AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಸೈಬರ್ ಕ್ರೈಂ ಕಥೆ ಹೇಳಿ ಉದ್ಯಮಿ ಖಾತೆಯಿಂದಲೇ ಹಣ ಲಪಟಾಯಿಸಿದ ಖದೀಮ

ಸೈಬರ್ ಖದೀಮ ಉದ್ಯಮಿಯೊಬ್ಬರಿಗೆ ಕಾಲ್ ಮಾಡಿ ತಮ್ಮ ಹೆಸರಿನಲ್ಲಿ ನೋಂದಣಿಯಾಗಿರುವ ಸಿಮ್ ಕಾರ್ಡ್ಅನ್ನು ಅಕ್ರಮ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ನಂಬಿಸಿ ವಂಚಿಸಿದ್ದಾನೆ. ಉದ್ಯಮಿ ಬ್ಯಾಂಕ್ ಖಾತೆಯಿಂದ 76,000 ರೂ. ಲಪಟಾಯಿಸಲಾಗಿದೆ. ಈ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರು: ಸೈಬರ್ ಕ್ರೈಂ ಕಥೆ ಹೇಳಿ ಉದ್ಯಮಿ ಖಾತೆಯಿಂದಲೇ ಹಣ ಲಪಟಾಯಿಸಿದ ಖದೀಮ
ಸೈಬರ್​ ಕ್ರೈಂ
ಆಯೇಷಾ ಬಾನು
|

Updated on: Nov 13, 2023 | 8:52 AM

Share

ಬೆಂಗಳೂರು, ನ.13: ತಮ್ಮ ಹೆಸರಿನಲ್ಲಿ ನೋಂದಣಿಯಾಗಿರುವ ಸಿಮ್ ಕಾರ್ಡ್ (Sim Card) ಅನ್ನು ಅಕ್ರಮ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ನಂಬಿಸಿ ಸೈಬರ್ ವಂಚಕರು (Cyber Crime) ಉದ್ಯಮಿಯೊಬ್ಬರನ್ನು ವಂಚಿಸಿ ಅವರ ಬ್ಯಾಂಕ್ ಖಾತೆಯಿಂದ 76,000 ರೂ. ಲಪಟಾಯಿಸಿರುವ ಘಟನೆ ನಡೆದಿದೆ. ಈ ಸಂಬಂಧ ಕೆಂಪಾಪುರದ ಭುವನೇಶ್ವರಿನಗರದ ನಿವಾಸಿ ರಮೇಶ್ ದ್ರುವರಾವ್ ದೇಶಪಾಂಡೆ (55) ಅವರು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಉದ್ಯಮಿ ರಮೇಶ್ ಅವರಿಗೆ ನವೆಂಬರ್ 6 ರಂದು ಬೆಳಿಗ್ಗೆ 11.30ರ ಸುಮಾರಿಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ತನ್ನನ್ನು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದು ತಮ್ಮ ಆಧಾರ್ ಕಾರ್ಡ್ ದಾಖಲೆಯನ್ನು ಬಳಸಿಕೊಂಡು ತಮ್ಮ ಹೆಸರಿನಲ್ಲಿ ನೋಂದಾಯಿಸಲಾದ ಸಿಮ್ ಕಾರ್ಡ್ ಅನ್ನು ಅಕ್ರಮ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ. ಮತ್ತು ಈ ರೀತಿ ಅಕ್ರಮ ಎಸಗುತ್ತಿರುವವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿಸಿದ್ದಾರೆ. ಈ ವೇಳೆ ರಮೇಶ್ ಅವರು, ತಮ್ಮ ಹೆಸರು ಬಳಸಿಕೊಂಡು ನಡೆಸಲಾಗುತ್ತಿರುವ ಅಕ್ರಮ ಚಟುವಟಿಕೆಗಳೇನು ಎಂದು ಕೇಳಿದಾಗ, ವ್ಯಕ್ತಿ ಕಾಲ್ ಕಟ್ ಮಾಡಿದ್ದಾನೆ.

ಸಡನ್ ಆಗಿ ಕಾಲ್ ಕಟ್ಟಾಗುತ್ತಿದ್ದಂತೆ ರಮೇಶ್ ಗಾಬರಿಗೊಂಡು ಇಂಟರ್‌ನೆಟ್‌ನಲ್ಲಿ TRAI ಕಸ್ಟಮರ್ ಕೇರ್ ಸಪೋರ್ಟ್ ನಂಬರ್‌ಗಾಗಿ ಹುಡುಕಿದ್ದಾರೆ. ಆಗ ವೆಬ್‌ಸೈಟ್‌ನಲ್ಲಿ 9330907238 ಎಂಬ ನಂಬರ್ ಸಿಕ್ಕಿದೆ. ಬಳಿಕ ರಮೇಶ್ ಈ ನಂಬರ್‌ಗೆ ಕರೆ ಮಾಡಿದ್ದು ಕರೆ ಸ್ವೀಕರಿಸಿದ ವ್ಯಕ್ತಿ ತಮ್ಮನ್ನು TRAI ಅಧಿಕಾರಿ ಎಂದು ಪರಿಚಯಿಸಿಕೊಂಡು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಮತ್ತು ಸಂಪರ್ಕದಲ್ಲಿದ್ದು ನೀಡುವ ಸೂಚನೆಗಳನ್ನು ಅನುಸರಿಸಲು ತಿಳಿಸಿದ್ದಾರೆ. ವಾಟ್ಸಾಪ್‌ನಲ್ಲಿ ಫೈಲ್ ಕಳುಹಿಸುವುದಾಗಿ ಹೇಳಿ ಅದರಲ್ಲಿ ವಿವರಗಳನ್ನು ಭರ್ತಿ ಮಾಡಲು ತಿಳಿಸಿದರು ಎಂದು ರಮೇಶ್ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ವೈದ್ಯಕೀಯ ಸೀಟು ಕೊಡಿಸುವುದಾಗಿ ಭರವಸೆ: ಗೃಹ ಸಚಿವರ ಆಪ್ತನೆಂದು ಹೇಳಿ ಲಕ್ಷಾಂತರ ರೂ ವಂಚನೆ

ಅವರು ಕಳುಹಿಸಿದ ಲಿಂಕ್‌ಗಳ ಮೇಲೆ ನಾನು ಕ್ಲಿಕ್ ಮಾಡಿದ್ದೇನೆ ಮತ್ತು ಅವುಗಳು ಎರಡು ರಿಮೋಟ್-ಆಕ್ಸೆಸ್ ಅಪ್ಲಿಕೇಶನ್‌ಗಳಾಗಿವೆ – ‘coustomersupportoctober11.apk’ ಮತ್ತು ‘customerservice.apk’. ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿದ ನಂತರ, ಅವರು ನನ್ನೊಂದಿಗೆ ಸುಮಾರು 20 ನಿಮಿಷಗಳ ಕಾಲ ಮಾತನಾಡಿದರು. ನಾನು ಯಾವುದೇ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಲಿಲ್ಲ. ನಂತರ ನನ್ನ ಬ್ಯಾಂಕ್ ಖಾತೆಯಿಂದ ರೂ 39,000 ಡೆಬಿಟ್ ಆಗಿದೆ ಎಂಬ SMS ಬಂತು” ಸೈಬರ್ ಖದೀಮರು ನನ್ನ ಖಾತೆಯಿಂದ ಹಣವನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ನನಗೆ ಅರಿವಾಯಿತು. ನಾನು ತಕ್ಷಣ ಕಾಲ್ ಕಟ್ ಮಾಡಿದೆ. ನನ್ನ ಬ್ಯಾಂಕ್‌ನ ತುರ್ತು ಸಹಾಯವಾಣಿಗೆ ಕರೆ ಮಾಡಿ ಮತ್ತು ದುಷ್ಕರ್ಮಿಗಳು ನನ್ನ ಖಾತೆಯಿಂದ ಹಣವನ್ನು ಅವರ ಖಾತೆಗೆ ವರ್ಗಾಯಿಸುತ್ತಿದ್ದಾರೆ ಎಂದು ಅವರಿಗೆ ತಿಳಿಸಿದೆ. ನನ್ನ ಖಾತೆಯನ್ನು ತಕ್ಷಣವೇ ಬ್ಲಾಕ್ ಮಾಡಿ ಎಂದು ನಾನು ಹೇಳಿದೆ, ಆದರೆ ಹೆಲ್ಪ್‌ಲೈನ್ ಕಾರ್ಯನಿರ್ವಾಹಕರು ತಡಮಾಡುತ್ತಿದ್ದರು, ನಾನು ಖಾತೆದಾರ ಎಂದು ಪರಿಶೀಲಿಸಲು ನನಗೆ ಹಲವಾರು ಪ್ರಶ್ನೆಗಳನ್ನು ಕೇಳಿದರು.

ನಾನು ಅವರಿಗೆ ತುರ್ತು ಪರಿಸ್ಥಿತಿಯನ್ನು ವಿವರಿಸಲು ಪ್ರಯತ್ನಿಸಿದೆ, ಆದರೆ ಬ್ಯಾಂಕ್ ಖಾತೆಯನ್ನು ನಿರ್ಬಂಧಿಸಲು ಕೆಲವು ನಿಮಿಷಗಳನ್ನು ತೆಗೆದುಕೊಂಡರು. ನಾನು ಕಾರ್ಯನಿರ್ವಾಹಕರೊಂದಿಗೆ ಮಾತನಾಡುವಾಗ, ದುಷ್ಕರ್ಮಿಗಳು ಇನ್ನೂ ಎರಡು ಬಾರಿ ನನ್ನ ಖಾತೆಯಿಂದ ಹಣ ದೋಚಿದ್ದಾರೆ. ಒಮ್ಮೆ 27,000 ಮತ್ತು ಇನ್ನೊಂಮ್ಮೆ ರೂ 10,000 ಕಟ್ ಆಗಿದೆ ಎಂದು ರಮೇಶ್ ಅವರು ವಿವರಿಸಿದ್ದಾರೆ. ಇನ್ನು ಬ್ಯಾಂಕ್ ಖಾತೆಯಲ್ಲಿನ ಮೊತ್ತವನ್ನು ಸ್ಥಗಿತಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ