ಕ್ಯಾನ್ಸರ್ ಔಷಧಿ ದರ ಸುಲಿಗೆಗೆ ಬ್ರೇಕ್: ಕೇಂದ್ರಕ್ಕೆ ಮನವಿ ಮಾಡಿದ್ದೇವೆಂದ ಸಚಿವ ಯು.ಟಿ. ಖಾದರ್

ಖಾಸಗಿ ಆಸ್ಪತ್ರೆಗಳ ಸುಲಿಗೆ ತಡೆಯಲು ಕ್ಯಾನ್ಸರ್ ಔಷಧಿಗಳ ದರ ನಿಗದಿಪಡಿಸುವಂತೆ ಆರೋಗ್ಯ ಸಚಿವ ಯು.ಟಿ. ಖಾದರ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದರೊಂದಿಗೆ ಇಲಾಖೆಯ 51 ಅಭ್ಯರ್ಥಿಗಳಿಗೆ ಅನುಕಂಪ ಆಧಾರಿತ ನೇಮಕಾತಿ ಪತ್ರ ವಿತರಿಸಿದ್ದು, 108 ಆ್ಯಂಬುಲೆನ್ಸ್ ಸಿಬ್ಬಂದಿಯ ಸಾಮೂಹಿಕ ರಾಜೀನಾಮೆ ವಿಚಾರವಾಗಿ ಸಮಸ್ಯೆ ಬಗೆಹರಿಸಲು ಸಚಿವರು ಇಂದು ತುರ್ತು ಸಭೆ ಕರೆದಿದ್ದಾರೆ.

ಕ್ಯಾನ್ಸರ್ ಔಷಧಿ ದರ ಸುಲಿಗೆಗೆ ಬ್ರೇಕ್: ಕೇಂದ್ರಕ್ಕೆ ಮನವಿ ಮಾಡಿದ್ದೇವೆಂದ ಸಚಿವ ಯು.ಟಿ. ಖಾದರ್
ಯು ಟಿ ಖಾದರ್
Edited By:

Updated on: Sep 09, 2026 | 1:05 PM

ಮುಖ್ಯಾಂಶಗಳು

  • ಕ್ಯಾನ್ಸರ್ ಔಷಧಿ ದರ ನಿಗದಿಗೆ ಕೇಂದ್ರ ಸರ್ಕಾರಕ್ಕೆ ಸಚಿವರ ಸುದೀರ್ಘ ಮನವಿ.
  • ಅನುಕಂಪದ ಆಧಾರದಲ್ಲಿ 51 ಅರ್ಹ ಅಭ್ಯರ್ಥಿಗಳಿಗೆ ಇಲಾಖೆಯ ನೇಮಕಾತಿ ಪತ್ರ ವಿತರಣೆ.
  • 108 ಆ್ಯಂಬುಲೆನ್ಸ್ ಸಿಬ್ಬಂದಿ ಸಮಸ್ಯೆ ಪರಿಹಾರಕ್ಕೆ ಸಚಿವರಿಂದ ತುರ್ತು ಸಭೆ.

ಬೆಂಗಳೂರು, ಸೆಪ್ಟೆಂಬರ್ 09: ರಾಜ್ಯದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಬಳಸುವ ದುಬಾರಿ ಔಷಧಿ ಹಾಗೂ ಇಂಜೆಕ್ಷನ್‌ಗಳ ದರ ನಿಗದಿಗೆ ಸೂಕ್ತ ಚೌಕಟ್ಟು ರೂಪಿಸುವಂತೆ ಕರ್ನಾಟಕ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ಸುಲಿಗೆ ಮಾಡುತ್ತಿವೆ: ಸಚಿವ

ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಕ್ಯಾನ್ಸರ್ ಔಷಧಿಗಳ ಅತಿಯಾದ ದರ ವಸೂಲಿ ತಡೆಯಲು ಕೇಂದ್ರ ಸರ್ಕಾರ ತಕ್ಷಣವೇ ಬೆಲೆ ನಿಗದಿ ಮಾಡಬೇಕೆಂದು ಮನವಿ ಮಾಡಿದ್ದಾರೆ. ಔಷಧಿಗಳ ದರವನ್ನು ನಿಗದಿಪಡಿಸುವ ಅಧಿಕಾರ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ, ಪ್ರಸ್ತುತ ಖಾಸಗಿ ಆಸ್ಪತ್ರೆಗಳು ಪ್ರತ್ಯೇಕ ಬೆಲೆಗಳನ್ನು ನಿಗದಿಪಡಿಸಿ ರೋಗಿಗಳನ್ನು ಸುಲಿಗೆ ಮಾಡುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ರೋಗಿಗಳು ತಮ್ಮ ಕೊನೆಯ ಹಂತದಲ್ಲಿದ್ದಾಗಲೂ ಆಸ್ಪತ್ರೆಗಳು ಅತ್ಯಂತ ದುಬಾರಿ ಇಂಜೆಕ್ಷನ್‌ಗಳನ್ನು ನೀಡಲು ಮುಂದಾಗುತ್ತವೆ. ಜನರು ತಮ್ಮ ಜೀವ ಉಳಿಸಿಕೊಳ್ಳಲು ಸಾಲ ಮಾಡಿ ಬರುತ್ತವೆ, ಆದರೆ ಇಂತಹ ದುಬಾರಿ ಔಷಧಿಗಳನ್ನು ಖರೀದಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬೆಲೆ ನಿಗದಿ ಮತ್ತು ನಿರ್ದಿಷ್ಟ ಮಾರ್ಗದರ್ಶಿ ಸೂತ್ರಗಳನ್ನು ರಚಿಸುವುದು ಅತ್ಯಗತ್ಯವಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಎಫ್‌ಡಿಎ ಆಯುಕ್ತ ಶ್ರೀನಿವಾಸ್ ಪತ್ರ

ಒಟ್ಟು 351 ಕ್ಯಾನ್ಸರ್ ಫಾರ್ಮುಲೇಷನ್‌ಗಳಲ್ಲಿ ಕೇವಲ 39 ಶೆಡ್ಯೂಲ್ಡ್ ಹಾಗೂ 22 ನಾನ್-ಶೆಡ್ಯೂಲ್ಡ್ ಔಷಧಗಳಿಗೆ ಮಾತ್ರ ಬೆಲೆ ನಿಯಂತ್ರಣವಿದ್ದು, ಉಳಿದ ಬಹುತೇಕ ಔಷಧಗಳು ನಿಯಂತ್ರಣದಿಂದ ಹೊರಗಿವೆ. ಇದರಿಂದ ಬಡ ರೋಗಿಗಳು ಔಷಧ ಸಿಗದೆ ಪರದಾಡುವಂತಾಗಿದೆ. ಹೀಗಾಗಿ, ಎಲ್ಲಾ ಕ್ಯಾನ್ಸರ್ ಔಷಧಗಳನ್ನು ತಕ್ಷಣವೇ DPCO ವ್ಯಾಪ್ತಿಗೆ ತಂದು, ಕೈಗೆಟುಕುವ ದರದಲ್ಲಿ ಸಿಗುವಂತೆ ಕ್ರಮ ಕೈಗೊಳ್ಳಲು ಎಫ್‌ಡಿಎ ಆಯುಕ್ತ ಶ್ರೀನಿವಾಸ್ ಅವರು ಕೇಂದ್ರದ DCGI ಮತ್ತು NPPAಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಣೆ

ಇದರೊಂದಿಗೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಅನುಕಂಪದ ಆಧಾರದ ಮೇಲೆ ಆಯ್ಕೆಯಾದ 51 ಅಭ್ಯರ್ಥಿಗಳಿಗೆ ಸಚಿವ ಯು.ಟಿ. ಖಾದರ್ ಅವರು ನೇಮಕಾತಿ ಪತ್ರಗಳನ್ನು ವಿತರಿಸಿದ್ದಾರೆ. ಈ ನೇಮಕಾತಿಗಳಲ್ಲಿ ಪ್ರಥಮ ದರ್ಜೆ ಸಹಾಯಕರು , ದ್ವಿತೀಯ ದರ್ಜೆ ಸಹಾಯಕರು ಹಾಗೂ ಗ್ರೂಪ್-ಡಿ ಹುದ್ದೆಯ ಅಭ್ಯರ್ಥಿಗಳು ಸೇರಿದ್ದಾರೆ. ಸಾರ್ವಜನಿಕ ಸೇವೆಗೆ ನೇಮಕಗೊಂಡ ಸಿಬ್ಬಂದಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವಂತೆ ಅವರು ಸೂಚಿಸಿದ್ದಾರೆ.

ತುರ್ತು ಸಭೆ ಕರೆದಿರುವ ಸಚಿವ

ಮತ್ತೊಂದೆಡೆ, ರಾಜ್ಯಾದ್ಯಂತ ಸೇವೆಯಲ್ಲಿ ವ್ಯತ್ಯಯ ಉಂಟುಮಾಡುತ್ತಿರುವ 108 ಆ್ಯಂಬುಲೆನ್ಸ್ ಸಿಬ್ಬಂದಿಯ ಸಾಮೂಹಿಕ ರಾಜೀನಾಮೆ ವಿಚಾರಕ್ಕೂ ಸಚಿವರು ಪ್ರತಿಕ್ರಿಯಿಸಿದ್ದಾರೆ. ಸಿಬ್ಬಂದಿಯ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಆಲಿಸಲು ಇಂದೇ ತುರ್ತು ಸಭೆಯನ್ನು ಕರೆಯಲಾಗಿದೆ. ಸಭೆಯಲ್ಲಿ ಸಿಬ್ಬಂದಿಯ ಜೊತೆ ನೇರವಾಗಿ ಚರ್ಚಿಸಿ, ಅವರ ಕುಂದುಕೊರತೆಗಳನ್ನು ಪರಿಹರಿಸುವ ಮೂಲಕ ಆ್ಯಂಬುಲೆನ್ಸ್ ಸೇವೆಗಳು ಯಥಾಸ್ಥಿತಿಗೆ ಮರಳುವಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:24 pm, Wed, 9 September 26

Loading...
Unable to load recommendations.
Follow Us