ಮತ್ತೆ ವಿವಾದ -ಮೊಹಮ್ಮದ್ ನಲಪಾಡ್ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲು

ಹರಿಪ್ರಸಾದ್ ಅಭಿನಂದನಾ ಕಾರ್ಯಕ್ರಮದ ಹಿನ್ನೆಲೆ ಫ್ಲೆಕ್ಸ್ ಹಾಕಿದ್ದರ ವಿಚಾರವಾಗಿ ಕ್ರಮ ಕೈಗೊಳ್ಳುವಂತೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ ಐಆರ್ ದಾಖಲು ಮಾಡಲಾಗಿದೆ. ನಲಪಾಡ್ ಅಂಡ್ ಟೀಮ್ ಟೌನ್ ಹಾಲ್ ಮುಂಭಾಗ, ಕಾರ್ಪೋರೇಷನ್ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಫ್ಲೆಕ್ಸ್ ಅಳವಡಿಸಿತ್ತು

ಮತ್ತೆ ವಿವಾದ -ಮೊಹಮ್ಮದ್ ನಲಪಾಡ್ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲು
ಮೊಹಮ್ಮದ್ ನಲಪಾಡ್ (ಸಂಗ್ರಹ ಚಿತ್ರ)
Follow us
TV9 Web
| Updated By: ಸಾಧು ಶ್ರೀನಾಥ್​

Updated on:Feb 19, 2022 | 2:07 PM

ಬೆಂಗಳೂರು: ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುವ ಕರ್ನಾಟಕ ಯುವ ಕಾಂಗ್ರೆಸ್​ ಅಧ್ಯಕ್ಷ ಮೊಹಮ್ಮದ್ ನಲಪಾಡ್ (mohammed nalapad) ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ 2 ಪ್ರತ್ಯೇಕ ದೂರು ದಾಖಲಾಗಿದೆ. ಬಿಬಿಎಂಪಿ (bbmp) ಕಂದಾಯ ಅಧಿಕಾರಿ ಚಂದ್ರಕಾಂತ್ ರಿಂದ ಠಾಣೆಗೆ ದೂರು ನೀಡಲಾಗಿತ್ತು. ಅನಧಿಕೃತವಾಗಿ ಫ್ಲೆಕ್ಸ್ ಅಳವಡಿಕೆ (flex) ಹಿನ್ನೆಲೆ ಪ್ರಕರಣ ದಾಖಲಿಸಲಾಗಿದೆ. ಕಾಂಗ್ರೆಸ್ ಹರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅಭಿನಂದನಾ ಕಾರ್ಯಕ್ರಮಕ್ಕೆ ಫ್ಲೆಕ್ಸ್ ಹಾಕುವ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿತ್ತು.

ಈ ಮಧ್ಯೆ, ಅನಧಿಕೃತ ಫ್ಲೆಕ್ಸ್ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತೊಂದು ದೂರು ಸಹ ದಾಖಲಾಗಿದೆ. ಸಾಮಾಜಿಕ ಹೋರಾಟಗಾರ ಸಾಯಿದತ್ತ ಈ ದೂರು ನೀಡಿದ್ದಾರೆ. ಅನಧಿಕೃತವಾಗಿ ಫ್ಲೆಕ್ಸ್ ಹಾಕಿದ ಬಗ್ಗೆ ಕ್ರಮ‌ಕೈಗೊಳ್ಳುವಂತೆ ಅವರು ದೂರಿನಲ್ಲಿ ಕೋರಿದ್ದಾರೆ. ಹರಿಪ್ರಸಾದ್ ಅಭಿನಂದನಾ ಕಾರ್ಯಕ್ರಮದ ಹಿನ್ನೆಲೆ ಫ್ಲೆಕ್ಸ್ ಹಾಕಿದ್ದರ ವಿಚಾರವಾಗಿ ಕ್ರಮ ಕೈಗೊಳ್ಳುವಂತೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ ಐಆರ್ ದಾಖಲು ಮಾಡಲಾಗಿದೆ. ನಲಪಾಡ್ ಅಂಡ್ ಟೀಮ್ ಟೌನ್ ಹಾಲ್ ಮುಂಭಾಗ, ಕಾರ್ಪೋರೇಷನ್ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಫ್ಲೆಕ್ಸ್ ಅಳವಡಿಸಿತ್ತು ಎನ್ನಲಾಗಿದೆ.

ಅನಧಿಕೃತವಾಗಿ ಫ್ಲೆಕ್ಸ್ ಅಳವಡಿಕೆ ಹಿನ್ನೆಲೆ 2 ಪ್ರತ್ಯೇಕ ದೂರು ದಾಖಲು

ಮದುವೆಯಾಗಿ ವಂಚನೆ, ಮಗು ಬೇಡವೆಂದು ಗಲಾಟೆ: ಪಿಡಿಓ ವಿರುದ್ಧ ದೂರು ತುಮಕೂರು: ಮದುವೆಯಾಗಿ ಗರ್ಭಿಣಿಯಾದ ನಂತರ ನನ್ನ ಪತಿ ವಂಚಿಸಿದ್ದಾರೆ ಎಂದು ಆರೋಪಿಸಿ ಟಿ. ನರಸೀಪುರ ತಾಲೂಕಿನ ಮಹಿಳೆಯೊಬ್ಬರು ಕುಣಿಗಲ್ ಪೊಲೀಸ್ ಠಾಣೆ ಗೆ ದೂರು ನೀಡಿದ್ದಾರೆ. ತುಮಕೂರು ಜಿಲ್ಲೆಯ ಕುಣಿಗಲ್ (Kunigal) ತಾಲೂಕಿನ ತೆರೆದಕುಪ್ಪೆ ಗ್ರಾಮ ಪಂಚಾಯತ್​ನ ಪಿಡಿಓ (PDO) ಸುದರ್ಶನ್ ವಿರುದ್ಧ ದೂರು ನೀಡಿದ್ದು, 2011 ರಲ್ಲಿ ದೇವರಾಯನದುರ್ಗ ಬೆಟ್ಟದಲ್ಲಿ ನನ್ನ ವಿವಾಹವಾಗಿತ್ತು. 2016 ರಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹದ ನೊಂದಣಿಯಾಗಿದೆ. 2021 ರಲ್ಲಿ ಮದುವೆಯಾಗಿರುವ ವಿಚಾರ ನನ್ನ ಪತಿಯ ತಾಯಿ ಮತ್ತು ಸಹೋದರರಿಗೆ ತಿಳಿದಾಗ ಅವರು ಆಕ್ಷೇಪಿಸಿದ್ದಾರೆ. ಬಳಿಕ ಸುದರ್ಶನ್ ಮನೆಗೆ ಬರುವುದನ್ನ ನಿಲ್ಲಿಸಿದ್ದರು ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.

ಸುದರ್ಶನ್ ರನ್ನ ಹುಡುಕಿಕೊಂಡು ಗ್ರಾಮ ಪಂಚಾಯತ್ ಗೆ ಜನವರಿ 27 ರಂದು ಭೇಟಿ ನೀಡಿದ್ದು ಅವರು ಅಲ್ಲಿ ಇರಲಿಲ್ಲ. ಇದರಿಂದ ಬೇಸತ್ತು ಕುಣಿಗಲ್ ದೊಡ್ಡಕೆರೆಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದೆ. ಜೊತೆಯಲ್ಲಿ ಇದ್ದ‌ ಮಗು ಕೂಗಿಕೊಂಡ ಕಾರಣ ದಾರಿಯಲ್ಲಿ ಹೋಗುತ್ತಿದ್ದವರು ನನ್ನ ಪಾರು ಮಾಡಿದ್ದರು. ಬಳಿಕ ಚಿಕಿತ್ಸೆ ಪಡೆದು ತಂದೆ ಮನೆಗೆ ಹೋಗಿ ಆರೋಗ್ಯ ಸುಧಾರಣೆ ಬಳಿಕ ಪೊಲೀಸ್​​ ಠಾಣೆಗೆ ಬಂದು ದೂರು ನೀಡಿದ್ದೇನೆ ಅಂತಾ ತಿಳಿಸಿದ್ದಾರೆ.

ಇನ್ನು, ಗರ್ಭಿಣಿಯಾದಗಿಂದಲೂ ಮಗು ಬೇಡವೆಂದು ಗಲಾಟೆ ಮಾಡಿ ಸುದರ್ಶನ್ ಬೈದು ಹೊಡೆಯುತ್ತಿದ್ದರು ಅಂತಾ ಮಹಿಳೆ ಆರೋಪಿಸಿದ್ದಾರೆ. ಹತ್ತು ದಿನಗಳಿಂದ ಮನೆಗೆ ಬಾರದೆ ಮಾನಸಿಕ ಹಿಂಸೆ ನೀಡಿರುವ ಪತಿ ಸುದರ್ಶನ್, ಅತ್ತೆ ಹಾಗೂ ನಾದಿನಿ ವಿರುದ್ಧ ಕ್ರಮ ವಹಿಸುವಂತೆ ಮಹಿಳೆ ದೂರು ನೀಡಿದ್ದಾರೆ. ಕುಣಿಗಲ್ ಪೊಲೀಸ್ ಠಾಣೆ ಯಲ್ಲಿ ದೂರು ನೀಡಲಾಗಿದೆ.

ಇದನ್ನೂ ಓದಿ: ಮದುವೆಯಾಗಿ ವಂಚನೆ, ಮಗು ಬೇಡವೆಂದು ಗಲಾಟೆ: ಪಿಡಿಓ ವಿರುದ್ಧ ದೂರು

ಇದನ್ನೂ ಓದಿ: RBI Recruitment 2022: ಭಾರತೀಯ ರಿಸರ್ವ್ ಬ್ಯಾಂಕ್​ನಲ್ಲಿ 950 ನೇಮಕಾತಿಗಳು, ಯಾರೆಲ್ಲ ಅರ್ಜಿ ಹಾಕಬಹುದು, ವಿವರ ಏನಿದೆ?

Published On - 10:16 am, Sat, 19 February 22