
ಬೆಂಗಳೂರು, (ಜೂನ್ 22): ಸಾಮಾಜಿಕ ಜಾಲತಾಣಗಳು ಈಗ ಅವುಗಳ ಲಿಮಿಟ್ ಮೀರಿ ಹೋಗಿದೆ. ಕೇವಲ ಗೆಳೆತನಕ್ಕೆ ಮಾತ್ರ ಸೀಮಿತವಾಗಿದ್ದವು ನಂತರದ ದಿನದಲ್ಲಿ ಯುವಕ ಯುವತಿಯರ ಡೇಟಿಂಗ್ ಆ್ಯಪ್ ಗಳಾಗಿ ಬದಲಾಗಿದೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ ಯುವಕ ಯುವಕರೂ ಡೇಟಿಂಗ್ ಮಾಡುವ ಆ್ಯಪ್ ಗಳು ಬಂದಿದ್ದು, ಇದೇ ರೀತಿ ಆ್ಯಪ್ ನಂಬಿ ಹೋದವನೊಬ್ಬ ಕಿಡ್ನಾಪ್ ಆಗಿ ಚಾಕುವಿನಿಂದ ಇರಿಸಿಕೊಂಡಿದ್ದಾನೆ. ಈ ಘಟನೆ ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಡೇಟಿಂಗ್ ಆ್ಯಪ್ ಕಿಡ್ನಾಪ್ ಕಥೆ ಹೊರ ಬಂದಿದ್ದೇ ಒಂದು ರೀತಿ ರೋಚಕ.
ಸೈಯದ್ ಮಜರ್ ಎನ್ನುವಾತ ಡೇಟಿಂಗ್ ಆ್ಯಪ್ ನ ಮೂಲಕ ವಾಸೀಂ ಎಂಬಾತನ ಜೊತೆಗೆ ಗೆಳೆತನ ಮಾಡಿದ್ದ. ಆದ್ರೆ ಅಸಲಿಗೆ ಅವನು ವಾಸೀಂ ಆಗಿರಲಿಲ್ಲ ಅವನ ನಿಜವಾದ ಹೆಸರು ತನ್ನು. ಈಗ ಅದು ತನ್ನು ಅಲಿಯಾಸ್ ವಾಸೀಂ ಅಗಿದೆ. ಇಬ್ಬರು ಕೆಲ ದಿನಗಳ ಕಾಲ ಚಾಟ್ ಮಾಡಿದ್ದಾರೆ. ಬಳಿಕ ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಒಂದು ಏರಿಯಾದಲ್ಲಿ ಭೇಟಿ ಮಾಡಲು ಪ್ಲ್ಯಾನ್ ಮಾಡಿದ್ದರು. ಆದ್ರೆ ತನ್ನು ಅಲಿಯಾಸ್ ವಾಸಿಂ ಒಬ್ಬನೇ ಬಂದಿರಲಿಲ್ಲ. ಬದಲಾಗಿ ಕಾರಿನಲ್ಲಿ ತಬ್ರೇಜ್ ಸೇರಿ ಇನ್ನೂ ಮೂವರನ್ನು ಕರೆದುಕೊಂಡು ಬಂದಿದ್ದ. ಕಾರಿನ ಬಳಿಗೆ ಸೈಯದ್ ನ ಕರೆಸಿಕೊಂಡು ನಂತರ ಕಿಡ್ನಾಪ್ ಮಾಡಿದ್ದಾರೆ. ಬಳಿಕ ಚಾಕು ಹಾಕಿ ಬೆದರಿಸಿ ಹಣ, ಮೊಬೈಲ್ ದೋಚಿದ್ದಾರೆ.
ಅಷ್ಟಕ್ಕೂ ಈ ಕೇಸ್ ಹೊರ ಬಂದಿದ್ದೆ ಒಂದು ರೋಚಕ.ಆರೋಪಿಗಳು ಚಾಕು ಇರಿದು ಕಾರಿನಲ್ಲೇ ಸುತ್ತಾಡಿಸುತ್ತಿರುವಾಗ ಬಾಗಲೂರ ಬಳಿ ಕಿಡ್ನಾಪ್ ಆಗಿದ್ದ ಸೈಯದ್ ತಪ್ಪಿಸಿಕೊಂಡಿದ್ದಾನೆ. ಕಾರಿನಿಂದ ಓಡಿ ಹೋಗಿ ಅಲ್ಲಿದ್ದ ಸ್ಥಳೀಯರ ಸಹಾಯ ಕೇಳಿದ್ದಾನೆ. ಈ ವೇಳೆ ಸ್ಥಳೀಯರು ಕಾರಿನಲ್ಲಿದ್ದವರನ್ನು ಓಡಿಸಿಕೊಂಡು ಹೋದಾಗ ಓರ್ವ ಬಿದ್ದು ಕಾಲು ಮುರಿದುಕೊಂಡಿದ್ದಾನೆ. ಬಳಿಕ ಕಾಲು ಮುರಿದುಕೊಂಡವ, ತನ್ನ ಮೇಲೆ ಹಲ್ಲೆ ಮಾಡಿ ಕಾಲು ಮುರಿದ್ದಾರೆ ಎಂದು ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ದೂರಿನ ಅನ್ವಯ ಪೊಲೀಸ್ ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಡೇಟಿಂಗ್ ಆ್ಯಪ್ ಕಿಡ್ನಾಪ್ ಕಥೆ ಬಯಲಾಗಿದೆ.
ಬಳಿಕ ಸಂಪಿಗೆಹಳ್ಳಿ ಪೊಲೀಸರು ಕಿಡ್ನಾಪ್ ಕೇಸ್ ದಾಖಲು ಮಾಡಿ ಇಬ್ಬರನ್ನು ಅರೆಸ್ಟ್ ಮಾಡಿದ್ದು ಇನ್ನೋರ್ವ ಆಸ್ಪತ್ರೆಯಲ್ಲಿ ಇದ್ದು ಆತ ಗುಣಮುಖ ಆದ ನಂತರ ಬಂಧಿಸಲಿದ್ದಾರೆ. ಜೊತೆಗೆ ತಲೆಮರೆಸಿಕೊಂಡಿರುವ ಇನ್ನೂ ಇಬ್ಬರು ಆರೋಪಿಗಳಿಗೆ ಹುಡುಕಾಟ ನಡೆಸಿದ್ದಾರೆ. ಹೀಗಾಗಿ ಯಾವುದೋ ಆ್ಯಪ್ ,ಯಾವುದೋ ವೆಬ್ ಸೈಟ್ ನಲ್ಲಿ ಪರಿಚಯ ಆದ ಅಂತ ಲಿಂಗಭೇದ ಮರೆತು ಡೇಟಿಂಗ್ ಹೋಗುವ ಮೊದಲು ಎಚ್ಚರಿಕೆ.