AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋಸ ಮಾಡೋಕ್ಕೆ ತೂಕದ ಅಡ್ಜೆಸ್ಟ್​​ಮೆಂಟ್! 7 ಅಂಗಡಿಗಳಿಗೆ ನೋಟಿಸ್, ಮೂವರು ಅರೆಸ್ಟ್

ರಾಜಗೋಪಾಲನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಜನರನ್ನು ಮೋಸ ಮಾಡುವ ಅಂಗಡಿಗಳ ಅಸಲಿ ಸತ್ಯ ಬಯಲು ಮಾಡಿದ್ದಾರೆ. ಮಾಂಸ, ತರಾಕಾರಿ ಸೇರಿದಂತೆ ಹಲವು ಅಂಗಡಿಗಳಲ್ಲಿ ತೂಕದ ಯಂತ್ರದ ಮುಖಾಂತರ ಟೆಕ್ನಾಲಜಿ ಬಳಸಿಕೊಂಡು ಸಾರ್ವಜನಿಕರಿಗೆ ವಂಚನೆ ಮಾಡಲಾಗುತ್ತಿತ್ತು

ಮೋಸ ಮಾಡೋಕ್ಕೆ ತೂಕದ ಅಡ್ಜೆಸ್ಟ್​​ಮೆಂಟ್! 7 ಅಂಗಡಿಗಳಿಗೆ ನೋಟಿಸ್, ಮೂವರು ಅರೆಸ್ಟ್
ತೂಕದ ಯಂತ್ರ ಬಳಸಿ ಜನರಿಗೆ ಮೋಸ
TV9 Web
| Updated By: ಸಾಧು ಶ್ರೀನಾಥ್​|

Updated on:Sep 01, 2021 | 9:34 AM

Share

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗೆ ಹೈಟೆಕ್ ವಂಚನೆ ಎಂಟ್ರಿ ಕೊಟ್ಟಿದ್ದು ಕಣ್ಣಿಗೆ ಕಾಣುವಂತೆ ನಡೆದರೂ ಜನರು ಇದರಿಂದ ಮೋಸ ಹೋಗುತ್ತಿದ್ದಾರೆ. ತೂಕದ ಯಂತ್ರಕ್ಕೆ ಟೆಕ್ನಾಲಜಿ ಬಳಸಿಕೊಂಡು ಸಾರ್ವಜನಿಕರಿಗೆ ಮೋಸ ಮಾಡಲು ಹೊರಟಿದ್ದ ಹಲವು ಅಂಗಡಿಗಳ ಮಾಲೀಕರಿಗೆ ಪೊಲೀಸರು ನೋಟೀಸ್ ನೀಡಿದ್ದಾರೆ. ಹಾಗೂ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ರಾಜಗೋಪಾಲನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಜನರನ್ನು ಮೋಸ ಮಾಡುವ ಅಂಗಡಿಗಳ ಅಸಲಿ ಸತ್ಯ ಬಯಲು ಮಾಡಿದ್ದಾರೆ. ಮಾಂಸ, ತರಾಕಾರಿ ಸೇರಿದಂತೆ ಹಲವು ಅಂಗಡಿಗಳಲ್ಲಿ ತೂಕದ ಯಂತ್ರದ ಮುಖಾಂತರ ಟೆಕ್ನಾಲಜಿ ಬಳಸಿಕೊಂಡು ಸಾರ್ವಜನಿಕರಿಗೆ ವಂಚನೆ ಮಾಡಲಾಗುತ್ತಿತ್ತು. ಗುಜುರಿ ವ್ಯಾಪಾರಿ ನೀಡಿದ ಮಾಹಿತಿ ಆಧರಿಸಿ ತೆರಳಿದ್ದ ಅಧಿಕಾರಿಗಳು, ಪೊಲೀಸರು ಸತ್ಯ ಬಯಲು ಮಾಡಿದ್ದಾರೆ.

ಈ ಅಂಗಡಿಗಳಲ್ಲಿ ಖರೀದಿ ಮಾಡುವುದೇ ಒಂದು ತೂಕದ ಲೆಕ್ಕ, ತೋರಿಸುವುದೇ ಮತ್ತೊಂದು ಲೆಕ್ಕ. ಕಡಿಮೆ ತೂಕ ಹಾಕಿ ಹೆಚ್ಚಿನ ಹಣ ಪಡೆದು ಗ್ರಾಹಕರಿಗೆ ಅಂಗಡಿಗಳು ಮೋಸ ಮಾಡುತ್ತಿದ್ದವು. ಇಷ್ಟ ಬಂದಷ್ಟು ತೂಕ ಏರಿಕೆ ಮಾಡಿ ಅಸಲಿ ತೂಕವನ್ನೇ ಬದಲಾಯಿಸುತ್ತಿದ್ದರು. ಆ ಬಳಿಕ ರಾಜಗೋಪಾಲನಗರ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿತ್ತು. ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಈ ರೀತಿ ವಂಚಿಸುತ್ತಿದ್ದ ಒಂದಲ್ಲ, ಎರಡಲ್ಲ ಬರೊಬ್ಬರಿ ಎಂಟಕ್ಕೂ ಅಧಿಕ ಅಂಗಡಿಯಗಳು ಪತ್ತೆಯಾದ್ವು. ಸದ್ಯ ಏಳು ಅಂಗಡಿಗಳ ಮಾಲೀಕರಿಗೆ ಪೊಲೀಸರು ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ.

ಯಂತ್ರದ ಮೂಲ ಹುಡುಕಿದ ಪೊಲೀಸರಿಗೆ ಸಿಕ್ಕಿ ಬಿದ್ದ ಮೂವರು ತೂಕವನ್ನೇ ಅದಲು ಬದಲು ಮಾಡುವ ಕೃತ್ಯ ಎಸಗಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ರವೀಂದ್ರ, ರಾಘವೇಂದ್ರ, ನಾಗೇಶ್ ನಾಯಕ್ ಬಂಧಿತರು. ಇವರು ತೂಕದ ಯಂತ್ರಗಳನ್ನು ಮಾರಾಟ ಮಾಡುತಿದ್ದ ಆರೋಪಿಗಳು. ಹಾಗೂ ಅನುಮತಿ ಇಲ್ಲದೇ ಯಂತ್ರಗಳ ರಿಪೇರಿ ಮಾಡುತ್ತಿದ್ದರು. ಇದೇ ವೇಳೆ ಟೆಕ್ನಾಲಜಿ ಬಳಸಿ ವಂಚನೆಯ ತಂತ್ರ ಮಾಡುತ್ತಿದ್ದರು. ಹೆಚ್ಚಿನ ಹಣ ಪಡೆದು ಯಂತ್ರ ರಿಪೇರಿ, ಮಾರಾಟ ಮಾಡುತ್ತಿದ್ದರು. ಅಂಗಡಿ ಮಾಲೀಕರಿಗೆ ಬೇಕಾದಂತೆ 5 ಕೆಜಿ ವಸ್ತು 10 ಕೆಜಿ ತೋರಿಸುವಂತೆ ಅಡ್ಜೆಸ್ಟ್ ಮಾಡುತ್ತಿದ್ದರು. ಎಷ್ಟು ಕೆಜಿ ತೂಕಬೇಕೆಂದು ನೋಡಿಕೊಂಡು ಮಾಲೀಕರು ಅಡ್ಜೆಸ್ಟ್ ಮಾಡಿಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದರು. ಸದ್ಯ ರಾಜಗೋಪಾಲ ನಗರ ಪೊಲೀಸರ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ.

ಇದನ್ನೂ ಓದಿ: ಕಿನ್ನಾಳ ಕಲೆಗೆ ರಾಷ್ಟ್ರಮಟ್ಟದ ಗೌರವ; ಅಂಚೆ ಕಚೇರಿಯ ಲಕೋಟೆಗಳಲ್ಲಿ ಮುದ್ರಿತವಾಗಲಿದೆ ಪಾರಂಪರಿಕ ಕಲೆ

Published On - 8:42 am, Wed, 1 September 21