BMTC ಡಿಪೋದಲ್ಲಿ ನಿಲ್ಲಿಸಿದ್ದ ಬಸ್​​ನ​ ಡೀಸೆಲ್​ ಕದ್ದ ಚಾಲಾಕಿ ಖದೀಮರು

ಯಲಹಂಕ ನ್ಯೂ ಟೌನ್‌ನಲ್ಲಿರುವ ಬೆಂಗಳೂರು ಮಹಾನಗರ ಸಾರಿಗೆ ಡಿಪೋದಲ್ಲಿ ನಿಲ್ಲಿಸಿದ್ದ ಎರಡು ಬಿಎಂಟಿಸಿ ಬಸ್​​​ಗಳಿಂದ ಬರೊಬ್ಬರಿ 14,000 ರೂ. ಮೌಲ್ಯದ 167 ಲೀಟರ್​ ಡೀಸೆಲ್​​ನ್ನು ಖದೀಮರು ಕಳ್ಳತನ ಮಾಡಿದ್ದಾರೆ.

BMTC ಡಿಪೋದಲ್ಲಿ ನಿಲ್ಲಿಸಿದ್ದ ಬಸ್​​ನ​ ಡೀಸೆಲ್​ ಕದ್ದ ಚಾಲಾಕಿ ಖದೀಮರು
ಬಿಎಂಟಿಸಿ ಬಸ್​
Follow us
ವಿವೇಕ ಬಿರಾದಾರ
|

Updated on: Feb 27, 2023 | 8:37 AM

ಬೆಂಗಳೂರು: ಸಾಮಾನ್ಯವಾಗಿ ಬೈಕ್​ಗಳಿಂದ ಪೆಟ್ರೋಲ್​ ಕದಿಯುವುದನ್ನು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಆದರೆ ಇಲ್ಲಿ ಖದೀಮರು ಸರ್ಕಾರಿ ವಾಹನದ ಡೀಸೆಲ್ (Diesel)​​ ಕದ್ದಿದ್ದಾರೆ. ಹೌದು ಫೆ.18ರ ರಾತ್ರಿ ಯಲಹಂಕ ನ್ಯೂ ಟೌನ್‌ನಲ್ಲಿರುವ ಬೆಂಗಳೂರು ಮಹಾನಗರ ಸಾರಿಗೆ (BMTC) ಡಿಪೋದಲ್ಲಿ (Depot) ನಿಲ್ಲಿಸಿದ್ದ ಎರಡು ಬಿಎಂಟಿಸಿ ಬಸ್​​ (BMTC Bus)​ಗಳಿಂದ ಬರೊಬ್ಬರಿ 14,000 ರೂ. ಮೌಲ್ಯದ 167 ಲೀಟರ್​ ಡೀಸೆಲ್​​ನ್ನು ಖದೀಮರು ಕಳ್ಳತನ ಮಾಡಿದ್ದಾರೆ. ಆದರೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಪುಟ್ಟೇನಹಳ್ಳಿ ಡಿಪೋ ಉಸ್ತುವಾರಿ ರಮೇಶ್​ ಬಿ ಹೆಚ್ ಮಾತನಾಡಿ ನಾನು ರಾತ್ರಿ ಪಾಳಯದಲ್ಲಿ ಕೆಲಸ ಮಾಡುವಾಗ ಎರಡು ಬಸ್​ಗಳ ಕೆಳಗೆ ಡೀಸೆಲ್​​ ಸೋರಿಕೆಯಾಗುತ್ತಿರುವುದು ಕಂಡು ಬಂತು. ಪರಿಶೀಲಿಸಿದಾಗ ನೆಲೆದ ಮೇಲೆ ಮತ್ತು ಕಂಪೌಂಡ್​ ಮೇಲೆ ಡೀಸೆಲ್​​ ಬಿದ್ದಿರುವುದು ಕಂಡು, ಹತ್ತಿರದ ಪೊಲೀಸ್​ ಠಾಣೆಗೆ ದೂರು ನೀಡಿದೆ ಎಂದು ಹೇಳಿದ್ದಾರೆ. ರಮೇಶ್​ ದೂರಿನಲ್ಲಿ ಬಹಶಃ ಕಳ್ಳರು ಡಿಪೋ ಕಂಪೌಂಡ ಜಿಗಿದು ಬಂದು ಕಳ್ಳತನ ಮಾಡಿ ಮತ್ತೆ ಅದೇ ಕಂಪೌಂಡ್​ ಹಾರಿ ಹೋಗಿರಬಹುದು ಎಂದು ದಾಖಲಿಸಿದ್ದಾರೆ.

ಕೆಎಸ್​ಆರ್​ಟಿಸಿ ಬಸ್​ ಕದ್ದ ಕಳ್ಳರು

ಫೆ. 20ರಂದು ಬೀದರ್ ಡಿಪೋ ನಂಬರ್ 2 ಕ್ಕೆ ಸೇರಿದ್ದ ಕೆಎ 38 ಎಫ್ 971 ನಂಬರ್​ನ ಬಸ್, ಬೀದರ್​ನಿಂದ ಚಿಂಚೋಳಿಗೆ ಬಂದಿತ್ತು. ಪ್ರತಿನಿತ್ಯ ಚಿಂಚೋಳಿಯಿಂದ ಮನ್ನಾಎಖ್ಖೆಳ್ಳಿ ಮಾರ್ಗವಾಗಿ ಬೀದರ್ ಮಾರ್ಗದಲ್ಲಿ ಈ ಬಸ್ ಸಂಚರಿಸುತ್ತಿತ್ತು. ಪ್ರತಿನಿತ್ಯ ಚಿಂಚೋಳಿಯಲ್ಲಿ ಹಾಲ್ಟ್ ಮಾಡಿ, ಮುಂಜಾನೆ ಬಸ್​ನ್ನು ಚಾಲಕ ಮತ್ತು ನಿರ್ವಾಹಕರು ತೆಗೆದುಕೊಂಡು ಹೋಗುತ್ತಾರೆ. ಫೆ.20ರ ರಾತ್ರಿ ಬೀದರ್​ನಿಂದ ತಂದಿದ್ದ ಬಸ್​ನ್ನು ಚಾಲಕ ಅಯ್ಯುಬ್ ಖಾನ್ ಮತ್ತು ಈರಪ್ಪ, ಚಿಂಚೋಳಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ, ಡಿಪೋದಲ್ಲಿ ಮಲಗಿದ್ದರು.

ಫೆ.21ರಂದು ಮುಂಜಾನೆ ಎಂದಿನಂತೆ, ಬಸ್​ನ್ನು ತಗೆದುಕೊಂಡು ಮತ್ತೆ ಬೀದರ್​ಗೆ ಹೋಗಲು ಮುಂದಾದಾಗ ಚಾಲಕ ಮತ್ತು ನಿರ್ವಾಹಕನಿಗೆ ಶಾಕ್ ಆಗಿದೆ. ನಿಲ್ದಾಣದಲ್ಲಿದ್ದ ಬಸ್ ನಾಪತ್ತೆಯಾಗಿತ್ತು. ಕೂಡಲೇ ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಕಳ್ಳರು ಕದ್ದೊಯ್ದಿರುವುದು ಪತ್ತೆಯಾಗಿತ್ತು. ಈ ಕುರಿತು ಚಿಂಚೋಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು

13 ಗಂಟೆಯಲ್ಲಿ ಬಸ್​ ಪತ್ತೆ ಹಚ್ಚಿದ ಪೊಲೀಸರು

ಕಿಲಾಡಿಗಳು ನಕಲಿ ಕೀ ಬಳಸಿ, ಬಸನ್ನು ಕದ್ದೋಯ್ದಿದ್ದರು. ಚಿಂಚೋಳಿಯಿಂದ ತಾಂಡೂರ ಮಾರ್ಗವಾಗಿ ತೆಲೆಂಗಾಣ ರಾಜ್ಯದ ಕಡೆ ತಗೆದುಕೊಂಡು ಹೋಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತುತನಿಖೆ ಕೈಗೊಂಡ ಪೊಲೀಸರು ಘಟನೆ ನಡೆದು 13 ಗಂಟೆಯಲ್ಲಿ ತೆಲಂಗಾಣ ರಾಜ್ಯದ ತಾಂಡೂರು ತಾಲೂಕಿನ ಭೂ ಕೈಲಾಸ ತಾಂಡಾದಲ್ಲಿ ಬಸ್​ನ್ನ ಪತ್ತೆ ಹಚ್ಚಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ