ಸಚಿವ ಸಂಪುಟ ಉಪಸಮಿತಿ ಎಡವಟ್ಟು; ಹೈದರಾಬಾದ್ ಕರ್ನಾಟಕೇತರ ಸರ್ಕಾರಿ ಹುದ್ದೆ ಅಭ್ಯರ್ಥಿಗಳಿಗೆ ಅನ್ಯಾಯ
ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಸರ್ಕಾರಿ ಹುದ್ದೆಗಳಲ್ಲಿ ಹೆಚ್ಚಿನ ಅವಕಾಶ ಕಲ್ಪಿಸಿಕೊಡುವ ಮಹತ್ವಾಕಾಂಕ್ಷೆಯ ವಿಧಿ 372(j) ಅನುಷ್ಟಾನ ಕ್ರಮದಲ್ಲಿ ರಾಜ್ಯ ಸರ್ಕಾರ ಗೊಂದಲದ ಗೂಡನ್ನಾಗಿಸಿದೆ, ಕಳೆದ ಒಂಬತ್ತು ವರ್ಷಗಳಿಂದ ಜ್ವಲಂತ ಸಮಸ್ಯೆಯಾಗಿದ್ದು ಪರಿಹಾರ ಕಂಡುಕೊಳ್ಳುವ ಬದಲಿಗೆ HK ಮತ್ತು ನಾನ್ HK ಅಭ್ಯರ್ಥಿಗಳ ನಡುವೆ ಕಿಚ್ವು ಹಚ್ಚುವ ಕೆಲಸಕ್ಕೆ ಕೈ ಹಾಕಿದ್ಯಾ ಅನ್ನೋ ಅನುಮಾನ ಕಾಡ್ತಿದೆ. ಸದ್ಯ ಸರ್ಕಾರದ ಈ ಹಾವು ಏಣಿ ಆಟದ ಹಿಂದಿನ ಮರ್ಮವೇನು? ಇಲ್ಲಿದೆ ಮಾಹಿತಿ.
ಬೆಂಗಳೂರು, ಜೂನ್.29: 545 ಪಿಎಸ್ಐ (PSI Recruitment Scam) ಅಭ್ಯರ್ಥಿಗಳ ನೇಮಕಾತಿ ಸೇರಿದಂತೆ ಉಪನ್ಯಾಸಕ ಹುದ್ದೆಗಳಿಗೆ ಸರ್ಕಾರದ ನೇಮಕಾತಿಗಳಲ್ಲಿ ವಿಳಂಬ ಧೋರಣೆ ಅನುಸರಿಸಲಾಕ್ತಿದೆ. ಸದ್ಯ ಈಗ 371(j) ಹೈದರಾಬಾದ್ ಮೀಸಲಾತಿ ಸಂಬಂಧಿಸಿದ ವಿಚಾರ ಮುನ್ನಲೆಗೆ ಬಂದಿದ್ದು 2021ರ ಪಿಎಸ್ಐ ನೇಮಕಾತಿಗೆ 2023ರ ಸುತ್ತೋಲೆಯ ಮಾರ್ಗಸೂಚಿ ಪೂರ್ವನ್ವಯ ಮಾಡುವ ಬಗ್ಗೆ ಗೊಂದಲ ಏರ್ಪಟ್ಟಿದೆ. ಪಕ್ಷಪಾತಿ ಧೋರಣೆಯ ಅವೈಜ್ಞಾನಿಕ ಸುತ್ತೋಲೆ ಸಂವಿಧಾನಾತ್ಮಕ ನಿಯಮಗಳಿಗೆ ವಿರುದ್ದವಾಗಿದ್ದು, ಕೆಲವು ಪ್ರಕರಣಗಳಲ್ಲಿ ಕೆಎಟಿ ಚಾಟಿ ಬೀಸಿದ್ರು ದಪ್ಪ ಚರ್ಮದ ಸರ್ಕಾರ ಉದ್ದಟತನ ಮುಂದುವರೆಸಿದೆ.
ಸಂವಿಧಾನಾತ್ಮಕವಾಗಿ ಯಾವುದೇ ನಿಯಮಗಳನ್ನು ಪೂರ್ವನ್ವಯ ಮಾಡಲು ಅವಕಾಶವಿಲ್ಲ. ಆದ್ರೂ ಈ ಹಿಂದೆ ಇತರೆ RWS(ರೂರಲ್ ವಾಟರ್ ಸ್ಯಾನಿಟೇಷನ್ ಬೋರ್ಡ್) ಹಾಗೂ ಕೆಎಸ್ ಆರ್ ಪಿ(SI) ಹುದ್ದೆಗಳ ನೇಮಕಾತಿಯಲ್ಲಿ ಸರ್ಕಾರ ಪೂರ್ವನ್ವಯಗೊಳಿಸಿದ್ದ 1 ಫೆಬ್ರವರಿ 2023 ಸುತ್ತೋಲೆ ರದ್ದಾಗಿದೆ. ಸದರಿ ಅವೈಜ್ಙಾನಿಕ ಸುತ್ತೋಲೆ ರದ್ದುಗೊಳಿಸಿರುವ ಕೆಎಟಿ, ಸುತ್ತೋಲೆ ಮೂಲಕ ಹಲವು ನೇಮಕಾತಿ ಪೂರ್ವನ್ವಯಗೊಂಡವು. ಈ ಹಿಂದೆಯೂ ರದ್ದುಮಾಡಿತ್ತು. ಅದಾಗ್ಯೂ ಪಟ್ಟಭದ್ರ ಹಿತಾಸಕ್ತಿ ಕೆಲವು ಜನಪ್ರತಿನಿಧಿಗಳ ಮೇಲಿಂದ ಮೇಲೆ ತೀವ್ರ ಒತ್ತಡ, ಕಲ್ಯಾಣ ಕರ್ನಾಟಕ ಭಾಗದ ಸ್ಥಳೀಯ ಅಭ್ಯರ್ಥಿಗಳ ಒತ್ತಡಕ್ಕೆ ಮಣಿದು ಹೊರಡಿಸಿದ್ದ ಸುತ್ತೋಲೆ ಇದಾಗಿದೆ ಎಂಬುದನ್ನು ಸುತ್ತೊಲೆಯಲ್ಲೇ ಉಲ್ಲೇಖಿಸಿದ್ದು ಹಾಸ್ಯಸ್ಪದವಾಗಿದೆ.
ಇದನ್ನೂ ಓದಿ: ಪೊಲೀಸರ ಮೇಲೆ ಸಿನಿಮೀಯ ರೀತಿಯಲ್ಲಿ ಅಟ್ಯಾಕ್, ಆರೋಪಿ ಸಮೇತ ಎಸ್ಕೇಪ್
2013 ರ ರಾಜ್ಯಪಾಲರ ಆದೇಶ ಮತ್ತು ನಿಯಮಗಳಿಗೆ ವಿರುದ್ದವಾಗಿ ಸುತ್ತೋಲೆ ಇದಾಗಿದ್ದು ಸಚಿವ ಪ್ರಿಯಾಂಕ ಖರ್ಗೆ, ಸಚಿವ ಸಂಪುಟ ಉಪಸಮಿತಿ ಅಧ್ಯಕ್ಷತೆ ವಹಿಸಿದ್ದು, ಸದರಿ ಗೊಂದಲಕ್ಕೆ ಸ್ಪಂದಸ್ತಿಲ್ಲ. ಸಚಿವ ಸಂಪುಟ ಉಪ ಸಮಿತಿಯಿಂದ ಹೊರಡಿಸಲಾದ ಅವೈಜ್ಞಾನಿಕ ಸುತ್ತೋಲೆ ಜಾರಿಯಿಂದ ಗೊಂದಲ ಏರ್ಪಟ್ಟಿದ್ದು, ಕಲ್ಯಾಟ ಕರ್ನಾಟಕ ಹೊರತುಪಡಿಸಿದ 24 ಜಿಲ್ಲೆಯ ಸರ್ಕಾರದ ಹುದ್ದೆಗಳ ಆಕಾಂಕ್ಷಿಗಳಿಗೆ ಅನ್ಯಾಯವಾಕ್ತಿದೆ ಎಂಬ ಆರೋಪವಿದೆ.
ಸದ್ಯ ಕ್ಯಾಬಿನೆಟ್ ಉಪಸಮಿತಿಯಿಂದ ಹೊರಡಿಸಲಾಕ್ತಿರುವ ಈ ಸುತ್ತೋಲೆಗಳ ಕುರಿತು ಅವೈಜ್ಞಾನಿಕ ನಿಲುವನ್ನು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಖಂಡಿಸಿ ಪತ್ರ ಬರೆದಿದ್ದರು ಪರಿಗಣನೆಗೆ ತೆಗೆದುಕೊಂಡಂತೆ ಕಾಣ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ 371(j) ಸಂವಿಧಾನ ವಿಧಿಯ ಸಮರ್ಪಕ ಅನುಷ್ಟಾನಕ್ಕೆ ಮುಂದಾಗುತ್ತಾ, ಸದ್ಯ 545 ಪಿಎಸ್ಐ ಹುದ್ದೆಗೆ ಎರಡೆರಡು ಹೈಕೋರ್ಟ್ ಆದೇಶದ ಬಳಿಕ ಪರೀಕ್ಷೆ ಬರೆದ್ರು ಹುದ್ದೆಮಾತ್ರ ಮರೀಚಿಕೆ ಆಗಿದೆ. ಸದ್ಯ ಇನ್ನಾದ್ರೂ ಸರ್ಕಾರ ಗೊಂದಲಗಳಿಗೆ ತೆರೆ ಎಳೆಯುತ್ತಾ ಅನ್ನೋದನ್ನ ಕಾದುನೋಡಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:48 am, Sat, 29 June 24