ಬೆಂಗಳೂರು: ಕೊರೊನಾ ಅಬ್ಬರಕ್ಕೆ ಬ್ರೇಕ್ ಹಾಕೋಕೆ ರಾಜ್ಯದಲ್ಲಿ ಜಾರಿ ಮಾಡಲಾಗಿದ್ದ ವೀಕೆಂಡ್ ಕರ್ಫ್ಯೂ ಇಂದು(ಜ.10) ಬೆಳಗ್ಗೆ ಅಂತ್ಯವಾಗಿದೆ. ಎರಡು ದಿನ ಬಂದ್ ಆಗಿದ್ದ ರಾಜ್ಯ ಮತ್ತೆ ನಾರ್ಮಲ್ ಮೂಡ್ಗೆ ಬರ್ತಿದೆ. ಹೀಗಿದ್ರೂ ಜನ ಮೈಮರೆಯುವಂತಿಲ್ಲ. ಯಾಕೆಂದ್ರೆ 50:50 ರೂಲ್ಸ್, ನೈಟ್ ಕರ್ಫ್ಯೂ ಜಾರಿಯಲ್ಲಿ ಇದ್ದೇ ಇರುತ್ತೆ.
ರಸ್ತೆ ರಸ್ತೆಯಲ್ಲೂ ಬ್ಯಾರಿಕೇಡ್. ಅನಗತ್ಯ ಓಡಾಟ ನಡೆಸುವವರ ಮೇಲೆ ಹದ್ದಿನ ಕಣ್ಣು. ಅಪ್ಪಿ ತಪ್ಪಿ ತಗಲಾಕೊಂಡ್ರೋ ನಿಮ್ಮ ವಾಹನ ಸೀಜ್. ವೀಕೆಂಡ್ ಕರ್ಫ್ಯೂ ಹಿನ್ನೆಲೆ ಶುಕ್ರವಾರ ರಾತ್ರಿ 10 ಗಂಟೆಯಿಂದಲೇ ರಾಜ್ಯದಲ್ಲಿ ಜಾರಿಯಲ್ಲಿದ್ದ ಈ ಟಫ್ ರೂಲ್ಸ್ ಇಂದು ಬೆಳಗ್ಗೆ 5 ಗಂಟೆಗೆ ಎಂಡ್ ಆಗಿದೆ. ಹಾಗಂದ ಮಾತ್ರಕ್ಕೆ ಜನರು ಮೈಮರೆಯೋ ಹಾಗಿಲ್ಲ. ಯಾಕೆಂದ್ರೆ ಇತರ ಕಠಿಣ ನಿರ್ಬಂಧಗಳು ಮುಂದುವರಿಯಲಿವೆ.
ಸಹಜಸ್ಥಿತಿಗೆ ಮರಳಿದ ಜನಜೀವನ ರಾಜ್ಯದಲ್ಲಿ ಮೊದಲ ವಾರದ ವೀಕೆಂಡ್ ಕರ್ಫ್ಯೂ ಅಂತ್ಯಗೊಳ್ಳುತ್ತಿದ್ದಂತೆ ಇಂದಿನಿಂದ ಶುಕ್ರವಾರದವರೆಗೆ ಜನಜೀವನ ಸಹಜಸ್ಥಿತಿಗೆ ಮರಳಿದೆ. ಬಹುತೇಕ ಮಾರ್ಕೆಟ್‌ನಲ್ಲಿ ಜನಜಂಗುಳಿ ಕಂಡು ಬಂದಿದೆ. ವೀಕೆಂಡ್ ಕರ್ಫ್ಯೂ ಮುಗಿಯುತ್ತಿದ್ದಂತೆ ಜನ ಭರ್ಜರಿ ವ್ಯಾಪಾರಕ್ಕೆ ಇಳಿದಿದ್ದಾರೆ. ಬಿಎಂಟಿಸಿ ಬಸ್‌ಗಳ ಸಂಚಾರ ಯಥಾಸ್ಥಿತಿ ಆರಂಭಗೊಂಡಿದೆ. 2 ದಿನದ ಬಳಿಕ ಲಾಲ್‌ಬಾಗ್, ಕಬ್ಬನ್ ಪಾರ್ಕ್ ಓಪನ್ ಆಗಿದ್ದು ಪಾರ್ಕ್‌ಗಳತ್ತ ವಾಯುವಿಹಾರಿಗಳು ಆಗಮಿಸುತ್ತಿದ್ದಾರೆ.
ವೀಕೆಂಡ್ ಕರ್ಫ್ಯೂ ಎಂಡ್ ಇಂದಿನಿಂದ ಮತ್ತೆ 50:50 ರೂಲ್ಸ್ ಶುಕ್ರವಾರ ರಾತ್ರಿ 10 ಗಂಟೆಯಿಂದ ಇಂದು ಬೆಳಗ್ಗೆ 5 ಗಂಟೆಯವರೆಗೆ ಅಂದ್ರೆ ಸುಮಾರು 55 ಗಂಟೆಗಳ ಕಾಲ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿತ್ತು. ಕಠಿಣ ನಿರ್ಬಂಧಗಳನ್ನ ಹೇರಿ ಜನರನ್ನ ನಿಯಂತ್ರಿಸೋ ಕೆಲಸಕ್ಕೆ ಸರ್ಕಾರ ಮುಂದಾಗಿತ್ತು. ಆದ್ರೆ ವೀಕೆಂಡ್ ಕರ್ಫ್ಯೂ ಸಮಯ ಈಗ ಮುಕ್ತಾಯವಾಗಿದೆ. ಜನ ಜೀವನ ಇಂದಿನಿಂದ ಮತ್ತೆ ಸಹಜ ಸ್ಥಿತಿಗೆ ಮರಳಿದೆ.
50:50 ರೂಲ್ಸ್ ಬಿಗಿ ಬೇಲಿ ವೀಕೆಂಡ್ ಕರ್ಫ್ಯೂ ಅಂತ್ಯವಾದ್ರೂ 50:50 ರೂಲ್ಸ್ ಮುಂದುವರಿಯಲಿದೆ. ಇದರ ಜೊತೆಗೆ ಇನ್ನೂ 5 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ಹೀಗಾಗಿ ಕಠಿಣ ನಿರ್ಬಂಧಗಳ ನಡುವೆಯೇ ಜನಜೀವನ ಅನಿವಾರ್ಯ ಎಂಬಂತಾಗಿದೆ. ವೀಕೆಂಡ್ ಕರ್ಫ್ಯೂ ಹಿನ್ನೆಲೆ ಕ್ಲೋಸ್ ಆಗಿದ್ದ ಮಾಲ್, ಪಬ್-ಕ್ಲಬ್ಗಳು, ಥಿಯೇಟರ್, ರೆಸ್ಟೋರೆಂಟ್, ರೆಸಾರ್ಟ್ಗಳು ಇಂದಿನಿಂದ ಮತ್ತೆ ಓಪನ್ ಆಗಲಿವೆ. ಆದ್ರೆ ಇವೆಲ್ಲಕ್ಕೂ 50:50 ರೂಲ್ಸ್ ಅನ್ವಯ ಮುಂದುವರಿಯಲಿದೆ. ಭಕ್ತರ ಪ್ರವೇಶಕ್ಕೆ ದೇಗುಲಗಳೂ ಇಂದಿನಿಂದ ಮುಕ್ತವಾಗಲಿದೆ. ಆದ್ರೆ ಯಾವುದೇ ಕಾರಣಕ್ಕೂ ಜನ ಜಂಗುಳಿಗೆ ಅವಕಾಶ ಇರೋದಿಲ್ಲ. ಈ ಎಲ್ಲ ಬಿಗಿ ನಿಯಮಗಳ ಜೊತೆ ಇವುಗಳ ಜೊತೆ ಇನ್ನೂ 5 ದಿನ ನೈಟ್ ಕರ್ಫ್ಯೂ ಮುಂದುವರಿಯಲಿದ್ದು, ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯವರೆಗೆ ಅನಗತ್ಯ ಓಡಾಟಕ್ಕೆ ನಿರ್ಬಂಧ ಇರಲಿದೆ.
ಇನ್ನು ಶುಕ್ರವಾರ ರಾತ್ರಿ 10 ಗಂಟೆಯಿಂದ ಮತ್ತೆ ವೀಕೆಂಡ್ ಕರ್ಫ್ಯೂ ಆರಂಭವಾಗಲಿದ್ದು, ಸೋಮವಾರ ಬೆಳಗ್ಗೆ 5 ಗಂಟೆಯವರೆಗೂ ಜನ ಜೀವನ ಸ್ತಬ್ಧವಾಗಲಿದೆ. ಅದಾದ ಬಳಿಕ ಮುಂದಿನ ಸ್ಥಿತಿಗತಿ ನೋಡಿಕೊಂಡು ಬಿಗಿ ಕ್ರಮಗಳ ಮುಂದುವರಿಕೆ ಬಗ್ಗೆ ಸರ್ಕಾರ ನಿರ್ಧರಿಸಲಿದ್ದು, ಟಫ್ರೂಲ್ಸ್ ಮುಂದುವರಿಯುತ್ತಾ ಇಲ್ವಾ ಅನ್ನೋದು ಗೊತ್ತಾಗಬೇಕಿದೆ.
ಇದನ್ನೂ ಓದಿ: Headache Home Remedies: ತಲೆನೋವಿನಿಂದ ಪದೇ ಪದೇ ಸಮಸ್ಯೆ ಎದುರಾಗುತ್ತಿದೆಯೇ? ಈ ಮನೆಮದ್ದುಗಳನ್ನು ಬಳಸಿ