ಇಂದು ನಾಡಿನೆಲ್ಲೆಡೆ ರಾಮ ನವಮಿ ಹಬ್ಬದ ಸಂಭ್ರಮ; ದೇವರಿಗೆ ವಿಶೇಷ ಪೂಜೆ

| Updated By: ಆಯೇಷಾ ಬಾನು

Updated on: Apr 10, 2022 | 9:33 AM

2 ಗಂಟೆಯ ನಂತರ ರಥೋತ್ಸವ ನಡೆಯುತ್ತದೆ. ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಇನ್ನು ದೇವಸ್ಥಾನದ ಸುತ್ತಾ ಹೂವಿನಿಂದ ವಿಶೇಷ ಅಲಂಕಾರ ಮಾಡಲಾಗಿದೆ.

ಇಂದು ನಾಡಿನೆಲ್ಲೆಡೆ ರಾಮ ನವಮಿ ಹಬ್ಬದ ಸಂಭ್ರಮ; ದೇವರಿಗೆ ವಿಶೇಷ ಪೂಜೆ
ರಾಮ ನವಮಿ ಹಬ್ಬದ ಹಿನ್ನೆಲೆ ದೇವರಿಗೆ ವಿಶೇಷ ಪೂಜೆ
Follow us on

ಬೆಂಗಳೂರು: ಇಂದು ನಾಡಿನೆಲ್ಲೆಡೆ ರಾಮ ನವಮಿ (Rama Navami) ಹಬ್ಬದ ಸಂಭ್ರಮ ಜೋರಾಗಿದೆ. ಸಿಲಿಕಾನ್ ಸಿಟಿಯ ಗಾಳಿ ಆಂಜನೇಯ ದೇವಸ್ಥಾನದಲ್ಲಿ (Temple) ಹಬ್ಬದ ವಾತಾವರಣ ಕಳೆಕಟ್ಟಿದೆ. ನಿನ್ನೆ ರಾತ್ರಿಯಿಂದಲೇ ಪೂಜೆ ಆರಂಭವಾಗಿದ್ದು, ಇಂದು ಬೆಳ್ಳಗ್ಗೆ ಆರು ಗಂಟೆಯಿಂದಲೇ ಮಾರುತಿಗೆ ವಿಶೇಷ ಪೂಜೆ ನಡೆಯುತ್ತಿದೆ. ಪೂಜೆಯ ನಂತರ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. 9 ಗಂಟೆಯ ನಂತರ ಆಂಜನೇಯನಿಗೆ ವಿಶೇಷ ಅಭಿಷೇಕ ನಡೆಯುತ್ತದೆ. ಬರುವಂತಹ ಭಕ್ತರಿಗೆ ಪಾನಕ, ಮಜ್ಜಿಗೆ ಹಾಗೂ ಪ್ರಸಾಧ ವಿತರಣೆ ಮಾಡಲಾಗುತ್ತದೆ.

2 ಗಂಟೆಯ ನಂತರ ರಥೋತ್ಸವ ನಡೆಯುತ್ತದೆ. ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಇನ್ನು ದೇವಸ್ಥಾನದ ಸುತ್ತಾ ಹೂವಿನಿಂದ ವಿಶೇಷ ಅಲಂಕಾರ ಮಾಡಲಾಗಿದೆ.

ಇನ್ನು ರಾಜಾಜಿನಗರದ ರಾಮ ಮಂದಿರ ಮುಂದೆ ರಾಮ, ಆಂಜನೇಯ, ಸೀತೆ ಮೂರ್ತಿಗೆ ವಿಶೇಷ ಪೂಜೆ ಮಾಡಿದ್ದಾರೆ. ಈಗಾಗಲೇ ದೇವಸ್ಥಾನದಲ್ಲಿ ಪೂಜೆ ಕಾರ್ಯ ನೆರವೇರಿದ್ದು, ಹೂಗಳಿಂದ ರಾಮಮಂದಿರ ಅಲಂಕೃತಗೊಂಡಿದೆ. ಮುಂಜಾನೆ 4.30ರಿಂದಲೇ ಪೂಜಾ ಕೈಕರ್ಯ ಆರಂಭವಾಗಿತ್ತು. ಅಭಿಷೇಕ, ಅಲಂಕಾರ, ಮಹಾ ಮಂಗಳಾರತಿ ನೆರವೇರಿಸಲಾಗಿದೆ. ಬೆಳಗ್ಗೆ 9 ಗಂಟೆಗೆ ರಥೋತ್ಸವ ಆರಂಭವಾಗುತ್ತದೆ. ಬೆಳಗ್ಗೆ 9 ರಿಂದ ಬೆಳಗ್ಗೆ 10ರವರೆಗೆ ರಥೋತ್ಸವ ಇರಲಿದೆ. ರಥೋತ್ಸವಕ್ಕೂ ಪೂಜೆ ಕೈಂಕರ್ಯ ನರೆವೇರಿಸಲಾಗುತ್ತಿದೆ. ಹೂಗಳ ಅಲಂಕಾರದಿಂದ ರಥ ಸಿಂಗಾರಗೊಂಡಿದೆ.

ರಥೋತ್ಸವ ಬಳಿಕ ಮಜ್ಜಿಗೆ, ಪಾನಕ, ಕೋಸಂಬರಿ ವಿತರಣೆ ಮಾಡಲಾಗುತ್ತದೆ. ಜೊತೆಗೆ ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗುತ್ತದೆ. ಭಕ್ತಾದಿಗಳಿಗೆ ಲಡ್ಡು ಹಾಗೂ ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಲಾಗಿದ್ದು, ರಾತ್ರಿ 9 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಗಾಳಿ ಆಂಜನೇಯನಿಗೆ ಪೂಜೆ ಮಾಡಲಾಗಿದೆ

ಇದನ್ನೂ ಓದಿ

ದೇಶಕ್ಕೆ 100 ಜನ ಮೋದಿ ಬಂದರೂ ಯಾರನ್ನು ದೇಶ ಬಿಡಿಸಲು ಸಾಧ್ಯವಿಲ್ಲ; ಎಲ್ಲರೂ ಸಮಾನವಾಗಿ ಬದುಕುವ ಹಕ್ಕಿದೆ -ಗುಬ್ಬಿ ಶಾಸಕ ಶ್ರೀನಿವಾಸ್

ಗೋಕರ್ಣದಲ್ಲಿ ನಡೆಯಿತು ಆಶ್ಚರ್ಯಕರ ಘಟನೆ ? ಇಲ್ಲಿ ಬೆಳೆದು ನಿಂತ ರುದ್ರಾಕ್ಷಿ ಮರ

Published On - 9:20 am, Sun, 10 April 22