Bangalore Traffic Update: ರಸ್ತೆ, ಮೆಟ್ರೋ ಕಾಮಗಾರಿ ಕಾರಣ ಬೆಂಗಳೂರಿನ ಹಲವೆಡೆ ಸಂಚಾರ ದಟ್ಟಣೆ: ಇಲ್ಲಿದೆ ಮಾಹಿತಿ
ಬೆಂಗಳೂರಿನಲ್ಲಿ ಮೆಟ್ರೋ, ಬಿಬಿಎಂಪಿ, ವೈಟ್ ಟಾಪಿಂಗ್ ಸೇರಿದಂತೆ ವಿವಿಧ ಕಾಮಗಾರಿಗಳು ನಡೆಯುತ್ತಿರುವುದರಿಂದ ಹಲವೆಡೆ ಸಂಚಾರ ದಟ್ಟಣೆ ಉಂಟಾಗಿದೆ. ಮಾರತಹಳ್ಳಿ ಸೇರಿದಂತೆ ಕೆಲವೆಡೆ ರಸ್ತೆಗಳಲ್ಲಿ ಸಂಚಾರ ನಿಧಾನವಾಗಿರಲಿದೆ. ಈ ಬಗ್ಗೆ ಬೆಂಗಳೂರು ಸಂಚಾರ ಪೊಲೀಸರು ಪ್ರಯಾಣಿಕರಿಗೆ ಕೆಲ ಸಂಚಾರ ಸಲಹೆಗಳನ್ನು ನೀಡಿದ್ದಾರೆ. ಮಾಹಿತಿ ಇಲ್ಲಿದೆ.

ಬೆಂಗಳೂರು, ಮಾರ್ಚ್ 27: ಸಿಲಿಕಾನ್ ಸಿಟಿಯ ಟ್ರಾಫಿಕ್ (traffic) ಬಗ್ಗೆ ಮಾತನಾಡದವರೇ ಇಲ್ಲ. ಈ ಟ್ರಾಫಿಕ್ಗೆ ಸಿಟಿ ಮಂದಿ ಹೈರಾಣಾಗಿ ಹೋಗಿದ್ದಾರೆ. ಅದರಲ್ಲೂ ಕಾಮಗಾರಿಗಳು (Works) ನಡೆಯುತ್ತಿದ್ದರೆ ಸವಾರರ ಗೋಳು ಕೇಳುವುದಕ್ಕಾಗುವುದಿಲ್ಲ. ಇದೀಗ ನಗರದಲ್ಲಿ ಕೆಲವೆಡೆ ರಸ್ತೆ, ಮೆಟ್ರೋ ಸೇರಿದಂತೆ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಹೀಗಾಗಿ ಕೆಲ ಸ್ಥಳಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಈ ಬಗ್ಗೆ ಬೆಂಗಳೂರು ಸಂಚಾರ ಪೋಲಿಸರು ಸಂಚಾರ ಸಲಹೆ ನೀಡಿದ್ದಾರೆ.
ವಿವಿಧ ಕಾಮಗಾರಿಗಳ ಬಗ್ಗೆ ಬೆಂಗಳೂರು ಸಂಚಾರ ಪೊಲೀಸರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಕಲಾಮಂದಿರದ ಬಳಿ ನಡೆಯುತ್ತಿರುವಮೆಟ್ರೋ ಪಿಲ್ಲರ್ ಕಾಮಗಾರಿ ಕೆಲಸದಿಂದಾಗಿ, ಕಾರ್ತಿಕ್ ನಗರ ಮತ್ತು ಮಾರತಹಳ್ಳಿ ಕಡೆಗೆ ಸಂಚಾರ ತುಂಬಾ ನಿಧಾನವಾಗಿದೆ. ಪ್ರಯಾಣಿಕರು ದಯವಿಟ್ಟು ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಬೆಂಗಳೂರು ಸಂಚಾರ ಪೊಲೀಸ್ ಟ್ವೀಟ್
Traffic Advisory:- Due to ongoing metro work at Outer Ring Road Salem Railway Bridge, the traffic from Mahadevpur towords Marathahalli and from Marathahalli towards Mahadevpur will be slow,please co-operate with us and plan accordingly. Thank you@CPBlr @Jointcptraffic pic.twitter.com/aneh8uByQt
— HAL AIRPORT TRAFFIC BTP (@halairporttrfps) March 27, 2025
ಅದೇ ರೀತಿಯಾಗಿ ಸೇಲಂ ಹೊರ ವರ್ತುಲ ರಸ್ತೆಯ ರೈಲ್ವೆ ಸೇತುವೆಯಲ್ಲಿ ನಡೆಯುತ್ತಿರುವ ಮೆಟ್ರೋ ಕಾಮಗಾರಿಯಿಂದಾಗಿ, ಮಹದೇವಪುರದಿಂದ ಮಾರತಹಳ್ಳಿಗೆ ಮತ್ತು ಮಾರತಹಳ್ಳಿಯಿಂದ ಮಹದೇವಪುರಕ್ಕೆ ಸಂಚಾರ ನಿಧಾನವಾಗಿರಲಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಸಂಚಾರ ಪೊಲೀಸ್ ಟ್ವೀಟ್
“Traffic Advisory” Due to ongoing pillor work at kalamandir,traffic movement is very slow towards karthiknagar and marathahalli,we request all commuters please co-operate with us, thank you. @CPBlr @Jointcptraffic @DCPTrEastBCP @acpwfieldtrf @blrcitytraffic @BlrCityPolice pic.twitter.com/3ZLyj8eotL
— HAL AIRPORT TRAFFIC BTP (@halairporttrfps) March 27, 2025
ಮಾರತಹಳ್ಳಿ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಹೊರ ವರ್ತುಲ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿರುವುದರಿಂದ, ಕಾಡುಬೀಸನಹಳ್ಳಿಯಿಂದ ಕಾರ್ತಿಕ್‌ನಗರ ಕಡೆಗೆ ಸಂಚಾರ ತುಂಬಾ ನಿಧಾನವಾಗಿದೆ. ದಯವಿಟ್ಟು ಪ್ರಯಾಣಿಕರು ಸಹಕರಿಸುವಂತೆ ಕೋರಿದ್ದಾರೆ.
ಇದನ್ನೂ ಓದಿ: Karnataka Weather: ಕರ್ನಾಟಕದ ಕರಾವಳಿಯ ಎಲ್ಲಾ ಜಿಲ್ಲೆಗಳು ಸೇರಿ ರಾಜ್ಯದ 11 ಜಿಲ್ಲೆಗಳಲ್ಲಿ ಮಳೆ
ಸಕ್ರಾ ಆಸ್ಪತ್ರೆ ರಸ್ತೆಯಲ್ಲಿ BWSSB ಮತ್ತು ಬಿಬಿಎಂಪಿ ಕಾಮಗಾರಿ ನಡೆಯುತ್ತಿರುವುದರಿಂದ, ಬೆಳ್ಳಂದೂರು ಕೋಡಿಯಿಂದ ಸಕ್ರಾ ಆಸ್ಪತ್ರೆ ಕಡೆಗೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:20 am, Thu, 27 March 25