Bengaluru News: ಹಿಟ್ ಆ್ಯಂಡ್ ರನ್ಗೆ ಇಬ್ಬರು ಬೈಕ್ ಸವಾರರ ದುರ್ಮರಣ
ಹಿಟ್ ಆ್ಯಂಡ್ ರನ್ಗೆ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆ ಸಮೀಪದ ಗೆಸ್ಟ್ ಲೈನ್ ಗೇಟ್ ಬಳಿ ನಡೆದಿದೆ. ಮಂಗಮ್ಮನಪಾಳ್ಯ ವಾಸಿ ಮಂಜಪ್ಪ(32) ಸೇರಿ ಇಬ್ಬರು ಮೃತ ರ್ದುದೈವಿಗಳು.
ಬೆಂಗಳೂರು ನಗರ, ಜುಲೈ 14: ಹಿಟ್ ಆ್ಯಂಡ್ ರನ್ಗೆ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಆನೇಕಲ್(Anekal) ತಾಲೂಕಿನ ಅತ್ತಿಬೆಲೆ ಸಮೀಪದ ಗೆಸ್ಟ್ ಲೈನ್ ಗೇಟ್ ಬಳಿ ನಡೆದಿದೆ. ಮಂಗಮ್ಮನಪಾಳ್ಯ ವಾಸಿ ಮಂಜಪ್ಪ(32) ಸೇರಿ ಇಬ್ಬರು ಮೃತ ರ್ದುದೈವಿಗಳು. ಮತ್ತೊಬ್ಬ ಬೈಕ್ ಸವಾರನ ಗುರುತು ಪತ್ತೆಯಾಗಿಲ್ಲ. ಇವರಿಬ್ಬರು ಬೈಕ್ ಮೇಲೆ ತೆರಳುವಾಗ ಹಿಂಬದಿಯಿಂದ ಬಂದ ಅಪರಿಚಿತ ಲಾರಿಯೊಂದು ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲಿಯೇ ಇಬ್ಬರು ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಹತ್ತಿರದ ಖಾಸಗಿ ಆಸ್ಪತ್ರೆ ಶವಾಗಾರಕ್ಕೆ ರವಾನೆ ಮಾಡಲಾಗಿದೆ.
ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ; ಓರ್ವ ಸಾವು, ಇಬ್ಬರಿಗೆ ಗಾಯ
ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ನೆಲಮಂಗಲ ತಾಲೂಕಿನ ಕೆಂಗಲ್ ಕೆಂಪೊಹಳ್ಳಿ ಬಳಿ ಎರಡು ಬೈಕ್ಗಳ ನಡುವೆ ಡಿಕ್ಕಿಯಾಗಿ ಇಬ್ಬರಿಗೆ ಗಾಯಗಳಾಗಿದ್ದು, ಓರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತ ಬೈಕ್ ಸವಾರನ ಗುರುತು ಇನ್ನೂ ಪತ್ತೆಯಾಗಿಲ್ಲ. ಮತ್ತೊಂದು ಬೈಕ್ನಲ್ಲಿದ್ದ ಗಾಯಾಳು ಸುನೀಲ್ ಕುಮಾರ್, ಶಿವಪ್ರಸಾದ್ ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ಈ ಕುರಿತು ನೆಲಮಂಗಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಆನೇಕಲ್ನಲ್ಲಿ ಸೂತಕದ ಛಾಯೆ: ಈಜಲು ತೆರಳಿದ್ದ ಮೂವರು ಬಾಲಕರು ನೀರುಪಾಲು
ಟ್ರಾಫಿಕ್ ಪೊಲೀಸರ ಜತೆ ಆಟೋ ಚಾಲಕರ ವಾಗ್ವಾದ
ಚಿತ್ರದುರ್ಗದಲ್ಲಿ ಟ್ರಾಫಿಕ್ ಪೊಲೀಸರ ಜತೆ ಆಟೋ ಚಾಲಕರ ವಾಗ್ವಾದ ನಡೆದಿದೆ. ‘ಖಾಕಿ ಶರ್ಟ್ ಧರಿಸಬೇಕೆಂಬ ನಿಯಮವೇ ಇಲ್ಲ’ ಎಂಬ ವಿಚಾರವಾಗಿ ಗಲಾಟೆ ಶುರುವಾಗಿದ್ದು, ಬರೀ ದಂಡ ಬರಿಯುವುದೇ ಪೊಲೀಸರ ಕೆಲಸವೇ?’ ಎಂದು ಆಟೋ ಚಾಲಕರು ಕಿಡಿಕಾರಿದ್ದಾರೆ. ಈ ವೇಳೆ ಆಟೋ ಚಾಲಕರಾದ ಸಿದ್ದು, ಚಂದ್ರಪ್ಪ ‘ನಿಮ್ಮ ಸರ್ಕಾರ ನಮಗೇನು ಅನುಕೂಲ ಮಾಡಿದೆ’. ಆಟೋ ಬಿಟ್ಟರೆ ನಾನು ಚಪ್ಪಲಿ ಹೊಲೆದು ಸಂಪಾದಿಸುವೆ’ ನೀವು ಮಾಡ್ತೀರಾ ಎಂದು ಪೊಲೀಸರಿಗೆ ಆವಾಜ್ ಹಾಕಿದ್ದಾರೆ. ಈ ಮೂಲಕ ಪ್ರತಿದಿನ ಆಟೋ ಚಾಲಕರ ಜತೆ ವಾಗ್ವಾದದಿಂದ ಪೊಲೀಸರು ಹೈರಾಣಾಗಿದ್ದಾರೆ.
ಇನ್ನಷ್ಟು ಅಪಘಾತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:18 am, Fri, 14 July 23