ನಮ್ಮ ಪೋಷಕರನ್ನೂ ಭಾರತಕ್ಕೆ ಕರೆ ತನ್ನಿ ಎಂದು ಆಫ್ಘನ್ ವಿದ್ಯಾರ್ಥಿಗಳ ಮನವಿ; ತಾತ್ಕಾಲಿಕ ವೀಸಾಕ್ಕೆ ವ್ಯವಸ್ಥೆ
ಈಗಾಗಲೇ ತುರ್ತು ವೀಸಾಗೆ 14 ಅಫ್ಘಾನಿಸ್ತಾನ್ ವಿದ್ಯಾರ್ಥಿಗಳು ಮನವಿ ಮಾಡಿದ್ದು, ವಿದೇಶಾಂಗ ಇಲಾಖೆಯ ಆಫ್ಘನ್ ಹೆಲ್ಪ್ ಡೆಸ್ಕ್‌ಗೆ ಮನವಿ ಸಲ್ಲಿಸಿದ್ದಾರೆ. ಕರ್ನಾಟಕದ ವಿವಿಧ ವಿವಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು, ನಮಗೆ ಹಾಗೂ ನಮ್ಮ ಪೋಷಕರಿಗೆ ತುರ್ತು ವೀಸಾ ಕೊಡಿ ಎಂದು ಕೋರಿಕೆ ಸಲ್ಲಿಸಿದ್ದಾರೆ.
ಬೆಂಗಳೂರು: ತಾಲಿಬಾನಿಗಳ ಹಿಡಿತಕ್ಕೆ ಸಿಲುಕಿರುವ ಅಫ್ಘಾನಿಸ್ತಾನದಲ್ಲಿರುವ ಕನ್ನಡಿಗರನ್ನು ರಕ್ಷಿಸಲು ತ್ವರಿತ ಕ್ರಮ ಕೈಗೊಳ್ಳಲಾಗುತ್ತಿದೆ. ನಮಗೆ ಇರುವ ಮಾಹಿತಿಯನ್ನು ವಿದೇಶಾಂಗ ವ್ಯವಹಾರಗಳ ಇಲಾಖೆಗೆ (ಎಂಇಎ) ಕೊಡುತ್ತಿದ್ದೇವೆ. ಆಫ್ಘನ್‌ನಲ್ಲಿ ಎಷ್ಟು ಕನ್ನಡಿಗರಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಹೀಗಾಗಿ ಆಫ್ಘನ್‌ನಲ್ಲಿನ ಪರಿಸ್ಥಿತಿ ನೋಡಿಕೊಂಡು ಎಂಇಎ ಕ್ರಮಕೈಗೊಳ್ಳಲಿದೆ ಎಂದು ನೋಡಲ್ ಅಧಿಕಾರಿ ಉಮೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ.
ಇನ್ನೊಂದೆಡೆ ಅಫ್ಘನ್ ವಿದ್ಯಾರ್ಥಿಗಳು ಕರ್ನಾಟಕ ಹೆಲ್ಪ್ ಡೆಸ್ಕ್‌ಗೆ ಮೇಲಿಂದ ಮೇಲೆ ಮನವಿ ಮಾಡಿಕೊಂಡು ತಮ್ಮ ಪೋಷಕರನ್ನು ಭಾರತಕ್ಕೆ ಕರೆ ತರುವಂತೆ ಕೇಳಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಭಾರತಕ್ಕೆ ಬರಲು ಇಚ್ಛಿಸುವ ಆಫ್ಘನ್ ಪ್ರಜೆಗಳಿಗೆ ತಾತ್ಕಾಲಿಕ ವೀಸಾ ನೀಡಲಾಗುವುದು. ತಾತ್ಕಾಲಿಕ ವೀಸಾ ಪಡೆಯಲು, ವೆಬ್ ಸೈಟ್ ಮೂಲಕ ಅಪ್ಲೈ ಮಾಡಿ ಎಂದು ಸಲಹೆ ನೀಡಿದ್ದಾರೆ.
ಈಗಾಗಲೇ ತುರ್ತು ವೀಸಾಗೆ 14 ಅಫ್ಘಾನಿಸ್ತಾನ್ ವಿದ್ಯಾರ್ಥಿಗಳು ಮನವಿ ಮಾಡಿದ್ದು, ವಿದೇಶಾಂಗ ಇಲಾಖೆಯ ಆಫ್ಘನ್ ಹೆಲ್ಪ್ ಡೆಸ್ಕ್‌ಗೆ ಮನವಿ ಸಲ್ಲಿಸಿದ್ದಾರೆ. ಕರ್ನಾಟಕದ ವಿವಿಧ ವಿವಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು, ನಮಗೆ ಹಾಗೂ ನಮ್ಮ ಪೋಷಕರಿಗೆ ತುರ್ತು ವೀಸಾ ಕೊಡಿ ಎಂದು ಕೋರಿಕೆ ಸಲ್ಲಿಸಿರುವ ಬಗ್ಗೆ ನೋಡೆಲ್ ಅಧಿಕಾರಿ ADGP ಉಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಭಾರತೀಯರ ಕಿಡ್ನ್ಯಾಪ್? ಅಫ್ಘಾನಿಸ್ತಾನದ ಕಾಬೂಲ್ ಏರ್ಪೋರ್ಟ್ನಿಂದ 150 ಭಾರತೀಯರನ್ನು ಕಿಡ್ನ್ಯಾಪ್ ಮಾಡಿರುವ ಬಗ್ಗೆ ಕಾಬೂಲ್ನ ಭಾರತೀಯ ದೂತಾವಾಸದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ರಾಯಭಾರ ಕಚೇರಿಯ ಸ್ಥಳೀಯ ಸಿಬ್ಬಂದಿಯಿಂದ ಮಾಹಿತಿ ದೊರೆತಿದ್ದು, ಈ ಬಗ್ಗೆ ಅಫ್ಘಾನಿಸ್ತಾನದ ಮುಸ್ಲಿಂ ಶಿರಜಾದ್ನಿಂದ ಮಾಡಿರುವ ಟ್ವೀಟ್ ಲಭ್ಯವಾಗಿದೆ. ಆದರೆ, ಭಾರತೀಯರ ಕಿಡ್ನ್ಯಾಪ್ ಆಗಿರುವ ಬಗ್ಗೆ ಈವರೆಗೆ ಭಾರತ ಸರ್ಕಾರ ಖಚಿತಪಡಿಸಿಲ್ಲ. ಜತೆಗೆ, ಭಾರತದ ವಿದೇಶಾಂಗ ಇಲಾಖೆ ಕೂಡಾ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ, ಅಫ್ಘಾನಿಸ್ತಾನದ ಸ್ಥಳೀಯ ಮಾಧ್ಯಮಗಳಲ್ಲಿ ಈ ಬಗ್ಗೆ ಮಾಹಿತಿ ಬಿತ್ತರವಾಗುತ್ತಿದೆ.
ಸ್ಥಳೀಯ ಮಾಧ್ಯಮಗಳು ನೀಡಿರುವ ಮಾಹಿತಿ ಪ್ರಕಾರ ಕಾಣೆಯಾಗಿರುವವರು ಭಾರತೀಯರೇ ಎನ್ನಲಾಗಿದ್ದು, ಕಾಬೂಲ್ ವಿಮಾನ ನಿಲ್ದಾಣದ ಹೊರ ಭಾಗದ ಗೇಟ್ ಬಳಿ ಅವರನ್ನೆಲ್ಲಾ ತಾಲಿಬಾನಿಗಳು ವಶಕ್ಕೆ ಪಡೆದಿರುವ ಸಾಧ್ಯತೆ ಇದೆ. ಅದರಲ್ಲಿ ಬೇರೆ ದೇಶಕ್ಕೆ ಸೇರಿದವರೂ ಇದ್ದಾರೋ, ಇಲ್ಲವೋ ಎಂಬುದು ಖಚಿತವಾಗಿಲ್ಲ ಎಂದು ತಿಳಿದುಬಂದಿದೆ.
(ADGP Umesh Kumar on rescuing Kannadigas from Afghanistan and VISA for Afghans)
ಇದನ್ನೂ ಓದಿ: Afghanistan Photos: ಅಫ್ಘಾನಿಸ್ತಾನದಲ್ಲಿ ಹೆತ್ತವರಿಗೂ ಭಾರವಾದ ಮಕ್ಕಳು; ಬಂದೂಕಿನ ಸದ್ದಿನಲ್ಲಿ ಮಕ್ಕಳ ಆಕ್ರಂದನ ಕೇಳುವವರಾರು?
ತಿರುಗಿಬಿದ್ದ ಸ್ಥಳೀಯರು, ಅಫ್ಘಾನಿಸ್ತಾನದ 3 ಜಿಲ್ಲೆಗಳು ತಾಲಿಬಾನಿಗಳಿಂದ ಮುಕ್ತ; ಅಚ್ಚರಿಯ ಬೆಳವಣಿಗೆ
Published On - 1:49 pm, Sat, 21 August 21