ಸಿದ್ದರಾಮಯ್ಯ, ಹೆಚ್​ಡಿಕೆ ಈಗಲಾದ್ರೂ ಬೆಂಗಳೂರು ಸುತ್ತಾಡಲಿ. ಹೀಗಲಾದರೂ ಹೆಚ್.ಡಿ.ಕುಮಾರಸ್ವಾಮಿ ಆರೋಗ್ಯ ಸುಧಾರಿಸಲಿ : ವಿ.ಸೋಮಣ್ಣ ವ್ಯಂಗ್ಯ

ಹೆಚ್​.ಡಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಈಗಲಾದ್ರೂ ಬೆಂಗಳೂರು ಸುತ್ತಾಡಲಿ. ಹೀಗಲಾದರೂ ಹೆಚ್.ಡಿ.ಕುಮಾರಸ್ವಾಮಿ ಅವರ ಆರೋಗ್ಯ ಸುಧಾರಿಸಲಿ ಎಂದು ಹೆಚ್.ಡಿ.ಕೆ, ಸಿದ್ದರಾಮಯ್ಯ ಅವರ ನಗರ ಪ್ರದಕ್ಷಿಣೆಗೆ ಸಚಿವ ವಿ.ಸೋಮಣ್ಣ ವ್ಯಂಗ್ಯವಾಡಿದ್ದಾರೆ.

ಸಿದ್ದರಾಮಯ್ಯ, ಹೆಚ್​ಡಿಕೆ ಈಗಲಾದ್ರೂ ಬೆಂಗಳೂರು ಸುತ್ತಾಡಲಿ. ಹೀಗಲಾದರೂ ಹೆಚ್.ಡಿ.ಕುಮಾರಸ್ವಾಮಿ ಆರೋಗ್ಯ ಸುಧಾರಿಸಲಿ : ವಿ.ಸೋಮಣ್ಣ ವ್ಯಂಗ್ಯ
ಸಿದ್ದರಾಮಯ್ಯ ವಿರುದ್ಧ ವಿ ಸೋಮಣ್ಣ ವ್ಯಂಗ್ಯ
Updated By: ವಿವೇಕ ಬಿರಾದಾರ

Updated on: May 21, 2022 | 3:12 PM

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ (HD Kumarswamy) ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಈಗಲಾದ್ರೂ ಬೆಂಗಳೂರು ಸುತ್ತಾಡಲಿ. ಹೀಗಲಾದರೂ ಹೆಚ್.ಡಿ.ಕುಮಾರಸ್ವಾಮಿ ಅವರ ಆರೋಗ್ಯ ಸುಧಾರಿಸಲಿ ಎಂದು ಹೆಚ್.ಡಿ.ಕೆ, ಸಿದ್ದರಾಮಯ್ಯ ಅವರ ನಗರ ಪ್ರದಕ್ಷಿಣೆಗೆ ಸಚಿವ ವಿ.ಸೋಮಣ್ಣ ವ್ಯಂಗ್ಯವಾಡಿದ್ದಾರೆ. ಬೆಂಗಳೂರಿನ ಜನರ ಭಾವನೆ ಏನು ಅನ್ನೋದು ಅವರಿಗೆ ಅರ್ಥವಾಗಲಿ. ಕುಮಾರಸ್ವಾಮಿ ಇನ್ನಷ್ಟು ಓಡಾಡಿ ಆರೋಗ್ಯ ಸರಿ ಮಾಡಿಕೊಳ್ಳಲಿ ನಾವು ಬೇಡ ಅನ್ನೋದಿಲ್ಲ. ಕುಮಾರಸ್ವಾಮಿ ನಡೆದಷ್ಟೂ ಒಳ್ಳೆಯದು ಎಂದರು.

ಇದನ್ನು ಓದಿ: ವಿಜಯೇಂದ್ರನನ್ನ ಮಿನಿಸ್ಟರ್ ಮಾಡಿದರೆ ಗುಣಾತ್ಮಕ ಬದಲಾವಣೆ ಆಗುತ್ತಾ: ಪತ್ರಕರ್ತರ ಪ್ರಶ್ನೆಗೆ ಹೆಚ್.ವಿಶ್ವನಾಥ್ ವ್ಯಂಗ್ಯ

ಬಿಬಿಎಂಪಿ ಚುನಾವಣೆಗೂ ಈಗ ಬಿದ್ದಿರೋ ಮಳೆಗೂ ಏನೂ ಸಂಬಂಧ ಇಲ್ಲ. ಚುನಾವಣೆಗೂ, ಪ್ರಕೃತಿ ವಿಚಾರಕ್ಕೂ ಯಾವುದೇ ಸಂಬಂಧ ಇಲ್ಲ. ಬಿಬಿಎಂಪಿ ಚುನಾವಣೆಯಲ್ಲಿ ನಾವು ಗೆಲ್ಲದೇ ಇನ್ಯಾರು ಗೆಲ್ತಾರೆ? ಯಾಱರ ಅವಧಿಯಲ್ಲಿ ಏನೇನಾಗಿದೆ ನಮಗೂ ಚೆನ್ನಾಗಿ ಗೊತ್ತಿದೆ. ವಿಪಕ್ಷಗಳು ನೀಡುವ ಸಲಹೆಗಳನ್ನು ಸ್ವೀಕರಿಸುವುದಕ್ಕೆ ತಯಾರಿದ್ದೇವೆ. ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ನನಗೆ ಯಾವುದೇ ಮಾಹಿತಿ‌ ಇಲ್ಲ. ಸಿಎಂ ಬೊಮ್ಮಾಯಿ ದೆಹಲಿಯಿಂದ ಬಂದ ಮೇಲೆ ಗೊತ್ತಾಗಲಿದೆ. ಸಿಎಂ ಸ್ಪೆಷಲ್ ಫ್ಲೈಟ್ ನಲ್ಲಿ ಬರ್ತಾರೆ ಎನ್ನೋದೂ ಗೊತ್ತಾಯ್ತು. ಅವರು ಬಂದ ಮೇಲೆ ಅವರಿಂದ ತಿಳಿದುಕೊಂಡು ಹೇಳ್ತೀನಿ ಎಂದು ಹೇಳಿದರು.

ಇದನ್ನೂ ಓದಿ
ನಿರಂತರ ಮಳೆ, ಕಾಣೆಯಾದ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ: ಜನಾಕ್ರೋಶ
Tax On Gold: ಅಟ್ಟ ಏರಿ ಕುಳಿತಿದ್ದ ಚಿನ್ನದ ಬೆಲೆಯಲ್ಲಿ ಒಂದಿಷ್ಟು ಇಳಿಕೆ; ಮನೆಯಲ್ಲಿರುವ ಚಿನ್ನಕ್ಕೆ ತೆರಿಗೆ ಲೆಕ್ಕಾಚಾರ ಹೇಗೆ ಗೊತ್ತಾ?
ಕಾರವಾರದಲ್ಲಿ ಮೀನುಗಾರರ ಬಲೆಗೆ ಬಿತ್ತು ಅಪರೂಪದ ಉದ್ದ ಕಣ್ಣಿನ ಏಡಿ
Archery World Cup: ಆರ್ಚರಿ ವಿಶ್ವಕಪ್: ಫೈನಲ್​ನಲ್ಲಿ ಚಿನ್ನ ಗೆದ್ದ ಭಾರತ ಪುರುಷರ ತಂಡ

ಬಿಬಿಎಂಪಿ, ಜಿ.ಪಂ, ತಾ.ಪಂ ಚುನಾವಣೆ ಎದುರಿಸಲು ಬಿಜೆಪಿ ಸಿದ್ಧ : ಕಟೀಲ್ 

ಬೆಂಗಳೂರು: ಬಿಬಿಎಂಪಿ, ಜಿ.ಪಂ, ತಾ.ಪಂ ಚುನಾವಣೆ ಎದುರಿಸಲು ಬಿಜೆಪಿ ಸಿದ್ಧವಾಗಿದೆ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾಧ್ಯಮ‌ ಪ್ರಕಟಣೆ ಹೊರಡಿಸಿದ್ದಾರೆ. ಮುಂಬರುವ ಚುನಾವಣೆಗಳನ್ನು ಎದುರಿಸಲು ಬಿಜೆಪಿ ಸಿದ್ಧವಾಗಿದೆ. ಪಕ್ಷವು ಬೆಂಗಳೂರಲ್ಲಿ ಗರಿಷ್ಠ ಸಂಸದರು & ಶಾಸಕರನ್ನು ಹೊಂದಿದೆ. ಸಂಘಟನೆಯಾಗಿ ಭಾರತೀಯ ಜನತಾ ಪಾರ್ಟಿ ಅತ್ಯಂತ ಬಲಿಷ್ಠವಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಸುಪ್ರೀಂಕೋರ್ಟ್​ ತೀರ್ಪನ್ನು ಸ್ವಾಗತಿಸುತ್ತೇವೆ. ಸುಪ್ರೀಂಕೋರ್ಟ್​ ನಿರ್ದೇಶನ ಪಾಲಿಸಿ ಚುನಾವಣೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಕೊನೆಗೂ ಬಂತು ಬಾಲಿವುಡ್​ಗೆ ಬೂಸ್ಟ್ ಕೊಡುವ ಚಿತ್ರ; ಮೊದಲ ದಿನ ಭರ್ಜರಿ ಕಲೆಕ್ಷನ್

ರಾಜ್ಯದಲ್ಲಿ ಚುನಾವಣೆ ನಡೆಸುವುದಾಗಿ ಸಿಎಂ ಈಗಾಗಲೇ ಹೇಳಿದ್ದಾರೆ.ಕೇಂದ್ರ & ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳು, ಜನೋಪಯೋಗಿ ಕಾರ್ಯಗಳನ್ನು ಜನರ ಗಮನಕ್ಕೆ ತರುತ್ತೇವೆ. ಪಕ್ಷ ಗರಿಷ್ಠ ಸ್ಥಾನಗಳನ್ನು ಗೆದ್ದು ಬಿಬಿಎಂಪಿಯಲ್ಲಿ ಅಧಿಕಾರಕ್ಕೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:12 pm, Sat, 21 May 22