ಕನಕಪುರ ಬನಶಂಕರಿ ಅಮ್ಮನವರ ಬ್ರಹ್ಮ ರಥೋತ್ಸವ: ಈ ದಿನದಂದು ವಾಹನ ಸಂಚಾರಕ್ಕೆ ನಿರ್ಬಂಧ

ಜನವರಿ 13 ರಂದು ಕುಮಾರಸ್ವಾಮಿ ಲೇಔಟ್‌ನ ಬನಶಂಕರಿ ದೇವಸ್ಥಾನದ ರಥೋತ್ಸವದಿಂದಾಗಿ ಕನಕಪುರ ಮುಖ್ಯ ರಸ್ತೆಯಲ್ಲಿ ಸಂಚಾರದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಬನಶಂಕರಿ ದೇವಸ್ಥಾನದಿಂದ ಸಾರಕ್ಕಿ ಮಾರ್ಕೆಟ್ ಜಂಕ್ಷನ್ ವರೆಗೆ ರಸ್ತೆಯನ್ನು ಬಂದ್​ ಮಾಡಲಾಗಿದ್ದು, ಪರ್ಯಾಯ ಮಾರ್ಗಗಳನ್ನು ಒದಗಿಸಲಾಗಿದೆ ಮತ್ತು ಸಾರ್ವಜನಿಕರು ಸಹಕರಿಸುವಂತೆ ವಿನಂತಿಸಲಾಗಿದೆ.

ಕನಕಪುರ ಬನಶಂಕರಿ ಅಮ್ಮನವರ ಬ್ರಹ್ಮ ರಥೋತ್ಸವ: ಈ ದಿನದಂದು ವಾಹನ ಸಂಚಾರಕ್ಕೆ ನಿರ್ಬಂಧ
ಬನಶಂಕರಿ ಅಮ್ಮನವರ ಬ್ರಹ್ಮ ರಥೋತ್ಸವ: ಕನಕಪುರ ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧ

Updated on: Jan 11, 2025 | 10:43 PM

ಬೆಂಗಳೂರು, ಜನವರಿ 11: ನಗರದ ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕನಕಪುರ ಮುಖ್ಯರಸ್ತೆ ರಸ್ತೆಯಲ್ಲಿರುವ ಶ್ರೀ ಬನಶಂಕರಿ (Banashankari) ಅಮ್ಮನವರ ಬ್ರಹ್ಮ ರಥೋತ್ಸವ ಇದೇ ಜನವರಿ 13 ರಂದು ಜರುಗಲಿದೆ. ಹಾಗಾಗಿ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರರು ರಥೋತ್ಸವಕ್ಕೆ ದರ್ಶನಕ್ಕಾಗಿ ಬರುವ ನಿರೀಕ್ಷೆ ಇದ್ದು, ಈ ಸಮಯದಲ್ಲಿ ಪಾದಚಾರಿಗಳ ಹಾಗೂ ವಾಹನ ಸವಾರರ ಹಿತದೃಷ್ಠಿಯಿಂದ ಕುಮಾರಸ್ವಾಮಿ ಲೇಔಟ್​ ಸಂಚಾರ ಪೊಲೀಸ್​ ಠಾಣೆಯಿಂದ ಸಂಚಾರ ಸಲಹೆ ನೀಡಲಾಗಿದೆ.

ವಾಹನ ಸಂಚಾರ ನಿರ್ಬಂಧ

ಕನಕಪುರ ಮುಖ್ಯರಸ್ತೆ ಬನಶಂಕರಿ ದೇವಸ್ಥಾನದಿಂದ ಸಾರಕ್ಕಿ ಮಾರ್ಕೆಟ್ ಜಂಕ್ಷನ್​ವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಪರ್ಯಾಯ ಮಾರ್ಗಗಳು ಹೀಗಿವೆ

  • ಕನಕಪುರ ಮುಖ್ಯರಸ್ತೆ ಕೋಣನಕುಂಟೆ ಕಡೆಯಿಂದ ಬನಶಂಕರಿ ಬಸ್ ನಿಲ್ದಾಣದ ಕಡೆಗೆ ಹೋಗುವ ವಾಹನಗಳು ಜೆ.ಪಿ. ನಗರ ಮೇಟೊ ಜಂಕ್ಷನ್ (ಸಾರಕ್ಕಿ ಸಿಗ್ನಲ್) ಹತ್ತಿರ ಬಲ ತಿರುವು ಪಡೆದು ಸಿಂಧೂರ ವೃತ್ತದ ಮೂಲಕ ರಾಜಲಕ್ಷ್ಮಿ ಮಾರ್ಗವಾಗಿ ಸಂಚರಿಸಿ ಅವಶ್ಯಕ ಮಾರ್ಗಗಳಲ್ಲಿ ಹೋಗಬಹುದು ಅಥವಾ ಸಾರಕ್ಕಿ ಮಾರ್ಕೆಟ್ ಜಂಕ್ಷನ್ ಬಲ ತಿರುವು ಪಡೆದು ಇಂದಿರಗಾಂಧಿ ಸರ್ಕಲ್ ಹತ್ತಿರ ಎಡತಿರುವು ಪಡೆದು ಆರ್.ವಿ. ಆಸ್ಟರ್ ಮೂಲಕ ಅವಶ್ಯಕ ಮಾರ್ಗಗಳಲ್ಲಿ ಸಂಚರಿಸಬಹುದಾಗಿದೆ.
  • ಬನಶಂಕರಿ ಬಸ್ ನಿಲ್ದಾಣದ ಕಡೆಯಿಂದ ಸಾರಕ್ಕಿ ಸಿಗ್ನಲ್ ಕಡೆ ಸಂಚರಿಸುವ ವಾಹನಗಳು ಬನಶಂಕರಿ ಬಸ್ ನಿಲ್ದಾಣದ ಹತ್ತಿರ ಬಲ ತಿರುವು ಪಡೆದು ಯಾರಬ್ ನಗರದ ಮೂಲಕ ಕೆ.ಎಸ್. ಲೇಔಟ್ ಜಂಕ್ಷನ್ ನಲ್ಲಿ ಎಡತಿರುವು ಪಡೆದು ಇಲಿಲಯಾಸ್ ನಗರ-ಸಾರಕ್ಕಿ ಸಿಗ್ನಲ್ ತಲುಪಿ ಅವಶ್ಯಕ ಮಾರ್ಗಗಳಲ್ಲಿ ಸಂಚರಿಸಬಹುದಾಗಿ. ಸಾರ್ವಜನಿಕರು ಮತ್ತು ವಾಹನ ಸವಾರರು ಸಹಕರಿಸುವಂತೆ ಕೋರಲಾಗಿದೆ.

ಮಹಿಳೆಗೆ ಪರ್ಸ್ ಹಿಂದಿರುಗಿಸಿದ ಪೊಲೀಸ್​

ಇನ್ನು ಇಂದು ಮಡಿವಾಳ ಸಂಚಾರ ಪೊಲೀಸ್ ಠಾಣೆಯ ಕುಮಾರ್​​ ಹೆಚ್. ಎಂ, ಎಎಸ್ಐ ರವರಿಗೆ ಸಿಕ್ಕಿದ್ದ ಪರ್ಸ್ ನಲ್ಲಿ, ಏಟಿಎಂ ಕಾರ್ಡ್, ಕ್ರೆಡಿಟ್ ಕಾರ್ಡ್, ನಗದು ಹಣ ಹಾಗೂ ಇತರೆ ಬೆಲೆ ಬಾಳುವ ವಸ್ತುಗಳಿದ್ದು, ಸದರಿ ಪರ್ಸ್​ನ ವಾರಸುದಾರರಾದ ಶ್ರೀಮತಿ ಪುಷ್ಪಲತಾ ಎಂಬುವರನ್ನು ಪತ್ತೆ ಮಾಡಿ ಠಾಣೆಗೆ ಕರೆಯಿಸಿ ಹಿಂದಿರುಗಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:41 pm, Sat, 11 January 25

Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Follow Us