ರಾಜಧಾನಿ ಬೆಂಗಳೂರಿನಲ್ಲಿ ಗಣತಂತ್ರ ದಿನವೇ ಹಸಿರು ಕ್ರಾಂತಿ.. 10 ಸಾವಿರಕ್ಕೂ ಅಧಿಕ ವಾಹನಗಳಿಂದ ರ‍್ಯಾಲಿ

ಚಳಿಗೂ ಬಗ್ಗಲಿಲ್ಲ.. ಬಿಸಿಲಿಗೂ ಜಗ್ಗುತ್ತಿಲ್ಲ.. ಕಾಯ್ದೆ ಹಿಂಪಡೆಯೋವರೆಗೂ ಕದಲೋದಿಲ್ಲ ಅಂತಾ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ರೈತರು ಪ್ರತಿಭಟನೆಗಿಳಿದಿದ್ದಾರೆ. ಅದ್ರಲ್ಲೂ ಇಂದು ಟ್ರ್ಯಾಕ್ಟರ್ ಪರೇಡ್‌ ನಡೆಸುತ್ತಿದ್ದಾರೆ. ಆ ಹೋರಾಟ ಬೆಂಬಲಿಸಿರೋ ರಾಜ್ಯದ ಅನ್ನದಾತರು ಇಂದು ಟ್ರ್ಯಾಕ್ಟರ್‌ನೊಂದಿಗೆ ಬೆಂಗಳೂರಿಗೆ ಲಗ್ಗೆ ಹಾಕ್ತಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಗಣತಂತ್ರ ದಿನವೇ ಹಸಿರು ಕ್ರಾಂತಿ.. 10 ಸಾವಿರಕ್ಕೂ ಅಧಿಕ ವಾಹನಗಳಿಂದ ರ‍್ಯಾಲಿ
ಸಂಗ್ರಹ ಚಿತ್ರ
Ayesha Banu

| Edited By: Ghanashyam D M | ಡಿ.ಎಂ.ಘನಶ್ಯಾಮ

Jan 26, 2021 | 10:50 AM

ರಾಜಧಾನಿಯಲ್ಲಿ ಪ್ರತಿಭಟಿಸಿದ್ದು ಆಯ್ತು.. ಜಿಲ್ಲೆ ಜಿಲ್ಲೆಗಳಲ್ಲೂ ಹೋರಾಟ ಮಾಡಿದ್ದು ಆಯ್ತು. ಆದ್ರೆ ಸರ್ಕಾರ ಕ್ಯಾರೇ ಅಂತಿಲ್ಲ. ಪ್ರತಿಭಟನೆಗೆ ಜಗ್ಗುತ್ತಿಲ್ಲ. ಕಾಯ್ದೆಯನ್ನ ಹಿಂಪಡೆಯುತ್ತಿಲ್ಲ. ಇದೇ ಈಗ ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದೆ. ರೈತರನ್ನ ಕೆರಳುವಂತೆ ಮಾಡಿದೆ. ಮಣ್ಣು ನಂಬಿದ ಜನರ ಬಾಯಿಗೆ ಮಣ್ಣು ಹಾಕ್ಬೇಡಿ ಅಂತಾ ಬೃಹತ್‌ ಹೋರಾಟವನ್ನೇ ಕೈಗೊಂಡಿದ್ದಾರೆ.

ದಂಡೆತ್ತಿ ಬರ್ತಿದ್ದಾರೆ 20 ಸಾವಿರಕ್ಕೂ ಅಧಿಕ ಅನ್ನದಾತರು ದೆಹಲಿಯಲ್ಲಿ ನಡೀತಿರೋ ಈ ಪ್ರತಿಭಟನೆಗೆ ರಾಜ್ಯದಲ್ಲೂ ದೊಡ್ಡ ಬೆಂಬಲ ವ್ಯಕ್ತವಾಗಿದೆ. ಇಂದು ರಾಜಧಾನಿ ಬೆಂಗಳೂರು ಕಂಪ್ಲೀಟ್ ಲಾಕ್ ಆಗೋ ಸಾಧ್ಯತೆ ಇದೆ. ಯಾಕಂದ್ರೆ ರೈತ ಮುಖಂಡರೇ ಘೋಷಣೆ ಮಾಡಿರುವಂತೆ 20 ಸಾವಿರಕ್ಕೂ ಅಧಿಕ ಅನ್ನದಾತರು ರಾಜಧಾನಿಗೆ ದಂಡೆತ್ತಿ ಬರ್ತಿದ್ದಾರೆ. ಅಷ್ಟೇ ಅಲ್ಲ ಟ್ರ್ಯಾಕ್ಟರ್ ಸೇರಿದಂತೆ 10 ಸಾವಿರಕ್ಕೂ ಅಧಿಕ ವಾಹನಗಳು ರಾಜಧಾನಿಯ ರಸ್ತೆಗಳಿಗೆ ಇಳಿಯಲಿವೆ.

ಹೌದು, ಸೈನಿಕರೆಲ್ಲಾ ಮುತ್ತಿಗೆಹಾಕಿದ್ರೂ ಬಿತ್ತು ಉಳುವುದನ್ನ ಬಿಡೋದಿಲ್ಲ ಅಂತಾ ಹೊಲದಲ್ಲೇ ಇರ್ತಿದ್ದ ಬೆವರಿನ ಮಕ್ಕಳು, ಇಂದು ಟ್ರ್ಯಾಕ್ಟರ್ ಮೂಲಕವೇ ರಾಜಧಾನಿಗೆ ನುಗ್ಗಲು ಮುಂದಾಗಿದ್ರು. ಅದಕ್ಕಾಗಿ ರಾತ್ರಿಯೇ ಬೆಂಗಳೂರಿನತ್ತ ಹೆಜ್ಜೆ ಇಟ್ಟಿದ್ದ ರೈತರನ್ನ ಪೊಲೀಸರು ಮಾರ್ಗ ಮಧ್ಯೆಯೇ ತಡೆಹಿಡಿದಿದ್ದಾರೆ.

ಬೆಂಗಳೂರಿನತ್ತ ದಂಡೆತ್ತಿ ಬರುತ್ತಿದೆ ಅನ್ನದಾತರ ಸೈನ್ಯ ರೈತ ವಿರೋಧಿ ಕೃಷಿ ಕಾಯ್ದೆಗಳನ್ನ ಹಿಂಪಡೆಯಲು ಆಗ್ರಹಿಸಿ ಮೈಸೂರು ಜಿಲ್ಲೆಯ ರೈತರು ಬೆಂಗಳೂರಿನತ್ತ ಟ್ರ್ಯಾಕ್ಟರ್ ಱಲಿ ಮೂಲಕ ರಾತ್ರಿಯೇ ಹೊರಟಿದ್ರು. ಆದ್ರೆ ಪೊಲೀಸರು ಮಾರ್ಗ ಮಧ್ಯೆಯೇ ರೈತರನ್ನ ತಡೆದು ಟ್ರಾಕ್ಟರ್ ಬದಲು ಮನವೊಲಿಸಿ ಬಸ್‌ನಲ್ಲಿ ಕಳಿಸಿಕೊಟ್ರು. ಎಸ್ಕಾರ್ಟ್ ಮೂಲಕ 3 ಬಸ್‌ಗಳಲ್ಲಿ ರೈತರನ್ನ ಬೆಂಗಳೂರಿಗೆ ಕಳಿಸಿದ್ರು.

ಮಂಡ್ಯ ಜಿಲ್ಲೆಯಲ್ಲಿ 4 ಟ್ರ್ಯಾಕ್ಟರ್ ವಶಕ್ಕೆ ರಾಜಧಾನಿ ಬೆಂಗಳೂರಿನತ್ತ 4 ಟ್ರ್ಯಾಕ್ಟರ್‌ಗಳಲ್ಲಿ ಆಗಮಿಸುತ್ತಿದ್ದ ಮಂಡ್ಯ ಜಿಲ್ಲೆ ರೈತರನ್ನ ಪೊಲೀಸರು ಮಾರ್ಗ ಮಧ್ಯೆ ತಡೆಹಿಡಿದಿದ್ದಾರೆ. ಪಾಂಡವಪುರದಲ್ಲಿ 1, ಕೆಆರ್ ಎಸ್ ನಲ್ಲಿ 3 ಟ್ರ್ಯಾಕ್ಟರ್ ವಶಕ್ಕೆ ಪಡೆದಿದ್ದಾರೆ. ಟ್ರ್ಯಾಕ್ಟರ್ ಗಳಲ್ಲಿ ರೈತರು ಬೆಂಗಳೂರಿಗೆ ಹೋಗುವಂತಿಲ್ಲ, ಬೈಕ್, ಕಾರು, ಬಸ್ ಗಳಲ್ಲಿ ಹೋಗಲು ಮಾತ್ರ ಅವಕಾಶವಿದೆ ಎಂದು ಪೊಲೀಸರು ಸೂಚಿಸಿದ್ರು.

ಹೊಸಕೋಟೆ ಬಳಿ ಟ್ರ್ಯಾಕ್ಟರ್‌ಗಳಿಗೆ ತಡೆ ಬೆಂಗಳೂರಿಗೆ ಬರುತ್ತಿದ್ದ ಟ್ರ್ಯಾಕ್ಟರ್ ಗಳಿಗೆ ಹೊಸಕೋಟೆ ಹೊರವಲಯದ ಟೋಲ್ ಬಳಿ ಪೊಲೀಸರಿಂದ ತಡೆದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಳಿ ಪೊಲೀಸರು ಟ್ರ್ಯಾಕ್ಟರ್ ತಡೆದು ಎಲ್ಲರನ್ನೂ ವಶಕ್ಕೆ ಪಡೆದ್ರು.

ಬೆಳಗಾವಿಯಿಂದ ರೈಲಿನಲ್ಲಿ ಬರ್ತಿದೆ ರೈತರ ದಂಡು ಇನ್ನು ಬೆಳಗಾವಿ ಜಿಲ್ಲೆಯ ರೈತರು ಱಲಿಯಲ್ಲಿ ಭಾಗಿಯಾಗಲು ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್​ ರೈಲಿನಲ್ಲಿ ಆಗಮಿಸಿದ್ರು. ಗೋಕಾಕ್, ಘಟಪ್ರಭಾ, ಕೊಣ್ಣೂರು ಭಾಗದ ರೈತರು ರಾತ್ರಿಯೇ ಬೆಳಗಾವಿಯಿಂದ ಹೊರಟು ಬೆಂಗಳೂರು ಸೇರಿದ್ದಾರೆ. ಇಂದು ನಡೆಯುವ ಱಲಿಯಲ್ಲಿ ಭಾಗವಹಿಸಲಿದ್ದಾರೆ.

ಹೀಗೆ ಜಿಲ್ಲೆ ಜಿಲ್ಲೆಗಳಿಂದಲೂ ಆಗಮಿಸಿರುವ ಹಸಿರು ಸೇನಾನಿಗಳು ರಾಜ್ಯ ರಾಜಧಾನಿಗೆ ಮುತ್ತಿಗೆ ಹಾಕಲು ಕೌಂಟ್‌ಡೌನ್ ಶುರುವಾಗಿದೆ. ತುಮಕೂರು, ಕೋಲಾರ, ಚಿಕ್ಕಬಳ್ಳಾಪುರದಿಂದ ರೈತರು ಈಗಾಗಲೇ ರಾಜಧಾನಿ ತಲುಪಿದ್ದಾರೆ. ಒಟ್ನಲ್ಲಿ ಕೃಷಿ ಕಾಯ್ದೆ ವಿರುದ್ಧ ಸಿಡಿದೆದ್ದಿರೋ ಅನ್ನದಾತರ ಎಂಟ್ರಿಗೆ ಕ್ಷಣಗಣನೆ ಆರಂಭವಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ದಂಗಲ್.. ಗಣರಾಜ್ಯೋತ್ಸವ ಕಾರ್ಯಕ್ರಮ ಮುಗೀತಿದ್ದಂತೆ ರ್ಯಾಲಿ ಶುರು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada