ಬೆಂಗಳೂರು: ಟಿವಿ9 (Tv9 Kannada) ವತಿಯಿಂದ ನಡೆಯುತ್ತಿರುವ 12ನೇ ಆವೃತ್ತಿಯ ಅತಿದೊಡ್ಡ ರಿಯಲ್ ಎಸ್ಟೇಟ್ ಎಕ್ಸ್ಪೋ (Real Estate Expo) ಇಂದು (ಮೇ 28) ಎರಡನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆಯಿಂದ ಆರಂಭವಾಗಿರುವ ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್ಪೋಗೆ ಸ್ಯಾಂಡಲ್ವುಡ್ ನಟ, ನಿರ್ದೇಶಕ ರಿಷಭ್ ಶೆಟ್ಟಿ ಚಾಲನೆ ನೀಡಿದ್ದಾರೆ. ಎಕ್ಸ್ಪೋದಲ್ಲಿ ಪ್ರತಿಷ್ಠಿತ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಭಾಗಿಯಾಗಿದ್ದಾರೆ. ಪ್ರತಿಷ್ಠಿತ ಬ್ಯಾಂಕ್ಗಳಿಂದ ಸುಲಭ ಕಂತುಗಳಲ್ಲಿ ಸಾಲ ಸೌಲಭ್ಯದ ವ್ಯವಸ್ಥೆಯಿದೆ. ಜೊತೆಗೆ ರಿಯಲ್ ಎಸ್ಟೇಟ್ ಎಕ್ಸ್ಪೋಗೆ ಬಂದವರು ಚಿನ್ನ ಗೆಲ್ಲುವ ಅವಕಾಶ ಕೂಡಾ ಇದೆ. ಮಾತ್ರವಲ್ಲದೆ, ಲಕ್ಕಿ ಡಿಪ್ನಲ್ಲಿ ಆಯ್ಕೆಯಾದವರಿಗೆ ಗೋಲ್ಡ್ ಕಾಯಿನ್ನ ಉಡುಗೊರೆಯಾಗಿ ನೀಡಲಾಗುತ್ತದೆ.
ಬೆಂಗಳೂರಿನ ನಾಯಂಡಹಳ್ಳಿಯ ನಂದಿ ಲಿಂಕ್ಸ್ ಗ್ರೌಂಡ್ನಲ್ಲಿ ನಡೆಯುತ್ತಿರುವ ರಿಯಲ್ ಎಸ್ಟೇಟ್ ಎಕ್ಸ್ಪೋದಲ್ಲಿ ಹಲವು ಪ್ರತಿಷ್ಠಿತ ರಿಯಲ್ ಎಸ್ಟೇಟ್ ಕಂಪನಿಗಳು ಭಾಗಿಯಾಗಿವೆ. ನಿಮ್ಮ ಕನಸಿನ ಮನೆ ಕಟ್ಟಲು ರಿಯಲ್ ಎಸ್ಟೇಟ್ ಎಕ್ಸ್ಪೋ ಒಂದು ಸುವರ್ಣ ಅವಕಾಶ. ಎಕ್ಸ್ಪೋಗೆ ಬರುವ ಜನರಿಗೆ ಉಚಿತ ಪ್ರವೇಶ. ಹಾಗೇ ಕಾರ್ ಪಾರ್ಕಿಂಗ್ಗೂ ವ್ಯವಸ್ಥೆ ಮಾಡಲಾಗಿದೆ.
ನೂರಾರು ಸಂಖ್ಯೆಯಲ್ಲಿ ಗ್ರಾಹಕರು ಆಗಮನ:
ಒಟ್ಟು ಮೂರು ದಿನಗಳ ಕಾಲ ಎಕ್ಸ್ಪೋ ನಡೆಯುತ್ತದೆ. ನಿನ್ನೆಯಿಂದ ಆರಂಭವಾಗಿರುವ ಎಕ್ಸ್ಪೋ ನಾಳೆಗೆ ಮುಗಿಯಲಿದೆ. ಸದ್ಯ ನೂರಾರು ಸಂಖ್ಯೆಯಲ್ಲಿ ಜನರು ಎಕ್ಸ್ಪೋ ಭೇಟಿ ನೀಡುತ್ತಿದ್ದಾರೆ. ಸ್ಟಾಲ್ಗಳಲ್ಲಿ ಕುಳಿತು ಗ್ರಾಹಕರು ಸೈಟ್ ಮನೆಗೆ ಸಂಬಂಧಿಸಿದ ವಿವರಗಳನ್ನು ಪಡೆಯುತ್ತಿದ್ದಾರೆ. ಇನ್ನು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಭೇಟಿ ನೀಡಿದರು. ಭೇಟಿ ನೀಡಿ ಸೈಟ್ಗಳ ಬಗ್ಗೆ ಮಾಹಿತಿ ಪಡೆದರು.
ಇದನ್ನೂ ಓದಿ: ಮೈಸೂರಿನಲ್ಲಿ ಶಾಲೆಗೆ ಹೋಗದೆ ಈಜಲು ಕೆರೆಗೆ ಇಳಿದಿದ್ದ ಬಾಲಕ ಸಾವು; ಶಿವಮೊಗ್ಗದಲ್ಲಿ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಸಾವು
ಲಕ್ಕಿ ಡಿಪ್ ಯಾರಿಗೆ?
ಡಿಸಿಪಿ ಸಂಜೀವ್ ಪಾಟೀಲ್ ಲಕ್ಕಿ ಡಿಪ್ ಘೋಷಣೆ ಮಾಡಿದರು. ಪಾಟೀಲ್ ಎನ್ನುವ ವ್ಯಕ್ತಿ ಗೋಲ್ಡ್ ಕಾಯಿನ್ ಪಡೆದಿದ್ದಾರೆ ಎಂದು ತಿಳಿಸಿದ ಸಂಜೀವ್ ಪಾಟೀಲ್, ಟಿವಿ9 ಎಕ್ಸ್ಪೋ ಮೂಲಕ ಜನರಿಗೆ ಬೇಕಾಗುವ ಮನೆ, ಫ್ಲಾಟ್, ಸೈಟ್ಗಳನ್ನ ಖರೀದಿಸಬಹುದು. ಹೀಗಾಗಿ ಜನರು ಬಂದು ಎಕ್ಸ್ಪೋ ವಿಸಿಟ್ ಮಾಡಬೇಕು ಎಂದು ಹೇಳಿದರು.
Published On - 3:26 pm, Sat, 28 May 22