ಬೆಂಗಳೂರು, ನವೆಂಬರ್ 11: ಇಡೀ ಬೆಂಗಳೂರನ್ನೇ ಬೀಳಿಸಿದ್ದ ಅರಿಹಂತ್ ಜ್ಯುವೆಲ್ಲರ್ಸ್ ಮಾಲೀಕನ ಮನೆ ಕಳ್ಳತನ ಪ್ರಕರಣ ಪೊಲೀಸರಿಗೆ ದೊಡ್ಡ ತಲೆನೋವು ತಂದೊಡ್ಡಿದೆ. ಸುಮಾರು 15 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ, ನಗದು ದೋಚಿದ ಖದೀಮರು ನೇಪಾಳ ತಲುಪಿದ್ದು, ಇದೀಗ ಆರೋಪಿಗಳ ಪತ್ತೆ ಹಾಗೂ ಕಳವಾದ ಆಭರಣಗಳ ಪತ್ತೆ ಕಾರ್ಯ ಸವಾಲಾಗಿ ಪರಿಣಮಿಸಿದೆ. ಆದರೆ, ಬೆಂಗಳೂರಿನಲ್ಲಿ ಇದೇನು ಮೊದಲ ಪ್ರಕರಣವಲ್ಲ. ಅನೇಕ ವರ್ಷಗಳಿಂದ ಬೆಂಗಳೂರಿನ ಶ್ರೀಮಂತರ ಮನೆಗಳಲ್ಲಿ ನೇಪಾಳಿ ಮೂಲದವರ ಕೈಚಳಕ ಜೋರಾಗಿಯೇ ನಡೆದಿದೆ.
ಇವಿಷ್ಟು ಕೆಲವು ಉದಾಹರಣೆಗಳು ಅಷ್ಟೇ. ಆದರೆ ಈ ರೀತಿಯ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇವೆ. ಹೀಗೆ ಕಳ್ಳತನ, ದರೋಡೆ ಮಾಡಿಕೊಂಡು ಎಸ್ಕೇಪ್ ಆಗುವ ಅನೇಕ ನೇಪಾಳಿ ಗ್ಯಾಂಗ್ ಅನ್ನು ಪೊಲೀಸರು ನೇಪಾಳ ತಲುಪುವ ಒಳಗೆ ಹೆಡೆಮುರಿ ಕಟ್ಟಿದ್ದಾರೆ. ಆದರೆ ಸಂಜಯ್ ನಗರ ಪ್ರಕರಣದಲ್ಲಿ ಮಾತ್ರ ಆರೋಪಿಗಳು ನೇಪಾಳ ತಲುಪಿದ್ದು, ರಾಜತಾಂತ್ರಿಕ ಸಮಸ್ಯೆಯಿಂದ ಬಂಧನ ಕಷ್ಟವಾಗಿದೆ.
ಇದನ್ನೂ ಓದಿ: ಊರಿಗೆ ಹೋಗಿ ಬರುವಷ್ಟರಲ್ಲಿ ವ್ಯಾಪಾರಿಗೆ ಕಾದಿತ್ತು ಶಾಕ್: ಮನೆಯಲ್ಲಿದ್ದ 15 ಕೋಟಿ ಮೌಲ್ಯದ ಚಿನ್ನ ಕಳವು
ಇನ್ನು ವಿಜಯನಗರ ಜ್ಯುವೆಲ್ಲರಿ ಶಾಪ್ ಮಾಲೀಕನ ಮನೆ ಕೇಸ್ ಆರೋಪಿಗಳು ಘಟನೆ ಬೆಳಕಿಗೆ ಬರುವ ಮುನ್ನವೇ ಬೆಂಗಳೂರಿನಿಂದ ಕಾಲ್ಕಿತ್ತಿದ್ದಾರೆ. ಆದರೆ, ಬಾರ್ಡರ್ ಮೂಲಕ ಕೆಜಿಗಟ್ಟಲೇ ಚಿನ್ನ ಸಾಗಿಸುವುದು ಕಷ್ಟದ ಕೆಲಸ. ಹೀಗಾಗಿ ಆರೋಪಿಗಳು ಪರ್ಯಾಯ ಮಾರ್ಗವಾಗಿ ನೇಪಾಳ ತಲುಪಿರುವ ಸಾಧ್ಯತೆ ಇದ್ದು, ಈ ಗ್ಯಾಂಗ್ ಬಂಧನ ಪೊಲೀಸರಿಗೆ ಅತಿದೊಡ್ಡ ಸವಾಲೇ ಸರಿ.
ವರದಿ: ಪ್ರದೀಪ್ ಚಿಕ್ಕಾಟಿ, ‘ಟಿವಿ9’
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ