AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಥೋತ್ಸವದ ವೇಳೆಯೇ ಕಳಚಿ ಬಿದ್ದ ಕಳಶ- ಪ್ರಾಣದ ಹಂಗು ತೊರೆದು ಕಳಶವನ್ನು ಕಾಪಾಡಿದ ಯುವಕನಿಗೆ ಸನ್ಮಾನ!

ಇದೊಂದು ಆಕಸ್ಮಿಕ ಘಟನೆಯಾಗಿದೆ ಎಂದು ಹಂಪಿ ಶ್ರೀವಿರೂಪಾಕ್ಷೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಾಥಶರ್ಮ ತಿಳಿಸಿದರು. ಆದರೂ ರಥ ಎಳೆಯುವ ವೇಳೆ ಕಳಸ ಕೆಳಗೆ ಬಿದ್ರೆ ಅದೊಂದು ಅಪಶಕುನ ಎನ್ನುವುದು ಭಕ್ತರ ಆತಂಕಕ್ಕೆ ಕಾರಣವಾಗಿದೆ.

ರಥೋತ್ಸವದ ವೇಳೆಯೇ ಕಳಚಿ ಬಿದ್ದ ಕಳಶ- ಪ್ರಾಣದ ಹಂಗು ತೊರೆದು ಕಳಶವನ್ನು ಕಾಪಾಡಿದ ಯುವಕನಿಗೆ ಸನ್ಮಾನ!
ರಥೋತ್ಸವ ವೇಳೆ ಕಳಚಿ ಬಿದ್ದ ಕಳಶ- ಪ್ರಾಣದ ಹಂಗು ತೊರೆದು ಕಳಶವನ್ನು ಕಾಪಾಡಿದ ಯುವಕನಿಗೆ ಸನ್ಮಾನ!
TV9 Web
| Edited By: |

Updated on:Apr 04, 2022 | 9:12 PM

Share

ವಿಜಯನಗರ: ನೂತನ ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣದಲ್ಲಿ ನಿನ್ನೆ ಜರುಗಿದ ಶ್ರೀ ಸಣ್ಣಕ್ಕಿ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಸಂದರ್ಭದಲ್ಲಿ ಕಳಶ ಕಾಪಾಡಿದ ಯುವಕನಿಗೆ ಅಭಿನಂದಿಸಿ ಸನ್ಮಾನಿಸಲಾಯಿತು. ಹೊಸಪೇಟೆ ನಗರದ ವಡಕರಾಯ ದೇವಸ್ಥಾನ ಪ್ರದೇಶದ ನಿವಾಸಿಯಾದ ಸಂಗಪ್ಪ ವಡಕರಾಯ ಅವರ ಪುತ್ರ ಸಂಜು ಎಂಬ ಯುವಕ ಪ್ರಾಣದ ಹಂಗು ತೊರೆದು ನಿನ್ನೆ ರಥೋತ್ಸವ ಸಂಪನ್ನ ಆಗುವವರೆಗೂ ರಥವನ್ನೇರಿ ಕಳಚಿದ ಕಳಶವನ್ನು‌ ಹಿಡಿದುಕೊಂಡೇ ಕಳಶ ಕಾಪಾಡಿದ್ದ. ಹೀಗಾಗಿ ಜೀವದ ಹಂಗು ತೊರೆದು ಕಳಶ ಕಾಪಾಡಿದ ಯುವಕನಿಗೆ ಇಂದು ಸಮಾಜದ ಮುಖಂಡರು, ಭಕ್ತರು ಸನ್ಮಾನ ಮಾಡಿ ಯುವಕನ ಧೈರ್ಯವನ್ನ ಕೊಂಡಾಡಿದರು.

ಘಟನೆ ಏನು: ಹೊಸಪೇಟೆಯ ಸಣ್ಣಕ್ಕಿ ವೀರಭದ್ರೇಶ್ವರ ರಥೋತ್ಸವದ ವೇಳೆ ಅವಘಡವೊಂದು ಸಂಭವಿಸಿತ್ತು. ನಿನ್ನೆ ಸಂಜೆ ಜರುಗಿದ ರಥೋತ್ಸವ ವೇಳೆ ಹೊಸ ತೇರಿನ ಮೇಲೆ ಅಳವಡಿಸಿದ ಕಳಸ ಕಳಚಿ ಬಿದ್ದಿರುವುದು ಭಕ್ತರ ಆತಂಕಕ್ಕೆ ಕಾರಣವಾಗಿತ್ತು. ಪ್ರತಿ ವರ್ಷದಂತೆ ಯುಗಾದಿ ಪಾಡ್ಯದಂದು ಜರುಗುವ ಹೊಸಪೇಟೆ ಪಟ್ಟಣದಲ್ಲಿನ ಸಣ್ಣಕ್ಕಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವವು ಕೊವಿಡ್ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ನಡೆದಿರಲಿಲ್ಲ.‌ ಆದ್ರೆ ಈ ವರ್ಷ ಹೊಸ ತೇರಿನಲ್ಲಿ ರಥೋತ್ಸವ ಜರುಗಿದ ವೇಳೆ ಸಾವಿರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾಗಿದ್ದರು. ಆದರೆ ರಥ ಎಳೆಯುವ ವೇಳೆ ತೇರಿನ ಮೇಲಿದ್ದ ಕಳಶ ಕಳಚಿ ಬಿದ್ದಿತ್ತು.

ಸಾವಿರಾರು ಭಕ್ತರು ರಥ ಎಳೆಯುವ ವೇಳೆ ೫೦ ಮೀಟರ್ ದೂರ ರಥೋತ್ಸವ ಸಾಗುತ್ತಿದ್ದಂತೆ ತೇರಿನ ಮೇಲಿದ್ದ ಕಳಸ ಕಳಚಿ ಬಿದ್ದಿತ್ತು. ಈ ವೇಳೆ ರಥದಲ್ಲಿದ್ದ ಕೆಲ ಯುವಕರು ರಥದ ಮೇಲೆ ಹತ್ತಿ ಕಳಶ ಸರಿಪಡಿಸಿ‌ ಮರಳಿ ರಥವನ್ನ ಎಳೆದಿದ್ದರು.

ರಥೋತ್ಸವಕ್ಕೂ ಮುನ್ನ ತೇರಿನ ಕಳಸ ಕಟ್ಟುವವರ ನಿರ್ಲಕ್ಷ್ಯದಿಂದ ಅಚಾತುರ್ಯ ಸಂಭವಿಸಿದೆ ಎಂದು ದೇವಾಲಯದ ಸಮಿತಿ ಸ್ಪಷ್ಟನೆ ನೀಡಿತು. ಅಲ್ಲದೇ ಭಕ್ತರು ಯಾವುದೇ ಆತಂಕ ಪಡುವ ಅವಶ್ಯಕತೆಯಿಲ್ಲ. ಇದೊಂದು ಆಕಸ್ಮಿಕ ಘಟನೆಯಾಗಿದೆ ಎಂದು ಹಂಪಿ ಶ್ರೀವಿರೂಪಾಕ್ಷೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಾಥಶರ್ಮ ತಿಳಿಸಿದರು. ಆದರೂ ರಥ ಎಳೆಯುವ ವೇಳೆ ಕಳಸ ಕೆಳಗೆ ಬಿದ್ರೆ ಅದೊಂದು ಅಪಶಕುನ ಎನ್ನುವುದು ಭಕ್ತರ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಬೇಸಿಗೆ ಶುರುವಾಗುತ್ತಿದ್ದಂತೆ ರಾಜ್ಯದ ಜನರಿಗೆ ಬಿಗ್ ಶಾಕ್; ವಿದ್ಯುತ್ ದರ ಏರಿಕೆಗೆ ಮುಂದಾದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ

ಕಾಂಗ್ರೆಸ್ ತೊರೆದು ಕಳೆದ ವರ್ಷ ಟಿಎಂಸಿ ಸೇರಿದ್ದ ಅಶೋಕ್ ತಂವರ್ ಈಗ ಎಎಪಿಗೆ ಸೇರಲು ಸಿದ್ಧತೆ

Published On - 6:37 pm, Mon, 4 April 22

Follow Us
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್