5 ವರ್ಷಗಳಿಂದ ಪೊಲೀಸರಿಗೆ ತಲೆನೋವಾಗಿದ್ದ ಸರಗಳ್ಳರನ್ನು ಅರೆಸ್ಟ್​ ಮಾಡಿದ ಸಿಸಿಬಿ ಪೊಲೀಸರು

ಬೆಂಗಳೂರಿನ ಸಿಸಿಬಿ ಪೊಲೀಸರು ಇಬ್ಬರು ಸರಗಳ್ಳರನ್ನು ಬಂಧಿಸಿದ್ದು, ಕೆಆರ್​ ಪುರಂ, ಬನಶಂಕರಿ, ಮಹಾಲಕ್ಷ್ಮೀ ಲೇಔಟ್ ಸೇರಿದಂತೆ 18 ಕಡೆಗಳಲ್ಲಿ ನಡೆದಿದ್ದ ಸರಗಳವು ಪ್ರಕರಣಗಳಲ್ಲಿ ಇವರು ಭಾಗಿಯಾಗಿದ್ದರು ಎನ್ನಲಾಗಿದೆ.

5 ವರ್ಷಗಳಿಂದ ಪೊಲೀಸರಿಗೆ ತಲೆನೋವಾಗಿದ್ದ ಸರಗಳ್ಳರನ್ನು ಅರೆಸ್ಟ್​ ಮಾಡಿದ ಸಿಸಿಬಿ ಪೊಲೀಸರು
5 ವರ್ಷದಿಂದ ಪೊಲೀಸರಿಗೆ ತಲೆನೋವಾಗಿದ್ದ ಸರಗಳ್ಳನನ್ನು (ಕಾರು ಪಕ್ಕ ಓಡುತ್ತಿರುವ ಯುವಕ ಇರ್ಫಾನ್ ) ಅರೆಸ್ಟ್​ ಮಾಡಿದ ಸಿಸಿಬಿ ಪೊಲೀಸರು
Edited By:

Updated on: Aug 21, 2021 | 1:29 PM

ಬೆಂಗಳೂರು: ರಾಜಧಾನಿ ಬೆಂಗಳೂರು ಮತ್ತು ಗ್ರಾಮಾಂತರ ಭಾಗದಲ್ಲಿ ಮಹಿಳೆಯರು ಸ್ವಲ್ಪಮಟ್ಟಿಗೆ ನಿರಾಳರಾಗಿ ಓಡಾಡಬಹುದು.ಕಳೆದ 5 ವರ್ಷಗಳಿಂದ ತಲೆನೋವಾಗಿದ್ದ ಸರಗಳ್ಳರ ಪೈಕಿ ಇಬ್ಬರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ಸಿಸಿಬಿ ಪೊಲೀಸರು ಇಬ್ಬರು ಸರಗಳ್ಳರನ್ನು ಬಂಧಿಸಿದ್ದು, ಕೆಆರ್​ ಪುರಂ, ಬನಶಂಕರಿ, ಮಹಾಲಕ್ಷ್ಮೀ ಲೇಔಟ್ ಸೇರಿದಂತೆ 18 ಕಡೆಗಳಲ್ಲಿ ನಡೆದಿದ್ದ ಸರಗಳವು ಪ್ರಕರಣಗಳಲ್ಲಿ ಇವರು ಭಾಗಿಯಾಗಿದ್ದರು ಎನ್ನಲಾಗಿದೆ. ಕದ್ದ ಚಿನ್ನವನ್ನು ಹೊರ ಜಿಲ್ಲೆ, ಹೊರ ರಾಜ್ಯಗಳಲ್ಲಿ ಇವರು ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

2016ರಿಂದ ಸರಗಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳಿಂದ ಹಿರಿಯೂರಿನಲ್ಲಿ ಕಳವು ಮಾಲು ಸ್ವೀಕರಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಜೊತೆಗೆ ಖಚಿತ ಮಾಹಿತಿ ಆಧರಿಸಿ ತುಮಕೂರು ಹಾಗೂ ಬೆಳಗಾವಿಯಲ್ಲಿ ಮಾರಾಟ ಮಾಡಿದ್ದ ಕದ್ದ ಚಿನ್ನವನ್ನು ಜಪ್ತಿ ಮಾಡಲಾಗಿದೆ.

ಬಿಂದಾಸ್ ಲೈಫ್ ಗೆ ಕಳ್ಳತನ ಮಾಡ್ತಿದ್ದ ನಟೋರಿಯಸ್ ಸರಗಳ್ಳ ಇರ್ಫಾನ್ ಅಂದರ್:

ಬಸ್ ಪ್ರಯಾಣ ವೇಳೆ ಕಿಟಕಿಗೆ ಕೈ ಹಾಕಿ ಮಹಿಳೆಯರ ಸರ ಕದಿಯುತಿದ್ದ ಆರೋಪಿ ಇರ್ಫಾನ್ ಅಲಿಯಾಸ್ ಬಾಂಡ್ ಇರ್ಫಾನ್ ಬಂಧಿತ ವ್ಯಕ್ತಿ. ಒಂದು ವಾರದ ಹಿಂದೆ ನಾಗವಾರ ಜಂಕ್ಷನ್ ಬಳಿ ಬಿಎಂಟಿಸಿ ಬಸ್ ನಲ್ಲಿ ಕುಳಿತಿದ್ದ ಮಹಿಳೆಯ ತಾಳಿಯನ್ನ ಕಿಟಕಿ ಬಳಿ ಕಿತ್ತು ಓಡಿದ್ದ ಆರೋಪಿ ಇರ್ಫಾನ್. ಸುಮಾರು 40 ಗ್ರಾಂ ಚಿನ್ನದ ಸರವನ್ನು ಕಿಟಕಿಯಿಂದ ಕೈ ಹಾಕಿ ಕಿತ್ತು ಓಡಿದ್ದ.

ಇರ್ಫಾನ್ 22 ವರ್ಷಕ್ಕೆ ನಟೋರಿಯಸ್ ಚೈನ್ ಸ್ನಾಚರ್ ಆಗಿದ್ದಾನೆ. ಆರೋಪಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸದ್ಯ ಸಂಪಿಗೆಹಳ್ಳಿ ಪೊಲೀಸರಿಂದ ಆರೋಪಿ ಬಂಧನ, ವಿಚಾರಣೆ ನಡೆದಿದೆ. ಇರ್ಫಾನ್ ವಿರುದ್ದ ನಗರದ ವಿವಿಧ ಠಾಣೆಯಲ್ಲಿ ಏಳಕ್ಕೂ ಹೆಚ್ಚು ಪ್ರಕರಣ ಬೆಳಕಿಗೆ ಬಂದಿದೆ. ಕಳ್ಳತನ ಮಾಡಿದ ಚಿನ್ನದ ಸರವನ್ನ ಮಾರಾಟ ಮಾಡಿ ಪಬ್ ಗಳಲ್ಲಿ ಕುಡಿದು ಮೋಜು ಮಸ್ತಿ ಮಾಡ್ತಿದ್ದ ಇರ್ಫಾನ್.

ತಡರಾತ್ರಿ ಓಡಾಡುವವರನ್ನು ಸುಲಿಗೆ ಮಾಡುತ್ತಿದ್ದ ನಾಲ್ವರ ಸೆರೆ:

ತಡರಾತ್ರಿ ಓಡಾಡುವವರನ್ನು ಮಾರಕಾಸ್ತ್ರ ತೋರಿಸಿ ಸುಲಿಗೆ ಮಾಡುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ. ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್​ ಪೊಲೀಸರು ನಾಲ್ಕು ಮಂದಿಯನ್ನು ಅರೆಸ್ಟ್​ ಮಾಡಿದ್ದು, ಬಂಧಿತ ಆರೋಪಿಗಳಿಂದ 1 ಲಕ್ಷ ರೂ. ಮೌಲ್ಯದ ಚಿನ್ನ ಜಪ್ತಿ ಮಾಡಿದ್ದಾರೆ. ಆರೋಪಿಗಳು ಪುಲಕೇಶಿ ನಗರ, ಅಶೋಕ ನಗರ ಸೇರಿ 4 ಕಡೆ ಕೃತ್ಯವೆಸಗಿದ್ದರು.

Also read:

ಮೊನ್ನೆ ಫೀಲ್ಡಿಗಿಳಿದು 19 ಕಡೆ ಸರಗಳ್ಳತನ ಮಾಡಿದ್ದ ಖದೀಮರ ಪೈಕಿ ಇಬ್ಬರು ಅರೆಸ್ಟ್ ಆದ್ರು: ಸರಗಳ್ಳರ ಮೋಡಸ್​ ಆಪರೆಂಡಿ ಹೀಗಿತ್ತು!

(two chain snatchers arrested by ccb police)

Published On - 11:47 am, Sat, 21 August 21