March 25