ಬೆಂಗಳೂರು: ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ವಿರುದ್ಧ ವಿರೋಧ ವ್ಯಕ್ತವಾಗಿದ್ದು, ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಟಿವಿ9 ಜೊತೆ ಮಾತನಾಡಿರುವ ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarti Sulibele), ಯಾವಾಗಲೂ ಪಠ್ಯ ಪರಿಷ್ಕರಣೆಯಾದಾಗ ಈ ರೀತಿ ಚರ್ಚೆ ಇರುತ್ತದೆ. ಪಠ್ಯದಲ್ಲಿ ಕೇವಲ ಟಿಪ್ಪು (Tipu) ಬಗ್ಗೆ ಪರಿಚಯಿಸಿದರೆ ಹೇಗೆ? ಪಠ್ಯ ಪುಸ್ತಕ ಮಕ್ಕಳ ಮುಂದೆ ಸತ್ಯ ಬಿಚ್ಚಿಡುವ ಕೆಲಸ ಆಗಬೇಕು. ಸತ್ಯ ಹೇಳಿದಾಗ ಬುದ್ಧಿ ಜೀವಿಗಳು ವಿರೋಧ ಮಾಡುತ್ತಿದ್ದಾರೆ. ಯಾವಾಗ ಎಡಪಂಥಿಯರಿಗೆ ಬುಡ ಅಲಗಾಡಿಬಿಡುತ್ತೊ ಆಗೆಲ್ಲ ವಿರೋಧ ಮಾಡುತ್ತಾರೆ ಎಂದು ಅಭಿಪ್ರಾಯಪಟ್ಟರು.
ಆರ್ಎಸ್ಎಸ್ ಹೆಡ್ಗೆವಾರ್ ಪಠ್ಯಕ್ಕೆ ಕೆಲವರು ವಿರೋಧ ಮಾಡುತ್ತಾರೆ. ದೊಡ್ಡದಾದ ಸಂಘಟನೆಯನ್ನ ಕಟ್ಟಿದವರು, ಸಮಾಜದ ಉನ್ನತಿಗಾಗಿ ಶ್ರಮಪಟ್ಟ ಹೆಡ್ಗೆವಾರ್ ಪಾಠ ಕೇವಲ ಹೈಸ್ಕೂಲ್ಗೆ ಬರಬಾರದಾಗಿತ್ತು. ಹೈಯರ್ ಅಧ್ಯಯನ್ನಕ್ಕೆ ಹಾಕಬೇಕಾಗಿತ್ತು. ರೋಹಿತ್ ಚಕ್ರತಿರ್ಥ ಸಮಾಜದಲ್ಲಿ ಒಳ್ಳೆಯ ಹೆಸರು ಮಾಡಿದವರು. ಸಮಾಜದಲ್ಲಿ ಒಳ್ಳೆಯ ಶಿಕ್ಷಕರಾಗಿ ಗುರುತಿಸಿಕೊಂಡವರು. ಸರ್ಕಾರ ಪಿಯು ಪಠ್ಯ ಪರಿಷ್ಕರಣಾ ಸಮಿತಿಗೂ ರೋಹಿತ್ ಚಕ್ರತಿರ್ಥ ನೇಮಿಸಿ ತುಂಬಾ ಒಳ್ಳೆಯ ಕೆಲಸ ಮಾಡಿದೆ ಎಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಕೇಸರಿಕರಣ ಅಂತಾ ವಿರೋಧಿಸುವುದರಲ್ಲಿ ಹೊಸತು ಏನು ಇಲ್ಲ. ಯಾವಾಗಲು ಸಿದ್ದರಾಮಯ್ಯನವರು ಹಸಿರೀಕರಣಕ್ಕೆ ಒತ್ತು ಕೊಡುವಂತವರು. ನಾಳೆ ಸಿದ್ದರಾಮಯ್ಯನವರು ಮಸೀದಿಯಲ್ಲಿ ಸಿಕ್ಕಿರುವ ಲಿಂಗವನ್ನ ಲಿಂಗವೇ ಅಲ್ಲ ಅಂತಾ ಹೇಳಿದ್ರು ಆಶ್ಚರ್ಯ ಪಡಬೇಕಿಲ್ಲ. ಕರ್ನಾಟಕ ದೊಡ್ಡ ನಾಡು. ಒಬ್ಬರನೇ ಮಕ್ಕಳು ಎಷ್ಟು ವರ್ಷ ಓದಬೇಕು. ಹೊಸ ಹೊಸ ಲೇಖಕರ ವ್ಯಕ್ತಿಗಳ ಪರಿಚಯವಾಗಬೇಕಿದೆ. ರೋಹಿತ್ ಚಕ್ರತಿರ್ಥ ಸ್ಪಷ್ಟವಾಗಿ ಹೇಳಿದ್ದಾರೆ. ನಾರಾಯಣ ಗುರುಗಳ ಪಾಠ ಕೈಬಿಟ್ಟಿಲ್ಲ. ಇದಕ್ಕೆಲ್ಲ ಅಂತಿಮವಾಗಿ ಪಠ್ಯ ಪುಸ್ತಕಗಳು ಬರುವುದೇ ಅಂತಿಮ ಉತ್ತರ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಇದನ್ನೂ ಓದಿ: ಅಕಾಲಿಕ ಮಳೆಯಿಂದ ಸೈನಿಕ ಹುಳುವಿನ ಕಾಟ: ಕೀಟ ಭಾದೆಯಿಂದ ಕಂಗಾಲಾದ ರೈತ
ಪಠ್ಯಪುಸ್ತಕ ಬರುವ ಮೊದಲೆ ರಾಜಕೀಯ ಮಾಡುತ್ತಿದ್ದಾರೆ. ಎಲೆಕ್ಷನ್ ಗಿಮಿಕ್ಗಾಗಿ ನಾರಾಯಣ ಗುರು ಪಂಥದವರನ್ನ ಒಲಿಸಿಕೊಳ್ಳುವ ಪ್ರಯತ್ನ ನಡೆದಿದೆ. ಪಠ್ಯ ವಿರೋಧದ ನಡುವೆಯೂ ರಾಜಕಾರಣ ಇದೆ. ಸಿದ್ದರಾಮಯ್ಯನವರು ಅಹಿಂದಾ ಅಂತಾ ಮಾಡ್ತಾರೆ. ವೀರಶೈವ ಲಿಂಗಾಯತರ ನಡುವೆ ಒಡಕು ಹಚ್ಚುವ ಪ್ರಯತ್ನ ಮಾಡಿದ್ದು ಯಾಕೆ? ಒಡುಕು ಹಚ್ಚಿದರೆ ಮಾತ್ರ ಆಡಳಿತಕ್ಕೆ ಬರುತ್ತೀವಿ ಅಂತಾ ವಿಕಾಸದ ಮೂಲಕ ಆಡಳಿತಕ್ಕೆ ಬರುವ ಪ್ರಕ್ರಿಯೇ ಇವರಲ್ಲಿ ಇಲ್ಲ ಎಂದರು.
ನನ್ನ ಪಠ್ಯದ ಸಮರ್ಥನೆಯನ್ನ ನಾನು ಕೊಡಲ್ಲ. ನನ್ನ ಪಾಠ ಸರ್ಪಡೆಗೆ ಬೇರೆಯವರು ಸಮರ್ಥನೆ ಹೇಳಬಹದು. ಕೆ ಬಿ ಹೆಡಗೆವಾರ್ ಪಾಠ ಸೇರಿಸಿರುವುದು ಸರಿ ಇದೆ. ಲಂಕೇಶ್ ಒಬ್ಬರೇ ಲೇಖಕರಾ ಬೇರೆ ಲೇಖಕರು ಇಲ್ವಾ? ಎಂದು ಸೂಲಿಬೆಲೆ ಮಾತನಾಡಿದರು.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:00 am, Tue, 24 May 22