ಸುಡುವ ಬಿಸಿಲಿಗೆ ಸವಾರರು ಹೈರಾಣು: ಟ್ರಾಫಿಕ್ ಸಿಗ್ನಲ್ನಲ್ಲಿ ನೆರಳಿನ ವ್ಯವಸ್ಥೆ, ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಗದಗದಲ್ಲಿ ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಾಗುತ್ತಿದೆ. ದ್ವಿಚಕ್ರ ವಾಹನ ಸವಾರರು ಬಿಸಿಲಿಗೆ ತುತ್ತಾಗುತ್ತಿದ್ದಾರೆ. ಇದನ್ನು ಗಮನಿಸಿದ ಗದಗ ಪೊಲೀಸ್ ಇಲಾಖೆ ಮತ್ತು ನಗರಸಭೆ, ಮುಳಗುಂದ ನಾಕಾ, ಪುಟ್ಟರಾಜ ಸರ್ಕಲ್, ಟಿಪ್ಪು ಸುಲ್ತಾನ್ ಜಂಕ್ಷನ್‌ಗಳಲ್ಲಿ ನೆರಳಿನ ವ್ಯವಸ್ಥೆ ಮಾಡಿದೆ. ಹಸಿರು ಮ್ಯಾಟ್‌ಗಳನ್ನು ಬಳಸಿ ನಿರ್ಮಿಸಲಾದ ಈ ನೆರಳಿನ ವ್ಯವಸ್ಥೆಯಿಂದ ಸವಾರರಿಗೆ ಕೊಂಚ ಆರಾಮವೆನಿಸಿದೆ.

ಗದಗ, ಮಾರ್ಚ್ 26: ಬಿಸಿಲು (heat) ದಿನದಿಂದ ದಿನಕ್ಕೆ ಜನರ ನೆತ್ತಿ ಸುಡುತ್ತಿದೆ. 11ಗಂಟೆ ದಾಟಿದರೆ ಸಾಕು ಸೂರ್ಯನ ಪ್ರತಾಪ ಹೆಚ್ಚುತ್ತಿದೆ. ಹೀಗಾಗಿ ಜನರು ಮನೆ ಬಿಟ್ಟು ಹೊರಬರುಲು ಹಿಂದೇಟು ಹಾಕ್ತಾಯಿದ್ದಾರೆ. ಇನ್ನೂ ಟ್ರಾಫಿಕ್ ಸಿಗ್ನಲ್ನಲ್ಲಿ ಕನಿಷ್ಠ 1 ನಿಮಿಷ ನಿಲ್ಲಬೇಕು. ಆಗ ಬೆಂಕಿ ಬಿಸಿಲು ತಲೆ ಸುಡುತ್ತಿದ್ದು, ಸವಾರರು ವಿಲವಿಲ ಅಂತಿದ್ದಾರೆ. ಹೀಗಾಗಿ ಬೈಕ್ ಸವಾರರ ಅನಕೂಲಕ್ಕೆ ಟ್ರಾಫಿಕ್ ಸಿಗ್ನಲ್ನಲ್ಲಿ (Traffic signal) ನೆರಳಿನ ವ್ಯವಸ್ಥೆ ಮಾಡಲಾಗಿದೆ. ಆ ಮೂಲಕ ಬೈಕ್ ಸವಾರರು ಸಿಗ್ನಲ್ನಲ್ಲಿ ಸ್ವಲ್ಪ ಕೂಲ್ ಕೂಲ್ ಅನುಭವ ಪಡೆಯುವಂತಾಗಿದೆ.
ಬಿಸಿಲಿನ ತಾಪ ಸಹಿಸಲಾಗದೆ ಜನರು ಹೊರಗಡೆ ತಿರುಗಾಡುವುದೇ ಬೇಡ ಅನ್ನುವಷ್ಟರ ಮಟ್ಟಿಗೆ ಬಿಸಿಲು ಬೆಂಕಿಯಂತೆ ಸುಡುತ್ತಿದೆ. ಬಿಸಿಲಿನ ತಾಪಮಾನಕ್ಕೆ ವಾಹನ ಸವಾರರು ಪಡುವ ಪಾಡು ಅಷ್ಟಿಷ್ಟಲ್ಲ. ಅದರಲ್ಲೂ ದ್ವಿಚಕ್ರ ವಾಹನ ಸವಾರರು ಅನುಭವಿಸುವ ವೇದನೆ ಅಷ್ಟಿಷ್ಟಲ್ಲ. ಇದನ್ನು ತಪ್ಪಿಸಲು, ಸವಾರರ ಅನುಕೂಲಕ್ಕಾಗಿ ಗದಗ ಪೊಲೀಸ್ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಹೆಚ್ಚು ಟ್ರಾಫಿಕ್ಕಿನಿಂದ ಕೂಡಿರುವ ಮುಳಗುಂದ ನಾಕಾ, ಪುಟ್ಟರಾಜ್ ಸರ್ಕಲ್, ಟಿಪ್ಪು ಸುಲ್ತಾನ್ ಜಂಕ್ಷನ್ಲ್ಲಿ ಹಸಿರು ಮ್ಯಾಟ್ನಿಂದ ಛತ್ತ ನಿರ್ಮಿಸಿ ಸವಾರರಿಗೆ ನೆರಳಿನ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ಇಲಾಖೆ ಹಾಗೂ ಗದಗ ಬೆಟಗೇರಿ ನಗರಸಭೆ ಸಹಯೋಗದಲ್ಲಿ ಈ ವ್ಯಸ್ಥೆ ಮಾಡಲಾಗಿದೆ.
ಇದನ್ನೂ ಓದಿ: ದಾವಣಗೆರೆ: ತುಂಗಭದ್ರೆಯ ಒಡಲು ಖಾಲಿ ಖಾಲಿ, ಪವಿತ್ರ ನದಿಗೆ ಕಲುಷಿತ ನೀರು
ಇನ್ನೂ ದ್ವಿಚಕ್ರ ವಾಹನ ಸವಾರರು ಸಿಗ್ನಲ್ ಬಳಿ ಬಂದು ನಿಂತಾಗ ಸುಡುವ ಬಿಸಿಲಿನಿಂದ ತಪ್ಪಿಸಿಕೊಳ್ಳಬಹುದಾಗಿದೆ. ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಮಧ್ಯಾಹ್ನದ ಸಮಯದಲ್ಲಿ ದ್ವಿಚಕ್ರ ವಾಹನ ಸವಾರರು ಬಿಸಿಲಿನ ತಾಪಕ್ಕೆ ನಿಲ್ಲಲು ಆಗುವುದಿಲ್ಲ. ಹೀಗಾಗಿ ಸಿಗ್ನಲ್ ಜಂಪ್ ಮಾಡುತ್ತಾರೆ. ಇದರಿಂದ ಅಪಾಯ ತಂದುಕೊಳ್ಳುತ್ತಾರೆ. ಇದನ್ನು ತಪ್ಪಿಸಲು ಪೊಲೀಸ್ ಇಲಾಖೆ ಮುಳಗುಂದ ನಾಕಾ, ಪುಟ್ಟರಾಜ್ ಸರ್ಕಲ್ನಲ್ಲಿ ನಗರಸಭೆ ಸಹಯೋಗದೊಂದಿಗೆ ಹಸಿರು ಶೆಡ್-ನೆಟ್ ಹಾಕಿದ್ದಾರೆ.
ಮುಳಗುಂದ ನಾಕಾ ಮೂಲಕ ಹಾದು ಹೋಗುವ ನಾಲ್ಕು ರಸ್ತೆಗಳಲ್ಲಿ ಇದೇ ರೀತಿಯ ಶೆಡ್‌ಗಳನ್ನು ನಿರ್ಮಿಸಲಾಗಿದೆ. ವಾಹನ ಸವಾರರು ಪ್ರತಿ ಜಂಕ್ಷನ್‌ನಲ್ಲಿ ಕನಿಷ್ಠ ಎರಡ ರಿಂದ ಐದು ನಿಮಿಷಗಳ ಕಾಲ ಬಿಸಿಲಿನ ಬೇಗೆಯನ್ನು ತಡೆದುಕೊಳ್ಳಬೇಕಾಗುತ್ತದೆ.
ಇದನ್ನೂ ಓದಿ: Karnataka Weather: ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆ ಹೆಚ್ಚಳ; ಹವಾಮಾನ ಇಲಾಖೆ ಮುನ್ಸೂಚನೆ
ಈಗಾಲೇ ಪಂಡಿತ ಪುಟ್ಟರಾಜ ಸರ್ಕಲ್, ಮುಳಗುಂದ ನಾಕಾ, ಟಿಪ್ಪು ಸುಲ್ತಾನ್ ಸರ್ಕಲ್ ನಲ್ಲಿ ಗ್ರೀನ್ ಮ್ಯಾಟ್ ಹಾಕಲಾಗಿದೆ. ರಣ ಬಿಸಿಲಿನಿಂದ ಕಂಗೆಟ್ಟಿರುವ ಜನರಿಗೆ ಸಿಗ್ನಲ್ನಲ್ಲಿ ಕೆಲವು ನಿಮಿಷ ರಿಲ್ಯಾಲ್ಸ್ ನೀಡುತ್ತದೆ. ಹೀಗಾಗಿ ಪೊಲೀಸ್ ಇಲಾಖೆ ಹಾಗೂ ಗದಗ ಬೆಟಗೇರಿ ನಗರಸಭೆ ಈ ಕಾರ್ಯಕ್ಕೆ ಗದಗ ಜಿಲ್ಲೆಯ ಜನ್ರು ಮೆಚ್ಚುಗೆ ವ್ಯಕ್ತಪಡೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:52 pm, Wed, 26 March 25