ಬೆಂಗಳೂರು; ಟ್ರೆಡಿಂಗ್ ಹೆಸರಿನಲ್ಲಿ 265 ಜನರಿಗೆ 97 ಕೋಟಿ ರೂಪಾಯಿ ವಂಚನೆ, ಬ್ಯಾಂಕ್ ಮ್ಯಾನೇಜರ್ ಸೇರಿ 8 ಜನರ ಬಂಧನ

| Updated By: ಆಯೇಷಾ ಬಾನು

Updated on: Oct 16, 2024 | 1:16 PM

ಟ್ರೇಡಿಂಗ್ ಹೆಸರಲ್ಲಿ ಜನರಿಗೆ ಕೋಟಿ ಕೋಟಿ ಪಂಗನಾಮ ಹಾಕಿದ್ದ ವಂಚಕರು ಪೊಲೀಸರ ಬಲೆಗೆ ಬಿದಿದ್ದಾರೆ. ಈ‌ ಜಾಲದಲ್ಲಿ ಕೈ ಜೋಡಿಸಿದ ಬ್ಯಾಂಕ್ ಮ್ಯಾನೇಜರ್ ಸೇರಿ ನಾಲ್ವರು ಬ್ಯಾಂಕ್ ಸಿಬ್ಬಂದಿ ಜೈಲು ಸೇರಿದ್ದಾರೆ. ಟ್ರೆಡಿಂಗ್ ಹೆಸರಿನಲ್ಲಿ ಬರೊಬ್ಬರಿ 265 ಜನರಿಗೆ 97 ಕೋಟಿ ರೂಪಾಯಿ ನಾಮ ಹಾಕಲಾಗಿದೆ.‌ ಈ ಸ್ಕ್ಯಾಮ್ ನಲ್ಲಿ ಖಾಸಗಿ ಬ್ಯಾಂಕ್ ಮ್ಯಾನೇಜರ್ ಶಾಮೀಲಾಗಿರುವುದು ಆತಂಕಕ್ಕೆ ಕಾರಣವಾಗಿದೆ.‌

ಬೆಂಗಳೂರು; ಟ್ರೆಡಿಂಗ್ ಹೆಸರಿನಲ್ಲಿ 265 ಜನರಿಗೆ 97 ಕೋಟಿ ರೂಪಾಯಿ ವಂಚನೆ, ಬ್ಯಾಂಕ್ ಮ್ಯಾನೇಜರ್ ಸೇರಿ 8 ಜನರ ಬಂಧನ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಅ.16: ಟ್ರೆಡಿಂಗ್ (Trading). ಸ್ವಲ್ಪ ಬುದ್ದಿ ಖರ್ಚು ಮಾಡಿ ಇನ್ವೆಸ್ಟ್ ಮಾಡಿದ್ರೆ, ಹಾಕಿದ್ದ ಹಣಕ್ಕೆ ಒಳ್ಳೆ ರಿಟರ್ನ್ ಸಿಗೋ ಮಾರ್ಗ. ಆದರೆ ಇದೆ ಟ್ರೆಡಿಂಗ್ ಹೆಸರಿನಲ್ಲಿ ಬರೊಬ್ಬರಿ 265 ಜನರಿಗೆ 97 ಕೋಟಿ ರೂಪಾಯಿ ನಾಮ ಹಾಕಲಾಗಿದೆ.‌ ಈ ಸ್ಕ್ಯಾಮ್ ನಲ್ಲಿ ಖಾಸಗಿ ಬ್ಯಾಂಕ್ ಮ್ಯಾನೇಜರ್ ಶಾಮೀಲಾಗಿರುವುದು ಆತಂಕಕ್ಕೆ ಕಾರಣವಾಗಿದೆ.‌ ವ್ಯಕ್ತಿಯೊಬ್ಬರು ನೀಡಿದ ದೂರಿನ‌ ಆಧಾರದಲ್ಲಿ ಪ್ರಕರಣ ಭೇದಿಸಿದ ಪೊಲೀಸರು ಬರೊಬ್ಬರಿ 8 ಜನರನ್ನ ಬಂಧಿಸಿದ್ದಾರೆ.‌

ಬ್ಯಾಂಕ್ ಮ್ಯಾನೇಜರ್ ಕಿಶೋರ್ ಸಾಹು, ಸೇಲ್ಸ್ ಮ್ಯಾನ್ ಗಳಾದ ಮನೋಹರ್, ಕಾರ್ತಿಕ್, ರಾಕೇಶ್ ಪೊಲೀಸರ ಬಲೆಗೆ ಬಿದಿದ್ದಾರೆ.‌ ಹಾಗೂ ಅಕೌಂಟ್ ಹೊಲ್ಡರ್ ಗಳಾದ ರಘುರಾಜ್, ಕಾರ್ತಿಕ್, ಲಕ್ಷ್ಮಿಕಾಂತ, ಕೆಂಚೇಗೌಡ ಹಾಗು ಮಾಲಾ ಎಂಬಾಕೆಯನ್ನ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಪ್ರದೀಪ್ ಈಶ್ವರ್ ಪ್ರಕಾರ ಡಿಕೆ ಸುರೇಶ್ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ

ಟ್ರೇಡಿಂಗ್ ನಲ್ಲಿ ಹಣ ಹೂಡಿಕೆ ಮಾಡಲು ಜನರಿಗೆ l ಸೇಲ್ಸ್ ಮೆನ್ ಗಳು ಪ್ರಚೋದನೆ ನೀಡ್ತಿದ್ರು. ಆಕರ್ಷಕ ಸ್ಕೀಂಗಳನ್ನ ನಂಬಿದ ಜನರು ಲಕ್ಷಾಂತರ ಹಣವನ್ನು ಹೂಡಿಕೆ ಮಾಡ್ತಿದ್ರು. ನಂತರ ಅವರ ಟ್ರೇಡಿಂಗ್ ಅಕೌಂಟ್ ನಲ್ಲಿ ಕೋಟಿ ಲೆಕ್ಕದಲ್ಲಿ ಹಣ ತೋರಿಸಿ ವಂಚನೆ ಮಾಡ್ತಿದ್ರು. ಅದೇ ರೀತಿ ದೂರುದಾರನ ಟ್ರೇಡಿಂಗ್ ಅಕೌಂಟ್ ನಲ್ಲಿ 28 ಕೋಟಿ ತೋರಿಸಿದ್ರು. ಆದರೆ ಇದನ್ನ ಡ್ರಾ ಮಾಡಿಕೊಳ್ಳಲು 75 ಲಕ್ಷ ಕೊಡಬೇಕು ಎಂದು ಆಸೇ ತೋರಿಸಿ ಗ್ರಾಹಕರಿಂದ ಹಣ ಹಾಕಿಸಿಕೊಳ್ತಿದ್ರು.

ಗ್ರಾಹಕರು ಟ್ರಾನ್ಸ್ಫರ್ ಮಾಡುವ ಹಣವು ನಾಗರಭಾವಿಯಲ್ಲಿರುವ ಖಾಸಗಿ ಬ್ಯಾಂಕ್ ನ ಟ್ರೇಡಿಂಗ್ ಅಕೌಂಟ್ ಗೆ ಬೀಳ್ತಿತ್ತು. ಈ ಅಕೌಂಟ್ ಹೋಲ್ಡರ್ ಆಗಿ ಕೆಂಚೇಗೌಡ, ಮಾಲ, ಲಕ್ಷ್ಮಿಕಾಂತ ಹಾಗು ರಘು ಹೆಸರಿನಲ್ಲಿರ್ತಿತ್ತು. ಇದಕ್ಕೆ ಸಾಥ್ ನೀಡ್ತಿದ್ದಿದ್ದು ಬ್ಯಾಂಕ್ ಮ್ಯಾನೇಜರ್ ಕಿಶೋರ್ ಸಾಹು ಕಮೀಷನ್ ರೂಪದಲ್ಲಿ ತನ್ನ ಅಕೌಂಟ್ ಗೆ ಟ್ರಾನ್ಸ್ಫರ್ ಮಾಡಿಕೊಳ್ತಿದ್ದ. ಸದ್ಯ ಆರು ಜನರ ಅಕೌಂಟ್ ನಲ್ಲಿದ್ದ 28 ಲಕ್ಷ ಹಣವನ್ನ ಫ್ರೀಝ್ ಮಾಡಲಾಗಿದೆ. ಮತ್ತಷ್ಟು ವಂಚನೆಯಾಗಿರುವುದರ ಬಗ್ಗೆ ಮಾಹಿತಿ ಇದ್ದು ಸೈಬರ್ ಪೊಲೀಸರು ಮತ್ತಷ್ಟು ವಿಚಾರಣೆ ಮುಂದುವರೆಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ