ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ
ಕನ್ನಡ & ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿರುವ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ಸಾವರ್ಕರ್ ಮತ್ತು ತಿಲಕರು ಮೊದಲ ಸ್ವಾತಂತ್ರ್ಯ ಹೋರಾಟಗಾರರು. ಅವರಿಗೆ ಸ್ವಾತಂತ್ರ್ಯ ಪಡೆಯಬೇಕೆಂಬ ಮೊದಲ ಆಲೋಚನೆ ಬಂದಿತ್ತು. ಇವರ ಆಲೋಚನೆಗೆ ಲಾಹೋರ್ನಲ್ಲಿ ವೇಗ ಸಿಕ್ಕಿತು ಎಂದು ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಫ್ರೀಂಡಪಾರ್ಕ್ನಲ್ಲಿ ನಡೆಯುತ್ತಿರುವ ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನವನ್ನು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿ ಮಾತನಾಡಿದರು. ಲಾಹೋರ್ ಚಳವಳಿ ವೇಳೆ ಬ್ರಿಟಿಷರು ಲಾಠಿ ಪ್ರಹಾರ ಮಾಡಿದರು. ಲಾಲಾ ಲಜಪತ್ ರಾಯ್ ನೇತೃತ್ವದಲ್ಲಿ ಚಳವಳಿ ನಡೆದಿತ್ತು. ಇದರ ನಂತರ ಸ್ವಾತಂತ್ರ್ಯದ ಕಿಚ್ಚು ಹೆಚ್ಚಿಸಿದರು. ಗಾಂಧಿ ನೇತೃತ್ವದಲ್ಲಿ ಅನೇಕರು ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸುಲಭವಾಗಿ ಸಿಕ್ಕಿಲ್ಲ. ಬಾರ್ದೋಲಿಯಲ್ಲಿ ಪಟೇಲರು ಸತ್ಯಾಗ್ರಹದ ನೇತೃತ್ವ ವಹಿಸಿದರು. ಆಗ ನಮಗೆ ಉಳಿಗಾಲವಿಲ್ಲ ಅಂತ ಬ್ರಿಟಿಷರಿಗೆ ಮನವರಿಕೆ ಆಯ್ತು. ಚಂಪಾರಣ್ಯದಲ್ಲೂ ದುಡಿಯುವ ವರ್ಗ ಬ್ರಿಟಿಷರ ವಿರುದ್ಧ ತಿರುಗಿ ಬಿತ್ತು. ಈ ಹೋರಾಟಗಳಲ್ಲಿ ಪಾಲ್ಗೊಂಡವರಿಗೆ ನನ್ನ ಸಲಾಂ ಎಂದರು.
ಮೊಘಲರು, ಬ್ರಿಟಿಷರಿಗೆ ನಮ್ಮ ಸ್ವಾಭಿಮಾನ ಬಿಟ್ಟು ಕೊಟ್ಟಿದ್ದೆವು. ಒಂದು ಸಾವಿರ ವರ್ಷಗಳ ಕಾಲ ನಮ್ಮ ಸ್ವಾಭಿಮಾನ ಬಿಟ್ಟು ಕೊಟ್ಟಿದ್ದೆವು. ಸ್ವಾತಂತ್ರ್ಯ ಹೋರಾಟಕ್ಕೆ ಕನ್ನಡ ನಾಡಿನ ಕೊಡುಗೆ ದೊಡ್ಡದಿದೆ. ಸರ್ಕಾರ ಅನಾಮಧೇಯ ಹೋರಾಟಗಾರರ ಪುಸ್ತಕವನ್ನು ಆ.15ರಂದು ಪ್ರಕಟಿಸುತ್ತೇವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಸದ ಪಿಸಿ ಮೋಹನ್ ಮಾತನಾಡಿದ್ದು, ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಪಠ್ಯದಲ್ಲಿ ಪಾಠ ಸೇರಿಸಿ. ಕರ್ನಾಟಕದ ಮೂಲದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಎಲ್ಲರಿಗೂ ಗೊತ್ತಾಗಬೇಕಿದೆ. ಬೆಂಗಳೂರಿನ ಕೆಲ ಸ್ಥಳಗಳಿಗೆ ಬ್ರಿಟಿಷರ ಹೆಸರುಗಳಿವೆ. ಕೆಲ ಆಸ್ಪತ್ರೆಗಳಿಗೂ ಬ್ರಿಟಿಷರ ಹೆಸರುಗಳಿವೆ. ಅವು ಬದಲಿಸುವ ಕೆಲಸ ಆಗಬೇಕು ಎಂದು ಸಿಎಂಗೆ ಸಂಸದ ಪಿ.ಸಿ ಮೋಹನ್ ಒತ್ತಾಯಿಸಿದರು.
ನಮ್ಮ ದೇಶ ಜ್ಞಾನಕ್ಕೆ ಒತ್ತು ಕೊಟ್ಟು ದೇಶ: ಸಚಿವ ಬಿ.ಸಿ. ನಾಗೇಶ್
ಕೊಪ್ಪಳ: ಜಿಲ್ಲೆಯ ಕೊಪ್ಪಳ, ಗಂಗಾವತಿ, ಅಳವಂಡಿಯಲ್ಲಿ ಅಭಿಯಾನ ನಡೆದಿದ್ದು, ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅಭಿಯಾನಕ್ಕೆ ಚಾಲನೆ ನೀಡಿದರು. ಅಭಿಯಾನ ಉದ್ದೇಶಿಸಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮಾತನಾಡಿದ್ದು, ಸ್ವಾತಂತ್ರ್ಯ ಹೇಗೆ ಸಿಕ್ತು ಅನ್ನೋದು ನಾವು ಮುಂದಿನ ಪೀಳೆಗೆಗೆ ತಗೆದುಕೊಂಡು ಹೋಗಬೇಕು. ನಮ್ಮ ದೇಶ ಜ್ಞಾನಕ್ಕೆ ಒತ್ತು ಕೊಟ್ಟು ದೇಶ. ಕೆಲವರು ಈ ದೇಶದ ನೆಮ್ಮ ದಿ ಹಾಳು ಮಾಡಿದ್ರು. ಅಲೆಕ್ಸಾಂಡರ್ನಿಂದ ಶುರುವಾದ ಆಕ್ರಮಣ ಬ್ರಿಟಿಷ್ರಿಗೆ ಕೊನೆಯಾಯಿತು. ಅವರು ಯಾಕೆ ಬಂದರು ಅನ್ನೋದ ನಮಗೆ ಗೊತ್ತಿಲ್ಲ. ನಮ್ಮ ಪುಸ್ತಕಗಳು ಕೇವಲ ಸೋಲಿನ ಪಾಠ ಮಾಡಲಾಗಿದೆ. ಅಕ್ರಣಮ, ಅತ್ಯಾಚಾರ ಮಾಡೋದು ಈ ದೇಶದ ಮಣ್ಣಿಗೆ ಗೊತ್ತಿಲ್ಲ. ಇದು ಪರಕೀಯರಿಂದ ಬಂದಿದ್ದು, ಅವರು ಅಂದುಕೊಂಡ ಹಾಗೆ ಆಳ್ವಿಕೆ ಮಾಡೋಕೆ ನಮ್ಮ ದೇಶ ಬಿಡಲಿಲ್ಲ. ಗುರುಕುಲದ ಮೂಲಕ ವಿದ್ಯಾದಾನ ಮಾಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: 2000 Rupees Currency Notes: ಇಳಿಯುತ್ತಾ ಬಂತು 2000 ರೂಪಾಯಿ ಮುಖಬೆಲೆಯ ಚಲಾವಣೆ ಪ್ರಮಾಣ; ಆರ್ಬಿಐ ಏನು ಹೇಳುತ್ತದೆ?
ಸ್ವಾತಂತ್ರ ಹೋರಾಟಗಾರರ ವಿಷಯ ಪದ್ಯದಲ್ಲಿ ತರೋದಕ್ಕೆ ಹೋದ್ರೆ ಸಂವಿಧಾನದ ವಿರುದ್ದ ಅಂತಾ ಕೆಲವರು ಹೇಳುತ್ತಾರೆ. ಬ್ರಿಟಿಷರು ರಸ್ತೆ ಮಾಡಿದ್ರು, ರೇಲ್ವೆ ತಂದ್ರು ಅನ್ನೋದನ್ನ ನಮಗೆ ಹೇಳಿಕೊಟ್ಟರು. ಆದರೆ ಅವರ ವಿರುದ್ದ ಹೋರಾಡಿದವರ ಬಗ್ಗೆ ನಮಗೆ ಹೇಳಲಿಲ್ಲ. ಇತಿಹಾಸ ಗೊತ್ತಾಗಬಾರದು ಅನ್ನೋದನ್ನ ಸೃಷ್ಟಿ ಮಾಡಿದರು. ಭಾರತದ ಸೋಲಿನ ಬಗ್ಗೆ ಮಾತಾಡಿದರು. ಹೊರತು ಗೆಲುವಿನ ಬಗ್ಗೆ ಎಲ್ಲೂ ದಾಖಲಾಗಿಲ್ಲ. 1857ರಲ್ಲೇ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗುತ್ತಿತ್ತು. ಸ್ವಾತಂತ್ರ್ಯ ಹೋರಾಟಗಳ ಬಗ್ಗೆ ತಿಳಿಸೋ ಪ್ರಯತ್ನವೆ ಅಮೃತ ಭಾರತಿಗೆ ಕನ್ನಡಾರತಿ ಕಾರ್ಯಕ್ರಮ ಎಂದು ಹೇಳಿದರು.
ಆಮಂತ್ರಣ ಪತ್ರಿಕೆಯಲ್ಲಿ ಇದ್ದ ಹೆಸರು ರಾತ್ರೋರಾತ್ರಿ ಬದಲಾವಣೆ
ತುಮಕೂರು: ನಗರದಲ್ಲಿಯೂ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ ನಡೆಯುತ್ತಿದ್ದು, ಆಮಂತ್ರಣ ಪತ್ರಿಕೆಯಲ್ಲಿ ಇದ್ದ ಹೆಸರು ದಿಢೀರ್ ಬದಲಾವಣೆ ಮಾಡಲಾಗಿದೆ. ಡಾ.ಬಿ.ವಿ.ವಸಂತಕುಮಾರ್ ಬದಲು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಹೆಸರು ಸೇರ್ಪಡೆ ಮಾಡಲಾಗಿದೆ. ನಗರದ ಟೌನ್ಹಾಲ್ ಸರ್ಕಲ್ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯಕ್ರಮ ಆಯೋಜಿಸಿದೆ. ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ಉಪನ್ಯಾಸ ನೀಡಬೇಕಿತ್ತು, ಆದ್ರೆ ರಾತ್ರೋರಾತ್ರಿ ವಸಂತಕುಮಾರ್ ಹೆಸರು ದಿಢೀರ್ ಬದಲಾವಣೆ ಮಾಡಿ ಅವರ ಬದಲು ರೋಹಿತ್ ಚಕ್ರತೀರ್ಥ ಹೆಸರನ್ನ ಇಲಾಖೆ ಅಂಟಿಸಿದೆ.
ಸ್ವಾತಂತ್ರ್ಯದ ಪರಿಕಲ್ಪನೆ ಹುಟ್ಟುಹಾಕಿದ್ದೇ ವೀರಸಾವರ್ಕರ್: ಪ್ರತಾಪ್ ಸಿಂಹ
ಉಡುಪಿ: ಸ್ವಾತಂತ್ರ್ಯದ ಪರಿಕಲ್ಪನೆ ಹುಟ್ಟುಹಾಕಿದ್ದೇ ವೀರಸಾವರ್ಕರ್. ಅಹಿಂಸೆ ಉಪವಾಸದಿಂದ ದೇಶ ಸ್ವತಂತ್ರವಾಗಲು ಸಾಧ್ಯವಿಲ್ಲ. ವಿಶ್ವದ 63 ದೇಶಗಳು ಸ್ವತಂತ್ರವಾದದ್ದು ಕ್ರಾಂತಿಯಿಂದ. ಪಾಠದಲ್ಲಿ ನಮ್ಮ ಮೇಲಿನ ಆಕ್ರಮಣದ ಬಗ್ಗೆ ಮಾತ್ರ ಓದುತ್ತೇವೆ ಎಂದು ಉಡುಪಿಯಲ್ಲಿ ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಅಂಗವಾಗಿ ಸಂಸದ ಪ್ರತಾಪ್ ಸಿಂಹ ಭಾಷಣ ಮಾಡಿದರು. ನಮ್ಮ ಪಾಠಗಳಲ್ಲಿ ಡೆಲ್ಲಿ ಸುಲ್ತಾನರು ಮೊಘಲರು ಮಾತ್ರ ಇದ್ದಾರೆ. ಮೊಘಲರು ಬರುವ ಮೊದಲು ಭಾರತಕ್ಕೆ ಇತಿಹಾಸವೇ ಇಲ್ಲವೇ ಎಂದು ಪ್ರಶ್ನಿಸಿದರು. ಚೋಳರು, ಚೇರರು ಗುಪ್ತರು ರಾಷ್ಟ್ರಕೂಟರು ಕದಂಬರು, ಹೊಯ್ಸಳರು ಪೇಶ್ವೆಯನ್ನು ನಾವು ಮರೆತು ಬಿಟ್ಟೆವು. ತ್ರಿವರ್ಣ ಧ್ವಜದಲ್ಲಿ ಇಂದು ಗಾಂಧೀಜಿ ಚರಕ ಇರುತ್ತಿತ್ತು.
ತ್ರಿವರ್ಣ ಧ್ವಜದಲ್ಲಿ ಅಶೋಕ ಚಕ್ರ ಹಾಕಿಸಿದ್ದು ವೀರ ಸಾವರ್ಕರ್. ಅಶೋಕ ಚಕ್ರ ಮುಂದೊಂದು ದಿನ ಸುದರ್ಶನ ಚಕ್ರ ಆಗುತ್ತದೆ. ಅಂಡಮಾನ್ ಬರ್ಮಾ ಜೈಲಿನಲ್ಲಿ ಇದ್ದವರು ನಿಜವಾದ ಸ್ವಾತಂತ್ರ ಹೋರಾಟಗಾರರು. ಕಾಲಾಪಾನಿ ಶಿಕ್ಷೆ ಅನುಭವಿಸಿದವರು ಸ್ವಾತಂತ್ರ ಹೋರಾಟಗಾರರು, ಪುಣೆಯ ಪ್ಯಾಲೇಸ್ನಲ್ಲಿ ಇದ್ದವರು ಸ್ವತಂತ್ರ ಹೋರಾಟಗಾರರ ಆಗಲು ಸಾಧ್ಯವಿಲ್ಲ. ಕ್ಷಾತ್ರ ಗುಣ ಇಲ್ಲದಿದ್ದರೆ ಪ್ರಪಂಚದಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ಹೇಳಿದರು.
ಇನ್ನಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:11 pm, Sat, 28 May 22