ನಾಪತ್ತೆಯಾದ ಬಾಂಗ್ಲಾ ಯುವತಿಯ ಮೇಲೆ ಅತ್ಯಾಚಾರ ಪ್ರಕರಣದ ಪ್ರಮುಖ 3 ಆರೋಪಿಗಳು
ಬಾಂಗ್ಲಾದೇಶದವರಾಗಿದ್ದ ಮೂವರು ಅಕ್ರಮವಾಗಿ ಬೆಂಗಳೂರಿನಲ್ಲಿ ವಾಸವಿದ್ದರು. ಆರೋಪಿಗಳ ಜೊತೆ ದಂಧೆಯಲ್ಲಿ ಭಾಗಿಯಾಗಿದ್ದ ಮೂವರು ಪರಾರಿಯಾಗಿದ್ದಾರೆ.
ಬೆಂಗಳೂರು: ನಗರದಲ್ಲಿ ಬಾಂಗ್ಲಾ ಯುವತಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಮೂವರು ಪ್ರಮುಖ ಆರೋಪಿಗಳು ನಾಪತ್ತೆಯಾಗಿದ್ದಾರೆ. ಘಟನೆ ದಿನ ಸ್ಥಳದಲ್ಲೇ ಇದ್ದು ಪ್ರಚೋದಿಸಿದ್ದ ಗಂಡ, ಹೆಂಡತಿ ಮತ್ತು ಯುವತಿಯ ಮೇಲೆ ದೌರ್ಜನ್ಯವೆಸಗಿದ್ದ ಓರ್ವ ಯುವಕ ನಾಪತ್ತೆಯಾಗಿದ್ದು, ಚೆನ್ನೈಗೆ ಪರಾರಿಯಾಗಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಬಾಂಗ್ಲಾದೇಶದವರಾಗಿದ್ದ ಮೂವರು ಅಕ್ರಮವಾಗಿ ಬೆಂಗಳೂರಿನಲ್ಲಿ ವಾಸವಿದ್ದರು. ಆರೋಪಿಗಳ ಜೊತೆ ದಂಧೆಯಲ್ಲಿ ಭಾಗಿಯಾಗಿದ್ದ ಮೂವರು ಪರಾರಿಯಾಗಿದ್ದಾರೆ.
ಸದ್ಯ ಚೆನ್ನೈನಲ್ಲಿ ತಲೆಮರೆಸಿಕೊಂಡ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು ಶೋಧಕಾರ್ಯ ನಡೆಸುತ್ತಿದ್ದಾರೆ. ಪೊಲೀಸರು ಇತರ ಆರೋಪಿಗಳ ವಿಚಾರಣೆ ನಡೆಸಿ ಕಾಣೆಯಾದವರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದು, ಸದ್ಯ ಕೋರ್ಟ್‌ಗೆ ಹೇಳಿಕೆ ದಾಖಲಿಸಲು ಸಿದ್ಧತೆ ನಡೆಸಿದ್ದಾರೆ. ಅನುಮತಿ ಸಿಕ್ಕ ಕೂಡಲೇ ಹಾಜರುಪಡಿಸಿ ಹೇಳಿಕೆ ದಾಖಲಿಸಲು ರಾಮಮೂರ್ತಿ ನಗರ ಠಾಣೆಯಲ್ಲಿ ಇನ್ನಿತರ ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.
ತಪ್ಪೊಪ್ಪಿಕೊಂಡಿದ್ದ ಆರೋಪಿಗಳು ಬಾಂಗ್ಲಾ ಯುವತಿ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು ತಮ್ಮ ತಪ್ಪನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ. ‘ತಾವೂ ಅಕ್ರಮ ನುಸುಳುಕೋರರು’ ಎಂದು ತಪ್ಪನ್ನು ಒಪ್ಪಿಕೊಂಡಿದ್ದಾರೆ. ಬಂಧಿತ ಆರು ಆರೋಪಿಗಳ ಹೇಳಿಕೆಯನ್ನು ರಾಮಮೂರ್ತಿನಗರ ಪೊಲೀಸರು ದಾಖಲಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ತಮ್ಮ ಹಿನ್ನೆಲೆ ಕುರಿತು ಇಂಚಿಂಚು ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಸರ್, ನಾವೆಲ್ಲಾ ಬಾಂಗ್ಲಾದವರು. ನಾವೂ ಯಾವುದೇ ಪಾಸ್ ಪೋರ್ಟ್ ಮತ್ತು ವೀಸಾ ಹೊಂದಿಲ್ಲ. ಯಾವುದೇ ದಾಖಲೆಗಳಿಲ್ಲದೆ ಕಾನೂನು ಬಾಹಿರವಾಗಿ ಬಾಂಗ್ಲಾದಿಂದ ಭಾರತಕ್ಕೆ ಅತಿಕ್ರಮವಾಗಿ ನುಸುಳಿದ್ದೇವೆ. ನಂತರ ಬೆಂಗಳೂರಿಗೆ ಬಂದು, ಇಲ್ಲಿ ವಿವಿಧ ಕಡೆಗಳಲ್ಲಿ ವಾಸಿಸುತ್ತಿದ್ದೇವೆ ಎಂದು ಬಂಧಿತರು ಮಾಹಿತಿ ನೀಡಿದ್ದಾರೆ. ವಿಡಿಯೋದಲ್ಲಿರುವ ಯುವತಿ ಕೂಡ ಬಾಂಗ್ಲಾದವಳು. ಆಕೆ ನಮಗೆ ಪರಿಚಿತೆ. ಆಕೆಗೂ ಹಾಗೂ ನಮಗೂ ವ್ಯವಹಾರಿಕ ವಿಚಾರದಲ್ಲಿ ಗಲಾಟೆಯಾಗಿತ್ತು. ಇದೇ ಕಾರಣಕ್ಕೆ ನಾವೂ 6 ಜನರು ಈ ಕೃತ್ಯ ಎಸಗಿದ್ದೇವೆ. ಕೃತ್ಯವನ್ನು ರಾಮಮೂರ್ತಿನಗರದ ಮನೆಯಲ್ಲಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ಮುಂದುವರೆದಿದೆ.
ಘಟನೆ ಏನು? ಬೆಂಗಳೂರಿನಲ್ಲಿ ಬಾಂಗ್ಲಾ ದೇಶದ ಯುವತಿ ಮೇಲೆ ಗ್ಯಾಂಗ್ ರೇಪ್ ನಡೆದಿತ್ತು. ಈ ಕೇಸ್ನಲ್ಲಿ ಶಾಮೀಲಾದವರೆಲ್ಲ ಬಾಂಗ್ಲಾ ದೇಶದ ಮೂಲದವರು. ಅಕ್ರಮವಾಗಿ ಭಾರತಕ್ಕೆ ಬಂದು ಬೆಂಗಳೂರಿನ ರಾಮಮೂರ್ತಿ ನಗರದ ಎನ್ಆರ್ಐ ಕಾಲೋನಿಯಲ್ಲಿ ವಾಸವಾಗಿದ್ದರು. ಇಷ್ಟು ದಿನ ಸೈಲೆಂಟಾಗಿ ವೇಶ್ಯಾವಾಟಿಕೆ ಮಾಡಿಕೊಂಡು ದುಡ್ ಮಾಡುತ್ತಿದ್ದರು. ಎಲ್ಲರೂ ಖುಷಿಯಾಗೆ ಲೈಫ್ ಎಂಜಾಯ್ ಮಾಡುತ್ತಿದ್ದರು. ಆದರೆ, ಸ್ನೇಹಿತರ ಮಧ್ಯೆ ಅದು ಏನ್ ದ್ವೇಷ ಇತ್ತೋ ಗೊತ್ತಿಲ್ಲ. ಕಳೆದ 10 ದಿನಗಳ ಹಿಂದೆ ಬಾಂಗ್ಲಾ ಮೂಲದ ಯುವತಿ ಮೇಲೆ ಯುವಕರು ಎಸಗಿದ್ದಾರೆ. ಅದು ಕೂಡ ಇಬ್ಬರು ಯುವಕರು ಯುವತಿಯ ಕೈ, ಬಾಯಿ ಗಟ್ಟಿಯಾಗಿ ಮುಚ್ಚಿಕೊಂಡಿದ್ರೆ, ಉಳಿದವರು ಅಟ್ಟಹಾಸ ಮೆರೆದಿದ್ದಾರೆ. ಎಲ್ಲವನ್ನೂ ಮೊಬೈಲ್ನಲ್ಲಿ ದೃಶ್ಯ ಸೆರೆ ಹಿಡಿದು, ವೈರಲ್ ಮಾಡಿದ್ದಾರೆ.
ಅಹಮದ್ನಗರದ 8,000 ಮಕ್ಕಳಲ್ಲಿ ಕೊವಿಡ್-19 ಸೋಂಕು, ಮಹಾರಾಷ್ಟ್ರಕ್ಕೆ ಈಗಲೇ ಕೊರನಾ ಸೋಂಕಿನ 3ನೇ ಅಲೆ ಅಪ್ಪಳಿಸಿದೆಯೇ?
(Top 3 accused in Bangladesh girl Bengaluru rape case eloped)