ಟೊಮೆಟೊ ಬೆಳೆದ ರೈತರಿಗೆ ಶುಕ್ರದೆಸೆ, ಗ್ರಾಹಕರಿಗೆ ವಕ್ರದೆಸೆ; 200ರ ಗಡಿಯತ್ತ ಕೆಂಪು ರಾಣಿ
ಮೂರು ತಿಂಗಳಿನಿಂದ ಟೊಮೆಟೊ ಬೆಲೆ ಕಡಿಮೆಯಾಗುತ್ತೆ ಅಂತ ಜನರು ಕಾಯ್ತಾ ಇದ್ರು. ಆದ್ರೆ ಟೊಮೆಟೊ ಬೆಲೆ ಏರಿಕೆಯಾಗುತ್ತಲೇ ಇದೆ. ಕೆಜಿಗೆ 150 ರಿಂದ 160 ರೂಪಾಯಿಗೆ ತಲುಪಿದೆ.
ಬೆಂಗಳೂರು, ಜುಲೈ 31: ನಾಡಿನ ಗೃಹಿಣಿಯರಿಗೆ ಮತ್ತೆ ಟೊಮೆಟೊ ದರ(Tomato Rate Increase) ಏರಿಕೆ ಶಾಕ್ ಕೊಟ್ಟಿದೆ. ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಟೊಮೆಟೊ ಬೆಲೆಯಂತೋ 200ರ ಗಡಿಯತ್ತ ಓಡುತ್ತಿದೆ. ಇಷ್ಟು ದಿನ 100 ರ ಆಸುಪಾಸಿನಲ್ಲಿ ಇದ್ದಂತಹ ಟೊಮೆಟೊ ದರ ಇದ್ದಕ್ಕಿಂದ್ದಂತೆ 140-160 ರೂಗೆ ಜಿಗಿದಿದೆ. ಮತ್ತೆ ಕೆಲವು ಕಡೆ 200 ರೂ. ಗಡಿ ತಲುಪಿದೆ. ಟೊಮೆಟೊ ಮಾರಾಟಗಾರರಿಗೆ ಶುಕ್ರದೆಸೆ, ಗ್ರಾಹಕರಿಗೆ ವಕ್ರದೆಸೆಯಂತಾಗಿದೆ.
ಮತ್ತೆ ಗಗನ ಕುಸುಮವಾದ ಟೊಮೆಟೊ
ಟೊಮೆಟೊ ಬಿತ್ತನೆ ಕಡಿಮೆಯಾಗಿದ್ದು ದರ ಏರಿಕೆಯಾಗಿದೆ. ಮೂರು ತಿಂಗಳಿನಿಂದ ಟೊಮೆಟೊ ಬೆಲೆ ಕಡಿಮೆಯಾಗುತ್ತೆ ಅಂತ ಜನರು ಕಾಯ್ತಾ ಇದ್ರು. ಆದ್ರೆ ಟೊಮೆಟೊ ಬೆಲೆ ಏರಿಕೆಯಾಗುತ್ತಲೇ ಇದೆ. ಕೆಜಿಗೆ 150 ರಿಂದ 160 ರೂಪಾಯಿಗೆ ತಲುಪಿದೆ. ಕಳೆದ ಒಂದು ವಾರದ ಹಿಂದೆ 80-90 ರೂ ಇತ್ತು. ಬಳಿಕ 100ರ ಗಡಿ ದಾಟಿತ್ತು. ಆದ್ರೆ ಈಗ 200ರೂ ಸಮೀಪಿಸುತ್ತಿದೆ. ಪೂರೈಕೆ ಕಡಿಮೆ ಆಗಿರುವ ಹಿನ್ನಲೆ ಮತ್ತೆ ಟೊಮೆಟೊ ದರ ಏರಿಕೆಯಾಗಿದೆ. ಟೊಮೆಟೊ ದರ ಏರಿದ್ದರಿಂದ ರೈತರು ಸಂತೋಷಗೊಂಡಿದ್ದು ಗ್ರಾಹಕರು ಕಂಗಾಲಾಗಿದ್ದಾರೆ. ಬೆಂಗಳೂರಿನ ಕೆ.ಆರ್. ಮಾರ್ಕೆಟ್ನಲ್ಲಿ ಟೊಮೆಟೊಗೆ 140 ರೂಪಾಯಿ ಇದೆ.
ಇದನ್ನೂ ಓದಿ: Tomato: ಕೋಲಾರದಿಂದ ಹೊರಟು ನಾಪತ್ತೆಯಾಗಿದ್ದ ಟೊಮೆಟೊ ಲಾರಿ ಗುಜರಾತ್ನಲ್ಲಿ ಪತ್ತೆ
ಇನ್ನು ಒಂದು ತಿಂಗಳು ಇದೇ ರೀತಿಯ ಬೆಲೆ ಇರುತ್ತೆ ಎಂದು ವ್ಯಾಪಾರಸ್ಥರು ಅಭಿಪ್ರಾಯಪಟ್ಟಿದ್ದಾರೆ. ನೆರೆ ರಾಜ್ಯಗಳಲ್ಲಿ ವಿಪರೀತ ಮಳೆ ಇರುವ ಹಿನ್ನೆಲೆ ಟೊಮೆಟೊ ಬೆಳೆ ನಾಶವಾಗಿದೆ. ಹೀಗಾಗಿ ಉತ್ತರ ಭಾರತದಿಂದ ಭಾರಿ ಬೇಡಿಕೆ ಇದೆ. ಇದರ ಜೊತೆಗೆ ನಮ್ಮ ರಾಜ್ಯದಲ್ಲಿಯು ಮಳೆಯ ಆರ್ಭಟ ಜೋರಾಗಿದ್ದು ಟೊಮೆಟೊಗೆ ಎಲೆ ಕಾಯಿಲೆ ಸಹ ಬರ್ತಿದ್ಯಂತೆ. ಹೀಗಾಗಿ ಇದ್ದಂತಹ ಟೊಮೆಟೊ ಸ್ಟಾಕ್ ಕೂಡ ಖಾಲಿಯಾಗಿದ್ದು, ಇರುವ ಅಲ್ಪ ಟೊಮೆಟೊಗೆ ಹೆಚ್ಚಿನ ಹಣ ನಿಗದಿ ಮಾಡಿ ವ್ಯಾಪರಸ್ಥರು ವ್ಯಾಪಾರ ಮಾಡ್ತಿದ್ದಾರೆ. ಇನ್ನು ಒಂದು ತಿಂಗಳು ಇದೇ ಬೆಲೆ ಮುಂದುವರಿಯಲಿದ್ದು, ಸಧ್ಯ ಟೋಮಾಟೋಗೆ ಫುಲ್ ಡೊಮ್ಯಾಂಡ್ ಜಾಸ್ತಿಯಾಗಿದ್ಯಂತೆ.
ನಮ್ಮ ಬೆಂಗಳೂರಿಗೆ ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ನಾಸಿಕ್, ಆಂಧ್ರ ಟೊಮೆಟೊ ಬರ್ತಿತ್ತು. ಇದೀಗಾ ಅಲ್ಲಿಂದ ಬರುವುದು ಸಹ ಕಡಿಮೆಯಾಗಿದೆ. ಅಲ್ಲದೇ ಎರಡು ವಾರ ನಿರಂತರವಾಗಿ ಮಳೆ ಬಂದ ಹಿನ್ನಲೆ ಟೊಮೆಟೊಗೆ ಎಲೆಕಾಯಿಲೆ ಬರ್ತಿದೆ. ಮುಂದಿನ ದಿನಗಳಲ್ಲಿ ಟೋಮಾಟೋ ಬೆಲೆ 200 ರೂ ರ ಗಡಿದಾಟಿದ್ರು ದಾಟಬಹುದು ಅಂತ ವ್ಯಾಪಾರಸ್ಥರು ಹೇಳ್ತಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:21 am, Mon, 31 July 23