ಅಂತರರಾಷ್ಟ್ರೀಯ ಗ್ರೀನ್ ವೆಹಿಕಲ್ ಎಕ್ಸ್ ಪೋ; ಗಮನ ಸೆಳೆಯುತ್ತಿವೆ ಭವಿಷ್ಯದ ಸರಕು ಸಾಗಣೆ ವಾಹನಗಳು

ಅಂತರರಾಷ್ಟ್ರೀಯ ಗ್ರೀನ್ ವೆಹಿಕಲ್ ಎಕ್ಸ್ ಪೋಗೆ ಅದ್ದೂರಿ ಚಾಲನೆ ಸಿಕ್ಕಿದ್ದು, ಇಂಧನ ದರ ಹೆಚ್ಚುತ್ತಿದ್ದು, ಪರ್ಯಾಯ ವಾಹನಗಳತ್ತ ಜನರನ್ನು ಸೆಳೆಯಲು ಪ್ರಯತ್ನಗಳು ಮುಂದುವರೆದಿವೆ. ಅದರಂತೆ ಅಂತರರಾಷ್ಟ್ರೀಯ ಗ್ರೀನ್ ವೆಹಿಕಲ್ ಎಕ್ಸ್ ಪೋದಲ್ಲಿ ಹಸಿರು ವಾಹನಗಳು ಅನಾವರಣಗೊಂಡಿದ್ದು, ಮೂರು ದಿನಗಳ ಇ ಮೇಳದಲ್ಲಿ ಭವಿಷ್ಯದ ಸರಕು ಸಾಗಾಣೆ ಆಟೋ, ದ್ವಿಚಕ್ರ ವಾಹನಗಳು ಹಾಗೂ ವೈವಿಧ್ಯಮ ಕಾರುಗಳು ಗಮನ ಸೆಳೆಯುತ್ತಿವೆ.

ಅಂತರರಾಷ್ಟ್ರೀಯ ಗ್ರೀನ್ ವೆಹಿಕಲ್ ಎಕ್ಸ್ ಪೋ; ಗಮನ ಸೆಳೆಯುತ್ತಿವೆ ಭವಿಷ್ಯದ ಸರಕು ಸಾಗಣೆ ವಾಹನಗಳು
ಅಂತರರಾಷ್ಟ್ರೀಯ ಗ್ರೀನ್ ವೆಹಿಕಲ್ ಎಕ್ಸ್ ಪೋ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 28, 2024 | 10:11 PM

ಬೆಂಗಳೂರು, ಜೂ.28: ಬೆಂಗಳೂರಿನ ಮಾದವಾರ (Madavara) ಬಳಿಯ ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ 5 ನೇ ಆವೃತ್ತಿಯ ಮೂರು ದಿನಗಳ ಹಸಿರು ವಾಹನಗಳ ಮೇಳಕ್ಕೆ ವೈಭವದ ಚಾಲನೆ ದೊರೆತಿದ್ದು, ಗ್ರೀನ್ ವೆಹಿಕಲ್ ಎಕ್ಸ್ ಪೋ (Green Vehicle Expo)ದಲ್ಲಿ ಸರಕು ಸಾಗಣೆ ಆಟೋ, ದ್ವಿಚಕ್ರ ವಾಹನಗಳು, ವೈವಿಧ್ಯಮ ಕಾರುಗಳು, ಬಗೆ ಬಗೆಯ ಎಲೆಕ್ಟ್ರಿಕ್ ವಾಹನಗಳು ಅನಾವರಣಗೊಂಡಿವೆ. ಭವಿಷ್ಯದ ವಾಹನಗಳ ಬಗ್ಗೆ ಜನ ಸಾಮಾನ್ಯರಲ್ಲಿ ಕೌತುಕತೆ ಹೆಚ್ಚಾಗಿದ್ದು, ಈ ಮೂಲಕ ಜನ ಸಾಮಾನ್ಯರನ್ನು ಆಕರ್ಷಿಸಲು ವಾಹನೋದ್ಯಮ ಉತ್ಸುಕವಾಗಿದೆ.

ಕರ್ನಾಟಕ ನವೀಕರಿಸಬಹುದಾದ ಇಂಧನ ಉತ್ಪಾದಕರ ಸಂಘ, ಭಾರತದ ಪ್ರಮುಖ ಪರಿಸರ ಸಂಶೋಧನಾ ಸಂಸ್ಥೆಯಾದ ಇಂಧನ ಪರಿಸರ ಸಂಪನ್ಮೂಲ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ ಮೇಳ ಇದಾಗಿದ್ದು, ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಕೆ. ಸಾಕ್ರಟೀಸ್, ಹೈದ್ರಾಬಾದ್ ನ ಮೀಡಿಯಾ ಮಾರ್ಕೆಟಿಂಗ್ ಸಂಸ್ಥೆಯ ನಿರ್ದೇಶಕರಾದ ಮೊಹಮದ್ ಮುದಸ್ಸರ್, ರಾಮ್ ಸೌಂದಲ್ಕರ್, ಖಾಸಿಫ್ ರಾಜಾ, ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಉದ್ಯಮ ಸಚಿವಾಲಯದ ನಿರ್ದೇಶಕರಾದ ಡಾ. ಕೆ ಸೋಕ್ರೀಟ್ಸ್, ಫೆರ್ರಿ ಹಿರಿಯ ನಿರ್ದಶಕ ಶಶಿಕುಮಾರ್ ,ಅಧ್ಯಕ್ಷ ರಮೇಶ್ ಶಿವಣ್ಣ, ಆಲ್ ಇಂಡಿಯಾ ಸೋಲಾರ್ ಥರ್ಮಲ್ ಫೆಡರೇಷನ್ ಅಧ್ಯಕ್ಷ ಕೆ.ಆರ್. ಸುರೇಂದ್ರ ಕುಮಾರ್, ಕ್ರೇಷ್ಮಾ ಕಾರ್ಯದರ್ಶಿ ಎ.ಸಿ. ಈಶ್ವರ್, ಆಟೋ ಪಾರ್ಟ್ಸ್ ಡೀಲರ್ ಅಸೋಸಿಯೇಷನ್ ಅಧ್ಯಕ್ಷ ಕೆ. ವೆಂಕಟೇಶ್ ಚಾಲನೆ ನೀಡಿದರು.

ಇದನ್ನೂ ಓದಿ:ಹೆದ್ದಾರಿ ನಾಮ ಫಲಕಗಳು ಏಕೆ ಕೇವಲ ಹಸಿರು ಬಣ್ಣದಲ್ಲಿರುತ್ತದೆ? ಇದರ ಹಿಂದೆ ವೈಜ್ಞಾನಿಕ ಕಾರಣ ಇದೆ

ಮೇಳದಲ್ಲಿ ಇವಿ ಘಟಕಗಳು, ಬಿಡಿಭಾಗಗಳು, ತಂತ್ರಜ್ಞಾನಗಳು ಮತ್ತು ಸಂಬಂಧಪಟ್ಟ ಕೈಗಾರಿಕಾ ವಲಯವನ್ನು ಒಂದೇ ವೇದಿಕೆಗೆ ತರಲಾಗಿದೆ. ಇದರಿಂದ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ, ವಿತರಣೆ ಮತ್ತು ಮಾರಾಟದಲ್ಲಿ ಪಾಲುದಾರರಿಗೆ ಗ್ರೀನ್ ವೆಹಿಕಲ್ ಎಕ್ಸ್ಪೋ ಸೂಕ್ತ ವೇದಿಕೆಯಾಗಿ ಪರಿಣಮಿಸಿದೆ. ಇವಿ ಕುರಿತು ಕರ್ನಾಟಕ ಸರ್ಕಾರದ ಹೊಸ ನೀತಿಯು ಉದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡುತ್ತಿದೆ. ಸುಮಾರು 1 ಲಕ್ಷ ಉದ್ಯೋಗ ಸೃಷ್ಟಿ ಮತ್ತು 50,000 ಕೋಟಿ ರೂ ಹೂಡಿಕೆ ಗುರಿ ಹೊಂದಲಾಗಿದೆ.

ಇಂಧನ ದರ ಹೆಚ್ಚುತ್ತಿದ್ದು, ಪರ್ಯಾಯ ವಾಹನಗಳತ್ತ ಜನರನ್ನು ಸೆಳೆಯಲು ಪ್ರಯತ್ನಗಳು ಮುಂದುವರೆದಿವೆ. ಗ್ರೀನ್ ವೆಹಿಕಲ್ ಎಕ್ಸ್ ಫೋ ಮೇಡ್ ಇನ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾ ಪರಿಕಲ್ಪನೆಯ ಕೇಂದ್ರವಾಗಿದೆ. ಹಸಿರು ವಾಹನಗಳನ್ನು ತಯಾರಿಸುವ ಸಂಸ್ಥೆಗಳಿಗೆ ತಮ್ಮ ಬ್ರ್ಯಾಂಡ್ ವ್ಯಾಪ್ತಿಯನ್ನು ಬಲಪಡಿಸಲು ಸಹಾಯ ಮಾಡುವ ನಿರೀಕ್ಷೆ ಹೊಂದಲಾಗಿದೆ. 3 ದಿನಗಳ ಮೇಳದಲ್ಲಿ ಸುಮಾರು 15 ಸಾವಿರಕ್ಕೂ ಅಧಿ ಮಂದಿ ಭೇಟಿ ನೀಡುವ ನಿರೀಕ್ಷೆಯಿದ್ದು, 100 ಕ್ಕೂ ಹೆಚ್ಚು ಪ್ರದರ್ಶಕರನ್ನು ಒಳಗೊಂಡಿದೆ. ಇದರಲ್ಲಿ ಉದ್ಯಮದ ಪ್ರಮುಖ ಆಟಗಾರರು 700 ಕ್ಕೂ ಹೆಚ್ಚು ವಿವಿಧ ಉತ್ಪನ್ನಗಳನ್ನು ಪ್ರದರ್ಶಿಸಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
‘ದರ್ಶನ್ ನೋಡಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ’: ಅಭಿಮಾನಿ
‘ದರ್ಶನ್ ನೋಡಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ’: ಅಭಿಮಾನಿ
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭಾರತ ಫೈನಲ್​ ಮ್ಯಾಚ್​ ಗೆಲುವಿಗೆ ಈ ಐದು ಕಾರಣಗಳು, ಯಾವುವು ಗೊತ್ತಾ?
ಭಾರತ ಫೈನಲ್​ ಮ್ಯಾಚ್​ ಗೆಲುವಿಗೆ ಈ ಐದು ಕಾರಣಗಳು, ಯಾವುವು ಗೊತ್ತಾ?