Thyagaraja Aradhana 2022: ಬೆಂಗಳೂರಿನಲ್ಲಿ ತ್ಯಾಗರಾಜ ಸ್ವಾಮಿ ಆರಾಧನಾ ಮಹೋತ್ಸವ ರದ್ದು
ಕರ್ನಾಟಕ ಸಂಗೀತ ಪ್ರಿಯರು ಆಸಕ್ತಿಯಿಂದ ಎದುರು ನೋಡುತ್ತಿದ್ದ ಸಂಗೀತ ಕಾರ್ಯಕ್ರಮ ನಡೆಯುವುದಿಲ್ಲ ಎನ್ನುವುದು ಕಲಾಪ್ರಿಯರಲ್ಲಿ ನಿರಾಸೆ ಉಂಟು ಮಾಡಿದೆ
ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊರೊನಾ ನೆರಳು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ರದ್ದಾಗುತ್ತಿವೆ. ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ ಪ್ರತಿವರ್ಷ ನಡೆಯುತ್ತಿದ್ದ ತ್ಯಾಗರಾಜ ಆರಾಧನಾ ಮಹೋತ್ಸವವನ್ನು ಈ ವರ್ಷವೂ ರದ್ದುಪಡಿಸಲಾಗಿದೆ. ಕರ್ನಾಟಕ ಸಂಗೀತ ಪ್ರಿಯರು ಆಸಕ್ತಿಯಿಂದ ಎದುರು ನೋಡುತ್ತಿದ್ದ ಸಂಗೀತ ಕಾರ್ಯಕ್ರಮ ನಡೆಯುವುದಿಲ್ಲ ಎನ್ನುವುದು ಕಲಾಪ್ರಿಯರಲ್ಲಿ ನಿರಾಸೆ ಉಂಟು ಮಾಡಿದೆ.
ಕೊವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ಕಾರಣ ಹಾಗೂ ಸರ್ಕಾರ ವಿಧಿಸಿರುವ ನಿರ್ಬಂಧಗಳಿಂದಾಗಿ 175ನೇ ವಾರ್ಷಿಕ ತ್ಯಾಗರಾಜರ ಆರಾಧನಾ ಮಹೋತ್ಸವ ಹಾಗೂ ಸಂಗೀತೋತ್ಸವವನ್ನು ರದ್ದುಗೊಳಿಸಲಾಗಿದೆ ಎಂದು ಸದ್ಗುರು ಶ್ರೀ ತ್ಯಾಗಬ್ರಹ್ಮ ಆರಾಧನಾ ಕೈಂಕರ್ಯ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ರಾಧಾಕೃಷ್ಣ ಜಿ.ಶೇಷಪ್ಪ ತಿಳಿಸಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯ ಶೃಂಗೇರಿ ಶಂಕರ ಮಠದಲ್ಲಿ ಟ್ರಸ್ಟ್‌ನ ಆಶ್ರಯದಲ್ಲಿ ಜನವರಿ 16ರಿಂದ 22ರವರೆಗೆ ತ್ಯಾಗರಾಜರ ಆರಾಧನಾ ಮಹೋತ್ಸವ ಆಯೋಜಿಸಲಾಗಿತ್ತು.
ಕೊರೊನಾ ಹಿನ್ನೆಲೆ ಕೊಪ್ಪಳದ ಗವಿಮಠ ಜಾತ್ರೆ ರದ್ದು ಕೊರೊನಾ ಹಿನ್ನೆಲೆ ಕೊಪ್ಪಳದ ಗವಿಮಠ ಜಾತ್ರೆ ರದ್ದು ಮಾಡಲಾಗಿದೆ. ದಕ್ಷಿಣ ಭಾರತದ ಮಹಾಕುಂಭ ಮೇಳ ಎಂದು ಖ್ಯಾತಿ ಪಡೆದ ಕೊಪ್ಪಳದ ಗವಿಮಠ ಜಾತ್ರೆಯನ್ನು ಕೊರೊನಾ ಹೆಚ್ಚಳ ಹಾಗೂ ಸರ್ಕಾರದ ನಿಯಮಾವಳಿಗಳ ಹಿನ್ನೆಲೆ ರದ್ದುಗೊಳಿಸಿ ಆದೇಶಿಸಲಾಗಿದೆ. ಸಾಂಪ್ರದಾಯಿಕ ವಿಧಿ ವಿಧಾನಗಳು ಮಾತ್ರ ನಡೆಯುತ್ತದೆ ಎಂದು ಗವಿಮಠದ ಆಡಳಿತ ಮಂಡಳಿಯಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.
ಇದನ್ನೂ ಓದಿ: Kanakadasa Jayanti 2021: ಕನಕದಾಸ ಜಯಂತಿಯ ಇತಿಹಾಸ ಮತ್ತು ಮಹತ್ವ ಏನು ಗೊತ್ತಾ? ಇದನ್ನೂ ಓದಿ: Coronavirus: ಬೆಂಗಳೂರು ಅಪಾರ್ಟ್ಮೆಂಟ್ ನಿವಾಸಿಗಳಿಗೆ ಕೊರೊನಾ ಮಾರ್ಗಸೂಚಿ ಬಿಡುಗಡೆ