ತರಕಾರಿ ಮಾರುವವರ ಮೈಕ್ ಬಳಕೆಯಿಂದ ಆನ್​ಲೈನ್ ಕ್ಲಾಸ್​ಗೆ ತೊಂದರೆ: ಕಮಲ್ ಪಂತ್ ಫೇಸ್ಬುಕ್ ಲೈವ್​ನಲ್ಲಿ ಸಾರ್ವಜನಿಕರ ಅಳಲು

Kamal Pant: ಅಫ್ಘಾನಿಸ್ತಾನದಲ್ಲಿ ಬೆಂಗಳೂರಿನವರು ಸಿಲುಕಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದುವರೆಗೆ ಯಾರೊಬ್ಬರೂ ನನ್ನನ್ನು ಸಂಪರ್ಕಿಸಿಲ್ಲ. ಯಾರಾದ್ರೂ ಸಂಪರ್ಕಿಸಿದ್ರೆ ನೋಡಲ್​ ಅಧಿಕಾರಿಗೆ ಮಾಹಿತಿ ನೀಡುವೆ ಎಂದು ಹೇಳಿದ್ದಾರೆ.

ತರಕಾರಿ ಮಾರುವವರ ಮೈಕ್ ಬಳಕೆಯಿಂದ ಆನ್​ಲೈನ್ ಕ್ಲಾಸ್​ಗೆ ತೊಂದರೆ: ಕಮಲ್ ಪಂತ್ ಫೇಸ್ಬುಕ್ ಲೈವ್​ನಲ್ಲಿ ಸಾರ್ವಜನಿಕರ ಅಳಲು
ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್


ಬೆಂಗಳೂರು: ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸಾರ್ವಜನಿಕರ ಜೊತೆ ಫೇಸ್​ಬುಕ್ ಲೈವ್​ನಲ್ಲಿ ಭಾಗವಹಿಸಿದ್ದಾರೆ. ಸಾರ್ವಜನಿಕರ ಜತೆ ಕಮಲ್​​ ಪಂತ್ ಫೇಸ್​ಬುಕ್​ ಲೈವ್​​ ನಡೆಸಿದ್ದಾರೆ. ಈ ವೇಳೆ ಸಾರ್ವಜನಿಕರು ಹಲವು ಮನವಿಯನ್ನು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸಲ್ಲಿಸಿದ್ದಾರೆ. ತರಕಾರಿ ಮಾರುವವರು ಮೈಕ್ ಬಳಸಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಮಕ್ಕಳ ಆನ್​​ಲೈನ್​​ ಕ್ಲಾಸ್​ಗೆ ತೊಂದರೆ ಆಗುತ್ತಿದೆ. ಮನೆಯಲ್ಲಿರುವ ಹಿರಿಯ ನಾಗರಿಕರಿಗೂ ಸಾಕಷ್ಟು ತೊಂದರೆ ಉಂಟಾಗುತ್ತಿದೆ ಎಂದು ಸಾರ್ವಜನಿಕರು ಕಮಲ್ ಪಂತ್ ಬಳಿ ಅಳಲು ತೋಡಿಕೊಂಡಿದ್ದಾರೆ.

ಟೋಯಿಂಗ್ ಬಗ್ಗೆ ಸಾಕಷ್ಟು ಸಮಸ್ಯೆಗಳು ಕೇಳಿ ಬರುತ್ತಿವೆ. ಈ ಸಂಬಂಧ, ಸಂಚಾರಿ ಜಂಟಿ ಪೊಲೀಸ್ ಆಯುಕ್ತರ ಜತೆ ಮಾತನಾಡುವೆ. ಟ್ರಾಫಿಕ್ ಫೈನ್ ಕಡಿಮೆ ಮಾಡುವಂತೆ ಜನರು ಕೇಳ್ತಿದ್ದಾರೆ ಎಂದು ಲೈವ್​ನಲ್ಲಿ ಕಮಲ್ ಪಂತ್ ಹೇಳಿಕೆ ನೀಡಿದ್ದಾರೆ. ಆದರೆ, ಆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಕಮಲ್ ಪಂತ್, ಹಾಗೆ ಮಾಡುವುದು ಸರಿಯಲ್ಲ. ಕೆಲವರು ಓನ್ ವೇನಲ್ಲಿ ಬರೋದು, ತ್ರಿಬಲ್ ರೈಡಿಂಗ್ ಮಾಡೋದು ಮಾಡ್ತಿದ್ದಾರೆ. ಹಾಗಾದಾಗ ಯಾಕೆ ಫೈನ್ ಕಡಿಮೆ ಮಾಡ ಬೇಕು ಎಂದು ಪ್ರಶ್ನಿಸಿದ್ದಾರೆ. ವ್ಹೀಲಿಂಗ್ ಮಾಡೋರಿಂದ 5 ಲಕ್ಷ ಬಾಂಡ್ ಬರೆಸಿಕೊಳ್ತಿದೀವಿ. ಅವರ ತಂದೆ ತಾಯಿಯಿಂದನೂ ಮುಚ್ಚಳಿಕೆ ಪತ್ರ ಬರೆಸಿಕೊಳ್ತೀವಿ ಎಂದು ಪಂತ್ ತಿಳಿಸಿದ್ದಾರೆ.

ಟೋಯಿಂಗ್ ಸಿಬ್ಬಂದಿಗಳು ಅನೌನ್ಸ್ ಮಾಡದೆ ಗಾಡಿ ಎತ್ತಿಕೊಂಡು ಹೋಗ್ತಿದಾರೆ ಎನ್ನುವ ಆರೋಪ ಕೇಳಿಬಂದಿದೆ. ಅದರ ಬಗ್ಗೆ ನಾನು ಸಂಚಾರಿ ಜಂಟಿ ಪೊಲೀಸ್ ಆಯುಕ್ತರ ಜೊತೆ ಮಾತನಾಡುತ್ತೇನೆ. ಈ ರೀತಿ ಅನಧಿಕೃತವಾಗಿ ಗಾಡಿ ತೆಗೆದುಕೊಂಡು ಹೋದ್ರೆ ಅಂತವರ ಮೇಲೆ ದೂರು ದಾಖಲಿಸಬಹುದು. ಅಂತಹ ಟೋಯಿಂಗ್ ಎಜೆನ್ಸಿಯ ಲೈಸೆನ್ಸ್ ಕ್ಯಾನ್ಸಲ್ ಮಾಡ್ತೀನಿ. ದೂರು ದಾಖಲಿಸಲು ಪ್ರತ್ಯೇಕವಾಗಿ ಕೌಂಟರ್ ಮಾಡ್ತೀವಿ ಎಂದು ಮಾಹಿತಿ ನೀಡಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಬೆಂಗಳೂರಿನವರು ಸಿಲುಕಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದುವರೆಗೆ ಯಾರೊಬ್ಬರೂ ನನ್ನನ್ನು ಸಂಪರ್ಕಿಸಿಲ್ಲ. ಯಾರಾದ್ರೂ ಸಂಪರ್ಕಿಸಿದ್ರೆ ನೋಡಲ್​ ಅಧಿಕಾರಿಗೆ ಮಾಹಿತಿ ನೀಡುವೆ ಎಂದು ಹೇಳಿದ್ದಾರೆ.

ಇದೇ ವೇಳೆ ಟಿವಿ9 ಜೊತೆಗೆ ಮಾತನಾಡಿದ ನೋಡಲ್ ಅಧಿಕಾರಿ ಉಮೇಶ್‌ ಕುಮಾರ್, ಆಫ್ಘನ್‌ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಕೆಲಸ ಮಾಡುತ್ತಿದ್ದೇವೆ. ನಮಗೆ ಇರುವ ಮಾಹಿತಿಯನ್ನು ವಿದೇಶಾಂಗ ಸಚಿವಾಲಯಕ್ಕೆ ಕೊಡ್ತಿದ್ದೇವೆ. ಆಫ್ಘನ್‌ನಲ್ಲಿ ಒಟ್ಟು ಎಷ್ಟು ಕನ್ನಡಿಗರಿದ್ದಾರೆ ಎಂಬ ನಿಖರ ಮಾಹಿತಿ ಇಲ್ಲ. ಈವರೆಗೆ ನಮ್ಮನ್ನು ಇಬ್ಬರು ಮಾತ್ರ ಸಂಪರ್ಕ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಇಂದಿರಾನಗರ ಮೆಟ್ರೋ ಬಳಿ ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ

ಅಫ್ಘಾನಿಸ್ತಾನದ ವಿದ್ಯಾರ್ಥಿಗಳಿಗೆ ಅಗತ್ಯ ನೆರವು ನೀಡುತ್ತೇವೆ; ಪೊಲೀಸ್ ಆಯುಕ್ತ ಕಮಲ್ ಪಂತ್

(Bengaluru Police Kamal Pant on Traffic Rules Toying System Kannadigas in Afghanistan in FB Live)

Published On - 3:01 pm, Sat, 21 August 21

Click on your DTH Provider to Add TV9 Kannada