ಬರ ಪರಿಹಾರ ಕುರಿತು ಕೇಂದ್ರದ ಕೆಲ ನಿಯಮ ಬದಲಾವಣೆ ಆಗಬೇಕಿದೆ -ಸಚಿವ ಸತೀಶ್ ಜಾರಕಿಹೊಳಿ
ಬರಗಾಲ ಘೋಷಣೆ ಕುರಿತು ನಿಮಯ ಬದಲಾಯಿಸಬೇಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬರ ಪರಿಹಾರ ಸಿಗಲಿದೆ. ಬರ ಪರಿಹಾರ ಕುರಿತು ಕೇಂದ್ರದ ಕೆಲ ನಿಯಮ ಬದಲಾವಣೆ ಆಗಬೇಕಿದೆ. ಬರಗಾಲದ ಮಾನದಂಡ ಬದಲಾವಣೆ ರಾಜ್ಯಕ್ಕೆ ಮಾತ್ರ ಸಿಮೀತವಾಗಿಲ್ಲ. ಇಡೀ ದೇಶಕ್ಕೆ ಸಂಬಂದಿಸಿದ್ದು ಹಾಗಾಗಿ ಬದಲಾವಣೆ ಮಾಡಬೇಕು ಎಂದು PWD ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬೆಂಗಳೂರು, ಸೆ.14: ಸರ್ಕಾರವು ರಾಜ್ಯದ 195 ತಾಲೂಕುಗಳನ್ನು ಬರ (drought) ಪೀಡಿತ ತಾಲೂಕುಗಳೆಂದು ಅಧಿಕೃತವಾಗಿ ಘೋಷಣೆ ಮಾಡಿ ಆದೇಶ ಹೊರಡಿಸಿದೆ. ಈ ವಿಚಾರಕ್ಕೆ ಸಂಬಂಧಿಸಿ PWD ಸಚಿವ ಸತೀಶ್ ಜಾರಕಿಹೊಳಿ(Minister Satish Jarkiholi) ಪ್ರತಿಕ್ರಿಯೆ ನೀಡಿದ್ದು ಬರಗಾಲ ಘೋಷಣೆ ಕುರಿತು ನಿಮಯ ಬದಲಾಯಿಸಬೇಕಿದೆ ಎಂದರು. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬರ ಪರಿಹಾರ ಸಿಗಲಿದೆ. ಬರ ಪರಿಹಾರ ಕುರಿತು ಕೇಂದ್ರದ ಕೆಲ ನಿಯಮ ಬದಲಾವಣೆ ಆಗಬೇಕಿದೆ. ಬರಗಾಲದ ಮಾನದಂಡ ಬದಲಾವಣೆ ರಾಜ್ಯಕ್ಕೆ ಮಾತ್ರ ಸಿಮೀತವಾಗಿಲ್ಲ. ಇಡೀ ದೇಶಕ್ಕೆ ಸಂಬಂದಿಸಿದ್ದು ಹಾಗಾಗಿ ಬದಲಾವಣೆ ಮಾಡಬೇಕು ಎಂದರು.
ಬೆಂಗಳೂರಿನಲ್ಲಿ ಮಾತನಾಡಿದ PWD ಸಚಿವ ಸತೀಶ್ ಜಾರಕಿಹೊಳಿ, ಬರಗಾಲ ಘೋಷಣೆ ಕುರಿತು ನಿಯಮಗಳಲ್ಲಿ ಬದಲಾವಣೆ ಆಗಬೇಕಿದೆ. ಕೇಂದ್ರ ಸರ್ಕಾರದ ಹಣ ಕಡಿಮೆ ಇದೆ ಹಾಗಾಗಿ ಬದಲಾವಣೆ ಅವಶ್ಯಕತೆ ಇದೆ. ಬರಗಾಲದ ಮಾನದಂಡ ಬದಲಾವಣೆ ಕರ್ನಾಟಕಕ್ಕೆ ಮಾತ್ರ ಸಿಮೀತವಾಗಿಲ್ಲ. ಇಡೀ ದೇಶಕ್ಕೆ ಸಂಬಂಧಿಸಿದ್ದು ಹಾಗಾಗಿ ಬದಲಾವಣೆ ಮಾಡಬೇಕು. ಕೇಂದ್ರ ಸರ್ಕಾರದ ರೂಲ್ಸ್ ಗಳಲ್ಲಿ ಬಹಳಷ್ಟು ಸಮಸ್ಯೆಗಳಿವೆ ಎಂದರು.
ನೈಸರ್ಗಿಕವಾಗಿ ಆಗುವುದನ್ನು ಯಾರು ಏನು ಮಾಡಲಾಗದು
ಕಾಂಗ್ರೆಸ್ ಬಂದ್ರೆ ಬರಗಾಲ ಬರಲಿದೆ ಎಂಬ ಬಿಜೆಪಿ ಪ್ರಚಾರದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಸಂಸದರು ಇದ್ದಾರೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಪಾರ್ಟ್ ಆಫ್ ದಿ ಸರ್ಕಾರ ಅವರದ್ದು. ನಾವು ರಾಜ್ಯ ಆಳುತ್ತೇವೆ, ಅವರು ದೇಶ ಆಳುತ್ತಾರೆ. ಸಂಸದರು ರಾಜೀನಾಮೆ ಕೊಡಬೇಕಾಗುತ್ತದೆ. ನಮ್ಮಲ್ಲಿ ಮಾತ್ರವಲ್ಲ ಪಕ್ಕದ ಕೇರಳ, ಗೋವದಲ್ಲೂ ಸಮಸ್ಯೆ ಇದೆ. ನೈಸರ್ಗಿಕವಾಗಿ ಆಗಿರುವುದು, ಅದಕ್ಕೆ ಯಾರು ಏನು ಮಾಡಲು ಸಾಧ್ಯವಿಲ್ಲ. ನಾವೆಲ್ಲ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ಇದನ್ನೂ ಓದಿ: ಕರ್ನಾಟಕದ 195 ಬರ ಪೀಡಿತ ತಾಲೂಕುಗಳು: ಸರ್ಕಾರದಿಂದ ಅಧಿಕೃತ ಘೋಷಣೆ
ಇನ್ನು ಇದೇ ವೇಳೆ, ಹಿಂದುಳಿದ ವರ್ಗಗಳ ಸ್ವಾಮೀಜಿಗಳ ಒಕ್ಕೂಟ ಮೊದಲೆ ಇದೆ. ಸುಮಾರು ವರ್ಷಗಳಿಂದ ಇದೆ. ಮೊನ್ನೆ ಸಿಎಂ ಜೊತೆ ಮಾತಾಡಿದ್ದಾರೆ. ಅವರ ಸಮಸ್ಯೆಗಳನ್ನ ಬಗೆ ಹರಿಸಬೇಕು ಎಂದು ಮಾತಾಡಿದ್ದಾರೆ. ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವ ಕ್ರಮ ಮಾಡಿದ್ದೇವೆ. ಮಠಗಳನ್ನು, ಶಾಲೆಗಳನ್ನು ಕಟ್ಟಲು ಸರ್ಕಾರ ಹಣ ಕೊಟ್ಟಿವೆ. ಎಲ್ಲಾ ಸರ್ಕಾರಗಳು ಮಾಡಿವೆ, ನಾವು ಮಾಡ್ತಾ ಇದ್ದೇವೆ ಎಂದರು.
ಕೇಂದ್ರ ಸರ್ಕಾರಕ್ಕೆ ನಾವು ಬರೆದಿರುವ ಪತ್ರಕ್ಕೆ ಉತ್ತರ ಕೊಟ್ಟಿಲ್ಲ
ಮತ್ತೊಂದೆಡೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, SDRF ಹಾಗೂ NDRF ನಿಯಮ ಪ್ರಕಾರ 195 ತಾಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಿದ್ದೇವೆ. ಬರದ ಬಗ್ಗೆ ಎಲ್ಲಾ ರೀತಿಯ ಸರ್ವೆ ಮಾಡಿಸಿ ವರದಿ ಪಡೆದಿದ್ದೇವೆ. ಬರ ಪರಿಹಾರಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಕೇಂದ್ರ ಸರ್ಕಾರಕ್ಕೆ ನಾವು ಬರೆದಿರುವ ಪತ್ರಕ್ಕೆ ಉತ್ತರ ಕೊಟ್ಟಿಲ್ಲ ಎಂದರು.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ